ಮಾರ್ಚ್ 8,9ರಂದು “ನಂಬಿಕೆ ಮತ್ತು ಅದರಾಚೆಗೆ’ ಸಮಾವೇಶ: ಡಾ.ಹೆಗ್ಗಡೆ
Team Udayavani, Feb 10, 2018, 6:35 AM IST
ಬೆಂಗಳೂರು: ಪ್ರಾಚೀನ ನಂಬಿಕೆಗಳು, ಸತ್ಯಗಳು, ವಿಶ್ವಾಸಗಳು ಸತ್ಯದ ರೂಪದಲ್ಲಿ ಹೊರಹೊಮ್ಮಬೇಕು ಎಂಬ ಉದ್ದೇಶದಿಂದ ಮಾ. 8, 9ರಂದು ನಂಬಿಕೆ ಮತ್ತು ಅದರಾಚೆಗೆವಿಷಯದ ಕುರಿತು ಜಾಗತಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಸಮಾವೇಶದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಕೆಲವೊಮ್ಮ ನಮ್ಮ ಮೂಲತತ್ವಗಳಿಗೂ ಫಂಗಸ್ ಹಾಗೂ ಕಿಲುಬುಗಳು ಬೆಳೆದು ಮೂಲ ಸ್ವರೂಪವೇ ಕೆಲ ಕಾಲ ಮರೆಯಾಗಬಹುದು. ಯಾವುದೇ ವಿಶ್ವದ ಮತ್ತು ದೇಶದ ಪ್ರಾಚೀನ ನಂಬಿಕೆಗಳು, ಸತ್ಯಗಳು ಹಾಗೂ ವಿಶ್ವಾಸಗಳು ಸೇರಿ ಯಾವುದೇ ಮೂಲತತ್ವಗಳು ಅಜ್ಞಾನ, ಅಪನಂಬಿಕೆ ಹೆಸರಿನಲ್ಲಿರಬಾರದು ಎಂಬ ಉದ್ದೇಶವನ್ನು ಸಮಾವೇಶ ಒಳಗೊಂಡಿದೆ ಎಂದರು.
ನಂಬಿಕೆಗಳು, ಜೋತಿಷ್ಯ, ವಾಸ್ತುಶಾಸ್ತ್ರ, ಭವಿಷ್ಯಗಳ ಹಿಂದಿನ ಹಾಗೂ ಪೂರ್ವಜನ್ಮದ ಸತ್ಯವೇನು? ನಂಬಿಕೆಗಳು ಮತ್ತು ನಡವಳಿಕೆಗಳ ಕುರಿತು ಒಂದೇ ವೇದಿಕೆಯಲ್ಲಿ ಚರ್ಚೆಗಳು ಆಗಲಿವೆ. ವಿಜ್ಞಾನ ಮತ್ತು ಧರ್ಮ ಪ್ರತ್ಯೇಕವಲ್ಲ ಎಂಬುದರ ಕುರಿತು ಚರ್ಚೆ ನಡೆಯಲಿದೆ. ಇದರೊಂದಿಗೆ ಸತ್ಯವನ್ನು ಪರಿಶೀಲಿಸಿ, ಅದರ ಬಗ್ಗೆ ಮುಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಮಾವೇಶದಲ್ಲಿ 25 ದೇಶಗಳು, ಬೆಂಗಳೂರು ಸೇರಿ ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು, ತಜ್ಞರು ಹಾಗೂ ವಿಷಯ ತಜ್ಞರು ಭಾಗವಹಿಸಿ ವಿಚಾರಗಳ ಮಂಡಿಸಲಿದ್ದಾರೆ. ಜತೆಗೆ ವಿಷಯಗಳ ಕುರಿತು ಚರ್ಚೆ, ವಿಮರ್ಶೆ ಹಾಗೂ ಪ್ರಶ್ನೆಗಳನ್ನು ಕೇಳಲಿದ್ದಾರೆ.
ಸತ್ಯದ ಅರಿವು ಮೂಡಿಸುವುದೇ ದರ್ಶನದ ಉದ್ದೇಶವಾಗಿದ್ದು, ಭಾರತೀಯ ತತ್ವಶಾಸ್ತ್ರಗಳನ್ನು ದರ್ಶನ ಎಂದು ಕರೆಯುತ್ತಾರೆ. ಆದರೆ ಅದು ಎಲ್ಲರಿಗೂ ದೊರೆಯುವುದಿಲ್ಲ. ಹೀಗಾಗಿ ಅವರು ಅನುಕರಣೆ ಮಾಡುತ್ತಾರೆ. ಹೀಗಾಗಿಯೇ ಜಾತಿ, ಧರ್ಮ, ಅಂತಸ್ತು, ಮನೆತನ, ಸ್ಥಾನಮಾನಗಳಲ್ಲಿನ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಇದರಲ್ಲಿ ಉಂಟಾಗುವ ಗೊಂದಲ ದೂರಾದರೆ ಭೇದ, ಭಾಗಮರೆದು ಪರಸ್ಪರ ಗೌರವ ಸೃಷ್ಟಿಯಾಗುತ್ತದೆ ಎಂದು ವಿರೇಂದ್ರ ಹೆಗಡೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.