ಜಮ್ಮು ಕಾಶ್ಮೀರದ ಅಖಂಡತೆ ಭಾರತ ದೇಶದಲ್ಲೇ ಇರಬೇಕು
Team Udayavani, Nov 11, 2017, 11:16 AM IST
ಬೆಂಗಳೂರು: ಅದೊಂದು ಅಪರೂಪದ ಕಾರ್ಯಕ್ರಮ. ದೇಶಕ್ಕಾಗಿ ಹೋರಾಡಿದ ಮತ್ತು ದೇಶ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಕುಟುಂಬಗಳ ಸಮಾಗಮ. ಅದಕ್ಕೆ ವೇದಿಕೆಯಾಗಿದ್ದು ಕನಕಪುರ ರಸ್ತೆಯ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮ.
ಕಾಶ್ಮೀರ ಹಿಂಸಾಚಾರದಲ್ಲಿ ಮೃತರ ಕುಟುಂಬಸ್ಥರು, ಉಗ್ರಗಾಮಿ ಸಂಘಟನೆಗಳಲ್ಲಿ ತೊಡಗಿದ್ದವರು ಹಾಗೂ ಮೃತ ಯೋಧರ ಕುಟುಂಬದ ನಡುವಿನ ಸಮಾಗಮ “ಪೈಗಂ ಏ ಮೊಹಬ್ಬತ್’ ಕಾರ್ಯಕ್ರಮ ಶುಕ್ರವಾರ ರವಿಶಂಕರ್ ಗುರೂಜಿಯವರ ಮುಂದಾಳತ್ವದಲ್ಲಿ ನಡೆಯಿತು.
“ಐ ಲಾಸ್ಟ್ ಮೈ ಲವ್ ಇನ್ ಕಾಶ್ಮೀರ್’ ಇದು ಸಿಆರ್‌ಪಿಎಫ್ ಹುತಾತ್ಮ ಯೋಧ ಕೀರ್ತಿ ಚಕ್ರ ಪ್ರಮೋದ್ ಕುಮಾರ್ ಪತ್ನಿ ನೇಹಾ ತ್ರಿಪಾಠಿ ಯವರ ಮನದ ಮಾತು. ಪತಿಯನ್ನು ಕೊಂದವರು ಕಣ್ಣ ಮುಂದೆ ಇದ್ದರೂ ಮನಸ್ಸು ನಿಯಂತ್ರಣದಲ್ಲಿರಿಸಿಕೊಂಡು, ನನ್ನ ಪತಿಯನ್ನು ಇವರಲ್ಲೇ ಯಾರೋ ಒಬ್ಬರು ಕೊಂದಿರಬಹುದು. ಇಂತಹ ಕಾರ್ಯಕ್ರಮಕ್ಕೆ ಬರುವುದಕ್ಕೆ ಮನಸ್ಸಿನೊಳಗೆ ಅನುಭವಿಸಿದ ಸಂಕಷ್ಟ ಹೇಳತೀರದು.
ಆದರೆ ಈ ದ್ವೇಷ ದಹನಕ್ಕೆ ಪೈಗಂ ಏ ಮೊಹಬ್ಬತ್ ಔಷಧಿಯಾಗಿದೆ. ಕಾಶ್ಮೀರವೂ ಭಾರತದ ಒಂದು ಭಾಗ ಎಂದು ಶೇ.5 ಜನ ಮನವರಿಕೆ ಮಾಡಿಕೊಂಡರೆ ದ್ವೇಷ ನಾಶವಾಗಲಿದೆ. ನನ್ನ ಪತಿ ಸತ್ತಾಗ 6 ತಿಂಗಳು ನಿದ್ದೆ ಮಾಡಿಲ್ಲ. ಸಕಾರಾತ್ಮಕವಾಗಿ ಯೋಚಿಸಿದರೆ ಎಲ್ಲ ಸಮಸ್ಯೆಗೂ ಪರಿಹಾರವಿದೆ ಎಂದು ಹೇಳಿದರು.
ಹಿಂಸಾಚಾರ ನೋಡುತ್ತಲೇ ಬೆಳೆದೆ: ಮಕ್ಕಳ ಎದುರೇ ಪಾಲಕರನ್ನು ಹತ್ಯೆ ಮಾಡುತ್ತಾರೆ. ತಂಗಿ ಅಮ್ಮನಿಗೆ ತೊಂದರೆ ಮಾಡುತ್ತಾರೆ. ಇದನ್ನು ನೋಡಿದ ಕಾಶ್ಮೀರದ ಯುವ ಜನತೆ ಪ್ರತ್ಯೇಕವಾದಿಗಳಾಗದೇ ಇರುತ್ತಾರೇ? ಬಂದೂಕು ಹಿಡಿಯುತ್ತಾರೆ. 1996ರಲ್ಲಿ ನಾನು ಬಂದೂಕು ಹಿಡಿದೆ. 1996ರಲ್ಲಿ ನಾನು ಪ್ರತ್ಯೇಕವಾದಿಗಳ ತಂಡದಿಂದ ಹೊರಬಂದು ಬದಲಾವಣೆಯತ್ತ ಹೆಜ್ಜೆ ಹಾಕಿದೆ.
ಪಾಕಿಸ್ತಾನ ಹಾಗೂ ಭಾರತ ಎರಡೂ ದೇಶಗಳು ಕಾಶ್ಮೀರದಲ್ಲಿ ಸಮಸ್ಯೆಯಿದೆ ಎಂದು ಹೇಳುತ್ತವೆ. ಆದರೆ ಇದಕ್ಕೆ ಪರಿಹಾರ ಹುಡುಕುವವರೇ ಇಲ್ಲ. ನಮ್ಮವರು ಸತ್ತಾಗ ನಮಗೆ ನೋವಾಗುತ್ತವೆ. ಯೋಧರು ಸತ್ತಾಗ ಅವರ ಕುಟುಂಬಕ್ಕೆ ದುಃಖವಾಗುತ್ತದೆ. ರವಿಶಂಕರ್ ಗುರೂಜಿಯವರ ಈ ಕಾರ್ಯಕ್ರಮದಿಂದಾಗಿ ನಾವು ಅಣ್ಣ-ತಂಗಿಯ ಸಂಬಂಧ ಬೆಸೆದಿದ್ದೇವೆ ಎಂದು ಪ್ರತ್ಯೇಕತವಾದಿಯಾಗಿದ್ದ ಫಾರುಕ್ ಅಹಮ್ಮದ್ ಮನಬಿಚ್ಚಿ ನುಡಿದರು.
ಇದು ಹೃದಯ ಕಟ್ಟುವ ಕೆಲಸ: ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ದೇಶ ನಮ್ಮದು. ಸರ್ವೇಜನ ಸುಖೀನೋಭವಂತಿ ಎಂಬ ಧ್ಯೇಯದೊಂದಿಗೆ ಜೀವನ ಸಾಗಿಸುತ್ತಿರುವವರು ನಾವು. ಕಾಶ್ಮೀರ ಇನ್ನೆಷ್ಟು ದಿನ ಹಿಂಸೆಯಲ್ಲೇ ಸಾಗಬೇಕು? ಹೃದಯಗಳನ್ನುಜೋಡಿಸುವ ಕೆಲಸವನ್ನು 2008ರಿಂದಲೇ ಆರಂಭಿಸಿದ್ದೇವೆ. ಈಗ ಅದು ಒಂದು ಹಂತಕ್ಕೆ ಬಂದಿದೆ.
ದೇಶ ವಿರೋಧಿಗಳಾಗಿದ್ದವರ ಕುಟುಂಬ ಹಾಗೂ ದೇಶಕ್ಕಾಗಿಯೇ ಜೀವನ ಮುಡುಪಾಗಿಟ್ಟ ಸೈನಿಕರ ಕುಟುಂಬದಿಂದಲೂ ಬಂದಿದ್ದಾರೆ. ಸುಮಾರು 200 ಕುಟುಂಬ ಬಂದಿದೆ ಎಂದು ರವಿಶಂಕರ್ ಗುರೂಜಿ ಮಾಹಿತಿ ನೀಡಿದರು. ಮಹತ್ವಪೂರ್ಣ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ವಿರೋಧ ಬರುವುದು ಸಾಮಾನ್ಯ. ದೇಶ ಸೇವೆ ಮತ್ತು ಸಾಮಾಜಿಕ ಕಾರ್ಯಕ್ಕಾಗಿ ಎಲ್ಲ ರೀತಿಯ ವಿವಾದವನ್ನು ಎದುರಿಸಲು ಸಿದ್ಧನಿದ್ದೇನೆ.
ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ. ಕಾಶ್ಮೀರದಲ್ಲಿ ಶಾಂತಿ ಸಾಧನೆಯ ಸೇವೆ ಮಾಡುತ್ತಿದ್ದೇವೆ. ಶಾಂತಿ, ಸುಖಜೀವನ ಹಾಗೂ ರಾಷ್ಟ್ರವನ್ನು ಇನ್ನಷ್ಟುಭದ್ರಗೊಳಿಸುವುದೇ ನಮ್ಮ ಮೂಲ ಉದ್ದೇಶವಾಗಿದೆ. ಇದು ಸರ್ಕಾರದ ಪ್ರೇರಣೆಯಿಂದ ಮಾಡಿದ ಕೆಲಸ ಅಲ್ಲ. ಬದಲಾಗಿ ನಮ್ಮ ಸ್ವಯಂ ಸೇವಕರು ಈ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ವಿಶ್ವದಲ್ಲಿ ಎಲ್ಲಾ ದೃಷ್ಟಿಕಕೋನದ ಜನರಿದ್ದಾರೆ.
ವೈದ್ಯರು ಜಾತಿ ಬೇಧ ಇಲ್ಲದೇ ತಮ್ಮ ಸೇವೆ ಸಲ್ಲಿಸುವಂತೆ. ಎಲ್ಲರನ್ನು ಶಾಂತಿ ಮಾರ್ಗದಲ್ಲಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದೇವೆ. ಇಂತಹ ಸೇವೆಗೆ ಟೀಕೆ ಬರುವುದು ಸಾಮಾನ್ಯವಾಗಿದೆ. ಶ್ರೀನಗರದಲ್ಲಿ ಕೌಶಲಾಭಿವೃದ್ಧಿ ಕೇಂದ್ರವನ್ನು ತೆರೆದು ಪ್ರತ್ಯೇಕ ವಾದಿಗಳನ್ನು ಭಾರತೀಯವಾದಿಗಳನ್ನಾಗಿ ಮಾಡುತ್ತಿದ್ದೇವೆ. ಕಾಶ್ಮೀರದ ಎರಡು ವೈರುದ್ಯದ ಕುಟುಂಬವನ್ನು ಒಗ್ಗೂಡಿಸುವ ಕೆಲಸ ಆಂಭವಾಗಿದೆ, ಇದು ನಿರಂತರವಾಗಿರುತ್ತದೆ ಎಂದು ಹೇಳಿದರು.
ದ್ವೇಷ ಮರತೆ ಒಂದಾದ ಕಾಶ್ಮೀರಿ ಕುಟುಂಬ: ಕಾಶ್ಮೀರದಲ್ಲಿ ದ್ವೇಷದೊಂದಿಗೆ ಜೀವನ ನಡೆಸುತ್ತಿದ್ದ ಪ್ರತ್ಯೇಕವಾದಿಗಳ ಕುಟುಂಬ ಹಾಗೂ ಹುತಾತ್ಮರಾದ ಯೋಧರ ಕುಟುಂಬದ ಮಧ್ಯೆ ಶಾಂತಿ ಸಾಧನೆಯ ಕೆಲಸವನ್ನು ಆರ್ಟ್ ಆಫ್ ಲಿವಿಂಗ್‌ನ ಸಸತ ಪರಿಶ್ರಮದಿಂದ ನಡೆದಿದೆ.
ಸುಮಾರು 200 ಕಾಶ್ಮೀರಿ ಕುಟುಂಬಗಳು ಶುಕ್ರವಾರ ರವಿಶಂಕರ್ ಗುರೂಜಿಯರ ಸಮ್ಮುಖದಲ್ಲಿ ಪೈಗಂ ಈ-ಮೊಹಬತ್ ಕಾರ್ಯಕ್ರಮದಲ್ಲಿ ಪರಸ್ಪರ ಒಂದಾಗಿ, ನೋವನ್ನು ಮರೆತು ಸಂತೋಷದಿಂದ ಬೆರೆತರು. ತಮ್ಮೊಳಗಿರುವ ಮಾನವೀಯ ಸಂಬಂಧ, ಪ್ರೀತಿ, ಕರುಣೆ ಹಾಗೂ ನೋವಿನ ಕಥೆ ಹಂಚಿಕೊಂಡರು.
ಕೊಂದವರು ಕಣ್ಣಮುಂದಿದ್ದರೆ ದುಖಃ ತಡೆಯಲಾಗದು!: “ನಾವು ವಿಧವೇಯರಾಗಲು, ನಮ್ಮ ಹೆಣ್ಣು ಮಕ್ಕಳು ಅಪ್ಪ ಇಲ್ಲದೆ ಬೆಳೆಯಲು ಕಾರಣರಾದವರು ಮುಂದೆ ಇದ್ದಾಗ ದುಃಖ ತಡೆಯಲು ಸಾಧ್ಯವಿಲ್ಲ. ಆದರೂ ಶಾಂತಿ ಸ್ಥಾಪನೆಯಾಗಬೇಕು. ಕಾಶ್ಮೀರ ಅಖಂಡವಾಗಿ ಭಾರತದೊಂದಿಗೆ ಇರಬೇಕು. ನಮ್ಮದು ನೋವಿನ ಕಥೆ,’ ಎಂದು ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ್ ಕುಮಾರ್ ಪತ್ನಿ ಡಾ. ಪ್ರಿಯಾ ಸಂಕಲ್ಪ್ ನೋವಿನಿಂದ ಹೇಳಿದರು.
ವಿಧವೆಯರ ಆರ್ಮಿ: “ರಾಜಕೀಯ ಕಾರಣ ಒಂದರಿಂದಲೇ ಕಾಶ್ಮೀರದಲ್ಲಿ ಈ ಸಮಸ್ಯೆ ಇಲ್ಲ. ಸಾಮಾಜಿಕ ಆರ್ಥಿಕ ಕಾರಣವೂ ಇದೆ. ಕಾಶ್ಮೀರವೂ ಭಾರತದ ಒಂದು ಅಂಗ. ಎರಡೂ ಕಡೆಯಿಂದ ಆದ ತಪ್ಪುಗಳಿಗೆ ಒಂದು ಅಂತ್ಯ ಬೇಕಾಗಿದೆ. ಆಗುವಂತಹ ಹಿಂಸಾಚಾರದಿಂದ ವಿಧವೆಯರ ಆರ್ಮಿ ಹೆಚ್ಚಾಗುತ್ತಿದೆ,’ ಎಂದು ಪ್ರಿಯಾ ಕಣ್ಣೀರಿಟ್ಟರು.
“ಭಾರತೀಯ ಸೈನ್ಯದ ಓರ್ವ ಯೋಧ ಸತ್ತರೆ ಪೂರ್ಣ ಕಾಶ್ಮೀರ ಸಂಭ್ರಮಿಸುತ್ತದೆ ಎಂಬುದು ಸುಳ್ಳು. ಕಾಶ್ಮೀರದಲ್ಲಿ ಮಾನವೀಯತೆ ಇರುವ ಜನರೂ ಇದ್ದಾರೆ, ಅವರು ಅಳುತ್ತಾರೆ. ಹಿಂದೆ ನಡೆದ ಘಟನೆಗಳನ್ನು ನೆನೆಯುತ್ತಾ ಕುಳಿತರೆ ಮುಂದೆ ಹೋಗಲು ಸಾಧ್ಯವಿಲ್ಲ.
ಕಾಶ್ಮೀರದ ಯುವಕರು ಬೇರೆ ರಾಜ್ಯಗಳಿಗೆ ಹೋದರೆ ಅವರಿಗೆ ತೊಂದರೆ ನೀಡಲಾಗುತ್ತದೆ. ಕಾಶ್ಮೀರದಲ್ಲಿ ಇನ್ನಷ್ಟು ರಕ್ತ ಹರಿಯುವುದು ನನಗೆ ಇಷ್ಟವಿಲ್ಲ. ಸ್ವರ್ಗವಾಗಿರುವ ಕಾಶ್ಮೀರ ಸ್ವರ್ಗವಾಗಿಯೇ ನಮಗೆ ಬೇಕು,’ ಎಂದು ಪ್ರತ್ಯೇಕವಾದಿಯಾಗಿದ್ದ ಮುನೀರ್ ಚೌಧರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.