ಸಾಮಾಜಿಕ ಹೊಣೆಗಾರಿಕೆಯಡಿ ಜೋಗ ಅಭಿವೃದ್ಧಿ
Team Udayavani, Sep 16, 2018, 12:03 PM IST
ಬೆಂಗಳೂರು: ತಾಯ್ನಾಡಿನ ಅಭಿವೃದ್ಧಿಗಾಗಿ ಎಲ್ಲ ರೀತಿಯಿಂದಲೂ ಕೊಡುಗೆ ನೀಡಲು ಬದ್ಧ. ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಹಲವು ಯೋಜನೆಗಳನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಯುಎಇ ಎನ್‌ಎಂಸಿ ಹೆಲ್ತ್ ಸೆಂಟರ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಬಿ.ಆರ್.ಶೆಟ್ಟಿ ಹೇಳಿದರು.
ನಗರದ ಕೆ.ಜಿ.ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ-2018 ಸ್ವೀಕರಿಸಿ ಮಾತನಾಡಿದರು.
ಜಗತ್ತಿಗೆ ಕೊಡುಗೆ ನೀಡುವ ಮುನ್ನ ಹುಟ್ಟಿದ ಊರಿಗೆ ಕೊಡುಗೆ ನೀಡು ಎಂದು ತಾಯಿ ಯಾವಾಗಲು ಹೇಳುತ್ತಿದ್ದರು. ಆದರೆ, ಅವರು ಈಗ ನಮ್ಮೊಂದಿಗೆ ಇಲ್ಲ. ಆದರೆ, ಅಣ್ಣ, ತಮ್ಮ ಸೇರಿದಂತೆ ಇಡೀ ಕುಟುಂಬವೇ ಇಲ್ಲಿದೆ ಎಂದು ಅಮ್ಮನ ನೆನೆದು ಭಾವುಕರಾದರು.
ಜೋಗ ಜಲಪಾತದ ಸಮಗ್ರ ಅಭಿವೃದ್ಧಿ ಯೋಜನೆಗೆ ಹಣ ಒದಗಿಸಲು ರಾಜ್ಯದ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸಿದ್ದಾರೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಮಾಡುವ ಯೋಜನೆಯೂ ಇದೆ. ಉಡಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಸುಸಜ್ಜಿತ ಆಸ್ಪತ್ರೆ ಆರಂಭಿಸಿದ್ದೇವೆ.
ಇದರ ಜತೆಗೆ ರಾಜ್ಯದ ಅಭಿವೃದ್ಧಿಗಾಗಿ ಇನ್ನಷ್ಟು ಯೋಜನೆಗಳನ್ನು ಕೈಗೊಳ್ಳುವ ಬಯಕೆ ಇದೆ. ಭಾರತದ ಅಭಿವೃದ್ಧಿಗೆ 75 ಬಿಲಿಯನ್ ಡಾಲರ್ ಹಣ ವಿನಿಯೋಗಿಸಿದ್ದೇನೆ. ಜೋಗ ವಿಶ್ವದ ಹತ್ತು ಅದ್ಭುತ ಸ್ಥಳಗಳಲ್ಲಿ ಒಂದಾಗಿದೆ. ಅದರ ಸಮಗ್ರ ಅಭಿವೃದ್ಧಿಗೆ ಹೂಡಿಕೆ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.
ಮನಸ್ಥಿತಿ ಬದಲಾಗಬೇಕು: ಜೋಗದಲ್ಲಿ ಹರಿದು ನಿರುಪಯುಕ್ತವಾಗುತ್ತಿದ್ದ ನೀರು ಸರ್.ಎಂ.ವಿಶ್ವೇಶ್ವರಯ್ಯ ಅವರ ಆಲೋಚನಾ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಹಾಗೆಯೇ ನಮ್ಮಲ್ಲಿರುವ ಮನಸ್ಥಿತಿ ಬದಲಾದಾಗ ಮಾತ್ರ ನಿರುಪಯುಕ್ತ ವಸ್ತುವನ್ನು ಉಪಯುಕ್ತವಾಗಿ ಪರಿವರ್ತಿಸಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ಮಹಿಳೆಯರಿಗೆ ಸಮಾನವಾದ ಅವಕಾಶಗಳು ಲಭ್ಯವಾಗಬೇಕು. ನಮ್ಮಲ್ಲಿರುವ ಸಂಕುಚಿತ ಮನೋಭಾಗ ದೂರಾದಾಗ ಸಮಗ್ರ ಅಭಿವೃದ್ಧಿ ಸಾಧ್ಯ ಮತ್ತು ಆಮೂಲಕ ವಿಶ್ವೇಶ್ವರಯ್ಯನವರ ಕನಸು ಈಡೇರಿಸಿದಂತಾಗುತ್ತದೆ ಎಂದರು.
ಸಂಖ್ಯೆ ಯಾವತ್ತೂ ಮುಖ್ಯವಲ್ಲ. ಶಕ್ತಿಗಿಂತ ಯುಕ್ತಿ ಮುಖ್ಯ ಎಂಬುದನ್ನು ವಿಶ್ವೇಶ್ವರಯ್ಯ ತೋರಿಸಿಕೊಟ್ಟಾರೆ. ನೂರಾರು ಕುರಿಗಳು ಒಟ್ಟಿಗೆ ಇದ್ದರೂ, ಒಂದು ಹುಲಿ ಕಂಡು ಹೆದರಿ ಓಡುತ್ತವೆ, ಹಾಗೇ ಸಿಂಹಕ್ಕೆ ಶಕ್ತಿ ಇದ್ದರೂ, ಸರ್ಕಸ್‌ನಲ್ಲಿ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ನಾವು ಬದಲಾಗಬೇಕು. ಇದಕ್ಕಾಗಿ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಮತ್ತು ಸವಾಲುಗಳನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಭಾರತದ ನೈಜ ಇತಿಹಾಸವನ್ನು ಅರಿಯಬೇಕಿದೆ. ಮಕ್ಕಳ ಇತಿಹಾಸ ಪುಟದಲ್ಲಿ ನೈಜ ಇತಿಹಾಸ ಕಣ್ಮರೆಯಾಗಿದೆ. ಶಿವಾಜಿ, ಕೃಷ್ಣದೇವರಾಯ ಮೊದಲಾದವರ ಬಗ್ಗೆ ಒಂದು ಪುಟಕ್ಕಿಂತ ಜಾಸ್ತಿ ವರ್ಣನೆ ಇರುವುದಿಲ್ಲ. ಮುಸ್ಲಿಂ ರಾಜ್ಯ ಸಾಧನೆ, ಶ್ಲಾಘನೆ ಹತ್ತಾರು ಪುಟಗಳಷ್ಟಿರುತ್ತದೆ. ಈ ಪರಿಸ್ಥಿತಿ ಬದಲಾಗಬೇಗು ಎಂದರು.
ತಮಿಳುನಾಡು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಂತ ಕಾವೇರಿ ನೀರೇ ಕುಡಿಯಲು ಬೇಕೆನ್ನುವುದು ಸರಿಯೇ ಎಂಬುದನ್ನು ಚಿಂತಿಸಬೇಕು. ಕರ್ನಾಟಕದ ಜನರಿಗೂ ಕುಡಿಯುವ ನೀರು ಬೇಕಲ್ಲವೇ. ಹೀಗಾಗಿ ಸಮುದ್ರದ ನೀರನ್ನು ಶುದ್ಧೀಕರಿಸಿ ಉಪಯೋಗಿಸ ಬಹುದಾದ ಹೊಸ ತಂತ್ರಜ್ಞಾನ ಅಳವಡಿಸಿ, ಕುಡಿಯುವ ನೀರಿನ ಸಮಸ್ಯೆಗೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಮೇಲ್ಮಟ್ಟಕ್ಕೆ ಏರಿದವರೆಲ್ಲಾ ಬ್ರಹ್ಮರಲ್ಲ. ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಇತರರನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಬಿ.ಆರ್.ಶೆಟ್ಟಿಯವರ ಸಾಧನೆ ಸಮಾಜಕ್ಕೆ ಮಾದರಿ ಎಂದರು. ಉದ್ಯಮಿ ಆರ್.ಎನ್.ಶೆಟ್ಟಿ, ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ, ಉಪಾಧ್ಯಕ್ಷರಾದ ಸಿ.ಆರ್. ಜನಾರ್ಧನ, ಪೆರಿಕಲ್ ಎಂ. ಸುಂದರ್, ಮಾಜಿ ಅಧ್ಯಕ್ಷರಾದ ಕೆ.ರವಿ , ರಾಮಸ್ವಾಮಿ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.