ಮೆಟ್ರೋ ಆಡಳಿತಕ್ಕೆ ಅನನುಭವಿಗಳ ಸಾರಥ್ಯ


Team Udayavani, Mar 20, 2018, 12:10 PM IST

metro.jpg

ಬೆಂಗಳೂರು: “ನಮ್ಮ ಮೆಟ್ರೋ’ ಮುನ್ನಡೆಸುತ್ತಿರುವ ಸಾರಥಿಗಳು ಮೂಲತಃ ಮೆಟ್ರೋದಲ್ಲಿ ಕೆಲಸ ಮಾಡಿದವರೇ ಅಲ್ಲ. ರಾಷ್ಟ್ರೀಯ ಹೆದ್ದಾರಿ, ರಕ್ಷಣಾ ವಿಭಾಗ, ಕೆಪಿಟಿಸಿಎಲ್‌, ರೈಲ್ವೆ ಸೇರಿದಂತೆ ನೇರವಾಗಿ ಯಾವುದೇ ಸಂಬಂಧವಿಲ್ಲದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದವರೆಲ್ಲಾ ಈಗ ಮೆಟ್ರೋ ಸಾರಥ್ಯ ವಹಿಸಿಕೊಂಡಿದ್ದಾರೆ. ಆದರೆ, ಅವರಲ್ಲಿನ ಅನುಭವದ ಕೊರತೆ ಆಡಳಿತ ವ್ಯವಸ್ಥೆ ಮೇಲೆ ಮಾತ್ರವಲ್ಲ.

ಯೋಜನೆ ವಿಳಂಬಕ್ಕೂ ಕಾರಣವಾಗುತ್ತಿದೆ. ನಿರ್ಣಾಯಕ ಹುದ್ದೆಗಳಲ್ಲಿ ಇರುವವರ ಪೈಕಿ ಶೇ. 60ಕ್ಕೂ ಹೆಚ್ಚು ಮಂದಿಗೆ ಮೆಟ್ರೋ ವ್ಯವಸ್ಥೆ ಹೊಸದು. ದೆಹಲಿ, ಮುಂಬೈ, ಕೊಲ್ಕತ್ತ ಮೆಟ್ರೋಗಳಲ್ಲಿ ಕಾರ್ಯನಿರ್ವಹಿಸಿದವರು ಸೇರಿದಂತೆ “ನಮ್ಮ ಮೆಟ್ರೋ’ ಆರಂಭದಿಂದ ಸೇವೆಗೆ ಮುಕ್ತಗೊಳಿಸುವವರೆಗೂ ಇದ್ದವರನ್ನು ಬದಿಗೊತ್ತಿ, ಅನನುಭವಿಗಳಿಗೆ ಮಣೆಹಾಕಲಾಗಿದೆ.

 ಇದು ಕೆಲ ಅನುಭವಿಗಳಿಗೆ ಅಸಮಾಧಾನ ಉಂಟುಮಾಡಿದೆ. ಈ ಬಗ್ಗೆ ಆಕ್ಷೇಪ ಅಥವಾ ಅಲವತ್ತುಕೊಂಡರೆ “ಟಾರ್ಗೆಟ್‌’ ಮಾಡಲಾಗುತ್ತದೆ. ಹಾಗಾಗಿ, “ಅಸಮಾಧಾನಿ’ಗಳು ತಟಸ್ಥ ಧೋರಣೆ ಅನುಸರಿಸುತ್ತಿದ್ದಾರೆ. ಇದು ಅಂತಿಮವಾಗಿ ಯೋಜನೆ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಎಂಜಿನಿಯರ್‌ ಮಾಹಿತಿ ನೀಡುತ್ತಾರೆ.

ಅನುಭವದ ಕೊರತೆ ಪರಿಣಾಮ: ಈ ಆರೋಪಕ್ಕೆ “ನಮ್ಮ ಮೆಟ್ರೋ’ ಎರಡನೇ ಹಂತದ ಪ್ರಗತಿ ಕನ್ನಡಿ ಹಿಡಿಯುತ್ತದೆ. ಮೊದಲ ಹಂತಕ್ಕೆ 2014ರಲ್ಲೇ ಕೇಂದ್ರ ಸರ್ಕಾರದ ಅನುಮೋದನೆ ದೊರಕಿದೆ. ಮೊದಲ ಹಂತದ ಜತೆಗೇ ಎರಡನೇ ಹಂತಕ್ಕೂ ಕೈಹಾಕಲು ನಿಗಮದ ಮುಂದೆ ಅವಕಾಶ ಇತ್ತು. ಆಗ ಮೊದಲ ಹಂತದಲ್ಲಿದ್ದವರೇ ಟೆಂಡರ್‌ನಲ್ಲಿ ಭಾಗವಹಿಸುತ್ತಿದ್ದರು.

ಆಗಲೇ ಕಾಸ್ಟಿಂಗ್‌ ಯಾರ್ಡ್‌, ಕಾರ್ಮಿಕರು ಎಲ್ಲವೂ ಲಭ್ಯ ಇರುವುದರಿಂದ ಯೋಜನೆ ಕಾಮಗಾರಿ ತ್ವರಿತ ಮಾತ್ರವಲ್ಲ; ವೆಚ್ಚವೂ ಕಡಿಮೆ ಆಗಬಹುದಿತ್ತು. ಆದರೆ, ಮೊದಲ ಹಂತ ಮುಗಿಯುವವರೆಗೂ ಎರಡನೇ ಹಂತಕ್ಕೆ ಕೈಹಾಕಲೇ ಇಲ್ಲ. ಇದು ಅನುಭವದ ಕೊರತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು. 

2ನೇ ಹಂತದಿಂದ ಹಳೇ ಗುತ್ತಿಗೆದಾರರು ದೂರ: ಮೊದಲ ಹಂತದಲ್ಲಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಾರೂ ಎರಡನೇ ಹಂತದಲ್ಲಿ ಭಾಗವಹಿಸಿಲ್ಲ (ತುಮಕೂರು ರಸ್ತೆ ವಿಸ್ತರಿಸಿದ ಮಾರ್ಗ ಮತ್ತು ಬನ್ನೇರುಘಟ್ಟ ರಸ್ತೆ ಒಂದು ಪ್ಯಾಕೇಜ್‌ ಹೊರತುಪಡಿಸಿ). 2012ರ ನಂತರ ಸಾಕಷ್ಟು ಬಾರಿ ನಕ್ಷೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಎರಡನೇ ಹಂತದಲ್ಲಿ ವಿಳಂಬವಾಯಿತು. ಇದರ ತೊಂದರೆ ಸಾರ್ವಜನಿಕರಿಗಾಯಿತು.

ಇನ್ನು ಮತ್ತೂಂದೆಡೆ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸಹಾಯಕ ಎಂಜಿನಿಯರ್‌ ಮೇಲ್ಪಟ್ಟವರೆಲ್ಲರೂ ನಿರ್ಣಾಯಕ ಪಾತ್ರ ವಹಿಸುವವರಾಗಿದ್ದಾರೆ. ಇವರಲ್ಲಿ ಬಹುತೇಕರಿಗೆ ಸಂಪೂರ್ಣ ಅಟೋಮೆಟಿಕ್‌ ಆಗಿರುವ ಮೆಟ್ರೋ ನಿರ್ವಹಣೆ ಕಬ್ಬಿಣದ ಕಡಲೆ. ಆದ್ದರಿಂದ ತಳಮಟ್ಟದ ಸಿಬ್ಬಂದಿ ನೀಡುವ ಮಾಹಿತಿಯನ್ನೇ ಕಣ್ಮುಚ್ಚಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ತಾಂತ್ರಿಕ ದೋಷಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫ‌ಲಾಗಿದ್ದಾರೆ.

ಅಧಿಕಾರಶಾಹಿಗಿಂತ ತಂತ್ರಜ್ಞರು ಸೂಕ್ತ: ರೈಲ್ವೆ ಮತ್ತು ಮೆಟ್ರೋ ರೈಲ್ವೆ ನಡುವೆ ಸಾಕಷ್ಟು ವ್ಯತ್ಯಾಸ ಇಲ್ಲದಿರಬಹುದು. ಆದರೆ, ರೈಲ್ವೆ ಮಾನವ ಅವಲಂಬಿತ ಮತ್ತು ಮೆಟ್ರೋ ಸ್ವಯಂಚಾಲಿತ. ಹಾಗಾಗಿ, ಮೆಟ್ರೋ ಮುನ್ನಡೆಸಲು ಅಧಿಕಾರಶಾಹಿಗಿಂತ ತಂತ್ರಜ್ಞರ ಅವಶ್ಯಕತೆ ಇದೆ. “ಮೆಟ್ರೋ ಮ್ಯಾನ್‌’ ಇ. ಶ್ರೀಧರನ್‌ ಕೂಡ ನಿರ್ಣಾಯಕ ಹುದ್ದೆಗಳಿಗೆ ತಂತ್ರಜ್ಞರ ನೇಮಕ ಹೆಚ್ಚು ಸೂಕ್ತ ಎಂದು ಈ ಹಿಂದೆ ಅಭಿಪ್ರಾಯಪಟ್ಟಿದ್ದನ್ನು ಸ್ಮರಿಸಬಹುದು ಎಂದು ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಎಂಜಿನಿಯರೊಬ್ಬರು ತಿಳಿಸಿದರು.

ಅನಿವಾರ್ಯತೆ ಏನಿದೆ?: ಅನನುಭವಿಗಳನ್ನು ತಂದು ಕೂರಿಸುವುದು ನಿಯಮ ಬಾಹಿರ ಅಲ್ಲದಿರಬಹುದು. ಆದರೆ, ಇದು ಅಂತಿಮವಾಗಿ ಯೋಜನೆ ಮತ್ತು ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ವಿನಾಕಾರಣ ಇದಕ್ಕೆ ಅವಕಾಶ ಮಾಡಿಕೊಡುವುದು ಯಾಕೆ? ಅಂತಹ ಅನಿವಾರ್ಯತೆ ಏನಿದೆ ಎಂದು ಎಂಜಿನಿಯರ್‌ಗಳು ಕೇಳುತ್ತಾರೆ.

ದಶಕದಿಂದ ನಿಯೋಜನೆ!: ಸಾಮಾನ್ಯವಾಗಿ ತೆರವಾದ ಯಾವುದೇ ಹುದ್ದೆಗೆ ಎಷ್ಟು ದಿನಗಳು ಪ್ರಭಾರರನ್ನು ನಿಯೋಜಿಸಬಹುದು. ಒಂದೆರಡು ತಿಂಗಳು, ಅಬ್ಬಬ್ಟಾ ಎಂದರೆ ವರ್ಷ. ಆದರೆ, ಹತ್ತು ವರ್ಷಗಟ್ಟಲೆ ಅವರೇ ಇಲ್ಲಿ ಕೆಲಸ ಮಾಡುತ್ತಿದ್ದಾರೆ. – ಬಿಎಂಆರ್‌ಸಿಯಲ್ಲಿ ಈ ಅಚ್ಚರಿ ಕಾಣಬಹುದು. ಒಬ್ಬಿಬ್ಬರಲ್ಲ, ಇಂತಹ ಹತ್ತಾರು ಜನರನ್ನು ನಿಗಮದಲ್ಲಿ ಕಾಣಬಹುದು. ರೈಲ್ವೆ, ಕೆಪಿಟಿಸಿಎಲ್‌ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10-12 ವರ್ಷಗಳ ಹಿಂದೆಯೇ ಇಲ್ಲಿ ನಿಯೋಜನೆ ಮೇರೆಗೆ ಬಂದವರು ಕಾಯಂ ಆಗಿ ಬೀಡುಬಿಟ್ಟಿದ್ದಾರೆ. ಇದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.

ಮೆಟ್ರೋ: ಸಂಧಾನ ಸಭೆ ವಿಫ‌ಲ ಅನಿರ್ದಿಷ್ಟಾವಧಿ ಮುಷ್ಕರ ಸಾಧ್ಯತೆ
ಬೆಂಗಳೂರು:
ಮೆಟ್ರೋ ಸಿಬ್ಬಂದಿಯ ಮತ್ತು ಬಿಎಂಆರ್‌ಸಿ ನಡುವಿನ ಸತತ ಮೂರನೇ ಸಂಧಾನ ಸಭೆಯೂ ವಿಫ‌ಲವಾಗಿದ್ದು, ಅನಿರ್ದಿಷ್ಟಾವಧಿ ಮುಷ್ಕರ ನಡೆಯುವ ಸಾಧ್ಯತೆ ಹೆಚ್ಚಿದೆ. ಸೋಮವಾರ ಕೇಂದ್ರ ಕಾರ್ಮಿಕ ಆಯುಕ್ತ ಗಣಪತಿ ಭಟ್‌ ಅಧ್ಯಕ್ಷತೆಯಲ್ಲಿ ಸುದೀರ್ಘ‌ ಮಾತುಕತೆ ಫ‌ಲಿ ನೀಡಲಿಲ್ಲ. ಸಿಬ್ಬಂದಿ ಮತ್ತು ನಿಗಮದ ಆಡಳಿತ ಮಂಡಳಿ ಇಬ್ಬರೂ ಪಟ್ಟುಸಡಿಲಿಸಲಿಲ್ಲ.

ಪರಿಣಾಮ ಸಂಧಾನ ಸಭೆ ಯಶಸ್ವಿಯಾಗಲಿಲ್ಲ. ಬೆಳಿಗ್ಗೆ 11.30ಕ್ಕೆ ಶುರುವಾದ ಸಭೆ ಸಂಜೆ 6.30ರವರೆಗೂ ನಡೆಯಿತು. ನಿಗಮವು ಹಲವು ಬೇಡಿಕೆಗಳ ಈಡೇರಿಕೆಗೆ ಮೌಖೀಕವಾಗಿ ಒಪ್ಪಿತು. ಆದರೆ, ಬಿಎಂಆರ್‌ಸಿ ನೌಕರರ ಸಂಘಕ್ಕೆ ಮಾನ್ಯತೆ ನೀಡುವ ವಿಚಾರಕ್ಕೆ ಮಾತ್ರ ನಿರಾಕರಿಸಿತು. ಅದರೆ ಸಿಬ್ಬಂದಿ ಪಟ್ಟುಹಿಡಿದರು.

ಇದಕ್ಕೆ ಒಪ್ಪದ ಬಿಎಂಆರ್‌ಸಿ ಆಡಳಿತ ಮಂಡಳಿಯು ಸಭೆಯಲ್ಲಿನ ತೀರ್ಮಾನಗಳನ್ನು ಲಿಖೀತವಾಗಿ ದಾಖಲಿಸುವಾಗ ನಿಗಮದ ಆಡಳಿತ ಮಂಡಳಿಯು “ಬೇಡಿಕೆಗಳ ಈಡೇರಿಕೆಗೆ ಒಪ್ಪಿದೆ’ ಎಂದು ದಾಖಲಿಸುವುದು ಬೇಡ ಎಂದಾಗ ಸಂಘದ ಮುಖಂಡರು ಸಭೆಯಿಂದ ಹೊರ ನಡೆದರು ಎನ್ನಲಾಗಿದೆ. ಇದರಿಂದ ಕೇಂದ್ರ ಕಾರ್ಮಿಕ ಆಯುಕ್ತರ ನೇತೃತ್ವದ 2ನೇ ಸಭೆಯೂ ಫ‌ಲಪ್ರದವಾಗಲಿಲ್ಲ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.