Bengalur Kambala ನೋಡಲು ಪ್ರವೇಶ ಶುಲ್ಕವಿದೆಯೇ? ಟಿಕೆಟ್ ಕಾಯ್ದಿರಿಸಬೇಕೆ? ಇಲ್ಲಿದೆ ಮಾಹಿತಿ
Team Udayavani, Nov 21, 2023, 11:38 AM IST
ಮಣಿಪಾಲ/ಬೆಂಗಳೂರು: ಇದೇ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ಕಂಬಳವು ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿವೆ. ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರಾವಳಿಯ ಸಾಂಸ್ಕೃತಿಕ ಸೊಗಡು ಅನಾವರಣವಾಗಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಐತಿಹಾಸಿಕ ಕಂಬಳ ಕೂಟಕ್ಕೆ ಬೆಂಗಳೂರು ಸಜ್ಜಾಗಿದೆ.
ನ.23ರಂದು ಕರಾವಳಿಯಿಂದ ನೂರೈವತ್ತಕ್ಕೂ ಹೆಚ್ಚು ಜೋಡಿ ಕಂಬಳ ಕೋಣಗಳು ರಾಜಧಾನಿಯೆಡೆಗೆ ಪ್ರಯಾಣ ಬೆಳೆಸಲಿದೆ. ಉಪ್ಪಿನಂಗಡಿಯಿಂದ ಹೊರಟು ಹಾಸನದಲ್ಲಿ ವಿರಾಮ ತೆಗೆದುಕೊಂಡು ಬಳಿಕ ನೆಲಮಂಗಲ ಮೂಲಕವಾಗಿ ಕೋಣಗಳು ಮತ್ತು ಯಜಮಾನ ಸೇರಿ ಪರಿಚಾರಕರು ಬೆಂಗಳೂರು ಪ್ರವೇಶಿಸಲಿದ್ದಾರೆ.
ಪ್ರವೇಶ ಶುಲ್ಕವಿದೆಯೇ?: ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಕೂಟ ನಡೆಯುತ್ತಿದೆ. ರಾಜಧಾನಿ ಕಂಬಳ ವೀಕ್ಷಣೆಗೆ ಪ್ರೇಕ್ಷಕರಿಗೆ ಪ್ರವೇಶ ಶುಲ್ಕವಿದೆಯೇ ಎಂಬ ಪ್ರಶ್ನೆಗಳು ಹಲವರಿಗೆ ಕಾಡುತ್ತಿದೆ. ಇದಕ್ಕೀಗ ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷರು ಮುರಳೀಧರ ರೈ ಮಠಂತಬೆಟ್ಟು ಅವರು ಸ್ಪಷ್ಟನೆ ನೀಡಿದ್ದಾರೆ.
“ಬೆಂಗಳೂರು ಕಂಬಳ ವೀಕ್ಷಣೆಗೆ ಪ್ರವೇಶ ಶುಲ್ಕವಿದೆ, ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬೇಕು ಎಂಬ ಸುದ್ದಿಯನ್ನು ನಾವು ಗಮನಿಸಿದ್ದೇವೆ. ಆದರೆ ಇದು ಸತ್ಯಕ್ಕೆ ದೂರವಾದ ಸುದ್ದಿ. ಅಭಿಮಾನಿಗಳು ಇದನ್ನು ನಂಬಬಾರದು. ಬೆಂಗಳೂರು ಕಂಬಳಕ್ಕೆ ಯಾವುದೇ ಟಿಕೆಟ್ ಇರುವುದಿಲ್ಲ, ಪ್ರವೇಶ ಶುಲ್ಕ ಇರುವುದಿಲ್ಲ. ಎಲ್ಲಾ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಇದು ಸಂಪೂರ್ಣ ಮುಕ್ತವಾಗಿರುತ್ತದೆ” ಎಂದು ಮುರಳೀಧರ ರೈ ಮಠಂತಬೆಟ್ಟು ಉದಯವಾಣಿಗೆ ಹೇಳಿದ್ದಾರೆ.
ವಿಶಾಲವಾದ 70 ಎಕರೆ ಸ್ಥಳವಿರುವ ಅರಮನೆ ಮೈದಾನದ ಗೇಟ್ 5ರಲ್ಲಿ ಕಂಬಳ ಕ್ರೀಡಾಕೂಟ ನಡೆಯಲಿದೆ. ನ.25ರಂದು ಕಂಬಳಕ್ಕೆ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 10.30ರಿಂದ ನ.26ರ ಸಂಜೆವರೆಗೆ ನಿರಂತರವಾಗಿ ಕಂಬಳ ನಡೆಯಲಿದೆ.
ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ನಡೆಯುತ್ತಿರುವ ಹಿನ್ನೆಲೆಯಲ್ಲಿ 5 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಕರಾವಳಿಯಿಂದ ಉದ್ಯೋಗ ಅರಿಸಿಕೊಂಡ ಬಂದವರು ಹಾಗೂ ಕಂಬಳ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಬಂದವರಿಗೆ ಕಂಬಳ ವೀಕ್ಷಣೆಗೆ ಬೇಕಾದ ವಿವಿಐಪಿಗಳಿಗೆ 10,000 ಆಸನದ ವ್ಯವಸ್ಥೆಯನ್ನು ಸಹ ಕಲ್ಪಿಸಲಿದ್ದಾರೆ. ಜತೆಗೆ ಸಾರ್ವಜನಿಕರು ಕಂಬಳವನ್ನು ಕರಾವಳಿ ಗ್ರಾಮೀಣ ಭಾಗದಲ್ಲಿ ವೀಕ್ಷಿಸುವ ಶೈಲಿಯಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.