ಚೇತರಿಕೆ ಹಾದಿಯಲ್ಲಿ ಸೋಂಕಿತರು


Team Udayavani, Mar 19, 2020, 3:08 AM IST

chetarike

ಬೆಂಗಳೂರು: ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದು, 13 ಮಂದಿ ಪೈಕಿ 12 ಮಂದಿಯ ಆರೋಗ್ಯ ಸ್ಥಿರವಾಗಿದೆ. ಒಬ್ಬ ಮಹಿಳೆ (67)ಮಾತ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿಟ್ಟು ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟ 14 ಮಂದಿ ಪೈಕಿ ಒಬ್ಬರು ಸಾವಿಗೀಡಾಗಿದ್ದು, 13 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ 11 ಮಂದಿ ಸೋಂಕಿತರಿದ್ದು, ಐವರು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ, ಆರು ಮಂದಿ ಕೆ.ಸಿ.ಜನರಲ್‌ ಆಸ್ಪತ್ರೆ, ಜಯನಗರ ಜನರಲ್‌ ಆಸ್ಪತ್ರೆ, ಸಿ.ವಿ.ರಾಮನ್‌ನಗರ ಜನರಲ್‌ ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ಬಾಕಿ ಇಬ್ಬರು ಕಲಬುರಗಿ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟ ಮೊದಲ ವ್ಯಕ್ತಿ (46 ವಯಸ್ಸು)(ಸೋಂಕಿತ -1) ಹಾಗೂ ಸೋಂಕಿತ  - 4 (50 ವಯಸ್ಸು)ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಗಳಿದ್ದು, ವೈದ್ಯರು ಚಿಕಿತ್ಸೆ ಮೂಲಕ ನಿಯಂತ್ರಣದಲ್ಲಿ ರಿಸಿದ್ದಾರೆ. ಇನ್ನು ಒಬ್ಬ ಮಹಿಳೆ ಮಾತ್ರ ಕ್ರೋನಿಕ್‌ ಕಿಡ್ನಿ ಸಮಸ್ಯೆಯಿಂದ ಬಳಲು ತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಆ ಸಮಸ್ಯೆ ಯನ್ನು ನಿಭಾಯಿಸಿಕೊಂಡು ಕೊರೊನಾ ಸೋಂ ಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

15 ದಿನಗಳ ನಂತರ ಡಿಸ್ಚಾರ್ಜ್‌: ಇನ್ನು ಸೋಂಕಿತರ ಗಂಟಲು ದ್ರಾವಣ ಹಾಗೂ ರಕ್ತ ಮಾದರಿ ಪರೀಕ್ಷೆಗಳು ನೆಗೆಟಿವ್‌ ಬರಬೇಕು ಹಾಗೂ ಆಸ್ಪತ್ರೆ ಸೇರಿ 14 ದಿನಗಳು ಆಗಬೇಕು. ಆ ಬಳಿಕವೇ ಡಿಸ್ಚಾರ್ಜ್‌ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಮ್ಮ – ಮಗಳಿಗೆ ಆರೋಗ್ಯ ಸಮಸ್ಯೆಯೇ ಇಲ್ಲ: ಸೋಂಕಿತ -1 ಟೆಕ್ಕಿಯ ಹೆಂಡತಿ, ಮಗಳು ಕೊರೊನಾ ಸೋಂಕಿತರಾಗಿ ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದು, ರೋಗ ಲಕ್ಷಣಗಳು ಇಲ್ಲ. ಸಾಮಾನ್ಯ ರಂತೆ ಇದ್ದು, ವಾರ್ಡ್‌ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಮ್ಮ-ಮಗಳ ದೇಹದಲ್ಲಿ ಕೊರೊನಾ ವೈರಾಣು ಇದೆ. ಆದರೆ, ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಅಲ್ಲಿನ ವೈದ್ಯರು ಖಚಿತಪಡಿಸಿದ್ದಾರೆ.

ಥರ್ಮಲ್‌ ಸ್ಕ್ರೀನ್‌ ತಪಾಸಣೆ
ಬೆಂಗಳೂರು: ನಗರದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪಾಲಿಕೆಯ ಕೇಂದ್ರ ಕಚೇರಿಗೆ ಬರುವವರನ್ನು ತಪಾಸಣೆ ಮಾಡಿಯೇ ಕಚೇರಿಯ ಒಳಗೆ ಬಿಡಲು ಪಾಲಿಕೆ ನಿರ್ಧರಿಸಿದೆ. ಈ ಕುರಿತು ಸುದ್ದಿ ಗಾರರ ಜತೆ ಮಾತನಾಡಿ ದ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಕೇಂದ್ರ ಕಚೇರಿಗೆ ಬರುವವರನ್ನು ಗುರು ವಾರದಿಂದ ಥರ್ಮಲ್‌ಸ್ಕ್ರೀನ್‌ನ ಮೂಲಕ ತಪಾಸಣೆ ಮಾಡಿ ಬಿಡಲಾಗುವುದು.

ಎಲ್ಲರಿಗೂ (ಸ್ಯಾನಿಟೈಸರ್‌)ಸೋಂಕು ನಿರೋಧಕ ದ್ರಾವಣ ನೀಡ ಲಾಗುವುದು. ಕೊರೊನಾ ಸೋಂಕು ಹರಡಂತೆ ಪಾಲಿಕೆಯ ಎಲ್ಲ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿ ಕೊಳ್ಳಲು ನಿರ್ದೇಶನ ನೀಡಲಾಗಿದೆ. ಮಧ್ಯಾಹ್ನ 3ರಿಂದ 5 ಗಂಟೆಯ ವರೆಗೆ ಮಾತ್ರ ಪಾಲಿಕೆಯ ಕೇಂದ್ರ ಕಚೇರಿ ಅವಕಾಶ ನೀಡಲಾಗಿದೆ ಎಂದರು.

ಕೊರೊನಾ ಬಗ್ಗೆ ಆತಂಕ ಬೇಡ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಕೆಲ ಕೊರೊನಾ ವೈರಸ್‌ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗಿದ್ದು, ಸೋಂಕು ಹರಡದಂತೆ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಯಾರೂ ಆತಂಕ ಪಡಬೇಕಿಲ್ಲ. ಸಾರ್ವಜನಿಕರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆ.

ಈ ಸೋಂಕು ತಡೆಗಟ್ಟಲು ನಾವು, ನೀವೆಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಸೂಚನೆಯಂತೆ ಕೆಲ ಮುನ್ನೆಚ್ಚರಿಕೆ ಕ್ರಮ ಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕು ತಡೆ ಗಟ್ಟಲು ಸಹಕರಿಸಬೇಕು. ಜನಜಂಗುಳಿಯಿಂದ ದೂರ ಉಳಿಯುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕು. ಸಾಧ್ಯವಾದಷ್ಟು ಮನೆಯಲ್ಲೇ ಇರಿ.

ಸಭೆ, ಸಮಾರಂಭ ಆಯೋಜಿಸಬೇಡಿ. ಅಂತಹ ಕಾರ್ಯ ಕ್ರಮಗಳಿಂದ ದೂರವಿರಿ ಎಂದು ಹೇಳಿದ್ದಾರೆ. ವಿದೇಶ ಪ್ರಯಾಣದಿಂದ ಹಿಂತಿರುಗಿದವರು ಆರೋಗ್ಯ ಇಲಾ ಖೆಗೆ ತಕ್ಷಣ ಮಾಹಿತಿ ನೀಡಿ, ಕಡ್ಡಾಯವಾಗಿ 14 ದಿನಗಳ ಕಾಲ ಪ್ರತ್ಯೇಕವಾಗಿರಿ. ಮಾರ್ಗದರ್ಶನಕ್ಕಾಗಿ ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಿ. ಸರ್ಕಾ ರದ ಅಧಿಕೃತ ಸೂಚನೆ, ಮಾಹಿತಿ ಹೊರತುಪಡಿಸಿ ಇತರ ಗಾಳಿ ಸುದ್ದಿ, ವದಂತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ರಂಗೋಲಿ ಬಿಡಿಸಿ ಕೊರೊನಾ ಜಾಗೃತಿ
ಬೆಂಗಳೂರು: ಪಾಲಿಕೆಯ ಕೇಂದ್ರ ಕಚೇರಿಗೆ ನಿತ್ಯ ನೂರಾರು ಜನ ಸಾರ್ವಜನಿಕರು ಬರುವ ಹಿನ್ನೆಲೆ ಯಲ್ಲಿ ಕೊರೊನಾ ಸಂಬಂಧ ಮುಂಜಾಗ್ರತಾ ಕ್ರಮ ಕೈಗೊಂಡು ಕಚೇರಿಗಳ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮೇಯರ್‌ ಎಂ. ಗೌತಮ್‌ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಬುಧವಾರ ಕೇಂದ್ರ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಮೇಯರ್‌ ಎಲ್ಲ ವಿಭಾಗಗಳಲ್ಲೂ ಸ್ಯಾನಿ ಟೈಸರ್‌ ಬಳಸುವಂತೆ ನಿರ್ದೇಶನ ನೀಡಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಲಿಕೆ ಕೇಂದ್ರ ಕಚೇರಿ ಕೆಂಪೇಗೌಡ ಪೌರಸಭಾಂಗಣ ಆವರಣದಲ್ಲಿ ರಂಗೋಲಿ ಕಲಾವಿದರಾದ ಅಕ್ಷಯ್‌ಜಲಿಹಾಳ್‌ ಕೊರೊನಾ ಸೋಂಕು ತಡೆಯಲು ಮುಂಜಾಗ್ರತೆ ವಹಿಸಿ, ಭಯ ಬೀಳುವ ಅವಶ್ಯಕತೆ ಇಲ್ಲ ಎಂಬ ಸಂದೇಶವಿರುವ ರಂಗೋಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು. ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ವಿರೋಧ ಪಕ್ಷದ ನಾಯಕರಾದ ಅಬ್ದುಲ್‌ವಾಜಿದ್‌, ವಿಶೇಷ ಆಯುಕ್ತರು(ಘನತ್ಯಾಜ್ಯ)ಡಿ.ರಂದೀಪ್‌, ಜಂಟಿ ಆಯುಕ್ತರು(ಘನತ್ಯಾಜ್ಯ) ಸಫ್ìರಾಜ್‌ಖಾನ್‌ ಇತರರಿದ್ದರು.

ವದಂತಿ ಹಬ್ಬಿಸಿದರೆ ಶಿಕ್ಷೆ: “ಬಿಬಿಎಂಪಿ ನಗರದೆಲ್ಲೆಡೆ ಚೀನಾ ಮಾದರಿಯಲ್ಲಿ ಕೊರೊನಾ ಸೋಂಕು ನಿರೋಧಕ ದ್ರಾವಣ ಸಿಂಪಡಣೆ ಮಾಡಲಿದ್ದು, ಬುಧವಾರ ರಾತ್ರಿ 10ರಿಂದ ಗುರುವಾರ ಸಂಜೆ 5ರ ವರೆಗೆ ಯಾರು ಮನೆಯಿಂದ ಹೊರ ಬರದಂತೆ ಪಾಲಿಕೆ ಸೂಚನೆ ನೀಡಿದೆ’ ಎಂಬ ವದಂತಿ ಬುಧವಾರ ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದ್ದು, ಚರ್ಚೆಗೆ ಗ್ರಾಸವಾಯಿತು. ಈ ಸಂಬಂಧ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಪಾಲಿಕೆ ಈ ರೀತಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ವದಂತಿ ಹಬ್ಬಿಸಿ ದರೆ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಸೋಂಕಿತರಿಗೆ ನೀಡುತ್ತಿರುವ ಆಹಾರ ಹೀಗಿದೆ
-ಪೋಷಕಾಂಶಯುಕ್ತ ಸಾತ್ವಿಕ ಆಹಾರಕ್ಕೆ ಆದ್ಯತೆ ನೀಡುತ್ತಿದ್ದು, ಯಾವುದೇ ರೀತಿಯ ಆಹಾರ ಪಥ್ಯ ಇಲ್ಲ. ಕೆಲ ಆಸ್ಪತ್ರೆಗಳಲ್ಲಿ ಅಲ್ಲಿನ ರೋಗಿಗಳಿಗೆಂದು ತಯಾರಿಸಿದ ಆಹಾರವನ್ನೇ ನೀಡಲಾಗುತ್ತಿದೆ.

-ಜತೆಗೆ, ಕೆಲ ಸೋಂಕಿತರು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದು, ಕೆಲವರು ವೈದ್ಯರ ಅನುಮತಿ ಪಡೆದು ಝೋಮೋಟೊ, ಸ್ವೀಗಿಯಿಂದ ಬುಕ್ಕಿಂಗ್‌ ಮಾಡಿ ತಮಗಿಷ್ಟದ ಆಹಾರವನ್ನು ತರಿಸಿಕೊಂಡು ಸೇವಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ನೀಡುತ್ತಿರುವ ಆಹಾರ
-ಬೆಳಗ್ಗೆ ಉಪಾಹಾರ -ಇಡ್ಲಿ, ಪೊಂಗಲ್, ಬಿಸಿ ಬೇಳೆ ಬಾತ್‌, ಉಪ್ಪಿಟ್ಟು, ರವಾ ಇಡ್ಲಿ, ಬ್ರೆಡ್‌.

-ಮಧ್ಯಾಹ್ನದ ಊಟ – ಎರಡು ಮೊಟ್ಟೆ, ರಾಗಿ ಮುದ್ದೆ, ಅನ್ನ, ತರಕಾರಿ ಸಾಂಬಾರ್‌, ಮೊಸರು ಮತ್ತು ಹಣ್ಣು.

-ರಾತ್ರಿ ಊಟ – ಅನ್ನ, ಎರಡು ಚಪಾತಿ, ತರಕಾರಿ ಪಲ್ಯ, ತರಕಾರಿ ಸಾಂಬಾರ್‌.

-ದಿನಕ್ಕೆ ಒಂದು ಬಾರಿ ತುಳಸಿ ದಳಗಳನ್ನು ಹಾಕಿ ಸಿದ್ಧಪಡಿಸಿದ ಜ್ಯೂಸ್‌, ಬೆಲ್ಲ ಒಳಗೊಂಡ ರಾಗಿ ಗಂಜಿ, ಹಾಲು.

-ತಟ್ಟೆಗಳಲ್ಲಿ ಪ್ರತ್ಯೇಕ ನೀರಿನ ಬಾಟಲ್, ಟಿಶ್ಯೂ ಒಳಗೊಂಡ ಪ್ಯಾಕಿಂಗ್‌ ವ್ಯವಸ್ಥೆ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.