ದೇವರ ದರ್ಶನಕ್ಕೆ ನಿರ್ಬಂಧ ಸಲ್ಲ:ಜಯಮಾಲಾ- ಗಿರಿಜಾ ಲೋಕೇಶ್
Team Udayavani, Sep 29, 2018, 6:00 AM IST
ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪು ದೇಶಾದ್ಯಂತ ಬಹುಚರ್ಚಿತ ವಿಷಯವಾಗಿದೆ. ಅದರಲ್ಲೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಿಂದ ಶಬರಿಮಲೆಗೆ ಲಕ್ಷಾಂತರ ಭಕ್ತರು ಪ್ರತಿವರ್ಷ ದರ್ಶನಕ್ಕಾಗಿ ಹೋಗುತ್ತಾರೆ. ಹೀಗಾಗಿ, ಕರ್ನಾಟಕದ ಭಕ್ತರ ವಲಯದಲ್ಲೂ ತೀರ್ಪು ಕುತೂಹಲ ಮೂಡಿಸಿದೆ.ಖ್ಯಾತ ನಟಿ ಹಾಗೂ ಪ್ರಸ್ತುತ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಕಲ್ಯಾಣ ಸಚಿವೆಯಾಗಿರುವ ಜಯಮಾಲಾ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಶಬರಿಮೆಲೆ ಅಯ್ಯಪ್ಪ ದರ್ಶನ ಮಾಡಿದ್ದರು.ಜಯಮಾಲಾ ಅವರು ಅಯ್ಯಪ್ಪ ದರ್ಶನ ಮಾಡಿದ ಹಲವು ವರ್ಷಗಳ ನಂತರ ನಾನು ಶಬರಿಮಲೆ ಅಯ್ಯಪ್ಪ ದರ್ಶನ ಮಾಡಿದ್ದೆ’ ಎಂದು ಹೇಳಿಕೆ ನೀಡಿದ್ದರು. ಆಗ ಅದು ದೊಡ್ಡ ವಿವಾದವೂ ಆಗಿತ್ತು.ಇದೀಗ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಜಯಮಾಲಾ ಹಾಗೂ ಗಿರಿಜಾ ಲೋಕೇಶ್ “ಉದಯವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ.
ಮಹಿಳೆಯರಿಗೆ ನೈತಿಕ,ಆತ್ಮಸ್ಥೈರ್ಯ ತುಂಬಿದ ತೀರ್ಪು: ಜಯಮಾಲಾ
ಸುಪ್ರೀಂಕೋರ್ಟ್ ತೀರ್ಪಿಗೆ ಏನನಿಸುತ್ತದೆ?
ನ್ಯಾಯಾಂಗ, ಸಂವಿಧಾನ, ನಂಬಿಕೆ ಎಂಬುದು ಸತ್ಯ. ಆ ಸತ್ಯವೇ ದೇವರು. ಇಡೀ ದೇಶದ ಮಹಿಳೆಯರಿಗೆ ಸುಪ್ರೀಂಕೋರ್ಟ್‌ನಿಂದ ಜಯ ಸಿಕ್ಕಿದೆ. ಇದು ಕೇವಲ ಶಬರಿಮಲೆ ಪ್ರವೇಶದ ತೀರ್ಪು ಆಗಿರಬಹುದು. ಆದರೆ, ಇಂತಹ ತೀರ್ಪು ಮಹಿಳಾ ಸಮುದಾಯಕ್ಕೆ ನೈತಿಕ ಹಾಗೂ ಆತ್ಮಸ್ಥೈರ್ಯ ತುಂಬುತ್ತದೆ.
ನೀವು ಶಬರಿಮಲೆಗೆ ಹೋಗಿದ್ದು ವಿವಾದವಾಗಿತ್ತಲ್ಲ?
ಹೌದು, ಹಿಂದೆ ಆದ ಘಟನೆಯಿಂದ ನೋವಾಗಿತ್ತು. ನನಗಷ್ಟೇ ಅಲ್ಲ ಇಡೀ ಹೆಣ್ಣುಕುಲಕ್ಕೆ ನೋವಾಗಿತ್ತು. ಈಗ ಸುಪ್ರೀಂಕೋರ್ಟ್ ಎಲ್ಲ ನೋವು ಮರೆಸಿದೆ. ಹಿಂದಿನದು ಈಗ ನಾನು ನೆನಪಿಸಿಕೊಳ್ಳಲು ಬಯಸುವುದಿಲ್ಲ.
ಇಂತದ್ದೊಂದು ತೀರ್ಪು ಬರುವ ವಿಶ್ವಾಸವಿತ್ತಾ?
ಖಂಡಿತಾ, ಈ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಅಪಾರ ನಂಬಿಕೆ ಇತ್ತು. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನ್ಯಾಯಾಲಯ ಒಂದಲ್ಲ ಒಂದು ದಿನ ಇಂತಹ ತೀರ್ಪು ಕೊಟ್ಟೇ ಕೊಡುತ್ತದೆ ಎಂಬ ವಿಶ್ವಾಸವಿತ್ತು. ಹೀಗಾಗಿ, ಸುಪ್ರೀಂಕೊರ್ಟ್ ನೀಡಿರುವುದು ಐತಿಹಾಸಿಕ ತೀರ್ಪು. ಇದಕ್ಕಿಂತ ಸಂತೋಷ ಬೇರೊಂದಿಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನದಕ್ಕೆ ನಾವು ಚಿರ ಋಣಿ. ದೇಶದ ಹೆಣ್ಣು ಮಕ್ಕಳಿಗೊಂದು ನ್ಯಾಯ ಸಿಕ್ಕಿದೆ. ಮಹಿಳೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾಳೆ, . ಲಿಂಗ ತಾರತಮ್ಯ ಬೇಡ, ಆಕೆಗೂ ಸಮಾನ ಹಕ್ಕು ಸಿಗಬೇಕು ಎಂಬುದೇ ನಮ್ಮೆಲ್ಲರ ಆಶಯ.
ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ನೀವು ಏನು ಹೇಳಬುಸುತ್ತೀರಿ ?
ನ್ಯಾಯಾಲಯದ ತೀರ್ಪು ಎಲ್ಲರೂ ಸಮಾನರು. ಪುರುಷರಷ್ಟೇ ಮಹಿಳೆಯರು ಸಮಾನರು ಎಂದು ಹೇಳಿದೆ. ಇದನ್ನು ಎಲ್ಲರೂ ಮುಕ್ತವಾಗಿ ಸ್ವಾಗತಿಸಿ. ಹೆಣ್ಣನ್ನು ಗೌರವಿಸಿ. ದೇವಾಲಯ ಸೇರಿ ಯಾವುದೇ ಪುಣ್ಯ ಕ್ಷೇತ್ರವಿರಲಿ ಅಲ್ಲಿ ಮಹಿಳೆಗೂ ಮುಕ್ತ ಅವಕಾಶ ಇರಲಿ.
ಸುಪ್ರೀಂಕೋರ್ಟ್ ತೀರ್ಪಿಗೆ ಕೆಲವರ ವಿರೋಧ ಇದೆಯಲ್ಲಾ?
ವಿರೋಧ ಸಲ್ಲ. ಮಹಿಳೆಯರಿಗೆ ಅವಕಾಶ ಎಂದಾಕ್ಷಣ ಎಲ್ಲರೂ ಹೋಗುವುದಿಲ್ಲ. ನಾವು ದೇವರನ್ನು ನೋಡಲು ಆವಕಾಶ ಕೇಳಿದ್ದೇವೆ. ಮುತ್ತಿಗೆ ಹಾಕಲು ಅಲ್ಲ. ನ್ಯಾಯಾಲಯ ಅವಕಾಶ ಕೊಟ್ಟಿದೆ. ಭಗವಂತನನ್ನು ಕಣ್ಮುಂಬಿಕೊಳ್ಳಲು ಬಯಸುವವರು ಹೋಗಲಿ. ನಮ್ಮ ಧಾರ್ಮಿಕ ಪ್ರವೃತ್ತಿ ಬಗ್ಗೆ ಕಡುಬಡವರ ಮನೆಯಲ್ಲೂ ಪ್ರತಿಯೊಬ್ಬ ತಾಯಿ ದೇವಾಲಯಕ್ಕೆ ಹೇಗೆ ಹೋಗಬೇಕು ಎಂಬುದನ್ನು ಹೆಣ್ಣು ಮಕ್ಕಳಿಗೆ ಹೇಳಿಕೊಟ್ಟಿರುತ್ತಾಳೆ. ಹೀಗಾಗಿ, ಯಾರಿಗೂ ಯಾವುದೇ ಆತಂಕ ಬೇಕಿಲ್ಲ.
ರಾಜ್ಯದಲ್ಲಿ ಮಹಿಳಾ ಭಕ್ತರು ಶಬರಿಮಲೆಗೆ ಹೋಗಲು ಬಯಸಿದರೆ ಸರ್ಕಾರದಿಂದ ನೆರವು ಕಲ್ಪಿಸುತ್ತೀರಾ?
ರಾಜ್ಯ ಸರ್ಕಾರ ಶಬರಿಮಲೆಗೆ ಹೋಗುವ ಭಕ್ತರಿಗೆ ವೈದ್ಯಕೀಯ ನೆರವು ಸೇರಿದಂತೆ ಹಲವು ಸೌಕರ್ಯ ಒದಗಿಸುತ್ತಿದೆ. ಮಹಿಳಾ ಭಕ್ತರು ಹೋಗಬಹುದು. ಅಗತ್ಯ ಎನಿಸಿದರೆ ಮತ್ತಷ್ಟು ಸವಲತ್ತು ಒದಗಿಸಲಾಗುವುದು.
ನಂಬಿಕೆ ಅವರವರಿಗೆ ಬಿಟ್ಟದ್ದು: ತೀರ್ಪಿಗೆ ವಿರೋಧ ಸಲ್ಲ: ಗಿರಿಜಾ ಲೋಕೇಶ್
ಸುಪ್ರೀಂಕೋರ್ಟ್ ತೀರ್ಪಿಗೆ ಏನನಿಸುತ್ತದೆ?
ನನಗಂತೂ ತುಂಬಾ ಖುಷಿಯಾಗಿದೆ. ನಾವೆಲ್ಲಾ ಯಾವ ಕಾಲದಲ್ಲಿದ್ದೇವೆ. ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು ಎಂಬ ಯೋಚನೆಯೇ ಸರಿಯಲ್ಲ.
ನೀವು ಹಿಂದೊಮ್ಮೆ ಶಬರಿಮಲೆಗೆ ಹೋಗಿದ್ದೀರಲ್ಲವೇ?
ಹೌದು, 1988 ರಲ್ಲಿ ನಾನು ಶಬರಿಮಲೆಗೆ ಹೋಗಿದ್ದೆ. ಆಗ ನನ್ನ ಮಗ ಸೃಜನ್‌ಗೆ 8 ವರ್ಷ, ಮಗಳು ಪವಿತ್ರಾಗೆ 12 ವರ್ಷ. ನಮ್ಮ ಅತ್ತೆಯವರು ನಮ್ಮ ಜತೆ ಬಂದಿದ್ದರು. ಅದೊಂದು ಅದ್ಭುತ ಪಯಣ. ರಾತ್ರಿ 10 ಗಂಟೆಯಲ್ಲಿ ಪೆರಿಯಾರ್ ಹುಲಿಸಂರಕ್ಷಿತ ಪ್ರದೇಶದಲ್ಲಿ ನಡೆದು ಹೋಗಿ ದೇವರ ದರ್ಶನ ಪಡೆದಿದ್ದೆವು.
ಆಗ ನಿಮಗೆ ನಿರ್ಬಂಧ ಅಥವಾ ನಿಷೇಧ ಹೇರಿರಲ್ಲವೇ?
ಇಲ್ಲ. ನಾವು ಏಪ್ರಿಲ್ ತಿಂಗಳಲ್ಲಿ ಹೋಗಿದ್ದೆವು. ಅಲ್ಲಿನ ದೇವಾಲಯದವರು ಒಬ್ಬರು ನಮ್ಮನ್ನು ಕರೆದುಕೊಂಡು ಹೋಗಿದ್ದರು. ಇಬ್ಬರು ಮಕ್ಕಳಿಗೂ ಇರುಮುಡಿ ಕಟ್ಟಿಸಿದ್ದೆವು.
ನೀವು ಅಯ್ಯಪ್ಪ ಸ್ವಾಮಿ ದರ್ಶನ ಮಾಡಲೆಂದೇ ಹೋಗಿದ್ದಿರಾ?
ಶಬರಿಮಲೆ, ಕರಿಮಲೆ, ಅಯ್ಯಪ್ಪ ದೇವಾಲಯ ಕಾಡಿನ ಮಧ್ಯೆ ಇರುವ ಬಗ್ಗೆ ಕೇಳಿದಾಗ ನನಗೆ ಆ ಪ್ರಕೃತಿ ನೋಡಬೇಕು ಎಂಬ ಆಸೆ ಉಂಟಾಯಿತು. ಡಾ.ರಾಜ್‌ಕುಮಾರ್, ರಜನೀಕಾಂತ್, ಆಮಿತಾಬ್ ಬಚ್ಚನ್ ಸೇರಿ ಚಿತ್ರರಂಗದ ದಿಗ್ಗಜರು ಹೋಗುತ್ತಿದ್ದರು. ನನಗೂ ಹೀಗಾಗಿ, ಒಮ್ಮೆ ನೋಡಬೇಕು ಎಂಬ ಆಸೆಯಾಯಿತು. ಅಲ್ಲಿ ಹೋದ ನಂತರ ನನಗೆ ಪ್ರಕೃತಿಯೇ ದೈವ ಸಮಾನ ಎಂಬ ನಂಬಿಕೆ ಬಂದಿತು. ದೇವರ ದರ್ಶನ ನಂತರ ಕೆಳಗೆ ಇಳಿದು ಪಂಪಾ ನದಿಯ ಬಳಿ ಕೆಲವೊತ್ತು ಕುಳಿತಾದ ಯಾವುದೇ ಕಾಲು ನೋವು ಇರಲಿಲ್ಲ. ಅದು ನನಗೆ ಆಶ್ಚರ್ಯ ಮೂಡಿಸಿತು.
ಶಬರಿಮಲೆ ಪ್ರವೇಶಕ್ಕೆ ವಯಸ್ಸಿನ ನಿರ್ಬಂಧ ಬೇಕಾ?
ಬೇಕಿಲ್ಲ. ನಾನು 40 ವರ್ಷದ ವಯಸ್ಸಿನಲ್ಲಿ ಅಲ್ಲಿಗೆ ಹೋಗಿದ್ದೆ. ಈಗ 70 ವರ್ಷ. ನಾನು ಹೋಗಲು ಸಾಧ್ಯವೇ? ಒಂದೇ ಒಂದು ಮೆಟ್ಟಿಲು ಹತ್ತಲು ಸಹ ಆಗುವುದಿಲ್ಲ. ಶಬರಿಮಲೆ ಅಯ್ಯಪ್ಪ ನೋಡಲು ಯಾವುದೇ ವಯಸ್ಸಿನ ಮಿತಿ ಇರಬಾರದು. ಅದರಲ್ಲೂ ಅಲ್ಲಿನ ಪ್ರಕೃತಿ ನೋಡುವುದೇ ಒಂದು ಸೌಭಾಗ್ಯ. ಹೀಗಾಗಿ, ಎಲ್ಲೂ ಯಾವುದೇ ರೀತಿಯ ನಿರ್ಬಂಧ ಇರಕೂಡದು.
ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಕೆಲವರ ವಿರೋಧವೂ ಇದೆಯಲ್ಲಾ?
ಯಾರೂ ವಿರೋಧ ಮಾಡಬಾರದು. ನೋಡಿ, ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಎಂದಾಕ್ಷಣ ಹೇಗೆಂದರೆ ಹಾಗೆ ಯಾರೂ ಹೋಗುವುದಿಲ್ಲ. ಎಲ್ಲರೂ ಶುದ್ಧವಾಗಿಯೇ ಹೋಗುತ್ತಾರೆ. ಇಲ್ಲದಿದ್ದರೆ ಹೋಗುವುದೇ ಇಲ್ಲ. ದೇವರು ಎಲ್ಲರಿಗೂ ಒಂದೇ, ಜಾತಿ- ಬೇಧ ಇರಬಾರದು. ನಾನು ಮನೆಯಲ್ಲೇ ಎಲ್ಲ ದೇವರನ್ನೂ ಪೂಜಿಸುತ್ತೇನೆ. ಏಸು ಕ್ರಿಸ್ತನನ್ನೂ ಪ್ರಾರ್ಥಿಸುತ್ತೇನೆ. ನಂಬಿಕೆ ಅವರವರಿಗೆ ಬಿಟ್ಟದ್ದು.
ಸಂದರ್ಶನ: ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.