ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ
Team Udayavani, Feb 13, 2019, 6:31 AM IST
ಬೆಂಗಳೂರು: “ವಕೀಲರ ರಕ್ಷಣೆ ಕಾಯ್ದೆ’ ಜಾರಿಗೆ ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್ ಕರೆ ನೀಡಿದ್ದ ರಾಷ್ಟ್ರ ವ್ಯಾಪಿ ಪ್ರತಿಭಟನೆಯನ್ನು ಬೆಂಗಳೂರು ವಕೀಲರ ಸಂಘ ಬೆಂಬಲಿಸಿದ ಪರಿಣಾಮವಾಗಿ ಹೈಕೋರ್ಟ್ ಸೇರಿದಂತೆ ನಗರದ ಎಲ್ಲ ಅಧೀನ ನ್ಯಾಯಾಲಯಗಳ ಕಲಾಪಗಳಿಂದ ಮಂಗಳವಾರ ವಕೀಲರು ದೂರು ಉಳಿದಿದ್ದರು.
ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್, ಮೆಯೋಹಾಲ್ ಮತ್ತು ನ್ಯಾಯಾದೇಗುಲ ಸಂಕೀರ್ಣದಲ್ಲಿ ಬಹುತೇಕ ಬೆಳಗ್ಗೆಯಿಂದಲೇ ಕಲಾಪಗಳು ನಡೆದಿಲ್ಲ. ಹೈಕೋರ್ಟ್‌ನಲ್ಲಿ ಬೆಳಿಗ್ಗೆ ಕಲಾಪ ಆರಂಭಗೊಂಡತ್ತಿದ್ದಾರೂ, ಬೆಂಗಳೂರು ವಕೀಲರ ಸಂಘ ಮನವಿ ಮಾಡಿದ ಹಿನ್ನೆಲೆಯಲ್ಲಿ ವಕೀಲರು ಕಲಾಪಕ್ಕೆ ಗೈರು ಹಾಜರಾದ ಕಾರಣಕ್ಕೆ ಮಧ್ಯಾಹ್ನದ ವೇಳೆಗೆ ಹೈಕೋರ್ಟ್ ಎಲ್ಲ ನ್ಯಾಯಪೀಠಗಳಲ್ಲಿ ಮಂಗಳವಾರದ ಕಲಾಪಗಳನ್ನು ಮುಂದೂಡಲಾಯಿತು.
ರಾಜ್ಯಪಾಲ, ಡಿಸಿಎಂಗೆ ಮನವಿ: ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಲು ಒತ್ತಾಯಿಸುವುದು ಸೇರಿದಂತೆ ವಕೀಲ ಸಮುದಾಯದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಂಗಳೂರು ವಕೀಲರ ಸಂಘ ರಾಜ್ಯಪಾಲರು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು. ಪ್ರತಿಭಟನೆಯ ನೇತೃತ್ವವನ್ನು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ವಹಿಸಿದ್ದರು.
ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದಿಂದ ಕೆ.ಆರ್. ವೃತ್ತ, ವಿಧಾನಸೌಧ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಶಾಂತಿಯುತ ಮೆರವಣಿಗೆಯಲ್ಲಿ ತೆರಳಿದ ವಕೀಲರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಳಿಕ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಸಂಘದ ಪ್ರತಿನಿಧಿಗಳು, ಎಲ್ಲ ವಕೀಲರ ಸಂಘಗಳಿಗೆ ಕಚೇರಿ, ಕಟ್ಟಡ, ಗ್ರಂಥಾಲಯ ಸೇರಿ ಇತರೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ವಕೀಲರ ಕಲ್ಯಾಣ ನಿಧಿಗೆ ಹಣ ಮೀಸಲಿಡಬೇಕು. ಹರಿಯಾಣ ಸರ್ಕಾರದ ಮಾದರಿಯಲ್ಲಿ ವಕೀಲರ ಮನೆ ನಿರ್ಮಾಣಕ್ಕೆ ಕಡಿಮೆ ದರದಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡುವುದು ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.
ಹೈಕೋರ್ಟ್ ಕಲಾಪ ಮೊಟಕು: ಹೈಕೋರ್ಟ್‌ನ ಎಲ್ಲ ನ್ಯಾಯಪೀಠಗಳು ಎಂದಿನಂತೆ ಬೆಳಗ್ಗೆ 10.30ಕ್ಕೆ ಕಲಾಪ ಆರಂಭಿಸಿದವು. ಆದರೆ, ಬೆಳಗ್ಗೆಯಿಂದಲೇ ವಕೀಲರ ಸಂಖ್ಯೆ ಕಡಿಮೆಯಿತ್ತು. ವಕೀಲರು ಗೈರಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠಗಳು ಮುಂದೂಡಿದವು.
ಕೆಲ ನ್ಯಾಯಪೀಠಗಳಲ್ಲಿ ತಮ್ಮ ಅರ್ಜಿಗಳ ಸರದಿಗೆ ಕಾದಿದ್ದ ವಕೀಲರ ಬಳಿಗೆ ತೆರಳಿದ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಪ್ರತಿಭಟನೆಗೆ ಸಹಕರಿಸುವಂತೆ ಕೋರಿದರು. ಅದಕ್ಕೆ ಸ್ಪಂದಿಸಿದ ವಕೀಲರು ಕೋರ್ಟ್‌ಹಾಲ್‌ಗಳಿಂದ ಹೊರ ನಡೆದರು. ವಕೀಲರು ವಿಚಾರಣೆಗೆ ಬಾರದ ಕಾರಣಕ್ಕೆ ಮಧ್ಯಾಹ್ನ 1ಗಂಟೆಯ ವೇಳೆಗೆ ಎಲ್ಲ ನ್ಯಾಯಪೀಠಗಳಲ್ಲಿ ಮಂಗಳವಾರದ ಕಲಾಪವನ್ನು ಕೊನೆಗೊಳಿಸಲಾಯಿತು.
ತಡೆಯಾಜ್ಞೆ ತೆರವುಗೊಳಿಸಿದ ನ್ಯಾಯಪೀಠ: ಇದೇ ವೇಳೆ ತಮ್ಮ ನ್ಯಾಯಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿದ್ದ ಅರ್ಜಿಗಳ ಪೈಕಿ ವಕೀಲರು ಗೈರು ಹಾಜರಾದ ಪ್ರಕರಣಗಳಲ್ಲಿ ಈ ಹಿಂದೆ ಮಂಜೂರು ಆಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ನ್ಯಾ. ಮೈಕಲ್ ಕುನ್ಹಾ ತೆರವುಗೊಳಿಸಿದರು. ಕಲಾಪ ನಡೆಯುತ್ತಿದ್ದಾಗ ಪದೇ ಪದೆ ಹೆಸರು ಕೂಗಿದರೂ ವಕೀಲರು ಹಾಜರಾಗದ ಸುಮಾರು 20 ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ವಿಚಾರಣೆ ಮುಂದೂಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.