ಕಾಂಗ್ರೆಸ್ ರೈತ ವಿರೋಧಿ ಎನ್ನಲು ನೈತಿಕತೆ ಇದೆಯೇ?
Team Udayavani, Feb 12, 2018, 1:13 PM IST
ಬೆಂಗಳೂರು: “ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧರಿಸಿಕೊಳ್ಳುವ ಹಸಿರು ಶಾಲಿನಲ್ಲಿ ಮೆತ್ತಿದ ರೈತರ ರಕ್ತದ ಕಲೆ ಇನ್ನೂ ಮಾಸಿಲ್ಲ. ಹೀಗಿರುವಾಗ, ಕಾಂಗ್ರೆಸ್ ರೈತ ವಿರೋಧಿ ಎನ್ನಲು ತಮಗೆ ನೈತಿಕತೆ ಇದೆಯೇ?’ ಗೃಹ ಸಚಿವ ರಾಮಲಿಂಗಾರೆಡ್ಡಿ ಯಡಿಯೂರಪ್ಪನವರಿಗೆ ಪ್ರಶ್ನಿಸಿದ್ದಾರೆ.
ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ನೀವು (ಯಡಿಯೂರಪ್ಪ) ಮುಖ್ಯಮಂತ್ರಿಯಾದ ಮೂರೇ ದಿನಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ, ಇಬ್ಬರು ಅನ್ನದಾತರ ಸಾವಿಗೆ ಅಂದಿನ ನಿಮ್ಮ ಸರ್ಕಾರ ಕಾರಣವಾಯಿತು.
ನೀವು ಧರಿಸಿಕೊಳ್ಳುವ ಹಸಿರು ಶಾಲಿನಲ್ಲಿ ಮೆತ್ತಿರುವ ಹುತಾತ್ಮ ರೈತರಾದ ಹಾವೇರಿಯ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಹೇಮಪ್ಪ ಹೊನ್ನತ್ತಿಯ ರಕ್ತದ ಕಲೆ ಮಾಸಿದೆಯೇ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
“ಕಾಂಗ್ರೆಸ್ ಸರ್ಕಾರ ರೈತ ವಿರೋಧಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಾರ್ವಜನಿಕ ವೇದಿಕೆಗಳಲ್ಲಿ ಆರೋಪಿಸುತ್ತಿರುವುದು ಹಾಗೂ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಸಿದ್ಧಪಡಿಸಿದ 2 ನಿಮಿಷದ ವೀಡಿಯೊ ತುಣಕುಗಳು ವಾಟ್ಸ್ ಆ್ಯಪ್ ಗ್ರೂಪ್‌ಗ್ಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವ ರಾಮಲಿಂಗಾರೆಡ್ಡಿ, “ಹೀಗೆ ಆರೋಪ ಮಾಡುವ ನೈತಿಕತೆಯೂ ಬಿಜೆಪಿಗಿಲ್ಲ’ ಎಂದು ತಿಳಿಸಿದರು.
“ನಮ್ಮ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ನಿಮ್ಮ ಕೇಂದ್ರ ಸರ್ಕಾರ ಹೇಳಿರುವುದನ್ನು ಕರ್ನಾಟಕದ ರೈತರು ಮರೆತಿಲ್ಲ’ ಎಂದು ಟೀಕಿಸಿದರು.
“ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ 70 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದನ್ನು ನೀವು ಮರೆತಿದ್ದೀರಿ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ದೇಶದ ಕೆಲವು ಕೈಗಾರಿಕೋದ್ಯಮಿಗಳಿಗೆ 1.30 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಮೋದಿ, ರೈತರ ಸಾಲ ಯಾಕೆ ಮನ್ನಾ ಮಾಡಿಲ್ಲ ಎಂದು ನೀವೇ ಮೋದಿ ಅವರನ್ನು ಕೇಳಿ ರಾಜ್ಯದ ರೈತರಿಗೆ ಉತ್ತರಿಸಬೇಕು.
ರೈತರ ಬಗ್ಗೆ, ರೈತರ ಸಮಸ್ಯೆ ಬಗ್ಗೆ ಚುನಾವಣಾ ಹೊಸ್ತಿಲಲ್ಲಿ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು, ಮಹದಾಯಿ ಹಾಗೂ ರೈತರ ಸಾಲ ಮನ್ನಾ ಮಾಡಲು ರಾಜ್ಯದ ಬಿಜೆಪಿ ನಾಯಕರು ಪ್ರಧಾನಿ ಮೋದಿ ಮನೆ ಎದುರು ಧರಣಿ ನಡೆಸಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು. ರೈತರ ಕುರಿತು ನಮ್ಮ ಸರ್ಕಾರಕ್ಕಿರುವ ಬದ§ತೆ ಪ್ರಶ್ನಿಸಲು ನಿಮಗೆ ಯಾವ ಅರ್ಹತೆಯೂ ಇಲ್ಲ ಎಂದು ದೂರಿದರು.
ಮಲತಾಯಿ ಧೋರಣೆ ಮರೆತಿಲ್ಲ: ಮಹಾರಾಷ್ಟ್ರದಲ್ಲಿ ಬರಗಾಲದ ಪರಿಹಾರ ನಿಧಿಗೆ ಮೋದಿ ಅವರು 8,500 ಕೋಟಿ ನೀಡಿದ್ದಾರೆ. ಕರ್ನಾಟಕದಲ್ಲಿ ಸತತ 4 ವರ್ಷಗಳಿಂದ ಭೀಕರ ಬರಗಾಲ ಇದ್ದರೂ ಮೋದಿ ಅವರು ಕೊಟ್ಟಿದ್ದು ಬರೀ 1,800 ಕೋಟಿ ರೂ. ಈ ಮಲತಾಯಿ ಧೋರಣೆಯನ್ನು ರಾಜ್ಯದ ಜನ ಮರೆತಿಲ್ಲ.
ಕಾವೇರಿ ಸಮಸ್ಯೆ ಬಂದಾಗ ಸರ್ವ ಪಕ್ಷ ಸಭೆ ಬಹಿಷ್ಕರಿಸಿ ಬಿಜೆಪಿ ರೈತರ ಸಮಸ್ಯೆ ಕುರಿತು ನಿರ್ಲಕ್ಷತನ ಮೆರೆದಿದ್ದನ್ನು ರೈತರು ಕಂಡಿದ್ದಾರೆ. ಮಹದಾಯಿ ಕುರಿತು ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಳಿ ನಿಮ್ಮ ಹೆಸರಿಗೆ ಪತ್ರ ಬರೆಸಿ ನಾಟಕ ಮಾಡಿದ ನೀವು ಬಳಿಕ ಅದನ್ನು ಓದಲು ಹುಬ್ಬಳ್ಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರನ್ನು ಕರೆಸಿ ಡೊಂಬರಾಟ ನಡೆಸಿದ್ದನ್ನೂ ಜನ ಮರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.