TIA: ವಿನೂತನ ಚಿಕಿತ್ಸೆಯಿಂದ 100 ಬಾರಿ ಮೆದುಳಿನ ಸ್ಟ್ರೋಕ್ ಗೆ ತುತ್ತಾದ ರೋಗಿಗೆ ಜೀವದಾನ

Team Udayavani, Aug 23, 2023, 2:58 PM IST

TIA: ವಿನೂತನ ಚಿಕಿತ್ಸೆಯಿಂದ 100 ಬಾರಿ ಮೆದುಳಿನ ಸ್ಟ್ರೋಕ್ ಗೆ ತುತ್ತಾದ ರೋಗಿಗೆ ಜೀವದಾನ

ಬೆಂಗಳೂರು: ಅಭೂತಪೂರ್ವ ವೈದ್ಯಕೀಯ ಸಾಧನೆ ಮಾಡಿರುವ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ವೈದ್ಯರು 100ಕ್ಕೂ ಹೆಚ್ಚು ಮಿನಿ-ಸ್ಟ್ರೋಕ್ ಎಂದು ಕರೆಯಲ್ಪಡುವ ಟ್ರಾನ್ಸಿಯೆಂಟ್ ಇಸ್ಕೀಮಿಕ್ ಅಟ್ಯಾಕ್ಸ್ (ಟಿಐಎ)ಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು ಅದಕ್ಕೆ ಮೆದುಳಿನ ರಕ್ತನಾಳಗಳ ಅಪರೂಪದ ಕಾಯಿಲೆಯಲ್ಲಿ ನಡೆಸುವ ಎಂಡೋವ್ಯಾಸ್ಕುಲರ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ರೋಗಿಯು ಬಲಭಾಗದಲ್ಲಿ ದೌರ್ಬಲ್ಯ ಹೊಂದಿ ಮಾತನಾಡಲು ಕಷ್ಟಪಡುತ್ತಿದ್ದು ಇದು ರೋಗಪರೀಕ್ಷೆಗೂ ಸವಾಲಾಗಿತ್ತು. ಸಂಪೂರ್ಣ ಮೌಲ್ಯಮಾಪನದ ನಂತರ ರೋಗವು ಫೋಕಲ್ ಸೆರೆಬ್ರಲ್ ಆರ್ಟೀರಿಯೋಪತಿ ಎಂದು ಗುರುತಿಸಲಾಗಿದ್ದು ಇದು ಮೆದುಳಿನ ರಕ್ತನಾಳಗಳಿಗೆ ಸಂಬಂಧಿಸಿದ ರೋಗವಾಗಿದೆ. ಎನ್.ಎಚ್.ಹೆಲ್ತ್ ಸಿಟಿಯ ಸೀನಿಯರ್ ನ್ಯೂರೊ-ಇಂಟರ್ವೆನ್ಷನಿಸ್ಟ್ ಡಾ. ವಿಕ್ರಮ್ ಹುಡೇದ್, “ಈ ಪ್ರಕರಣವು ಎಂ.ಆರ್.ಐ ವೆಸಲ್ ವಾಲ್ ಇಮೇಜಿಂಗ್ ನಂತಹ ವಿಶೇಷ ಆಧುನಿಕ ತಂತ್ರಗಳ ಮಹತ್ವವನ್ನು ಎತ್ತಿ ತೋರಿಸಿದ್ದು ಇದು ನಮಗೆ ಮೂಲ ಕಾರಣ ಕಂಡುಕೊಳ್ಳಲು ಮತ್ತು ಅದಕ್ಕೆ ತಕ್ಕಂತೆ ನಮ್ಮ ಚಿಕಿತ್ಸೆ ರೂಪಿಸಲು ನೆರವಾಯಿತು” ಎಂದರು.

ಈ ಚಿಕಿತ್ಸೆಯ ಕುರಿತು ಡಾ. ವಿಕ್ರಮ್ ಹುಡೇದ್, “ರೋಗಿಯಲ್ಲಿ ಫೋಕಲ್ ಸೆರೆಬ್ರಲ್ ಆರ್ಟೀರಿಯೋಪತಿ ಎಂಬ ಅಪರೂಪದ ಸಮಸ್ಯೆಯಿದ್ದು ಅದರಲ್ಲಿ ತೀವ್ರವಾದ ರಕ್ತನಾಳಗಳ ಸಮಸ್ಯೆ ಇದ್ದು ಇದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿತ್ತು. ನಾವು ಎರಡು ಬಾರಿ ಆಂಜಿಯೊಪ್ಲಾಸ್ಟಿ ನಡೆಸಿದ್ದೇ ಅಲ್ಲದೆ ಎರಡನೆಯ ಬಾರಿ ನಾವು ಯಶಸ್ವಿಯಾಗಿ ಮೆದುಳಿನ ರಕ್ತನಾಳಗಳಿಗೆ ಔಷಧ ಹೊರಸೂಸುವ ಕಾರ್ಡಿಯಾಕ್ ಬಲೂನ್ ಬಳಸಿದೆವು ಮತ್ತು ನಂತರ ಅತ್ಯಂತ ಸವಾಲಿನ ಸ್ಥಿತಿಯಲ್ಲೂ ಇಂಟ್ರಾಕ್ರೇನಿಯಲ್ ಸ್ಟೆಂಟ್ ಅಳವಡಿಸಿದೆವು. ಇದು ಭಾರತದಲ್ಲಿ, ಬಹುಶಃ ವಿಶ್ವದಲ್ಲೇ ಪ್ರಪ್ರಥಮವಾಗಿ ಅಂತಹ ಬಲೂನ್ ಅನ್ನು ಮೆದುಳಿನ ಒಳಗಡೆ ಫೋಕಲ್ ಸೆರೆಬ್ರಲ್ ಆರ್ಟೀರಿಯೋಪತಿಗೆ ಬಳಸಿರುವ ಪ್ರಕರಣವಾಗಿದೆ” ಎಂದರು.

‘ಇಂತಹ ಸೂಕ್ಷ್ಮವಾದ ಪರಿಸ್ಥಿತಿಗಳಲ್ಲಿ ಇಂಟ್ರಾಕ್ರೇನಿಯಲ್ ಸ್ಟೆಂಟ್ ಅಳವಡಿಕೆ ಅತ್ಯಂತ ಸವಾಲಿನ ಕೆಲಸ ಏಕೆಂದರೆ ನಾಳವು ಛಿದ್ರಗೊಳ್ಳುವ ಸಾಧ್ಯತೆ ಅತಿ ಹೆಚ್ಚಾಗಿ ಇರುತ್ತದೆ. ಈ ಚಿಕಿತ್ಸೆಯು ರೋಗಿಯನ್ನು ಮತ್ತೆ ದುರ್ಬಲಗೊಳಿಸುವ ಪಾರ್ಶ್ವವಾಯುವಿನಿಂದ ಮುಕ್ತಗೊಳಿಸಿದ್ದು ಭಾರತದಲ್ಲಿ ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದು ಇದರಲ್ಲಿ ಸುಧಾರಿತ ತಂತ್ರಗಳು ಸಂಕೀರ್ಣ ಪಾರ್ಶ್ವವಾಯುವಿನ ಪ್ರಕರಣಗಳಲ್ಲೂ ಭರವಸೆ ಮತ್ತು ಗುಣವಾಗಿಸುವ ಭರವಸೆ ನೀಡಿವೆ” ಎಂದು ಈ ಪ್ರಕ್ರಿಯೆಯ ಪ್ರಾಮುಖ್ಯತೆಯನ್ನು ಡಾ.ವಿಕ್ರಮ್ ಹುಡೇದ್ ಹೇಳಿದರು.

ಮೆದುಳಿನ ಪಾರ್ಶ್ವವಾಯುಗಳು ಜಾಗತಿಕವಾಗಿ ಮರಣ ಮತ್ತು ಅಂಗವೈಕಲ್ಯದ ಪ್ರಮುಖ ಕಾರಣಗಳಾಗಿದ್ದು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಜಡ ಜೀವನಶೈಲಿ ಮತ್ತು ಒಎಸ್ಎ (ಅಬ್ ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ಅಂಶಗಳ ಹೆಚ್ಚಿರುವ ಕಾರಣದಿಂದ ಉಂಟಾಗಬಹುದು. ಪಾರ್ಶ್ವವಾಯು ಚಿಕಿತ್ಸೆಯು ವೈದ್ಯಕೀಯ ಕ್ಷೇತ್ರದಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ ಮತ್ತು ರೋಗಲಕ್ಷಣಗಳನ್ನು ಪ್ರಾರಂಭದಲ್ಲೇ ಪತ್ತೆ ಮಾಡುವುದು ಮತ್ತು ತಕ್ಷಣ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಪಾರ್ಶ್ವವಾಯುವಿನ ರೋಗಲಕ್ಷಣಗಳನ್ನು ಬಿ ಫಾಸ್ಟ್ (BE FAST): ಬ್ಯಾಲೆನ್ಸ್ ಪ್ರಾಬ್ಲಮ್ಸ್, ಫೇಷಿಯಲ್ ಅಸಿಮೆಟ್ರಿ, ಆರ್ಮ್ ವೀಕ್ನೆಸ್ ಮತ್ತು ಸ್ಪೀಚ್ ಪ್ರಾಬ್ಲಮ್ಸ್ ಮೂಲಕ ಗುರುತಿಸಲಾಗುತ್ತದೆ. ರೋಗಲಕ್ಷಣಗಳು ಕಾಣಿಸಿಕೊಂಡ 6 ಗಂಟೆಗಳ ಒಳಗಡೆ ಚಿಕಿತ್ಸೆ ಮತ್ತು ಕೆಲವೊಮ್ಮ 24 ಗಂಟೆಗಳ ಒಳಗಡೆ ಚಿಕಿತ್ಸೆ ನೀಡುವುದು ಪಾರ್ಶ್ವವಾಯುವಿನ ಪರಿಣಾಮಗಳನ್ನು ನಿವಾರಿಸಬಲ್ಲದು. ಬಹಳಷ್ಟು ಪಾರ್ಶ್ವವಾಯುಗಳು ರಕ್ತನಾಳಗಳಲ್ಲಿ ತಡೆಯುಂಟಾಗುವುದರಿಂದ ಮೆದುಳಿಗೆ ರಕ್ತ ಪ್ರಸಾರ ಕಡಿಮೆಯಾಗಿ ಉಂಟಾಗುತ್ತದೆ. ತೀವ್ರವಾದ ಪಾರ್ಶ್ವವಾಯು ಚಿಕಿತ್ಸೆಗೆ ಕಟ್ಟಿಕೊಂಡ ರಕ್ತನಾಳಗಳನ್ನು ಮೆಕ್ಯಾನಿಕಲ್ ಥ್ರೊಂಬೆಕ್ಟೊಮಿ ಅಥವಾ ಎಂಡೋವ್ಯಾಸ್ಕುಲರ್ ಚಿಕಿತ್ಸೆಯ ಮೂಲಕ ತೆರೆಯಬೇಕಾಗುತ್ತದೆ ಮತ್ತು ಇಂಟ್ರಾವೀನಸ್ ಕ್ಲಾಟ್ ಬಸ್ಟರ್ ಇಂಜೆಕ್ಷನ್ ನೀಡಬೇಕು. ಕೆಲ ಪ್ರಕರಣಗಳಲ್ಲಿ ಸ್ಟೆಂಟ್ ಗಳನ್ನು ಬಳಸುವ ತೀವ್ರವಾಗಿ ಸಂಕುಚಿತಗೊಂಡ ರಕ್ತನಾಳಗಳ ಚಿಕಿತ್ಸೆ ನೀಡಬೇಕಾಗುತ್ತದೆ. ಸಕಾಲಿಕ ಚಿಕಿತ್ಸೆ ನೀಡುವುದರ ಪ್ರಾಮುಖ್ಯತೆಯನ್ನು ಗುರುತಿಸಿದ ನಾರಾಯಣ ಹೆಲ್ತ್ ಸಿಟಿ ಪಾರ್ಶ್ವವಾಯು ರೋಗಿಗಳನ್ನು ಅಂಗವೈಕಲ್ಯದಿಂದ ರಕ್ಷಿಸಲು ಅತ್ಯಾಧುನಿಕ ತಂತ್ರಗಳನ್ನು ಬಳಸುತ್ತದೆ.

ಬೆಂಗಳೂರಿನಲ್ಲಿರುವ ನಾರಾಯಣ ಹೆಲ್ತ್ ಸಿಟಿಯು ವೈದ್ಯಕೀಯ ಆರೈಕೆ ಮತ್ತು ಆವಿಷ್ಕಾರದಲ್ಲಿ ತನ್ನ ಬದ್ಧತೆ ಮತ್ತು ಶ್ರೇಷ್ಠತೆಗೆ ಖ್ಯಾತಿ ಪಡೆದ ಪ್ರಮುಖ ಆರೋಗ್ಯಸೇವಾ ಸಂಸ್ಥೆಯಾಗಿದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ಪರಿಣಿತ ವೈದ್ಯರನ್ನು ಹೊಂದಿರುವ ಈ ಸಂಸ್ಥೆಯು ಭಾರತ ಮತ್ತು ಅದರ ಆಚೆಗೂ ಗುಣಮಟ್ಟದ ಆರೋಗ್ಯಸೇವೆಗೆ ಖ್ಯಾತಿ ಪಡೆದಿದೆ.

ಟಾಪ್ ನ್ಯೂಸ್

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

1-qqeqwe

Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

6

Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.