Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ
Team Udayavani, May 4, 2024, 10:44 AM IST
ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಾಲೀಕರ ಕಣ್ಣು ತಪ್ಪಿಸಿ ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ಆಭರಣ ಗಳನ್ನು ಕಳವು ಮಾಡಿದ್ದ ಮನೆಗೆಲಸದಾಕೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಮೂಲದ ಮಂಜುಳಾ (38) ಬಂಧಿತೆ. ಈಕೆಯಿಂದ 34 ಲಕ್ಷ ರೂ. ಮೌಲ್ಯದ 363 ಗ್ರಾಂ ಚಿನ್ನ- ವಜ್ರಾಭರಣಗಳು, 176 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 1 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಜೆ.ಪಿ.ನಗರ 1ನೇ ಹಂತದ ಅಪಾರ್ಟ್‌ಮೆಂಟ್ ನಿವಾಸಿ ರೇಖಾ ಕಿರಣ್ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಪ್ರಕರಣ?: ದೂರುದಾರೆ ರೇಖಾ ಮತ್ತು ಪತಿ ಕಿರಣ್ ಹಿರಿಯ ನಾಗರಿಕರಾಗಿದ್ದು, ಜೆ.ಪಿ.ನಗರ 1ನೇ ಹಂತದ ಅಪಾ ಟ್ ìಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿ ದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ರೇಖಾ ದಂಪತಿಯ ಮನೆಯಲ್ಲಿ ಆರೋಪಿ ಮಂಜುಳಾ ಕಳೆದ 8 ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದಳು. ಮಾ.27 ರಂದು ರೇಖಾ ದಂಪತಿಯ ಮೊಮ್ಮಗನ ನಾಮಕರಣವಿತ್ತು. ನಾಮಕರಣ ಕಾರ್ಯ ಕ್ರಮ ಮುಗಿದ ಬಳಿಕ ರೇಖಾ ತಮ್ಮ ಚಿನ್ನಾಭರಣ ಮತ್ತು ವಜ್ರದ ಆಭರಣ ಹಾಗೂ ನಗದನ್ನು ಲೆಕ್ಕ ಮಾಡಿ ಬೀರುವಿನಲ್ಲಿ ಇಟ್ಟಿದ್ದರು. ಏ.4 ರಂದು ಬೀರು ತೆರೆದು ಆಭರಣಗಳನ್ನು ಪರಿಶೀಲಿಸಿ ದಾಗ 4 ಚಿನ್ನದ ಬಳೆಗಳು ಸೇರಿ ಇತರೆ ಆಭರಣಗಳು ಹಾಗೂ 50 ಸಾವಿರ ರೂ. ನಗದು ನಾಪತ್ತೆಯಾಗಿತ್ತು. ಅದರಿಂದ ಅನುಮಾನಗೊಂಡ ರೇಖಾ ದಂಪತಿ ನಾಮಕರಣದ ದಿನದಿಂದ ಮನೆ ಕೆಲಸದ ಮಂಜುಳಾ ಹೊರತು ಪಡಿಸಿ ಬೇರೆ ಯಾರು ಬಂದಿಲ್ಲ. ಹೀಗಾಗಿ ಆಕೆಯನ್ನು ಕೇಳಿದ್ದಾರೆ. ಆದರೆ, ಆಕೆ ತಾನೂ ಕಳವು ಮಾಡಿಲ್ಲ ಎಂದು ಹೇಳಿದ್ದರು.
ಆದರೂ ಆಕೆ ಮೇಲೆ ಅನುಮಾನಗೊಂಡು ಜೆ.ಪಿ.ನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಂಜುಳಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು.
ಒಂದೊಂದೇ ಆಭರಣ ಕಳವು! : ಮಾಲೀಕರಾದ ರೇಖಾ ಮನೆಯಲ್ಲಿ ಬೀರುವಿನ ಕೀ ಇರಿಸುವ ಜಾಗವನ್ನು ಆರೋಪಿ ಮಂಜುಳಾ ನೋಡಿಕೊಂಡಿದ್ದಳು. ಕೆಲಸಕ್ಕೆ ಬಂದಾಗ ಬೀರು ತೆರೆದು ಒಂದೊಂದೇ ಆಭರಣಗಳನ್ನು ಕಳವು ಮಾಡಿದ್ದಳು. ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ 2 ಬಳೆಗಳನ್ನು ಗಂಡನ ಮೂಲಕ ಮಾರಾಟ ಮಾಡಿದ್ದಳು. ಬಾಕಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಚಾಮರಾಜನಗರದ ತವರು ಮನೆಯಲ್ಲಿ ಇರಿಸಿದ್ದಳು ಎಂಬುದು ಗೊತ್ತಾಗಿದೆ.
ಸದ್ಯ ಆಕೆ ನೀಡಿದ ಮಾಹಿತಿ ಮೇರೆಗೆ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.