ವಿದೇಶಿ ಕೋಲ್‌ ಸ್ವದೇಶಕ್ಕೆ ಆಗಲ್ಲ


Team Udayavani, Dec 8, 2017, 6:00 AM IST

Coal-07-2017.jpg

ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ “ಕೋಲ್‌’ ತಿಕ್ಕಾಟದಿಂದಾಗಿ ವಿದೇಶಿ ಕಲ್ಲಿದ್ದಲಿನ ಮೊರೆ ಹೋಗಲು ಚಿಂತನೆ ನಡೆಸಿದ್ದ ಇಂಧನ ಇಲಾಖೆಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ರಾಜ್ಯದಲ್ಲಿನ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಶೇ.20 ರಿಂದ ಶೇ.50 ರಷ್ಟು ಮಾತ್ರ ವಿದೇಶಿ ಕಲ್ಲಿದ್ದಲು ಬಳಸಬಹುದಾಗಿದ್ದು, ದೇಶೀಯ ಕಲ್ಲಿದ್ದಲೇ ಅನಿವಾರ್ಯವೆನಿಸಿದೆ!

ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳು ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲು ನಿತ್ಯ ಸುಮಾರು 70,000 ಟನ್‌ ದೇಶೀಯ ಕಲ್ಲಿದ್ದಲು ಅಗತ್ಯವಿದ್ದು, ಸದ್ಯ 26,000 ಟನ್‌ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ವಿದೇಶಿ ಕಲ್ಲಿದ್ದಲ್ಲಿನಿಂದ ತುರ್ತು ಪರಿಸ್ಥಿತಿ ನಿಭಾಯಿಸಬಹುದೆ ಹೊರತು ವರ್ಷವಿಡೀ ವಿದ್ಯುತ್‌ ಉತ್ಪಾದನೆಗೆ ದೇಶೀಯ ಕಲ್ಲಿದ್ದಲು ಅನಿವಾರ್ಯ. ಹಾಗಾಗಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯದೆ ಸೌಹಾರ್ದದಿಂದಲೇ ಹಂಚಿಕೆಯಾದಷ್ಟು ಕಲ್ಲಿದ್ದಲು ಪಡೆಯುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ ಎಂಬ ಮಾತು ಕೇಳಿಬಂದಿದೆ.

ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಹಂಚಿಕೆಯಾದ ಕಲ್ಲಿದ್ದಲು ಗಣಿಗಳಿಂದ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾದರೆ ಗರಿಷ್ಠ ಉತ್ಪಾದನೆ ಸಹಜವಾಗಿ ನಡೆಯುತ್ತದೆ. ಆದರೆ ಕೆಲ ತಿಂಗಳಿನಿಂದ ರಾಜ್ಯಕ್ಕೆ ಶೇ.40ರಷ್ಟು ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿರುವುದರಿಂದ ಉತ್ಪಾದನೆ ಕುಸಿದಿದ್ದು, ವಿದ್ಯುತ್‌ ಕಣ್ಣಾಮುಚ್ಚಾಲೆ ಕಾಣಿಸಿಕೊಳ್ಳಲಾರಂಭಿಸಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕೊಲಿರೀಸ್‌ ಕಂಪನಿ (ಎಸ್‌ಸಿಸಿಎಲ್‌), ವೆಸ್ಟರ್ನ್ ಕೋಲ್‌ ಫೀಲ್ಡ್‌ (ಡಬ್ಲೂéಸಿಎಲ್‌) ಹಾಗೂ ಮಹಾನದಿ ಕೋಲ್‌ ಫೀಲ್ಡ್‌ (ಎಂಸಿಎಲ್‌) ಸಂಸ್ಥೆಗಳೊಂದಿಗೆ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಒಡಂಬಡಿಕೆ ಮಾಡಿಕೊಂಡಿದ್ದು, ಆರ್‌ಟಿಪಿಎಸ್‌ ಘಟಕಕ್ಕೆ ವಾರ್ಷಿಕ 80 ಲಕ್ಷ ಟನ್‌ ಕಲ್ಲಿದ್ದಲು ಪೂರೈಸಬೇಕಿದೆ. ಎಸ್‌ಸಿಸಿಎಲ್‌, ಎಂಸಿಎಲ್‌ ಶೇ.100ರಷ್ಟು ಕಲ್ಲಿದ್ದಲು ಪೂರೈಸುತ್ತಿದ್ದು, ಡಬ್ಲ್ಯುಸಿಎಲ್‌ ಸಂಸ್ಥೆ ಶೇ.25ರಷ್ಟು ಮಾತ್ರ ಪೂರೈಸುತ್ತಿರುವುದು ಸಮಸ್ಯೆ ಉಲ್ಪಣಕ್ಕೆ ಕಾರಣವಾಗಿದೆ. ಬಿಟಿಪಿಎಸ್‌ ಘಟಕಕ್ಕೆ ನಾನಾ ಕಾರಣಕ್ಕೆ ಕಲ್ಲಿದ್ದಲು ಪೂರೈಕೆ ಮೂಲವೇ ಇಲ್ಲದಂತಾಗಿದ್ದು, ಆರ್‌ಟಿಪಿಎಸ್‌ಗೆ ಪೂರೈಕೆಯಾಗುವ ಕಲ್ಲಿದ್ದಲಿನಲ್ಲೇ ಸ್ವಲ್ಪ ಬಳಸಿ ಒಂದೆರಡು ಘಟಕಗಳಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಕೇಂದ್ರದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ತಾರತಮ್ಯ ಆರೋಪ
ರಾಜ್ಯದ ಉಷ್ಣ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದಲಿನಲ್ಲಿ ಶೇ.40ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅಡಚಣೆ, ರೈಲ್ವೆ ಸಂಪರ್ಕದಲ್ಲಿ ವ್ಯತ್ಯಯವಾಗಿದ್ದರೆ ಇತರೆ ರಾಜ್ಯಗಳಿಗೂ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಬೇಕಿತ್ತು. ಆದರೆ ದೇಶದ ಉಷ್ಣ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಕುರಿತಂತೆ ಕೇಂದ್ರ ವಿದ್ಯುತ್‌ ಪ್ರಾಧಿಕಾರದ ಅಂಕಿಅಂಶ ಗಮನಿಸಿದರೆ ದಾಸ್ತಾನಿನಲ್ಲಿ ವ್ಯತ್ಯಯವಿರುವುದು ಕಂಡುಬರುತ್ತದೆ.

ಮಹಾರಾಷ್ಟ್ರದ 14 ಸ್ಥಾವರಗಳಲ್ಲಿ ನಾಲ್ಕು ಪ್ರಮುಖ ಸ್ಥಾವರಗಳಲ್ಲಿ 16, 15, 13, 11 ಹಾಗೂ ಎರಡು ಸ್ಥಾವರಗಳಲ್ಲಿ 9 ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ನೆರೆಯ ತೆಲಂಗಾಣದಲ್ಲಿ ಒಂದು ಸ್ಥಾವರದಲ್ಲಿ ಮೂರು ದಿನದ ದಾಸ್ತಾನು ಹೊರತುಪಡಿಸಿದರೆ ಉಳಿದ ಮೂರು ಸ್ಥಾವರಗಳಲ್ಲಿ 14, 18, 33 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ತಮಿಳುನಾಡಿನಲ್ಲಿ ಮೂರು ಪ್ರಮುಖ ಸ್ಥಾವರಗಳಲ್ಲಿ 14, 15 ದಿನದ ದಾಸ್ತಾನು ಇರುವುದು ಕಂಡುಬಂದಿದೆ. ಆದರೆ ರಾಜ್ಯದ ಆರ್‌ಟಿಪಿಎಸ್‌, ಬಿಟಿಪಿಎಸ್‌ ಘಟಕಗಳಲ್ಲಿ ಎರಡು ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರಯಿದ್ದು, ಸೂಪರ್‌ ಕ್ರಿಟಿಕಲ್‌ ಸ್ಥಿತಿಯಲ್ಲಿವೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿ ತಾರತಮ್ಯ ತೋರುತ್ತಿದೆ ಆರೋಪಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ವಿದೇಶದಿಂದ 10 ಲಕ್ಷ ಟನ್‌ ಕಲ್ಲಿದ್ದಲು ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸುವುದಾಗಿ ಹೇಳುವ ಮೂಲಕ ಕೇಂದ್ರಕ್ಕೆ ಸೆಡ್ಡು ಹೊಡೆಯುವ ಚಿಂತನೆಯಲ್ಲಿದ್ದಂತಿದೆ. ಆದರೆ ವಿದೇಶಿ ಕಲ್ಲಿದ್ದಲನ್ನೇ ಪೂರ್ಣವಾಗಿ ನೆಚ್ಚಿಕೊಂಡು ವಿದ್ಯುತ್‌ ಉತ್ಪಾದಿಸುವ ಸ್ಥಿತಿಯಲ್ಲಿ ರಾಜ್ಯದ ಉಷ್ಣ ಸ್ಥಾವರಗಳಿಲ್ಲ ಎಂಬುದು ವಾಸ್ತವ.

ಶೇ.20ರಷ್ಟು ಮಾತ್ರ ಬಳಕೆ ಸಾಧ್ಯ
ಆರ್‌ಟಿಪಿಎಸ್‌ ಘಟಕವು ರಾಜ್ಯದ ಹಳೆಯ ಉಷ್ಣ ಸ್ಥಾವರವೆನಿಸಿದ್ದು, ದೇಶೀಯ ಕಲ್ಲಿದ್ದಲನ್ನೇ ಪ್ರಧಾನವಾಗಿ ಬಳಸುವ ವ್ಯವಸ್ಥೆ ಇದೆ. ಆರ್‌ಟಿಪಿಎಸ್‌ನ ಎಂಟು ಘಟಕ ಹಾಗೂ ಬಿಟಿಪಿಎಸ್‌ನ ಎರಡು ಘಟಕಗಳಲ್ಲಿ ಗರಿಷ್ಠ ಶೇ.20ರಷ್ಟು ವಿದೇಶ ಕಲ್ಲಿದ್ದಲು ಬಳಸಲು ಅವಕಾಶವಿದ್ದು, ಉಳಿದ ಶೇ.80ರಷ್ಟು ದೇಶೀಯ ಕಲ್ಲಿದ್ದಲನ್ನೇ ಬಳಸಬೇಕು.

ಬಿಟಿಪಿಎಸ್‌ನ ಮೂರನೇ ಘಟಕ ಹಾಗೂ ವೈಟಿಪಿಎಸ್‌ ಸ್ಥಾವರವನ್ನು ವೈಜ್ಞಾನಿಕ ತಂತ್ರಜ್ಞಾನದಡಿ ಇತ್ತೀಚೆಗೆ ನಿರ್ಮಿಸಿರುವುದರಿಂದ ಗರಿಷ್ಠ ಶೇ.50ರಷ್ಟರವರೆಗೆ ವಿದೇಶಿ ಕಲ್ಲಿದ್ದಲು ಬಳಸಲು ಅವಕಾಶವಿದೆ. ಇಲ್ಲಿಯೂ ಶೇ.50ರಷ್ಟು ದೇಶೀಯ ಕಲ್ಲಿದ್ದಲು ಬಳಕೆ ಅನಿವಾರ್ಯವಾಗಿದೆ. ಹಾಗಾಗಿ ವಿದೇಶಿ ಕಲ್ಲಿದ್ದಲಿನಿಂದ ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಿಕೊಳ್ಳಬಹುದ್ದು, ದೇಶೀಯ ಕಲ್ಲಿದ್ದಲಿನ ಸಮರ್ಪಕ ಪೂರೈಕೆಯೊಂದೇ ಸಮಸ್ಯೆಗೆ ಕಾಯಂ ಪರಿಹಾರವೆನಿಸಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಆರ್‌ಟಿಪಿಎಸ್‌ ಸ್ಥಾವರ ಸ್ಥಾಪನೆಯಾದ ಸಂದರ್ಭದಲ್ಲಿ ವಿದೇಶಿ ಕಲ್ಲಿದ್ದಲು ಬಳಕೆಯ ಪರಿಕಲ್ಪನೆಯೇ ಇರಲಿಲ್ಲ. ಆಗ ದೇಶದ ಎಲ್ಲ ಉಷ್ಣ ಸ್ಥಾವರಗಳಿಗೆ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಸಾಮರ್ಥಯವಿತ್ತು. ಹಾಗಾಗಿ ದೇಶೀಯ ಕಲ್ಲಿದ್ದಲು ಬಳಕೆಗೆ ಪೂರಕವಾಗಿ ಸ್ಥಾವರ ವಿನ್ಯಾಸಗೊಂಡಿದೆ. ವಿದೇಶಿ ಕಲ್ಲಿದ್ದಲನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕಾದರೆ ಬೃಹತ್‌ ಬಾಯ್ಲರ್‌ಗಳನ್ನು ಬದಲಾಯಿಸಿ ಹೊಸ ತಂತ್ರಜ್ಞಾನ ಅಳವಡಿಸಬೇಕಾಗುತ್ತದೆ. ಇದು ದುಬಾರಿಯಾಗಿದ್ದು, ವಿದೇಶಿ ಕಲ್ಲಿದ್ದಲನ್ನೇ ನೆಚ್ಚಿಕೊಂಡು ತಂತ್ರಜ್ಞಾನ ಬದಲಿಸುವುದು ಕಾರ್ಯಸಾಧುವಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೈದರಾಬಾದ್‌ನಲ್ಲಿರುವ ಎಸ್‌ಸಿಸಿಎಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕಳೆದ ನವೆಂಬರ್‌ನಲ್ಲಿ ಭೇಟಿ ಮಾಡಿದ್ದ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ್‌ ಅವರು ಕಲ್ಲಿದ್ದಲು ಪೂರೈಕೆ ಹೆಚ್ಚಿಸಿ ಸ್ಪಂದಿಸುವಂತೆ ಕೋರಿದ್ದರು. ಅದರಂತೆ ತಕ್ಷಣಕ್ಕೆ ಒಂದು ರೈಲ್ವೆ ಲೋಡ್‌ನ‌ಷ್ಟು ಕಲ್ಲಿದ್ದಲು ಪೂರೈಕೆ ಹೆಚ್ಚಿಸುವುದಾಗಿ ಹೇಳಿದ್ದ ಸಂಸ್ಥೆ ಡಿಸೆಂಬರ್‌ನಿಂದ ಮತ್ತೂಂದು ರೈಲ್ವೆ ಲೋಡ್‌ ಕಲ್ಲಿದ್ದಲು ಪೂರೈಸುವುದಾಗಿ ಭರವಸೆ ನೀಡಿತ್ತು. ಆದರೆ ರೈಲ್ವೆ ಸಂಪರ್ಕ, ಹೆಚ್ಚಿದ ಬೇಡಿಕೆ ಇತರೆ ಕಾರಣ ಸಬೂಬು ಹೇಳುತ್ತಿರುವುದು ಆತಂಕ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಶುಕ್ರವಾರ ಎಸ್‌ಸಿಸಿಎಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಮಾಡಲು ಮುಂದಾಗಿದ್ದಾರೆ.

ಜನವರಿಯಿಂದಲೇ ಲೋಡ್‌ ಶೆಡ್ಡಿಂಗ್‌?
ಸದ್ಯ ಆರ್‌ಟಿಪಿಎಸ್‌ನ ಒಂದು ಘಟಕ 120 ದಿನ ನಿರ್ವಹಣೆಗೆ (ಐದು ವರ್ಷಕ್ಕೊಮ್ಮೆ 120 ದಿನ ನಿರ್ವಹಣೆ ಕಡ್ಡಾಯ) ಒಂದೂವರೆ ತಿಂಗಳ ಹಿಂದೆ ಸ್ಥಗಿತಗೊಂಡಿದೆ. ಮತ್ತೂಂದು ಘಟಕ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು, ಉಳಿದ ಘಟಕಗಳು ಕಾರ್ಯ ನಿರ್ವಹಣೆಯಲ್ಲಿವೆ. ಜನವರಿಯಿಂದ ವಿದ್ಯುತ್‌ ಬೇಡಿಕೆ ತೀವ್ರ ಏರಿಕೆಯಾಗಲಿದ್ದು, ಜ.15ರ ವೇಳೆಗೆ ಎಲ್ಲ ಸ್ಥಾವರಗಳ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಆದರೆ ದೇಶೀಯ ಕಲ್ಲಿದ್ದಲು ಪೂರೈಕೆ ಇದೇ ಪ್ರಮಾಣದಲ್ಲಿದ್ದರೆ ಉಷ್ಣ ವಿದ್ಯುತ್‌ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಲಿದೆ. ಬೇಸಿಗೆಯುದ್ದಕ್ಕೂ ಕುಡಿಯುವ ನೀರಿನ ನಿರ್ವಹಣೆಗೂ ಒತ್ತು ನೀಡಬೇಕಿರುವುದರಿಂದ ಜಲವಿದ್ಯುತ್‌ ಉತ್ಪಾದನೆಯೂ ಕನಿಷ್ಠವಾಗಿರಲಿದೆ. ಕಲ್ಲಿದ್ದಲು ಪೂರೈಕೆ ಪ್ರಮಾಣ ಸುಧಾರಿಸದಿದ್ದರೆ ಜನವರಿಯಿಂದಲೇ ಲೋಡ್‌ ಶೆಡ್ಡಿಂಗ್‌ ಅನಿವಾರ್ಯವಾಗಬಹುದು ಎಂದು ಹೇಳಿವೆ.

ಸ್ಥಾವರ    ಗರಿಷ್ಠ ಉತ್ಪಾದನೆ    ಗರಿಷ್ಠ ಕಲ್ಲಿದ್ದಲು ಅಗತ್ಯ    ಸದ್ಯದ ಪೂರೈಕೆ
ಆರ್‌ಟಿಪಿಎಸ್‌    1720 ಮೆ.ವ್ಯಾ. (8 ಘಟಕ)    28,000 ಟನ್‌    19,000 ಟನ್‌
ಬಿಟಿಪಿಎಸ್‌    1700 ಮೆ.ವ್ಯಾ. (3 ಘಟಕ)    25,000 ಟನ್‌    7000 ಟನ್‌
ವೈಟಿಪಿಎಸ್‌    800 ಮೆ.ವ್ಯಾ. (2 ಘಟಕ)    17,000 ಟನ್‌    0000

– ಎಂ ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

1-havya

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.