ಜಾಫರ್ ಶರೀಫ್‍ಗೆ ಭಾವಪೂರ್ಣ ಶ್ರದ್ಧಾಂಜಲಿ
Team Udayavani, Jan 19, 2019, 6:11 AM IST
ಬೆಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಶರೀಫ್ ಅವರಿಗೆ ನಗರದಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಸ್ಲಿಂ ಧರ್ಮಗುರುಗಳು, ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಅಜಾದ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಸಭಾಧ್ಯಕ್ಷ ರಮೇಶ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ನುಡಿ ನಮನ ಸಲ್ಲಿಸಿದರು.
ಈ ವೇಳೆ ಪೇಜಾವರ ಶ್ರೀಗಳು ಮಾತನಾಡಿ, ರಾಷ್ಟ್ರೀಯ ನಾಯಕರಾಗಿ ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಉನ್ನತ ಕೊಡುಗೆ ನೀಡಿರುವ ಜಾಫರ್ ಶರೀಫರು, ಎಲ್ಲ ಜಾತಿ, ಧರ್ಮ, ಸಮುದಾಯದವರೊದಿಂಗೆ ಸಲುಗೆ ಮತ್ತು ಸೌಜನ್ಯಯುತ ಸಂಬಂಧ ಹೊಂದಿದ್ದರು, ಸಜ್ಜನ ರಾಜಕಾರಣಿಯಾಗಿ, ಸರ್ವಜನರ ಹಿತಕ್ಕಾಗಿ ಸೇವೆ ಸಲ್ಲಿಸಿದ್ದರು. ದೇಶಭಕ್ತಿ, ಜಾತ್ಯತೀತತೆ, ಆದರ್ಶ ರಾಜಕಾರಣಿ, ಸಕಲರ ಸ್ನೇಹ ಸಂಪಾದಿಸಿದ್ದ ಧೀಮಂತ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಬ್ಭಾಗವಾಗಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿಯವರ ಬಣ ಸೇರಿ ಪಕ್ಷ ಸಂಘಟನೆ ಮಾಡಿದ್ದರು. ಸಾಧನೆ, ಬಡತನ, ಸಿರಿತನ ಯಾವುದನ್ನು ಲೆಕ್ಕಿಸದೇ ಅಲ್ಪಸಂಖ್ಯಾತರಿಗೆ ಸ್ವಾಭಿಮಾನದ ಬದುಕಿಗಾಗಿ ಹೋರಾಟ ಮಾಡಿದ್ದಾರೆ. ಎಲ್ಲರನ್ನೂ ಸಹೋದರರಂತೆ ನೋಡುತ್ತಿದ್ದರು. ರೈಲ್ವೇ ಸಚಿವರಾಗಿ ರಾಜ್ಯಕ್ಕೆ ವಿಶೇಷವಾಗಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಸ್ವಾರ್ಥ ಮೀರಿದ ಸೇವೆ ಅವರದ್ದಾಗಿತ್ತು ಎಂದರು.
ಇವರ ಹೆಸರಿನಲ್ಲಿ ಸರ್ಕಾರದಿಂದ ಹೊಸ ಯೋಜನೆ ಅಥವಾ ಕಾರ್ಯಕ್ರಮವೊಂದನ್ನು ಆರಂಭಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದ್ದೇನೆ. ಜಾಫರ್ ಶರೀಫ್ ಅವರ ನೆನಪು ಉಳಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದು ಹೇಳಿದರು. ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಜಾಫರ್ ಶರೀಫ್ ಅವರ ಹೆಸರಿಡಬೇಕು. ಹಾಗೆಯೇ ರಾಜ್ಯ ಸರ್ಕಾರ ಕೂಡ ಅವರ ಹೆಸರಿನಲ್ಲಿ ಹಲವು ಯೋಜನೆಗಳನ್ನು ಹಾರಿಗೆ ತರವಂತೆ ಆಗವೇಕು ಎಂದು ಮನವಿ ಮಾಡಿದರು.
ಸಂಸದ ಕೆ.ಎಚ್.ಮುನಿಯಪ್ಪ, ಸಚಿವರಾದ ಜಮೀರ್ ಅಹ್ಮದ್, ಯು.ಟಿ.ಖಾದರ್, ರಾಜ್ಯಸಭಾ ಮಾಜಿ ಸದಸ್ಯರಾದ ಕೆ.ರೆಹಮಾನ್ ಖಾನ್, ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ನಾರಾಯಣಸ್ವಾಮಿ, ರಿಜ್ವಾನ್ ಹರ್ಷದ್ ಮೊದಲಾದವರು ಜಾಫರ್ ಶರೀಫ್ ಅವರ ಸಾಧನೆ ಹಾಗೂ ಸೇವೆಯನ್ನು ಸ್ಮರಿಸಿದರು.
ರಾಜಕಾರಣಿಗಳನ್ನು ದೂರವಿಡೋಣ: “ರಾಜಕಾರಣಿಗಳನ್ನು ದೂರವಿಟ್ಟು ಹಿಂದೂ ಸಮಾಜದ ಸ್ವಾಮೀಜಿಗಳು, ಸಂತರು ಮತ್ತು ಮುಸ್ಲಿಂ ಸಮುದಾಯದ ಧರ್ಮಗುರುಗಳು ಒಂದಾಗಿ ರಾಮಜನ್ಮಭೂಮಿ ವಿವಾದದ ಬಗ್ಗೆ ಮುಕ್ತ ಚರ್ಚೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತಾಗಬೇಕು’ ಎಂದು ವಿಶ್ವೇಶತೀರ್ಥ ಶ್ರೀಗಳು ಅಭಿಪ್ರಾಯಪಟ್ಟರು. ಹಿಂದೂ-ಮುಸ್ಲಿàಂ ಸೌಹಾರ್ದತೆ ಮೂಲಕ ರಾಮಜನ್ಮಭೂಮಿ ವಿವಾದ ಬಗೆಹರಿಸಲು ಈ ಹಿಂದೆ ಪ್ರಯತ್ನ ನಡೆದಿತ್ತು. ರಾಜಕೀಯ ಗುದ್ದಾಟದಿಂದ ಎಲ್ಲವೂ ಅರ್ಧಕ್ಕೇ ನಿಂತಿತು. ರಾಜಕೀಯ ನಾಯಕರಿಂದ ಇದು ಸಾಧ್ಯವಿಲ್ಲ ಎಂದು ಹೇಳಿದರು.
ಜಾಫರ್ ಷರೀಫ್ ಹೆಸರಿಡಲು ಸಹಮತ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಜಾಫರ್ ಶರೀಫ್ ಅವರ ಹೆಸರಿಡಬೇಕು ಎಂಬ ಬೇಡಿಕೆಗೆ ನನ್ನ ಸಹಮತವೂ ಇದೆ. ಕ್ವೀನ್ಸ್ ರಸ್ತೆಗೆ ಜಾಫರ್ ಶರೀಫ್ ರಸ್ತೆ ಎಂದು ಮರುನಾಮಕರಣ ಮಾಡುವ ಸಂಬಂಧ ಬಿಬಿಎಂಪಿ ಜತೆ ಮಾತಕತೆ ನಡೆಸುತ್ತೇನೆ. ರೈಲ್ವೆ ಸಚಿವರಾಗಿ ಬ್ರಾಡ್‌ಗೆàಜ್ ವ್ಯವಸ್ಥೆ ತರುವ ಮೂಲಕ ಜಾಫರ್ ಷರೀಫ್, ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆಯೇ ಅವರನ್ನು ಸ್ಮರಣೀಯರನ್ನಾಗಿಸಿದೆ ಎಂದರು.
ಜಾತ್ಯತೀತ ನಿಲುವಿನ ವ್ಯಕ್ತಿತ್ವ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಜಾಫರ್ ಶರೀಫರು ಎಲ್ಲಾ ಜಾತಿ, ಸಮುದಾಯವನ್ನು ಒಟ್ಟಿಗೆ ಕಂರೆದುಕೊಂಡು ಹೋಗುವ ವಿಶೇಷ ಶಕ್ತಿ ಹೊಂದಿದ್ದರು. ಅವರ ಚಿಂತನೆಗಳು ಸಂವಿಧಾನ ರಕ್ಷಣೆಯ ನೆಲೆಯಲ್ಲೇ ಇರುತ್ತಿದ್ದವು. ಸಂವಿಧಾನದ ಆಯಶಕ್ಕೆ ಎಂದೂ ವಿರುದ್ಧವಾಗಿ ನಡೆದುಕೊಂಡವರಲ್ಲ. ಜಾತ್ಯತೀತ ನಿಲುವಿನ ವಿಶೇಷ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ