ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನದ್ದೇ ಕಾರುಬಾರು!
Team Udayavani, Jun 29, 2021, 10:02 AM IST
ಬೆಂಗಳೂರು: ನಗರದ ಗಲ್ಲಿ ಗಲ್ಲಿಗಳಲ್ಲಿ, ಪ್ರಮುಖ ವೃತ್ತಗಳು ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರವಾದ ಕೆ.ಆರ್.ಮಾರುಕಟ್ಟೆಯಲ್ಲಿ ನೇರಳೆಹಣ್ಣಿನದ್ದೇಕಾರುಬಾರು!
ಹೌದು, ನೇರಳೆ ಸವಿಯುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಇಷ್ಟಪಡುವಂತ ಹಣ್ಣು ಇದು. ಅಪರೂಪಕ್ಕೊಮ್ಮೆ ತಿಂದರೂ ಸಾಕಷ್ಟು ಲಾಭವಿದೆ. ಆದರೆ, ಈ ಹಣ್ಣು ಎಲ್ಲ ಸಮಯದಲ್ಲಿ ಸಿಗುವುದಿಲ್ಲ. ಸಿಕ್ಕಾಗ ಸೇವಿಸಿದರೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ನೇರಳೆ ಹಣ್ಣಿನಲ್ಲಿ ವಿವಿಧ ಔಷಧೀಯ ಗುಣಗಳಿದ್ದು, ಮಧುಮೇಹ ಸೇರಿದಂತೆ ಕೆಲವುಕಾಯಿಲೆಗಳಿಗೆಇದುರಾಮಬಾಣ ಎಂದು ವೈದ್ಯರು ಸಲಹೆ ನೀಡಿದ್ದೇ ತಡ, ಗ್ರಾಹಕರು, ಮಾರುಕಟ್ಟೆಯಲ್ಲಿ ಮುಗಿ ಬಿದ್ದು ನೇರಳೆ ಹಣ್ಣು ಖರೀದಿಸುತ್ತಿದ್ದಾರೆ. ಹೀಗಾಗಿ, ವ್ಯಾಪಾರಿಗಳು ಮತ್ತು ರೈತರಿಗೆ ಜಣ ಜಣ ಕಾಂಚಣವಾದರೆ, ಗ್ರಾಹಕರು ಔಷಯುಕ್ತ ಹಣ್ಣು ತಿಂದು ಆರೋಗ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ.
ನೇರಳೆ ಖರೀದಿಗೆ ಮುಗಿ: “ನೇರಳೆ ಹಣ್ಣನ್ನು ಕಂಡರೆ ನಗರದ ಜನರು ಮೂಗು ಮುರಿಯುತ್ತಿದ್ದಕಾಲವಿತ್ತು. ನೇರಳೆ ಹಣ್ಣಿನಲ್ಲೂ ಅಪರೂಪದ ಕಾಯಿಲೆಗಳನ್ನು ಗುಣಪಡಿಸಬಲ್ಲ ಔಷಧೀಯ ಗುಣಗಳಿವೆ ಎಂಬ ವಿಷಯ ತಿಳಿದ ಕೂಡಲೆ, ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಜೂನ್ ಹಾಗೂ ಜುಲೈನಲ್ಲಿ ಮಾತ್ರ ಲಭ್ಯವಿರುವ ಕಾರಣ ಹೆಚ್ಚು ಖರೀದಿಸುತ್ತಿದ್ದಾರೆ. ನಗರದ ಗಲ್ಲಿ ಗಲ್ಲಿಗಳಲ್ಲಿ, ಸಣ್ಣ ಹಣ್ಣಿನಂಗಡಿಯಿಂದಿಡಿದು ದೊಡ್ಡ ಹಣ್ಣಿನ ಮಳಿಗೆಗಳಲ್ಲೂ ನೇರಳೆ ಹಣ್ಣು ಮಾರಾಟವಾಗುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ರಂಗನಾಥ್ ತಿಳಿಸಿದ್ದಾರೆ.
ಕೆ.ಜಿ. ನೇರಳೆಗೆ 220-250 ರೂ.: “ಮಾರುಕಟಯಲ್ಲಿ ನೇರಳೆ ಹಣ್ಣಿನ ಹೋಲ್‌ಸೆಲ್ ಬೆಲೆ ಕೆ.ಜಿ. 100ರಿಂದ 150 ರೂ. ಇದೆ. ಆದರೆ, ಹೊರಗಡೆ ವ್ಯಾಪಾರಿಗಳು 100 ಗ್ರಾಂ 20ರಿಂದ 30ರೂ. ಕೆ.ಜಿ. 200ರೂ., 220ರಿಂದ 250 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನೇರಳೆ ಹೊರತುಪಡಿಸಿ ಸಾಮಾನ್ಯ ನೇರಳೆ ಕೆ.ಜಿ. 160 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಮರದಲ್ಲಿ ಹೂ, ಮೊಗ್ಗು ಇರುವಾಗಲೇ ವರ್ತಕರು ನೇರಳೆ ಮರಗಳ ಗುತ್ತಿಗೆ ಪಡೆಯುತ್ತಿರುವುದರಿಂದ ದರ ಏರಿಕೆಯಾಗಿದೆ. ತೋಟಗಾರಿಕಾ ಇಲಾಖೆಯು, ನರೇಗಾ ಯೋಜನೆಯಡಿ ಸಸಿ ನಾಟಿ ಮಾಡುವವರಿಗೂ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ದೊಡ್ಡಬಳ್ಳಾಪುರದಿಂದ ನೇರಳೆ ಹಣ್ಣು ತಂದಿದ್ದ ರೈತ ಬಸವರಾಜಪ್ಪ ಹೇಳಿದ್ದಾರೆ.
ಔಷಧೀಯ ಗುಣ ಹೊಂದಿರುವ ನೇರಳೆ :
ನೇರಳೆ ಮರದ ಎಲೆ,ಕಾಯಿ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣಗಳನ್ನು ಒಳಗೊಂಡಿದೆ. ನೇರಳೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆನ್ಸ್ ಗುಣ, ಕಬ್ಬಿಣಾಂಶ ಹೇರಳವಾಗಿದ್ದು ಮಧುಮೇಹಿ ಗಳಿಗೆ ಉಪಯುಕ್ತವಾಗಿದೆ. ಇದು ರಕ್ತ ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ. ಸೌಂದರ್ಯಕ್ಕೂ ಉಪಯುಕ್ತವಾಗಿದ್ದು, ಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಮೊಡವೆಗಳು ನಿವಾರಣೆಯಾಗುತ್ತದೆ. ಆದರೆ,ಕೆಳಗೆ ಬಿದ್ದ ಹಣ್ಣು ತಿನ್ನಬಾರದು. ಅದರಿಂದ ಆರೋಗ್ಯ ಆದಗೆಟ್ಟು ವಾಂತಿ, ಭೇದಿಯಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜ್ಯೂಸ್ ಮಾಡಿ ಸವಿಯಬಹುದು :
ನೇರಳೆ ಹಣ್ಣುಗಳನ್ನು ಹತ್ತು ನಿಮಿಷಗಳಕಾಲ ಬಿಸಿನೀರಿನಲ್ಲಿ ಕುದಿಸಬೇಕು. ಬಳಿಕ, ತಣ್ಣಗಾದ ಮೇಲೆ ಬೀಜ ಮತ್ತು ಪಲ್ಪ್ ಬೇರ್ಪಡಿಸಿ, ಮಿಕ್ಸಿಗೆ ಹಾಕಬೇಕು. ಸ್ವಲ್ಪ ಉಪ್ಪು, ಮೆಣಸು, ಸಕ್ಕರೆ, ಚಾಟ್ ಮಸಾಲ ಹಾಕಿ ಮಿಕ್ಸಿಯಲ್ಲಿ ತಿರುವಿ ಸೋಸಿಕೊಂಡರೆ ಜಂಬೂ ನೇರಳೆ ಜ್ಯೂಸ್ ಸಿದ್ಧವಾಗುತ್ತದೆ. ಕ್ಯಾನ್ಸರ್ ರೋಗ ತಡೆಗೆ ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ನೇರಳೆ ಹಣ್ಣಿನಲ್ಲಿಕ್ಯಾಲ್ಸಿಯಂ ಪೊಟಾಷಿಯಂ ಐರನ್ ಹಾಗೂ ಕೋವಿಡ್ ಸೋಂಕಿತರಿಗೆಕೊಡುವ ವಿಟಮಿನ್ ಸಿ ಹೆಚ್ಚಿರುತ್ತದೆ. ದೇಹದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ. ಆದರೆ, ಚೆನ್ನಾಗಿ ತೊಳೆದು ಸೇವಿಸಬೇಕು.–ಡಾ.ಟಿ.ಎ.ವೀರಭದ್ರಯ್ಯ, ಆರೋಗ್ಯ ಇಲಾಖೆ ಉಪನಿರ್ದೇಶಕ
ವಿಕಾಸ್ ಆರ್. ಪಿಟ್ಲಾಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.