ಡೆಂಘೀ, ಮಲೇರಿಯಾ ತಡೆಗೆ ಇಸ್ರೋ ಯಂತ್ರ
Team Udayavani, Nov 6, 2017, 11:55 AM IST
ಬೆಂಗಳೂರು: ಡೆಂಘೀ, ಮಲೇರಿಯಾ ಮೊದಲಾದ ಮಾರಕ ರೋಗಗಳ ನಿಯಂತ್ರಣ ಹಾಗೂ ತಡೆಗಟ್ಟಬಹುದಾದ ವಿನೂತನ ಯಂತ್ರವನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜಿನ ಆರನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ದೂರ ಸಂವೇದಿ ಉಪಗ್ರಹ, ಜಾಗತಿಕ ನ್ಯಾವಿಗೇಶನ್ ಉಪಗ್ರಹ ವ್ಯವಸ್ಥೆ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಆಧಾರದಲ್ಲಿ ಡೆಂಘೀ, ಮಲೇರಿಯಾ ಮೊದಲಾದ ಮಾರಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಯಂತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಪರಿಸರದ ಬದಲಾವಣೆ, ಸಮುದ್ರದಲ್ಲಿ ಆತಂಕದ ಮುನ್ಸೂಚನೆ ನೀಡುವ ತಂತ್ರಜ್ಞಾನದ ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ. ಇದರಿಂದ ಸೂಕ್ಷ್ಮ ಜೀವಿಗಳಿಂದ ಹರಡುವ ಮಾರಕ ರೋಗಗಳು ಬರದಂತೆ ತಡೆಯಬಹುದು. ಈ ವಿಧಾನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.
ಬೃಹತ್ ಉಡಾವಣಾ ನೌಕೆಗಳು, ಪುನರ್ಬಳಕೆಯ ಉಡಾವಣಾ ವಾಹನಗಳು, ಕ್ರೆಯೋಜೆನಿಕ್ ಎಂಜಿನ್‌ಗಳು, ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಯಾನ, ಅಂತರಿಕ್ಷ ಅನ್ವಯಗಳಿಗಾಗಿ ವಿವಿಧ ವಸ್ತುಗಳ ಅಭಿವೃದ್ಧಿ ಮತ್ತು ಬಳಕೆ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಲು ಇಸ್ರೊ ಕಾರ್ಯೋನ್ಮುಖವಾಗಿದೆ ಎಂದರು.
11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
2011-12ರಿಂದ 2013-14ನೇ ಸಾಲಿನ ಅವಧಿಯಲ್ಲಿ ತೇರ್ಗಡೆಯಾದ 1,240ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ಸುಗುಣಾ, ಎಚ್.ಆರ್.ದಕ್ಷಿಣಾಮೂರ್ತಿ, ಸಿ.ಮಧುಸೂದನ, ಆರ್.ರೇಖಾ, ಬಿ.ವಂದನಾ, ಐಶ್ವರ್ಯ ವಿ.ಪಂಡಿತ್, ಎಸ್.ಸಂಜಯ್, ದಿಲೀಪ್‌ಕುಮಾರ್, ಆರ್.ರಕ್ಷಂದ, ಕೆ.ನಿಖೀತಾ ಮತ್ತು ಎ.ಪವಿತ್ರಾ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.