ಆಡಳಿತ ವ್ಯವಸ್ಥೆಯೇ ಬದಲು
Team Udayavani, Aug 25, 2017, 6:55 AM IST
ಬೆಂಗಳೂರು: “ಖಾಸಗಿತನಕ್ಕೆ ಮೂಲಭೂತ ಹಕ್ಕು ಎಂಬ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿರುವ ತೀರ್ಪು ಸಾಂವಿಧಾನಿಕವಾಗಿ ಮಾತ್ರವಲ್ಲ, ಸಾಮಾಜಿಕ ದೃಷ್ಟಿಕೋನದಿಂದಲೂ ಅತ್ಯಂತ ಮಹತ್ವದ್ದು. ಸರ್ಕಾರ ಎಂದರೆ ಅದು ಸೀಮಿತ ಹಕ್ಕು ಹೊಂದಿರುವಂತಹದ್ದು ಮತ್ತು ವ್ಯಕ್ತಿ ಎಂದರೆ ಆತ ತನ್ನ ಖಾಸಗಿತನ ಉಳಿಸಿಕೊಳ್ಳುವ ಹಕ್ಕು ಹೊಂದಿರುವವನು ಎಂಬುದು ಈ ತೀರ್ಪಿನ ಒಟ್ಟಾರೆ ಸಾರಾಂಶ. ಇದರಿಂದ ಆಡಳಿತ ವ್ಯವಸ್ಥೆಯೇ ಬದಲಾಗುತ್ತದೆ’.
ಇದು ಖಾಸಗಿತನಕ್ಕೆ ಮೂಲಭೂತ ಹಕ್ಕು ಸ್ಥಾನ ನೀಡಬೇಕು ಎಂದು ವಾದಿಸಿದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಸಜನ್ ಪೂವಯ್ಯ ಅವರ ಮಾತು. ಈ ತೀರ್ಪಿನಿಂದಾಗಿ ನಮ್ಮ ಖಾಸಗಿ ಹಕ್ಕು, ವಿಷಯ, ಮಾಹಿತಿ ಬಗ್ಗೆ ಸರ್ಕಾರ ಏನು ಮಾಡಬೇಕಾದರೂ ಅದಕ್ಕೆ ಕಾನೂನಿನ ಬೆಂಬಲ ಇರಲೇ ಬೇಕು ಎಂದಿದ್ದಾರೆ. ಅಲ್ಲದೆ, ದಬ್ಟಾಳಿಕೆ ಮೂಲಕ ಜನರನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳಲು ಅವಕಾಶ ಇರುವುದಿಲ್ಲ.
ಪ್ರತಿಭಟನೆ ಮಾಡಲು ಅವಕಾಶವಿರುತ್ತದೆ. ದಬ್ಟಾಳಿಕೆ ಮಾಡಿ ಒಬ್ಬ ವ್ಯಕ್ತಿಯಿಂದ ಏನು ಬೇಕಾದರೂ ಬರೆಸಿಕೊಳ್ಳಬಹುದು, ಆತನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂದು ಸರ್ಕಾರ ಭಾವಿಸಿದರೆ ಖಾಸಗಿತನದ ಮೂಲಭೂತ ಹಕ್ಕು ಮುಂದಿಟ್ಟುಕೊಂಡು ಪ್ರತಿಭಟಿಸಬಹುದು ಎಂದು ಹೇಳಿದ್ದಾರೆ.
– ಪ್ರದೀಪ್ ಕುಮಾರ್ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
MUST WATCH
ಹೊಸ ಸೇರ್ಪಡೆ
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.