ಸಾಲಮನ್ನಾ, ಬಡ್ಡಿರಹಿತ ಸಾಲ ಯೋಜನೆ ಸರಿಯಲ
Team Udayavani, Aug 10, 2017, 2:56 PM IST
ಬೆಂಗಳೂರು: ಸರ್ಕಾರದಿಂದ ರೈತರ ಸಾಲ ಮನ್ನಾ ಹಾಗೂ ರೈತರಿಗೆ ಬಡ್ಡಿ ರಹಿತ ಸಾಲ ನೀಡಬಾರದು. ಇದರಿಂದ ರೈತರು ಆಸೆಗೆ ಬಿಳುವ ಸಾಧ್ಯತೆ ಇದೆ ಎಂದು ಪ್ರಗತಿಪರ ಕೃಷಿಕ ನಾಡೋಜ ನಾರಾಯಣ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿ ಸ್ಮಾರಕ ನಿಧಿ, ಮೈಲಾರ ಮಹದೇವ ರಾಷ್ಟ್ರೀಯ ಟ್ರಸ್ಟ್ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಂಪಾರಣ್ ಸತ್ಯಾಗ್ರಹ ಶತಮಾನೋತ್ಸವ, ಕ್ವಿಟ್ ಇಂಡಿಯಾ ಚಳವಳಿ ನೆನಪು ಮತ್ತು ಹುತಾತ್ಮ ಮೈಲಾರ ಮಹದೇವಪ್ಪದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ರೈತರಿಂದ ರಾಷ್ಟ್ರಪತಿಯ ತನಕ ಎಲ್ಲರೂ ಗಾಂಧಿ ತತ್ವ ಅಳವಡಿಸಿಕೊಂಡಿದ್ದರೆ ಅನೇಕ ಸಮಸ್ಯೆಗೆ ಪರಿಹಾರ
ಸಿಗುತಿತ್ತು ಮತ್ತು ದೇಶವೂ ಬದಲಾಗುತ್ತಿತ್ತು,’ ಎಂದು ಹೇಳಿದರು. “ನಮ್ಮ ಸಂಸ್ಕೃತಿ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವ ಪರಿಣಾಮವಾಗಿ ದೇಶ ಹೀಗಿದೆ. ನಾವು ಗಳಿಸಿದ ಸಂಪತ್ತಿನಲ್ಲಿ ಶೇ.20ರಷ್ಟು ತೆಗೆದಿಟ್ಟಾಗ ಬೇರೆಯವರ
ಸಂಪತ್ತು ಕೊಳ್ಳೆ ಹೊಡೆಯುವ ಅವಶ್ಯಕತೆ ಇರುವುದಿಲ್ಲ. ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ಕೊಡುವ ಸಂಸ್ಕೃತಿಯು ಬೆಳೆಯುತ್ತದೆ. ವಿದ್ಯಾರ್ಥಿಗಳು ಗಾಂಧಿ ತತ್ವನ್ನು ಓದಿ, ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು,’ ಎಂದರು. ಕನ್ಮಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ಬ್ರಿಟಿಷರ ವಿರುದ್ಧ ಮೈಲಾರ ಮಹದೇವಪ್ಪ ಅವರು ಭೂಗತ ಚಳುವಳಿ ಮಾಡಿದ್ದರು. ತ್ಯಾಗದ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ. ಉಪ್ಪಿನ ಚಳವಳಿಯಲ್ಲಿ ಮೈಲಾರ ಮಹದೇವ ಭಾಗವಹಿಸದೇ ಇದ್ದಿದ್ದರೆ ರಾಜ್ಯದ
ಚರಿತ್ರೆಯೇ ಬರಡಾಗುತಿತ್ತು. ಹರಿಜನರ ಏಳ್ಗೆ, ಕೋಮುಸೌಹಾರ್ದತೆಯ ಬಗ್ಗೆ ಅಂದೇ ಗಾಂಧಿಜಿ ಹೇಳಿದ್ದರು. ಅದನ್ನು ಮೈಲಾರ ಮಹದೇವಪ್ಪ ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು,’ ಎಂದು ವಿವರಿಸಿದರು. “ಚೀನಾ ವಸ್ತುಗಳನ್ನು ಈಗ ಬಹಿಷ್ಕರಿಸುತ್ತಿದ್ದೇವೆ.
ಮೈಲಾರ ಅವರು ತಮ್ಮ 12ನೇ ವರ್ಷದಲ್ಲೇ ವಿದೇಶಿ ಉತ್ಪನ್ನ ಬಹಿಷ್ಕಾರಿಸಿದ್ದರು. ಹೊರಗಿನವರ ಇತಿಹಾಸಗೊತ್ತಿದೆ. ಆದರೆ ನಮ್ಮವರ ಇತಿಹಾಸ ತಿಳಿಯುವುದಿಲ್ಲ. ಜಾನ್ಸಿ ರಾಣಿ ಬಗ್ಗೆ ಗೊತ್ತು, ಆದರೆ, ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಮರೆಯುತ್ತಿದ್ದೇವೆ. ಚರಿತ್ರೆ ಓದುವವರ ಸಂಖ್ಯೆ ಕಡಿಮೆಯಾಗಿದೆ. ಕಾಂಗ್ರೆಸ್‌ಗಾಗಿ ಮೈಲಾರ ಅವರು ದುಡಿದಿದ್ದರು. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ
ಅಧಿಕಾರದಲ್ಲಿದ್ದರೂ, ಅವರನ್ನು ನೆನಯದೇ ಇರುವಷ್ಟು ಗೊಡ್ಡು ತನ ಬೆಳೆದುಬಿಟ್ಟಿದೆ,’ ಎಂದು ಬೇಸರ ವ್ಯಕ್ತಪಡಿಸಿದರು.ಎನ್‌ಎಸ್‌ಎಸ್ ರಾಜ್ಯ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರ್ ಮಾತನಾಡಿ, ಅನೇಕ ವಿದ್ಯಾರ್ಥಿಗಳಲ್ಲಿ ಗಾಂಧೀಜಿ ಬಗ್ಗೆ ಅಪ ನಂಬಿಕೆ
ಇದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೆರವಿನಿಂದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧೀಜಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಯುವ ಸಬಲೀಕರಣ ಇಲಾಖೆಯಿಂದ 35 ಲಕ್ಷ ರೂ. ಮೀಸಲಿಟ್ಟಿದೆ ಎಂದರು. ಕ್ವಿಟ್ ಇಂಡಿಯಾ ಚಳವಳಿ ಬಗ್ಗೆ ವಿಶ್ರಾಂತ ಕುಲಪತಿ ಡಾ. ಚಂದ್ರಶೇಖರ್ ಹಾಗೂ ಚಂಪಾರಣ್ ಸತ್ಯಾಗ್ರಹದ ಬಗ್ಗೆ ಪ್ರಾಧ್ಯಪಕಿ ಡಾ. ಪಿ. ಪದ್ಮ ಉಪನ್ಯಾಸ ಮಾಡಿದರು. ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ, ಮೈಲಾರ ಮಹದೇವಪ್ಪ ಕುಟುಂಬದ ಕಸ್ತೂರಿ ದೇವಿ ಮೊದಲಾದವರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.