ಎರಡು ಕ್ಷೇತ್ರಕ್ಕೆ ಜೆಡಿಎಸ್ ತೃಪ್ತಿ
Team Udayavani, May 16, 2018, 11:14 AM IST
ಬೆಂಗಳೂರು: ರಾಜಧಾನಿಯ ಮತದಾರ ಜೆಡಿಎಸ್‌ಗೆ ಒಲಿಯುವುದಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದ್ದು, 26 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿ ಜೆಡಿಎಸ್ ತೃಪ್ತಿಪಟ್ಟುಕೊಳ್ಳುವಂತಾಗಿದೆ. 2008ರ ಚುನಾವಣೆಲ್ಲಿ ಒಂದೇ ಒಂದು ಕ್ಷೇತ್ರ, 2013ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಜೆಡಿಎಸ್, ಈ ಬಾರಿ ಎರಡು ಕ್ಷೇತ್ರಗಳಿಗೆ ಸೀಮಿತಗೊಂಡಿದೆ.
2008ರಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಜೆಡಿಎಸ್, 2013ರಲ್ಲಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಈಬಾರಿ ಮಹಾಲಕ್ಷ್ಮಿ ಲೇಔಟ್‌ನಿಂದ ಗೋಪಾಲಯ್ಯ ಹಾಗೂ ದಾಸರಹಳ್ಳಿಯಲ್ಲಿ ಆರ್.ಮಂಜುನಾಥ್ ಗೆಲುವು ಸಾಧಿಸಿದ್ದಾರೆ.
ಚಾಮರಾಜಪೇಟೆ ಹಾಗೂ ಪುಲಿಕೇಶಿನಗರದಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದ ಜಮೀರ್ ಅಹಮದ್ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಗೆಲುವು ಸಾಧಿಸಿದ್ದಾರೆ. ಆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲು ಅನುಭವಿಸಿದೆ. ಜಮೀರ್ ಅಹಮದ್ ವಿರುದ್ಧ ಅಲ್ತಾಫ್ಖಾನ್, ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ವಂಚಿತರಾಗಿದ್ದ ಪ್ರಸನ್ನಕುಮಾರ್ ಅವರನ್ನು ಕರೆತಂದು ಜೆಡಿಎಸ್ ಟಿಕೆಟ್ ಕೊಟ್ಟು ಸ್ಪರ್ಧೆಗೆ ಇಳಿಸಿದರೂ ಜಯ ದಕ್ಕಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Crime: ವಾಟರ್ ಹೀಟರ್‌ನಿಂದ ಸ್ನೇಹಿತನ ಕೊಲೆಗೈದವ ಸೆರೆ
State Govt: ಸರ್ಕಾರದ ಬಳಿಯೇ ಇದೆ ಪಂಚಾಯತ್ ಅಧಿಕಾರ!
Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ
Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್
Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.