ಶಾಸನ ಸಾಹಿತ್ಯ ಸಿರಿ ಸಾಹಿತ್ಯ ಅಕಾಡೆಮಿ ಹೆಜ್ಜೆ
ಶಾಸನಗಳಲ್ಲಿ ಅಡಗಿರುವ ಸಾಹಿತ್ಯ ವಿಶೇಷಗಳನ್ನು ಒಟ್ಟು ಗೂಡಿಸುವ ಗುರಿ
Team Udayavani, Mar 16, 2021, 10:36 AM IST
ಬೆಂಗಳೂರು: ಶಾಸನಗಳಲ್ಲಿರುವ ಗದ್ಯ ರೂಪದ ಸಾಹಿತ್ಯವನ್ನು ಸಾಹಿತ್ಯಾಸಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹೆಜ್ಜೆಯಿರಿಸಿದೆ.
ಶಾಸನ ಸಾಹಿತ್ಯದ ಕುರಿತ “ಶಾಸನ ಸಾಹಿತ್ಯ ಸಿರಿ’ಎಂಬ ಬೃಹತ್ ಸಂಪುಟಗಳನ್ನು ಪ್ರಕಟಿಸುವನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಇದರಿಂದಾಗಿ ಯುವ ಉತ್ಸಾಹಿ ಸಂಶೋಧಕರಿಗೆ ಮತ್ತು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಶಾಸನ ಸಾಹಿತ್ಯದ ತಿರುಳು ತಿಳಿಯಲಿದೆ. ಶಾಸನಗಳಲ್ಲಿಇತಿಹಾಸವಷ್ಟೇ ಇಲ್ಲ. ಇದರ ಜತೆ ಉತ್ತಮವಾದ ಪಂದ್ಯಗಳಿವೆ. ಅವುಗಳನ್ನು ಗುರುತಿಸಿಛಂದೋಬದ್ಧವಾಗಿ ವಿನ್ಯಾಸಗೊಳಿಸಿ, ಸಾಹಿತ್ಯರೂಪದ ಪುಸ್ತಕ ಮಾಡಬೇಕು ಎಂಬ ಕಾರ್ಯ ಇದಾಗಿದೆ.
ಈ ಹಿಂದೆ ಆರ್.ನರಸಿಂಹಚಾರ್ ಅವರು 1923ರಲ್ಲಿ “ಶಾಸನ ಪಂದ್ಯ ಮಂಜರಿ’ ಎಂಬ ಶೀರ್ಷಿಕೆಯಡಿ ಪುಸ್ತಕ ಪ್ರಕಟಣೆ ಮಾಡಿದ್ದಾರೆ. ಅದೇ ರೀತಿಯ ಪುಸ್ತಕವನ್ನು ಸಮಗ್ರ ರೂಪದಲ್ಲಿ ಸಾಹಿತ್ಯಾಸಕ್ತರಿಗೆ ಕಟ್ಟಿಕೊಡಬೇಕು ಎಂಬ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿ ಮುಂದಾಗಿದೆ. ನಾಡಿನ ಹಿರಿಯ ಸಂಶೋಧಕ ಡಾ. ದೇವರ ಕೊಂಡಾರೆಡ್ಡಿ ಅವರು “ಶಾಸನ ಸಾಹಿತ್ಯ ಸಿರಿಸಂಪುಟ’ಯೋಜನೆಯ ಸಂಪಾದಕರಾಗಿದ್ದಾರೆ. ಹಿರಿಯ ವಿದ್ವಾಂಸ ಬಿ.ರಾಜಶೇಖರಪ್ಪ, ಎಸ್. ಕೆ.ಕೊಪ್ಪದ್, ಪರವಶಿವಮೂರ್ತಿ, ಸೀತಾರಾಮಜಾಗೀರ್ದಾರ್, ಡಾ.ಮಂಜುನಾಥ್ ಅವರಿಗೆ ಯೋಜನೆಯ ಉತ್ಸುವಾರಿ ನೀಡಲಾಗಿದೆ ಎಂದು ಅಕಾಡೆಮಿ ಅಧಿಕಾರಿಗಳು ಮಾಹಿತಿ ನೀಡಿದರು.
500 ಪುಟಗಳ ಹತ್ತು ಸಂಪುಟ: ರಾಜ್ಯಾದ್ಯಂತ 30 ಸಾವಿರಕ್ಕೂ ಅಧಿಕ ಶಿಲಾಶಾಸನಗಳುದೊರೆತಿವೆ. ಅವುಗಳಲ್ಲಿರುವ ಸಾಹಿತ್ಯವನ್ನು ಒಟ್ಟುಗೂಡಿಸುವ ಕೆಲಸ ಈಗಾಗಲೇ ನಡೆದಿದೆ.ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಶಾಸನ ಪಂದ್ಯಗಳು ಸಿಗಲಿವೆ. ಆದರೆ ಇತರ ಕಡೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದೊರೆಯಲಿವೆ. ಅವುಗಳನ್ನು ಒಟ್ಟುಗೂಡಿಸಿ ಸಂಪುಟ ರೂಪಕ್ಕೆ ತರುವ ಆರಂಭಿಕ ಕಾರ್ಯನಡೆದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿದ್ದಾರೆ.
ಶಾಸನಗಳಲ್ಲಿ ಐತಿಹಾಸಿಕ ಅಂಶಗಳಷ್ಟೇ ಇಲ್ಲ. ಮೌಲೀಕ ಸಾಹಿತ್ಯವೂ ಇದರಲ್ಲಿ ಅಡಗಿದೆ.ಶಾಸನಗಳಲ್ಲಿರುವ ಪಂದ್ಯಗಳಿಗೆ ಸಾಹಿತ್ಯ ರೂಪನೀಡಬೇಕು ಎಂಬ ದೃಷ್ಟಿಯಿಂದ ಅಕಾಡೆಮಿ”ಶಾಸನ ಸಾಹಿತ್ಯ ಸಿರಿ” ಶೀರ್ಷಿಕೆಯಡಿ ಬೃಹತ್ ಸಂಪುಟ ಹೊರತರಲು ಮುಂದಾಗಿದೆ. ಓಲೆಗರಿಯಲ್ಲಿರುವ ಕವಿರಾಜಮಾರ್ಗದಿಂದ ಪಂಪಭಾರತದ ವರೆಗಿನ ಎಲ್ಲಾ ಸಾಹಿತ್ಯಕ್ಕೆ ಪುಸ್ತಕ ರೂಪ ನೀಡಲಾಗಿದೆ. ಹಾಗೆಯೇ ಜಾನಪದ ಸಾಹಿತ್ಯವೂ ಸಂಪಾದನೆಆಗಿದೆ. ಶಾಸನಗಳಲ್ಲಿ ಬಹಳ ದೊಡ್ಡ ಪ್ರಮಾಣದ ಸಾಹಿತ್ಯವಿದೆ. ಆದರೆ, ಅದು ಸಾಹಿತ್ಯದ ವಸ್ತುವಾಗಿ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಶಾಸನ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಇದು ವಿಶ್ಲೇಷಣೆ ಮತ್ತಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.
“ಶಾಸನ ಸಾಹಿತ್ಯ ಸಿರಿ’ಯೋಜನೆ ವೆಚ್ಚ 60 ಲಕ್ಷ ರೂ.ಆಗಿದೆ. ಒಂದು ವರ್ಷದೊಳಗೆ ಈ ಕಾರ್ಯ ಪೂರ್ತಿಗೊಳ್ಳುವ ನಿರೀಕ್ಷೆಯಿದೆ. ಶಾಸನಸಾಹಿತ್ಯವನ್ನು ಸಾಹಿತ್ಯರೂಪದಲ್ಲಿ ನೀಡುವ ಕೆಲಸ ವಾಗಿದೆ. ಇತಿಹಾಸವನ್ನುಬಿಟ್ಟು ಸಾಹಿತ್ಯ ರೂಪವನ್ನು ಸಂಪಾದನೆ ಮಾಡಿ ಓದುಗರಿಗೆ ನೀಡಲಾಗುವುದು.ಸಾಹಿತ್ಯ ವಿದ್ಯಾರ್ಥಿಗಳಿಗೆ ಜೀವನಮೌಲ್ಯಗಳ ಜತೆಗೆ ವ್ಯಕ್ತಿ ಚಿತ್ರಗಳನ್ನು ಅರಿಯಲು ಸಹಾಯವಾಗಲಿದೆ. –ಕರಿಯಪ್ಪ, ಅಕಾಡೆಮಿ ರಿಜಿಸ್ಟ್ರಾರ್
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.