ಭಾರತ ಹಿಂದೂ ರಾಷ್ಟ್ರವಲ್ಲ ಎನ್ನುವ ದುಷ್ಟರು
Team Udayavani, Feb 26, 2018, 12:02 PM IST
ಬೆಂಗಳೂರು: ಜಗತ್ತಿನ ಜನರು ಭಾರತವನ್ನು ಹಿಂದೂ ರಾಷ್ಟ್ರವೆಂದು ಒಪ್ಪಿಕೊಂಡರೂ ಇಲ್ಲಿನ ದುಷ್ಟ ರಾಜಕಾರಣಿಗಳು ಅದನ್ನು ವಿರೋಧಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಯಶವಂತಪುರದ ಧರ್ಮ ಸಂರಕ್ಷಣಾ ಸಮಿತಿ ವತಿಯಿಂದ ಭಾನುವಾರ ನಗರದ ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾರತವನ್ನು ಪುಣ್ಯ ಭೂಮಿ ಎಂದುಕೊಂಡವರೆಲ್ಲರೂ ಹಿಂದೂಗಳೇ. ರಾಷ್ಟ್ರೀಯತೆ ಜಾತಿ ಆಧಾರದಲ್ಲಿ ನಿರ್ಧಾರವಾಗಿಲ್ಲ. ಭಾರತದೊಳಗಿದ್ದು, ಪಾಕಿಸ್ತಾನ್ ಜಿಂದಾಬಾಂದ್ ಎಂದು ಘೋಷಣೆ ಕೂಗುವ ಎಲ್ಲರೂ ದೇಶ ದ್ರೋಗಳೇ ಎಂದು ಕಿಡಿಕಾರಿದರು.
ಜೀವನ ಮತ್ತು ದೃಷ್ಟಿಕೋನವೇ ಧರ್ಮ. ಯಾವ ದೇವರನ್ನು ಪೂಜೆ ಮಾಡುತ್ತೇವೆ? ಹಣೆಗೆ ಯಾವ ರೀತಿಯಲ್ಲಿ ನಾಮ ಹಚ್ಚಿಕೊಳ್ಳುತ್ತೇವೆ? ಎನ್ನುವುದರ ಮೇಲೆ ಧರ್ಮ ನಿರ್ಧಾರವಾಗುವುದಿಲ್ಲ. ಹಿಂದೂ ಎನ್ನುವುದ ಜಗತಿನ ಅತಿ ಶ್ರೇಷ್ಠ ಜೀವನ ಪದ್ಧತಿ.
ಜಗತ್ತು ಹುಟ್ಟುವ ಮೊದಲೇ ಹುಟ್ಟಿದ್ದ ಹಿಂದೂ ಸಮಾಜ ಇಂದು ತನ್ನನ್ನು ತಾನು ಉಳಿಸಿಕೊಳ್ಳಲು, ಸಂರಕ್ಷಿಸಿಕೊಳ್ಳಲು ಸಮಾವೇಶ ಮಾಡಬೇಕಾದ ದುಃಖದ ಸ್ಥಿತಿ ಬಂದಿದೆ. ಆದ್ದರಿಂದ ಹಿಂದೂಗಳು ಎಚ್ಚರಾಗಬೇಕು. ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ತುಂಬಬೇಕು. ಗುರು, ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಬೇಕು. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆ, ಭಕ್ತಿ ಬೆಳೆಸಬೇಕು ಎಂದು ಹೇಳಿದರು.
ಭಾರತ ಜಗತ್ತು ಒಪ್ಪಿಕೊಂಡ ಹಿಂದೂ ರಾಷ್ಟ್ರ. ಇದನ್ನು ಅಲ್ಲೆಗೆಳೆಯಲು ಸಾಧ್ಯವೇ ಇಲ್ಲ. ಇದು ಹಿಂದೂ ರಾಷ್ಟ್ರ ಅಲ್ಲ ಎಂದು ಸಾಬೀತು ಮಾಡುವ ದೊಡ್ಡ ಪ್ರಯತ್ನ ನಡೆದಿತ್ತು. ಅಸಂಘಟನೆ, ಸ್ವಾರ್ಥದ ಕಾರಣದಿಂದ ಹಿಂದೂಗಳು ಸ್ವಲ್ಪ ಮೈಮರೆತಿದ್ದರು.
ಸ್ವಾತಂತ್ರ ದಿನಾಚರಣೆಯಂದು ದೇಶ ಇಬ್ಭಾಗವಾಗಿದ್ದು ಹಿಂದೂ ರಾಷ್ಟ್ರದ ದೀರ್ಘ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಇದರ ಪರಿಣಾಮ ಸಿಂಧು ನದಿ, ವಿವೇಕಾನಂದರು ಹುಟ್ಟಿದ ಭೂಮಿ ಭಾರತದಲ್ಲಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ, ಸ್ಥಾನಮಾನಕ್ಕಾಗಿ ದೇಶವನ್ನು ತುಂಡರಿಸುವ ಪಾಪದ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತ ವಿರೋಧಿ ಟಿಪ್ಪುವಿನ ಜಯಂತಿ ಮಾಡುತ್ತಿದೆ. ಈಗ ಬಹಮನಿ ಉತ್ಸವ ಮಾಡಲು ಮುಂದಾಗಿದೆ. ಇಂತಹ ಸರ್ಕಾರವನ್ನು ಕಿತ್ತೂಗೆಯಬೇಕು. ಗೋಹತ್ಯೆ, ಲವ್ ಜಿಹಾದ್ ಮೂಲಕ ಹಿಂದೂಗಳ ಶ್ರದ್ಧೆಯನ್ನು ಭಂಗ ಮಾಡುವ ದುಷ್ಕೃತ್ಯ ನಡೆಯುತ್ತಿದೆ. ಹಿಂದೂಗಳು ಎಚ್ಚರವಾಗದೇ ಇದ್ದರೆ ಇದಕ್ಕೆಲ್ಲ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.
ಒಕ್ಕಲಿಗ ಮಹಾಸಂಸ್ಥಾನದ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಕೊಳ್ಳೇಗಾಲ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ, ಆಯುರಾಶ್ರಮದ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಉರಿಗದ್ದಿಗೇಶ್ವರ ಕ್ಷೇತ್ರದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಹಿಂದೂಧರ್ಮದಂತಹ ಶ್ರೇಷ್ಠ ಧರ್ಮ ಜಗತ್ತಿನಲ್ಲಿ ಇನ್ನೊಂದಿಲ್ಲ. ಅತ್ಮ ವಿಶ್ಲೇಷಣೆ ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ. ಇಲ್ಲಿ ದ್ವೇಷ, ಅಸೂಯೆ ಇಲ್ಲ. ಹಿಂದೂ ಮಕ್ಕಳಿಗೆ ಧರ್ಮದ ಬಗ್ಗೆ ಅಭಿಮಾನ ಬರುವಂತೆ ಮಾಡಬೇಕು.
-ಕುಮಾರ ಚಂದ್ರಶೇಖರನಾಥ ಸ್ವಾಮೀಜಿ
ಜ್ಞಾನ, ವಿಜ್ಞಾನ, ಜೀವನ, ಜೀವನ್ಮುಕ್ತಿ ಧರ್ಮದಿಂದಲೇ ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟಿರುವುದೇ ಹಿಂದೂಧರ್ಮ. ರಾಷ್ಟ್ರ, ಧರ್ಮ ಮತ್ತು ಪ್ರಕೃತಿಯನ್ನು ಉಳಿಸಲು ನಾವೆಲ್ಲ ಜಾಗೃತರಾಗಲೇಬೇಕು.
-ಶ್ರೀಕಂಠ ಸ್ವಾಮೀಜಿ
ತಾಯಿ ಹಾಲು ಎರಡು ವರ್ಷ, ಹಸುವಿನ ಹಾಲು ಜೀವನಪೂರ್ತಿ. ಬರಡು ನೆಲದಲ್ಲಿ ಆದರ್ಶ ಸಂಘಟನೆ ಹುಟ್ಟಿದರೆ ಅದೇ ರಾಮರಾಜ್ಯ. ಭಾರತೀಯ ವೀರ ಪುರಷರ ಚರಿತ್ರೆಯನ್ನು ಮಕ್ಕಳಿಗೆ ಪಠ್ಯದ ಮೂಲಕ ತಿಳಿಸುತ್ತಿಲ್ಲ.
-ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ದೇಶದಲ್ಲಿ ಈಗ ಇರುವ ಪರಿಸ್ಥಿತಿಯೇ ಮುಂದುವರಿದರೆ ಹಿಂದೂಗಳು ಎಷ್ಟು ವರ್ಷ ಬಹುಸಂಖ್ಯಾತರಾಗಿರಲು ಸಾಧ್ಯ? ರಾಜ್ಯ ಸರ್ಕಾರವೇ ವಿವಿಧ ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಸೃಷ್ಟಿಸುತ್ತಿದೆ. ದೇಶಕ್ಕೆ ಸ್ವಾತಂತ್ರ ಬಂದಿದೆ. ಆದರೆ, ಹಿಂದೂಗಳಿಗೆ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ.
-ವಿಶ್ವ ಸಂತೋಷ ಗುರೂಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.