ಲಕ್ಷ ಜನರಿಂದ ಸಾಮೂಹಿಕ ಸೂರ್ಯ ನಮಸ್ಕಾರ
Team Udayavani, Jun 22, 2018, 6:00 AM IST
ವಿಜಯಪುರ: ಜಿಲ್ಲೆಯ ಗಡಿಯಲ್ಲಿರುವ ಕಾತ್ರಾಳ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವಾದ ಗುರುವಾರ ಏಕಕಾಲಕ್ಕೆ ಲಕ್ಷ ಜನ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರುವ ಸಾಧ್ಯತೆ ಇದೆ. ಅಗತ್ಯ ದಾಖಲೆಗಳಿಗಾಗಿ ಇದರ ಚಿತ್ರೀಕರಣ
ನಡೆದಿದ್ದು, ಎರಡು ವಾರದಲ್ಲಿ ಅಧಿಕೃತ ದಾಖಲೆ ಹೊರ ಬೀಳುವ ನಿರೀಕ್ಷೆ ಇದೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಕಾತ್ರಾಳ ಗ್ರಾಮದ ಗುರುದೇವ ಆಶ್ರಮದ ವಿಶಾಲ ಮೈದಾನದಲ್ಲಿ ಒಂದು
ಲಕ್ಷ ಜನರು ಸಾಮೂಹಿಕವಾಗಿ ಏಕಕಾಲಕ್ಕೆ ಸೂರ್ಯ ನಮಸ್ಕಾರ ಮಾಡಿದರು. ಕಾತ್ರಾಳ ಗುರುದೇವ ಆಶ್ರಮದ ಅಮೃತಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ವಿಭಿನ್ನ ಎಂಟು ಬಗೆಯ ಸೂರ್ಯ ನಮಸ್ಕಾರ ಆಸನ, ಹಸ್ತ ಉತ್ಥಾನಾಸನ, ಹಸ್ತ ಪಾದಾಸನ, ಏಕಪಾದ ಪ್ರಸರಣಾಸನ, ದ್ವಿಪಾದ ಪ್ರಸರಹನಾಸನ, ಸಾಷ್ಟಾಂಗ ಪ್ರಣಿಪತಾಸನ,ಭುಜಂಗಾಸನಗಳನ್ನು ಪ್ರದರ್ಶಿಸಲಾಯಿತು.
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು, ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು, ಅಗರಖೇಡ ಆಶ್ರಮದ ಮಾತೋಶ್ರೀ ಜಗದೇವಿತಾಯಿ ಸೇರಿದಂತೆ ವಿವಿಧ ಮಠಾಧೀಶರು,ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ,ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ ದಾದಾ ಪಾಟೀಲ, ಶಾಸಕ ವಿಲಾಸರಾವ್ ಜಗತಾಪ, ಸಂಸದ ಸಂಜಯ ಪಾಟೀಲ, ಸಾಂಗ್ಲಿ ಜಿಲ್ಲಾಧಿಕಾರಿ ವಿಜಯಕುಮಾರ ಪಾಟೀಲ ಪಾಲ್ಗೊಂಡಿದ್ದರು.
ಎಲ್ಲೂ ಏಕಕಾಲಕ್ಕೆ ಒಂದು ಲಕ್ಷ ಜನರು ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿದ ದಾಖಲೆ ಇಲ್ಲ. ಹೀಗಾಗಿ, ಕಾತ್ರಾಳದಲ್ಲಿ ನಡೆದ ಕಾಯಕ್ರಮ ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್,
ಮಾರ್ವೇಲೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗಳಲ್ಲಿ ದಾಖಲಾಯಿತು. ದಾಖಲೆಗಳನ್ನು ಸಂಗ್ರಹಿಸುವ ಹೊಣೆ ಹೊತ್ತ ಅ ಧಿಕಾರಿಗಳು ಸಂಘಟಕರಿಗೆ ಪ್ರಮಾಣ ಪತ್ರ ವಿತರಿಸಿ, ಅಭಿನಂದಿಸಿದರು.
ಕಾತ್ರಾಳ ಆಶ್ರಮದಲ್ಲಿ ಲಕ್ಷ ಜನರಿಂದ ಏಕಕಾಲಕ್ಕೆ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲಾಗಿದೆ. ಲಿಮ್ಕಾ ದಾಖಲೆ ಬರೆಯಲು ಲಿಮ್ಕಾ ಸಂಸ್ಥೆ ಅಗತ್ಯ ಕ್ರಮಗಳನ್ನು ದಾಖಲಿಸಿದೆ. ಎರಡು ವಾರಗಳಲ್ಲಿ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರುವ ನಿರೀಕ್ಷೆ ಇದೆ. ಸದರಿ ಕಾರ್ಯಕ್ರಮದ ದಾಖಲೆಗಾಗಿ ಪ್ರಧಾನಿ ಕಚೇರಿಗೂ
ದಾಖಲೆಗಳನ್ನು ರವಾನಿಸಲಾಗಿದೆ.
– ವಿಜಯಕುಮಾರ ಪಾಟೀಲ, ಜಿಲ್ಲಾಧಿಕಾರಿ, ಸಾಂಗ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.