ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪ್ರಾಬಲ್ಯ
Team Udayavani, Sep 6, 2018, 6:00 AM IST
ಬೆಂಗಳೂರು: ರಾಜ್ಯದ 22 ಜಿಲ್ಲೆಗಳಲ್ಲಿ ಮೂರು ಮಹಾನಗರ ಪಾಲಿಕೆಗಳು ಮತ್ತು 102 ನಗರ ಸ್ಥಳೀಯ ಸಂಸ್ಥೆಗಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಶೇ. 33.52ರಷ್ಟು ಮತಗಳನ್ನು ಪಡೆದಿದ್ದರೆ, ಬಿಜೆಪಿ ಶೇ.31.07 ಮತ್ತು ಜೆಡಿಎಸ್ ಶೇ.16.53 ಮತಗಳನ್ನು ಪಡೆದಿವೆ. ಹಳೇ ಮೈಸೂರು ಭಾಗದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿರುವ ಜೆಡಿಎಸ್, ಉತ್ತರ ಕರ್ನಾಟಕದಲ್ಲೂ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯಾದ ಮಂಡ್ಯ, ಹಾಸನ ಸೇರಿ ಹಳೆ ಮೈಸೂರು ಭಾಗದಲ್ಲಿ ಸಹಜವಾಗಿ ಮುನ್ನಡೆ ಕಾಯ್ದುಕೊಂಡಿದೆ. ಇದೇ ವೇಳೆ ಉತ್ತರ ಕರ್ನಾಟಕ ಭಾಗದಲ್ಲಿ ಗಣನೀಯ ಸಾಧನೆ ಮಾಡಿದೆ. ಜೆಡಿಎಸ್ ಗೆದ್ದಿರುವ 375 ಸ್ಥಾನಗಳ ಪೈಕಿ 99 ಸ್ಥಾನಗಳನ್ನು ಉತ್ತರ ಕರ್ನಾಟಕದಲ್ಲಿ ಗೆದ್ದಿದೆ. ಜೆಡಿಎಸ್ ಪಡೆದಿರುವ ಒಟ್ಟು 5.04 ಲಕ್ಷ ಮತಗಳಲ್ಲಿ ಉತ್ತರ ಕರ್ನಾಟಕದಲ್ಲಿ 1.44 ಲಕ್ಷ ಮತಗಳನ್ನು ಗಳಿಸಿದೆ.
ಚುನಾವಣೆ ನಡೆದ 22 ಜಿಲ್ಲೆಗಳ ಪೈಕಿ ಮುಂಬೈ ಕರ್ನಾಟಕದ 6 ಮತ್ತು ಹೈದರಾಬಾದ್ ಕರ್ನಾಟಕದ 6 ಸೇರಿ ಉತ್ತರ ಕರ್ನಾಟಕ ಭಾಗದ ಒಟ್ಟು 12 ಜಿಲ್ಲೆಗಳಲ್ಲಿ ಚುನಾವಣೆ ನಡೆದ 1,731 ವಾರ್ಡ್‌ಗಳಲ್ಲಿ 1.44 ಲಕ್ಷ ಮತಗಳನ್ನು ಪಡೆದು 99 ಸ್ಥಾನಗಳನ್ನು ಜೆಡಿಎಸ್ ಗೆದ್ದಿದೆ.
ಮುಂಬೈ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 1,137 ವಾರ್ಡ್‌ಗಳಲ್ಲಿ 55,300 ಮತಗಳನ್ನು ಗಳಿಸಿ ಜೆಡಿಎಸ್ 35 ಸ್ಥಾನಗಳನ್ನು ಗೆದ್ದಿದೆ. ಅದೇ ರೀತಿ ಹೈ ಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಯಲ್ಲಿ 594 ವಾರ್ಡ್‌ಗಳಲ್ಲಿ 89,349 ಮತಗಳನ್ನು ಪಡೆದು 6 ಸ್ಥಾನಗಳನ್ನು ಜೆಡಿಎಸ್ ಗಳಿಸಿದೆ. ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ 89 ವಾರ್ಡ್‌ಗಳಲ್ಲಿ 16, ದಾವಣಗೆರೆ ಜಿಲ್ಲೆಯ 59 ವಾರ್ಡ್‌ಗಳಲ್ಲಿ 5 ಸ್ಥಾನಗಳನ್ನು ಗೆದ್ದಿದೆ. ಬಳ್ಳಾರಿ, ಚಾಮರಾಜನಗರ, ಉಡುಪಿ ಜಿಲ್ಲೆಗಳಲ್ಲಿ 5 ಸಾವಿರ ಮತಗಳನ್ನು ಪಡೆದಿದ್ದರೂ ಜೆಡಿಎಸ್ ಇಲ್ಲಿ ಒಂದು ಸ್ಥಾನವೂ ಗೆದ್ದಿಲ್ಲ.
ಕಾಂಗ್ರೆಸ್‌ಗೆ ಶೇ.33
ಒಟ್ಟು 48.43 ಲಕ್ಷ ಮತದಾರರ ಪೈಕಿ 30.50 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೇ. 63.80ರಷ್ಟು ಮತದಾನವಾಗಿದೆ. ಚಲಾವಣೆಯಾದ ಒಟ್ಟು ಮತಗಳಲ್ಲಿ 10.23 ಲಕ್ಷ ಮತಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದರೆ, ಬಿಜೆಪಿ 9.48 ಲಕ್ಷ ಮತ್ತು ಜೆಡಿಎಸ್ 5.04 ಲಕ್ಷ ಮತಗಳನ್ನು ಪಡೆದುಕೊಂಡಿವೆ. ಶೇ.15.09ರಂತೆ ಪಕ್ಷೇತರರು 4.60ಲಕ್ಷ ಮತಗಳನ್ನು ಪಡೆದಿದ್ದಾರೆ. ಉಳಿದಂತೆ ಎಸ್‌ಡಿಪಿಐ 29 ಸಾವಿರ, ಬಿಎಸ್‌ಪಿ 26 ಸಾವಿರ, ಕೆಪಿಜೆಪಿ 16 ಸಾವಿರ, ಸಮಾಜವಾದಿ ಪಕ್ಷ 5,276, ಎಡಪಕ್ಷಗಳು ನಾಲ್ಕು ಸಾವಿರ ಮತಗಳನ್ನು ಗಳಿಸಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ 1.38 ಲಕ್ಷ ಮತಗಳನ್ನು ಪಡೆದಿದೆ. ಮಹಾನಗರ ಪಾಲಿಕೆ ಸೇರಿ ಚುನಾವಣೆ ನಡೆದ 4 ಸ್ಥಳೀಯ ಸಂಸ್ಥೆಗಳ 134 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. 27 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ 1.08 ಲಕ್ಷ ಮತಗಳನ್ನು ಗಳಿಸಿದೆ. 43 ಸ್ಥಾನಗಳನ್ನು ಪಡೆದಿರುವ ಜೆಡಿಎಸ್ 1.03 ಲಕ್ಷ ಮತಗಳನ್ನು ಗಳಿಸಿದೆ.
26 ಸಾವಿರ “ನೋಟಾ’
ಚುನಾವಣೆ ನಡೆದ 22 ಜಿಲ್ಲೆಗಳ 105 ಸ್ಥಳೀಯ ಸಂಸ್ಥೆಗಳ 2,662 ವಾರ್ಡ್‌ಗಳಲ್ಲಿ ಒಟ್ಟು 26,896 ಮಂದಿ “ನೋಟಾ’ ಚಲಾಯಿಸಿದ್ದಾರೆ. ಇದು ಒಟ್ಟು ಮತದಾನದ ಶೇ.0.88ರಷ್ಟಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು 5,242 ಮಂದಿ ನೋಟಾ ಚಲಾಯಿಸಿದ್ದು, ಮೈಸೂರಿನಲ್ಲಿ 3,155, ಬೆಳಗಾವಿಯಲ್ಲಿ 2,453 ನೋಟಾ ಚಲಾವಣೆಯಾಗಿದೆ. ಈ ಜಿಲ್ಲೆಗಳಲ್ಲಿ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ವಾರ್ಡ್‌ಗಳಲ್ಲಿ ಚುನಾವಣೆ ನಡೆದಿತ್ತು. ಹಾಗಾಗಿ ಸಹಜವಾಗಿ ನೋಟಾ ಸಹ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ
MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.