ಆಲೋಚನೆ ಸಾಕಾರಕ್ಕೆ ಇನ್ಫೋಸಿಸ್ ವೇದಿಕೆ
Team Udayavani, Oct 24, 2018, 12:32 PM IST
ಬೆಂಗಳೂರು: ನಿಮ್ಮ ಬಳಿ ಆಲೋಚನೆ ಇದೆ. ಅದರ ಅನುಷ್ಠಾನದಿಂದ ಸಮಾಜದ ಒಂದು ವರ್ಗದಲ್ಲೇ ಬದಲಾವಣೆ ತರಬಹುದು. ಆದರೆ, ಅದಕ್ಕೆ ಹಣಕಾಸಿನ ಕೊರತೆ ಸೇರಿದಂತೆ ಪೂರಕ ವಾತಾವರಣ ಇಲ್ಲವೇ? ಹಾಗಿದ್ದರೆ, ಆ ಆಲೋಚನೆಗೆ ಇನ್ಫೋಸಿಸ್ ಪ್ರತಿಷ್ಠಾನ ವೇದಿಕೆ ಕಲ್ಪಿಸಲಿದೆ.
ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಂತಹ ಯಾವುದೇ ಯೋಜನೆಗಳನ್ನು ಗುರುತಿಸಿ, ಪೋಷಿಸಲು ಇನ್ಫೋಸಿಸ್ ಪ್ರತಿಷ್ಠಾನ ಮುಂದಾಗಿದೆ. ಈ ಸಂಬಂಧ “ಆರೋಹಣ ಸೋಷಿಯಲ್ ಇನ್ನೋವೇಷನ್ ಪ್ರಶಸ್ತಿ’ ಪ್ರಕಟಿಸಿದೆ.
ಇದರಡಿ ಆಯ್ಕೆಯಾದ ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಸೇರಿದ ಯೋಜನೆಗಳಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಅಗತ್ಯ ತರಬೇತಿ ನೀಡಿ, ಹಣಕಾಸಿನ ಸೌಲಭ್ಯವನ್ನೂ ಕಲ್ಪಿಸಿ ಮುನ್ನೆಲೆಗೆ ತರಲಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ತಲಾ ಗರಿಷ್ಠ 50 ಲಕ್ಷ ರೂ.ವರೆಗಿನ ಮೂರು ಪ್ರಶಸ್ತಿಗಳನ್ನು ನೀಡಲಾಗುವುದು. ಜತೆಗೆ ವಿಜೇತರಿಗೆ ಹೈದರಾಬಾದ್‌ನ ಐಐಟಿ ಕ್ಯಾಂಪಸ್‌ನಲ್ಲಿ 12 ವಾರಗಳ ತಾಂತ್ರಿಕ ತರಬೇತಿ ಕೂಡ ನೀಡಲಾಗುವುದು. ಆದರೆ, ಯೋಜನೆಯು ಕೇವಲ ಒಂದು ಪರಿಕಲ್ಪನೆ, ಚಿಂತನೆ ಅಥವಾ ನಕಲು ಆಗಿರಬಾರದು. ಸಂಪೂರ್ಣ ಕಾರ್ಯತತ್ಪರವಾದ ಮೂಲ ಮಾದರಿ ಆಗಿರಬೇಕು. ಅಲ್ಲದೆ, ಅಸ್ತಿತ್ವದಲ್ಲಿರುವ ವಾಣಿಜ್ಯ ಚಟುವಟಿಕೆಗೆ ಸಂಬಂಧಿಸಿದ್ದೂ ಆಗಿರಬಾರದು ಎಂದು ಅವರು ಸ್ಪಷ್ಟಪಡಿಸಿದರು.
ಯಾವುದೋ ದೂರದ ಹಳ್ಳಿಯಲ್ಲಿ ಹುಟ್ಟುವ ಆಲೊಚನೆಗಳನ್ನು ಪ್ರೋತ್ಸಹಿಸಿ, ಕಾರ್ಯರೂಪಕ್ಕೆ ತರುವುದು ಇದರ ಉದ್ದೇಶ. ಇದಕ್ಕಾಗಿ ಆರೋಹಣ ಸೋಷಿಯಲ್ ಇನ್ನೋವೇಷನ್ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ನಿರ್ಗತಿಕರ ಸೇವೆ,
ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ, ಶಿಕ್ಷಣ ಹಾಗೂ ಕ್ರೀಡೆ, ಸುಸ್ಥಿರತೆ ಸೇರಿದಂತೆ ಆರು ವಿಭಾಗಗಳಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಡಿ. 31 ಕೊನೆಯ ದಿನ. ಈಗಾಗಲೇ ನೂರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆಸಕ್ತರು ತಮ್ಮ ಕೆಲಸ ಕಾರ್ಯಗಳ ಮಾಹಿತಿಯನ್ನು ವಿಡಿಯೊ ರೂಪದಲ್ಲಿ ಸಿದ್ಧಪಡಿಸಿ ವೆಬ್‌ಸೈಟ್: www.infosys.com/aarohan ನಲ್ಲಿ ಅಪ್‌ಲೋಡ್ ಮಾಡಬಹುದು ಎಂದರು.
ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಲು ಈ ತೀರ್ಪುಗಾರರ ಸಮಿತಿಯಲ್ಲಿ ಐಐಎಂ ಬೆಂಗಳೂರು ಡೀನ್ ಪ್ರೊ.ತ್ರಿಲೋಚನ್ ಶಾಸಿ, ಪದ್ಮಶ್ರೀ ಅರವಿಂದ್ ಗುಪ್ತ, ಐಐಟಿ ಹೈದರಾಬಾದ್‌ನ ಜಿವಿವಿ ಶರ್ಮಾ, ಐಐಎಂ ಹೈದರಾಬಾದ್‌ನ ಪ್ರೊ.ಅನಿಲ್ ಗುಪ್ತ ಇರುತ್ತಾರೆ ಎಂದು ಮಾಹಿತಿ ನೀಡಿದರು.
ಅಸಲೀತನಕ್ಕೆ ಬೆಲೆ: ಈ ಮೊದಲು ಶೌಚಾಲಯಗಳ ನಿರ್ಮಾಣ, ಬರ ಅಥವಾ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವುದು, ಶಾಲೆಗಳ ದತ್ತು ಮತ್ತಿತರ ಯೋಜನೆಗಳಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಸಕ್ರಿಯವಾಗಿತ್ತು. ಆದರೆ, ಇದೇ ಮೊದಲ ಬಾರಿ ಸಮಾಜದ ಪರಿವರ್ತನೆಗೆ ಕಾರಣವಾಗುವಂತಹ ಯೋಜನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪರಿಣಿತ ತೀರ್ಪುಗಾರರು ಅರ್ಜಿಗಳನ್ನು ನಾಲ್ಕು ಮಾನದಂಡಗಳ ಮೂಲಕ ಅಂದರೆ ಜಗತ್ತಿನ ನೈಜ ಸಮಸ್ಯೆಗಳಿಗೆ ಅನ್ವಯಿಸುವುದು, ತಂತ್ರಜ್ಞಾನದ ಬಳಕೆ, ಆಲೋಚನೆಗಳ ಅಸಲಿತನ ಮತ್ತು ಬಳಕೆಯ ಸರಳತೆ ಆಧರಿಸಿ ಆಯ್ಕೆ ಮಾಡುತ್ತಾರೆ ಎಂದು ಸುಧಾಮೂರ್ತಿ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.