ಕಾರುಗಳಿಗೆ ಸಾಲ ಸಿಗೋದು ಕಷ್ಟವೇನಲ್ಲ
Team Udayavani, Oct 14, 2019, 3:07 AM IST
ಬೆಂಗಳೂರು: ಪ್ರಸ್ತುತ ಪರಿಸ್ಥಿತಿಗಳಲ್ಲಿ ಕಾರು ಕೊಳ್ಳುವ ಗ್ರಾಹಕರಿಗೆ ಶೋ ರೂಂ ಮತ್ತು ಬ್ಯಾಂಕ್‌ಗಳು ತುಂಬಾ ಗ್ರಾಹಕ ಸ್ನೇಹಿಯಾಗಿದೆ. ಸಾಮಾನ್ಯರು ಈ ಹಿಂದೆ ಕಾರ್ ಲೋನ್ ಪಡೆಯಲು ಬ್ಯಾಂಕ್ ಮ್ಯಾನೇಜರ್‌ಗಳ ಮುಂದೆ ಹರಸಾಹಸ ಪಡಬೇಕಿತ್ತು. ಆದರೆ, ಇಂದಿನ ಚಿತ್ರಣ ಸಂಪೂರ್ಣವಾಗಿ ತದ್ವಿರುದ್ದವಾಗಿದೆ. ಇಂದು ಕಾರ್ ಕೊಳ್ಳುವ ಗ್ರಾಹಕರು ಸಿಕ್ಕರೇ ಸಾಕು ಕ್ಷಣದಲ್ಲಿ ಸಾಲ ಮಂಜೂರು ಮಾಡಲು ಬ್ಯಾಂಕರ್‌ಗಳು ಸಿದ್ಧರಿದ್ದಾರೆ.
ಕಾರು ಕೊಳ್ಳುವುದು ಕಷ್ಟದ ಮಾತು ಎನ್ನುತ್ತಿದ್ದ ಕಾರ್ ಪ್ರಿಯರಿಗೆ ಈ ವರ್ಷ ಗೋಲ್ಡನ್ ಇಯರ್ ಎಂದೇ ಕರೆಯಬಹುದು. ಸದ್ಯ ಆಟೋಮೊಬೈಲ್ ಮಾರುಕಟ್ಟೆ ಮಂದಗತಿಯಲ್ಲಿ ಸಾಗುತಿದ್ದು, ಇದಕ್ಕೆ ವೇಗ ನೀಡಲು ಕಾರ್ ಕಂಪನಿಗಳು ಮತ್ತು ಶೋ ರೂಂಗಳು ಈ ಹಿಂದೆಂದೂ ನೀಡದಂತ ಆಫರ್‌ಗಳನ್ನು ನೀಡುತ್ತಿವೆ. ಹಿಂದಿನಂತೆ ಬ್ಯಾಂಕ್ ಲೋನ್ ಪಡೆ ಯಲು ಗ್ರಾಹಕರು ಬ್ಯಾಂಕ್‌ಗಳಿಗೆ ಅಲೆದಾ ಡುವಂತ ಪರಿಸ್ಥಿತಿ ಈಗ ಮಾಯವಾಗಿದೆ. ಈಗ ಶೋ ರೂಂಗಳಲ್ಲೇ ಬ್ಯಾಂಕ್‌ಗಳು ಲೋನ್ ವಿಭಾಗಗಳನ್ನು ತೆರೆದಿದ್ದು, ಬ್ಯಾಂಕ್ ಗಳಲ್ಲಿ ಕೂಡ ಕಾರ್ ಲೋನ್ ಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಎರಡೂ ವಿಭಾಗಗಳಲ್ಲಿ ಕಾರ್ ಲೋನ್ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಗ್ರಾಹಕರ ಪಾನ್ ಕಾರ್ಡ್ ಮಾಹಿತಿ ನೀಡಿದರೆ ಕ್ಷಣದಲ್ಲೇ ಸಿಬಿಲ್ ಸ್ಕೋರ್ ಮಾಹಿತಿ ಸಿಗುತ್ತದೆ. ಸಂಬಳ, ಬ್ಯಾಂಕ್ ಅಕೌಂಟ್, ಕಾರ್ಯನಿರ್ವಹಿಸುವ ಕಚೇರಿ ಸಂಬಂಧ ಅಗತ್ಯ ದಾಖಲೆಗಳನ್ನು ಪೂರೈಸಿದರೆ ಗ್ರಾಹಕರ ಸಿಬಿಲ್ ಸ್ಕೋರ್ ಮತ್ತು ಆದಾಯಕ್ಕೆ ಅನುಗುಣವಾಗಿ ಗ್ರಾಹಕರ ಲೋನ್ ಮಿತಿಯನ್ನು ಸ್ಥಳದಲ್ಲೇ ತಿಳಿಸುತ್ತಾರೆ. ಗ್ರಾಹಕರ ಸಮ್ಮತಿ ಸೂಚಿಸಿದರೆ ಸ್ಥಳದಲ್ಲೇ ಲೋನ್ ಕೂಡ ಅಪ್ರೂವ್ ಮಾಡಿ ಕಾರ್ ಖರೀದಿಸಲು ಸಹಕರಿಸುತ್ತಾರೆ. ಇದಿಷ್ಟು ಸ್ಪಾಟ್ ಲೋನ್ ಪ್ರಕ್ರಿಯೆಯಾದರೆ, ಆನ್ ಲೈನ್‌ನಲ್ಲಿ ಕಾರ್ ಲೋನ್ ಪಡೆಯುವುದು ಮತ್ತಷ್ಟು ಸುಲಭವಾಗಿದೆ.
ಲೋನ್ ಪ್ರೊಸೆಸಿಂಗ್ ಫೀಸ್ ಫ್ರೀ: ಈ ಹಿಂದೆ ಕಾರ್ ಲೋನ್ ಪಡೆಯಲು ಗ್ರಾಹಕರು ಕಾರ್ ಲೋನ್ ಪ್ರೊಸೆಸಿಂಗ್ ಫೀಸ್ ಕಟ್ಟಬೇಕಿತ್ತು. ಅಂದರೆ ತಾವು ಲೋನ್ ಪಡೆಯುವ ಮೊತ್ತದಲ್ಲಿ ಶೇ. 1ರಷ್ಟು ಪ್ರೊಸೆಸಿಂಗ್ ಫೀಸ್ ಎಂದು ಬ್ಯಾಂಕ್ ಗಳಿಗೆ ಕಟ್ಟಬೇಕಿತ್ತು. ಆದರೆ ಈಗ ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಪ್ರೊಸೆಸಿಂಗ್ ಫೀಸ್ ಇಲ್ಲದೆ ಲೋನ್ ನೀಡುತ್ತಿವೆ . ಒಂದು ವೇಳೆ ಗ್ರಾಹಕ 10ಲಕ್ಷ ರೂ.ನ ಕಾರ್ ಲೋನ್ ಪಡೆದರೆ 10ಸಾವಿರ ರೂ.ನಷ್ಟು ಉಳಿತಾಯ ಮಾಡಬಹುದು ಎನ್ನುತ್ತಿವೆ ಬ್ಯಾಕಿಂಗ್ ವಲಯಗಳು.
100% ಫೈನಾನ್ಸ್ ಸ್ಕೀಂ: ಈ ಹಿಂದೆ ಕಾರುಗಳನ್ನು ಖರೀದಿಸಲು ಕಾರಿನ ಒಟ್ಟು ಬೆಲೆಯ ಕನಿಷ್ಠ ಶೇ.30ರಷ್ಟು ಡೌನ್ ಪೇಯೆ¾ಂಟ್ ಮಾಡಬೇಕಿತ್ತು. ಇನ್ನುಳಿದ ಶೇ.70ಕ್ಕೆ ಬ್ಯಾಂಕ್‌ಗಳು ಫೈನಾನ್ಸ್ ಮಾಡುತಿದ್ದವು. ಆದರೆ, ಈಗ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ತಿಂಗಳಿಂದ ಮಾರುಕಟ್ಟೆಗೆ ಹೊಸದಾಗಿ ಪರಿಚಯವಾಗುತ್ತಿರುವ ಕಾರುಗಳಿಗೆ ಬ್ಯಾಂಕ್‌ಗಳು 100 % ಫೈನಾನ್ಸಿಂಗ್ ಮಾಡುತ್ತಿವೆ.
ಬಡ್ಡಿ ದರ ಕಡಿಮೆ ಮಾಡಲಾಗಿದೆ: ಕಳೆದ ವರ್ಷ ಕಾರ್ ಲೋನ್ ಬಡ್ಡಿ ದರ ಶೇ.9.5 -10ರವರೆಗೆ ಇತ್ತು. ಆದರೆ ಈಗ ಅದು ಶೇ.8.6ಕ್ಕೆ ಇಳಿದಿದೆ. ಇದರಿಂದ ಗ್ರಾಹಕರು ಸುಮಾರು 10 ರಿಂದ 20ಸಾವಿರದಷ್ಟು ಪ್ರತಿ ವರ್ಷ ಉಳಿತಾಯ ಮಾಡಬಹುದು,. ಇಡೀ ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಇಷ್ಟು ಕಡಿಮೆ ಕಾರ್ ಲೋನ್ ಬಡ್ಡಿ ದರ ಹಿಂದೆಂದೂ ಕಾಣಲು ಸಾಧ್ಯವಿಲ್ಲ.
ಪ್ರಸಕ್ತ ಸಾಲಿನಲ್ಲಿ ಕಾರು ಲೋನ್ ಮೇಲಿನ ಬಡ್ಡಿ ದರ ಕಡೆಮೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ.1ರಷ್ಟು ಕಾರ್ ಲೋನ್ ಬಡ್ಡಿ ಕಡಿತಗೊಳಿಸಲಾಗಿದೆ. ಕಾರ್ ಕೊಳ್ಳುವವರ ಸಹಾಯಕ್ಕೆ ಬ್ಯಾಂಕ್‌ಗಳು ಸದಾ ಸಿದ್ದವಾಗಿವೆ. ಕಾರ್ ಲೋನ್ ನೀಡಲು ಲೋನ್ ಮೇಳಗಳನ್ನು ಮಾಡಲಾಗುತ್ತಿದೆ. ಆಟೋಮೊಬೈಲ್ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ.
-ನಾಗರಾಜ್, ಬ್ಯಾಂಕ್ ನೌಕರ ಸಂಘದ ಕಾರ್ಯದರ್ಶಿ
ಬ್ಯಾಂಕ್‌ಗಳಲ್ಲಿ ಹಿಂದಿಗಿಂತಲೂ ಕಾರಿನ ಸಾಲಗಳು ಸುಲಭವಾಗಿ ಸಿಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾರು ಕೊಳ್ಳುವ ಗಾರಹಕರಿಗೆ ಹೆಚ್ಚು ಬೇಗ ಸಾಲ ದೊರೆಯಲಿದ್ದು, ಈ ಹಿಂದೆ ಬ್ಯಾಂಕ್ ಗಳು ಪಡೆಯುತಿದ್ದ ಲೋನ್ ಪ್ರೊಸೆಸಿಂಗ್ ಫೀಸ್ ಈಗ ಪಡೆಯುತ್ತಿಲ್ಲ. ಗ್ರಾಹಕರ ಆದಾಯದ ವಿವರಗಳನ್ನು ಪರಿಶೀಲಿಸಿ 30ನಿಮಿಷದಲ್ಲಿ ಕಾರ್ ಲೋನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
-ಶ್ರೀನಿವಾಸ್, ಬ್ಯಾಂಕ್ ಕಾರ್ ಲೋನ್ ವಿಭಾಗದ ಮುಖ್ಯಸ್ಥ
* ಲೋಕೇಶ್ ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.