ಜಲಸಂರಕ್ಷಣೆ ಕುರಿತು ಅಂತಾರಾಷ್ಟ್ರೀಯ ಸಿನಿಮಾ ಉತ್ಸವ


Team Udayavani, Dec 9, 2017, 12:40 PM IST

jala-film.jpg

ಬೆಂಗಳೂರು: ಕೆರೆಗಳು ಇಂದು ಅಳಿವಿನಂಚಿನಲ್ಲಿವೆ. ಬೆಂಗಳೂರಿನ ಬಹುತೇಕ ಕೆರೆಗಳು ನುಂಗಣ್ಣರ ಪಾಲಾದರೆ, ಇನ್ನೂ ಹಲವು ಕೆರೆಗಳು ಜೀವ ಕಳೆದುಕೊಂಡಿವೆ. ಅದೇಷ್ಟೋ ಕೆರೆಗಳು ಕಲುಷಿತಗೊಂಡಿವೆ. ಅಳಿವಿನಂಚಿರುವ ಇಂತಹ ಜೀವರಕ್ಷಕ ಕೆರೆಗಳು, ಜೀವಜಲದ ಉಳಿವಿನ ಬಗ್ಗೆ ಸಿನಿಮಾಗಳ ಮೂಲಕ ಜನರಿಗೆ ತಿಳಿವಳಿಕೆ ನೀಡುವ ಪ್ರಯತ್ನಕ್ಕೆ ಇದೀಗ ಬೆಂಗಳೂರು ಫೀಲಂ ಸೊಸೈಟಿ ಮತ್ತು ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿವೆ.

ಸಿನಿಮಾ ವೀಕ್ಷಕರಿಗೆ ನೀರಿನ ಬಗ್ಗೆ ತಿಳಿವಳಿಕೆ ನೀಡುವಂತಹ ಚಿತ್ರಗಳನ್ನು ಪ್ರದರ್ಶಿಸುವ ಸಂಬಂಧ, ಡಿ.14ರಿಂದ 16ರ ವರೆಗೆ ನೀರಿನ ಧ್ವನಿಗಳು ಎಂಬ ಶೀರ್ಷಿಕೆಯಡಿ 11ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಂಡಿದ್ದು, 60 ದೇಶಗಳ 229 ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.

ಈ ಚಿತ್ರೋತ್ಸವದಲ್ಲಿ ಬರೀ ನೀರು ಮತ್ತು ನೀರಿನೊಳಗಿನ ಜಲಚರಗಳ ಕುರಿತು ಅರಿವು ಮೂಡಿಸುವ ಚಿತ್ರಗಳು ಮಾತ್ರ ಪ್ರದರ್ಶನಗೊಳ್ಳಲಿವೆ. ಏಷ್ಯಾದ ವಿಶಾಲವಾದ ಸಿಹಿ ನೀರಿನ ಕೆರೆ ಎಂದೇ ಪ್ರಸಿದ್ಧಿ ಪಡೆದಿರುವ ಕಾಶ್ಮೀರದ ವುಲಾರ್‌ ಕೆರೆ ಸಂರಕ್ಷಣೆ ಕುರಿತಂತೆ ಕಾಶ್ಮೀರಿ ನಿರ್ದೇಶಕ ಜಲಾಲುದ್ದೀನ್‌ ಬಾಬಾ, “ಸೇವಿಂಗ್‌ ದಿ ಸೇವಿಯರ್‌ ಸ್ವಚ್‌f ಭಾರತ್‌’ ಸಿನಿಮಾ ನಿರ್ದೇಶಿಸಿದ್ದು, ಇದು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಇದರೊಂದಿಗೆ ಸ್ಪೇನ್‌ ದೇಶದ ಮೊನಿಕಾ ಗೊನ್ಸಾಲ್ವೆಸ್‌ ಮತ್ತು ಡ್ಯಾನಿ ರೋಡ್ರಿಗಸ್‌ ಸಮುದ್ರದಾಳದ ಜೀವಿಗಳು ಮತ್ತು ಭೂಮಿ ಮೇಲಿನ ಜೀವಿಗಳಿಗೆ ಎಷ್ಟು ಮುಖ್ಯವಾಗಿದೆ ಎಂದು ತಿಳಿ ಹೇಳುವ “ದಿ ಸೀ ಆಫ್ ಲೈಫ್’ ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿದ್ದು, ಇದು ಕೂಡ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಬೆಂಗಾಲಿಯ ಸುಪ್ರಸಿದ್ಧ ನಿರ್ದೇಶಕ ಸೈಫ‌ುಲ್‌ ವಾದದ್‌ ಹಿಲಾ ಅವರು ಬಾಂಗ್ಲಾದೇಶದ “ಝೂಲ್‌ ಮೋಲಿಯಾ’ ಎಂಬ ಸಿಹಿನೀರಿನ ಸರೋವರದ ಬಗ್ಗೆ ಅದ್ಬುತ ಸಿನಿಮಾವನ್ನು ತೆರೆ ಮೇಲೆ ತಂದಿದ್ದು, ಅದು ಕೂಡ ಚಿತ್ರೋತ್ಸವದಲ್ಲಿ ಸಿನಿರಸಿಕರನ್ನು ರಂಜಿಸಲಿದೆ.

ಅಲ್ಲದೆ ಅಸ್ಸಾಮಿ ಭಾಷೆಯ “ರಿಧಂ ಆಫ್ ಬಹ್ಮಪುತ್ರ’, ಸುಂದರ್‌ ಬನ್ಸ್‌ ನದಿ ಮುಖಜ ಭೂಮಿಯ ಬಗ್ಗೆ ಕಥೆ ಹೇಳುವ “ಸುಂದರ್‌ ಬನ್ಸ್‌ ರೈಸಿಂಗ್‌ ವಾಟರ್‌ ಯಬ್ಬಿಂಗ್‌ ಲೈಫ್’ ಅಜಿತ್‌ ಚೌಧರಿ ನಿರ್ದೇಶನದ “ದಿ ಬ್ಲೂé ಕ್ಯಾಪ್‌’ ಸೇರಿದಂತೆ ಹಲವು ನಿರ್ದೇಶಕರ ವಿಭಿನ್ನ ರೀತಿಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಜಲ ಸಂರಕ್ಷಣೆಯೇ ಪ್ರದರ್ಶನದ ಕೇಂದ್ರ: ಜಲ ಸಂರಕ್ಷಣೆಯನ್ನೇ ಕೇಂದ್ರವಾಗಿಸಿಕೊಂಡು ಉತ್ಸವ ಆಯೋಜಿಸಿದ್ದು, ಕಾಶ್ಮೀರಿ, ಜರ್ಮನ್‌, ಥೈಲ್ಯಾಂಡ್‌, ಪೆರು, ಇಂಡೋನೇಷಿಯಾ, ಜರ್ಮನಿ, ಕಿರ್ಜಿಸ್‌, ಸ್ವಿಡ್ಜರ್‌ಲ್ಯಾಂಡ್‌, ರೋಮೇನಿಯಾ ಸೇರಿ 60 ದೇಶಗಳ 229 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ರಾಜ್ಯ ಮಾಲಿನ್ಯ ನಿಂಯತ್ರಣ ಮಂಡಳಿ ಕಟ್ಟಡ ಮತ್ತು ಜಯನಗರದ 9ನೇ ಬ್ಲಾಕ್‌ನ ಜೈನ್‌ ವಿಶ್ವವಿದ್ಯಾಲಯದಲ್ಲಿ ಚಿತ್ರೋತ್ಸವ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕ ಜಾರ್ಜ್‌ ಕುಟ್ಟಿ ಹೇಳಿದರು. ಜಿ.ವಿ.ವರ ಪ್ರಸಾದ್‌ ನಿರ್ದೇಶನದ ತೆಲಗಿನ ಅವರ್‌ ಟೆಂಪಲ್‌ ಸೇರಿದಂತೆ ಹಿಂದಿ, ಕಾಶ್ಮೀರ, ಅಸ್ಸಾಂ,ಬೆಂಗಾಲಿ ಭಾಷೆಯ ಸಿನಿಮಾಗಳು ಕೂಡ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.

ಬೆಂಗಳೂರಿನ ಕೆರೆಗಳು ಅಳಿವಿನಂಚಿನಲ್ಲಿವೆ.ಜಲ ಸಂರಕ್ಷಣೆಯ ಬಗ್ಗೆ ಜನತೆಯಲ್ಲಿ ಮತ್ತಷ್ಟು ಅರಿವು ಮೂಡಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಯೋಜಿಸಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಜನತೆಯನ್ನು ಮತ್ತಷ್ಟು ಜಾಗೃತಗೊಳಿಸಲಿದೆ.
-ಚಿತ್ರೋತ್ಸವದ ಸಂಘಟಕ, ಕ್ಷಿತಿಜಾ ಅರಸ್‌

ಟಾಪ್ ನ್ಯೂಸ್

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

udupi

udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.