ರಿಯಾಜ್‌ ಭಟ್ಕಳ್‌ ಸಹಚರ ಉಗ್ರನ ತೀವ್ರ ವಿಚಾರಣೆ!

Team Udayavani, Sep 28, 2019, 3:06 AM IST

ccb

ಬೆಂಗಳೂರು: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಓಬಾಮಾ 2015ರ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ಆಗಮಿಸಿದ್ದ ವೇಳೆ ದೇಶದ ಹಲವೆಡೆ ಬಾಂಬ್‌ಸ್ಫೋಟ ನಡೆಸಲು ರೂಪಿಸಿದ್ದ ಸಂಚಿನ ಮಾಸ್ಟರ್‌ಮೈಂಡ್‌, ಇಂಡಿಯನ್‌ ಮುಜಾಹಿದ್ದೀನ್‌ (ಐಎಂ) ಉಗ್ರ ಭಟ್ಕಳ ಮೂಲದ ಜೈನುಲ್ಲಾಬ್ಬೀನ್‌ ಎಂಬ ಮಾಹಿತಿ ಹೊರಬಿದ್ದಿದೆ.

ಈ ಸಂಚು ರೂಪಿಸಿದ ಆರೋಪ ಸಂಬಂಧ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಶಂಕಿತ ಉಗ್ರರು ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ಮುಂಬೈನ ಆರ್ಥರ್‌ ಜೈಲಿನಲ್ಲಿದ್ದ ಉಗ್ರ ಜೈನುಲ್ಲಾಬ್ಬೀನ್‌ ಎಂಬಾತನನ್ನು ವಶಕ್ಕೆ ಪಡೆದು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ದ ಎಸಿಪಿ ವೆಂಕಟೇಶ್‌ ಪ್ರಸನ್ನ ಮತ್ತವರ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ.

ಆತನ ವಿಚಾರಣೆಯಿಂದ ದೇಶದಲ್ಲಿ ಅಲ್ಲಲ್ಲಿ ನಡೆದಿದ್ದ ನಡೆಸಿದ ಸ್ಫೋಟಕ ಕೃತ್ಯಗಳಲ್ಲಿ ಜೈನಾಲ್ಲಾದ್ದೀನ್‌ ಮಾಸ್ಟರ್‌ ಮೈಂಡ್‌ ಎಂದು ಮೂಲಗಳು ತಿಳಿಸಿವೆ. ಆತನ ವಿಚಾರಣೆಯಿಂದ ದಕ್ಷಿಣ ಭಾರತದಲ್ಲಿ, ಪ್ರಮುಖವಾಗಿ ಕರ್ನಾಟಕದಲ್ಲಿ ನಡೆಸಿರುವ ಸ್ಫೋಟಕ ಕೃತ್ಯಗಳ ಮಾಹಿತಿ ದೊರೆಯಬಹುದು ಎನ್ನಲಾಗಿದೆ.

2015ರ ಜನವರಿಯಲ್ಲಿ ಕಾರ್ಯಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ದೇಶದ ವಿವಿಧ ಭಾಗಗಳಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಕೃತ್ಯಗಳಿಗೆ ಸ್ಫೋಟಕ ಸರಬರಾಜು ಮಾಡಿದ, ಸ್ಫೋಟಕ ಸಂಗ್ರಹಿಸಿದ್ದ ಭಟ್ಕಳ ಮೂಲದ ಸೈಯದ್‌ ಇಸ್ಮಾಯಿಲ್‌ ಅಫಾಕ್‌, ಅಬ್ದುಲ್‌ ಸಬೂರ್‌, ಸದ್ದಾಂ ಹುಸೇನ್‌, ರಿಯಾಜ್‌ ಅಹಮದ್‌ ಸೈಯದಿ ಎಂಬುವವರನ್ನು ಬಂಧಿಸಿದ್ದರು. ಅಷ್ಟೇ ಅಲ್ಲದೆ ಫ್ರೆಜರ್‌ಟೌನ್‌ನ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಸ್ಫೋಟಕ ಜಪ್ತಿ ಮಾಡಿಕೊಂಡಿದ್ದರು.

ಆರೋಪಿಗಳಿಗೂ ಹಾಗೂ ಜೈನುಲ್ಲಾಬ್ಬೀನ್‌ಗೆ ಸಂಪರ್ಕವಿದ್ದ ಬಗ್ಗೆ ಸಂಪರ್ಕ ಇರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಅಲ್ಲದೆ, ಜೈನುಲ್ಲಾಬ್ಬೀನ್‌ ಸೂಚನೆ ಮೇರೆಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಸಂಗತಿಯೂ ಗೊತ್ತಾಗಿತ್ತು. ಆದರೆ, ಆತ ಎಲ್ಲಿದ್ದಾನೆ ಎಂಬುದುರ ಬಗ್ಗೆ ಸುಳಿವು ನೀಡಿರಲಿಲ್ಲ.

ಈ ಬೆನ್ನಲ್ಲೇ ಜೈನುಲ್ಲಾಬ್ಬೀನ್‌ ಮುಂಬೈನಲ್ಲಿ 2011ರಲ್ಲಿ ಜವೇರಿ ಬಜಾರ್‌, ಖಬೂತರ್‌ ಖಾನಾ ಸೇರಿ ಮೂರು ಕಡೆ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಅರ್ಥರ್‌ ರಸ್ತೆ ಜೈಲಿನಲ್ಲಿರುವ ಬಗ್ಗೆ ಮಾಹಿತಿ ಖಚಿತವಾಗಿತ್ತು. ಈ ಮಾಹಿತಿ ಆಧರಿಸಿ ನ್ಯಾಯಾಲಯಕ್ಕೆ ಬಾಡಿವಾರೆಂಟ್‌ ಸಲ್ಲಿಸಿ ಆತನನ್ನು ವಶಕ್ಕೆ ಪಡೆದು ಕರೆತರಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಐಎಂ ಸಂಘಟನೆಯ ಸ್ಥಾಪಕ ರಿಯಾಜ್‌ ಭಟ್ಕಳ್‍ನ ಆಪ್ತನಾಗಿರುವ ಜೈನುಲ್ಲಾಬ್ಬೀನ್‌ ಆತನ ಸೂಚನೆ ಮೇರೆಗೆ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಐಎಂ ಸಂಘಟನೆ ಬಲಗೊಳಿಸುತ್ತಿದ್ದ. 2011ರಿಂದ 2014ರವರೆಗೆ ದೇಶದಲ್ಲಿ ನಡೆದ ಬಾಂಬ್‌ ಸ್ಫೋಟ ಕೃತ್ಯಗಳಿಗೆ ಸಹಚರರ ಮೂಲಕ ಸ್ಫೋಟಕ ರವಾನಿಸಿದ್ದಾನೆ. ಅಷ್ಟೇ ಅಲ್ಲದೆ, ಫ್ರೆಜರ್‌ಟೌನ್‌ನಲ್ಲಿ ಬಂಧಿತರಾದ ಆರೋಪಿಗಳ ಜತೆ ನೇರ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಜೈಲಿನಲ್ಲಿದ್ದ ಐಎಂ ಸಂಘಟನೆಯ ಸದಸ್ಯ ಜೈನುಲ್ಲಾಬ್ಬೀನ್‌ನನ್ನು ಹೆಚ್ಚಿನ ವಿಚಾರಣೆ ಸಲುವಾಗಿ ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
-ಕುಲದೀಪ್‌ ಕುಮಾರ್‌ ಜೈನ್‌, ಸಿಸಿಬಿ ಡಿಸಿಪಿ

ಟಾಪ್ ನ್ಯೂಸ್

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.