![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jan 29, 2025, 10:59 AM IST
ಬೆಂಗಳೂರು: ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಕ್ಷಣ ಮಾತ್ರದಲ್ಲಿ ಸರ ಕಸಿದು ಪರಾರಿ ಯಾಗುವುದು, ಬೀಗ ಹಾಕಿದ ಮನೆಗೆ ನುಗ್ಗಿ ಕಳ್ಳತನ ಮಾಡುವ ಕುಖ್ಯಾತ ಇರಾನಿ ಗ್ಯಾಂಗ್ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.
ಇದೀಗ ಸರ ಅಪಹರಣ ಹಾಗೂ ಮನೆಗೆ ಕನ್ನ ಹಾಕಿದ ಇರಾನಿ ಗ್ಯಾಂಗ್‌ನ 6 ಮಂದಿ ಸದಸ್ಯರು ಕೋಡಿಗೆಹಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಇರಾನಿ ಗ್ಯಾಂಗ್ ಸದಸ್ಯರಾದ ತಬ್ರೇಜ್ ಅಲಿ, ಮಾದು ಶಾ, ಅಲಿ ಸಿರಾಜ್, ಸಾಧಿಕ್ ರಫೀಕ್ ಖಾನ್, ಅಬ್ಟಾಸ ಅಲಿ, ಅಭೂತರಾಬ್ ಬಂಧಿತರು. ಆರೋಪಿಗಳಿಂದ 28.50 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಆರೋಪಿಗಳ ಬಂಧನದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ 5 ಮನೆ ಕಳವು ಪ್ರಕರಣಗಳು, 1 ಸರ ಅಪಹರಣ ಪ್ರಕರಣ, ಬಾಗಲೂರು ಅಮೃತಹಳ್ಳಿ, ಸಂಜಯನಗರ, ಆರ್.ಟಿ.ನಗರ, ವೈಟ್ ಫೀಲ್ಡ್, ಕಾಡುಗೋಡಿ ಹಾಗೂ ವರ್ತೂರು ಪೊಲೀಸ್ ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ.
ಮನೆಗೆ ಕನ್ನ ಹಾಗೂ ಸರಗಳ್ಳತನ: ಕೆಲವು ದಿನಗಳ ಹಿಂದೆ ಕೊಡಿಗೇಹಳ್ಳಿ ಮುಖ್ಯರಸ್ತೆಯ ನಿವಾಸಿ ಯೊಬ್ಬರು ಮನೆಗೆ ಬೀಗ ಹಾಕಿ ಕುಟುಂಬಸ್ಥರೊಂದಿಗೆ ರಾಜಸ್ಥಾನಕ್ಕೆ ಹೋಗಿದ್ದರು. ಬಂಧಿತರು ಇವರ ಮನೆ ಮುಂಬಾಗಿಲನ್ನು ಒಡೆದು ಒಳನುಗ್ಗಿ ಕೊಠಡಿಯ ಕಬೋರ್ಡ್ ಮೀಟಿ 30 ಗ್ರಾಂ ಚಿನ್ನಾಭರಣ, 2 ಬೆಳ್ಳಿಯ ದೀಪಗಳನ್ನು ಹೊತ್ತೂಯ್ದಿದ್ದರು. ಇನ್ನು ಮನೆ ಮಾಲೀಕರು ರಾಜಸ್ಥಾನದಿಂದ ಮನೆಗೆ ವಾಪಾಸ್ಸಾದ ವೇಳೆ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು.
ಮತ್ತೂಂದು ಪ್ರಕರಣದಲ್ಲಿ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಹಕಾರ ನಗರದಲ್ಲಿ ಮಹಿಳೆಯೊಬ್ಬರು ದೇವಾಲಯಕ್ಕೆ ತೆರಳಿ ಮನೆಗೆ ವಾಪಾಸ್ಸಾಗುತ್ತಿರುವ ವೇಳೆ 17ನೇ ಮುಖ್ಯ ರಸ್ತೆ ಯಲ್ಲಿ ಬಂಧಿತರ ಪೈಕಿ ಇಬ್ಬರು ದ್ವಿ-ಚಕ್ರ ವಾಹನ ದಲ್ಲಿ ಇವರನ್ನು ಹಿಂಬಾಲಿಸಿ ಕೊಂಡು ಬಂದು ಮಹಿಳೆಯ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದರು.
ಕೋಲಾರದಲ್ಲಿ ಸಿಕ್ಕಿ ಬಿದ್ದ ಆರೋಪಿ: ಈ ಎರಡು ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ಕೊಡಿಗೇಹಳ್ಳಿ ಠಾಣೆ ಪೊಲೀಸರು ಕೃತ್ಯ ನಡೆದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮೆರಾ ಸೇರಿ ವಿವಿಧ ತಾಂತ್ರಿಕ ಕಾರ್ಯಾಚರಣೆ ನಡೆಸಿ ಕೋಲಾ ರದ ಚಿಂತಾಮಣಿ ಸರ್ಕಲ್ ಬಳಿ ಆರೋಪಿಗಳ ಪೈಕಿ ಒಬ್ಬನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ ಸರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದ. ಇನ್ನು ಆತನನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಇತರೆ ಐವರು ಸಹಚರರೊಡನೆ ಸೇರಿ ಮನೆ ಕಳವು ಮಾಡಿರುವುದಾಗಿ ತಿಳಿಸಿದ್ದ. ಈತ ಕೊಟ್ಟ ಮಾಹಿತಿ ಮೇರೆಗೆ ಉಳಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟು 450 ಗ್ರಾಂ ಚಿನ್ನ ವಶಕ್ಕೆ: ಆರೋಪಿಗಳು ಕೊಟ್ಟ ಮಾಹಿತಿ ಆಧರಿಸಿ ಆಂಧ್ರಪ್ರದೇಶದ ಅನ್ನಮಯಿ ಜಿಲ್ಲೆಯ ಕಲ್ಕಿರಿ ಮಂಡಲದ ಜ್ಯೂವೆಲ್ಲರ್ಸ್‌ನಲ್ಲಿ ಅವರು ಮಾರಾಟ ಮಾಡಿದ್ದ 145 ಗ್ರಾಂ ಚಿನ್ನಾಭರಣ ಹಾಗೂ ಮದನಪಲ್ಲಿಯ ಚಿನ್ನಾಭರಣ ಅಂಗಡಿಗೆ ಮಾರಾಟ ಮಾಡಿದ್ದ 127 ಗ್ರಾಂ ಚಿನ್ನಾ ಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೇ, ಆರೋಪಿಗಳು ತಮ್ಮ ಸ್ನೇಹಿತರ ಬಳಿ ಇಟ್ಟಿದ್ದ ಸುಮಾರು 178 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇರಾನಿ ಗ್ಯಾಂಗ್ ಶೈಲಿಯೇ ಭಿನ್ನ: ಬಂಧಿತರು ಹಿಂದೂಪುರ, ಮದನಪಲ್ಲಿ, ಕಲ್ಕಿರಿಯಲ್ಲಿ ನೆಲಸಿದ್ದು, ಅಲ್ಲಿಂದ ಬೈಕ್‌ನಲ್ಲೇ ನಗರಕ್ಕೆ ಬರುತ್ತಿದ್ದರು. ಎರಡರಿಂದ ಮೂರು ದಿನ ನಗರದಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಕತ್ತಲಾಗುತ್ತಿದ್ದಂತೆ ಬೈಕ್‌ನಲ್ಲಿ ಸುತ್ತಾಡಿ ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಏಕಾಏಕಿ ಅವರ ಕತ್ತಿನಲ್ಲಿದ್ದ ಸರ ಕಸಿದು ಪರಾರಿಯಾಗುತ್ತಿದ್ದರು. ಜೊತೆಗೆ ಬೀಗ ಹಾಕಿರುವ ಮನೆಗಳಿಗೂ ಕನ್ನ ಹಾಕುತ್ತಿದ್ದರು. ನಂತರ ಆಂಧ್ರ ಪ್ರದೇಶದಲ್ಲಿರುವ ತಮ್ಮ ಊರುಗಳಿಗೆ ತೆರಳಿ ಮರೆಯಾಗುವುದೇ ಇರಾನಿ ಗ್ಯಾಂಗ್‌ನ ಶೈಲಿಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಇರಾನ್ ಗ್ಯಾಂಗ್ ಕಳ್ಳತನ ಪ್ರಕರಣಗಳಲ್ಲಿ ಸಕ್ರಿಯವಾಗಿದೆ. ಬೆಂಗಳೂರಿನಲ್ಲೂ ಇದೀಗ ಮತ್ತೆ ಇರಾನಿ ಗ್ಯಾಂಗ್ ಸದ್ದು ಮಾಡುತ್ತಿದೆ. ಕದ್ದ ಚಿನ್ನವನ್ನು ಕೆಲವು ಜ್ಯುವೆಲ್ಲರ್ಸ್‌ಗಳಿಗೆ ಮಾರಾಟ ಮಾಡಿ ಹಣ ಪಡೆಯುತ್ತಾರೆ.
ಮನೆಯಿಂದ ಹೊರ ಹೋಗುವಾಗ ಎಚ್ಚರಿಕೆ ವಹಿಸಿ. ಕಳ್ಳರಿಗೆ ಆಹ್ವಾನ ಕೊಡುವಂತೆ ಆಗಬಾರದು. ಅದನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆ ವಹಿಸಬೇಕಾಗುತ್ತದೆ. ಚಿನ್ನಾಭರಣ ಧರಿಸಿಕೊಂಡು ನಗರದ ರಸ್ತೆಯಲ್ಲಿ ಹೋಗುವಾಗ ಎಚ್ಚರಿಕೆ ಇರಲಿ. ಈ ರೀತಿಯ ಕಳ್ಳರು ಹೊಂಚು ಹಾಕುತ್ತಿರುತ್ತಾರೆ. ಈ ಬಗ್ಗೆ ಈಗಾಗಲೇ ನಾವು ಸಾಕಷ್ಟು ಜಾಗರೂಕತೆ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. –ಬಿ.ದಯಾನಂದ್, ಪೊಲೀಸ್ ಆಯುಕ್ತ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.