ಜುಬ್ಬಾ, ಪೈಜಾಮಾ, ಬ್ಯಾಗೇ ಆಸ್ತಿ !


Team Udayavani, Jan 12, 2020, 3:06 AM IST

jubba

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ ಡಾ.ಚಿದಾನಂದಮೂರ್ತಿಯವರು ಕನ್ನಡ ಕಟ್ಟುವ ಕಾಯಕವೇ ಕೈಲಾಸ ಎಂದು ನಂಬಿ ಬಹು ಎತ್ತರಕ್ಕೆ ಬೆಳೆದವರು. ಅಸಂಖ್ಯಾತ ಅಭಿಮಾನಿ, ಗೆಳೆಯರನ್ನು ಸಂಪಾದಿಸಿದವರು. ಸಂಶೋಧನೆ ಕ್ಷೇತ್ರದ ಬಹುದೊಡ್ಡ ಸಾಧಕ.

ಕನ್ನಡಕ್ಕೆ ಧಕ್ಕೆ ಬಂದಾಗ, ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ ಎಂದೆನಿಸಿದಾಗ, ಕನ್ನಡಕ್ಕೆ ಸಂಬಂಧಿಸಿದ ಪುರಾತನ ಶಾಸನ, ವಿಗ್ರಹ, ಸ್ಮಾರಕದ ಸಂಶೋಧನೆಯಾದಾಗ, ಟಿಪ್ಪು ಜಯಂತಿ ವಿವಾದ ಕೇಳಿ ಬಂದಾಗ ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿದಾನಂದಮೂರ್ತಿಯವರು ಸ್ವತಃ ಕೈಯಾರೆ ಬರೆದಿದ್ದ ಹೇಳಿಕೆ ಕೊಡುತ್ತಿದ್ದರು. ಒಮ್ಮೊಮ್ಮೆ ಪ್ರತಿಗಳು ಸಾಕಾಗದಿದ್ದಾಗ ಮತ್ತೆ ಕೈಯಲ್ಲೇ ಬರೆದು ಪತ್ರಿಕಾ ಕಚೇರಿಗಳಿಗೆ ಕಳುಹಿಸಿದ್ದೂ ಇದೆ.

ಬಿಳಿ ಬಣ್ಣದ ಜುಬ್ಬಾ, ಪೈಜಾಮಾ, ಊರುಗೋಲು, ಚಳಿ ಇದ್ದರೆ ಸ್ವೆಟರ್‌, ಕುಲಾಯಿ ಹಾಕಿಕೊಂಡು ಬರುತ್ತಿದ್ದ ಚಿದಾನಂದಮೂರ್ತಿಯವರು ಒಂದು ಬ್ಯಾಗ್‌ ನೇತಾಕಿಕೊಂಡು ಅದರಲ್ಲಿ ತಾವು ಮಾತನಾಡುವ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇರಿಸಿಕೊಂಡಿರುತ್ತಿದ್ದರು. ತಾವು ಪ್ರತಿಪಾದಿಸುತ್ತಿದ್ದ ವಿಚಾರಕ್ಕೆ ನಿಷ್ಠರಾಗಿರುತ್ತಿದ್ದರು. ಹೇಳಿಕೆಗೆ ಬದ್ಧರಾಗುತ್ತಿದ್ದರು.

ಕನ್ನಡದ ವಿಚಾರಗಳಷ್ಟೇ ಅಲ್ಲದೆ ಲಿಂಗಾಯಿತ ಪ್ರತ್ಯೇಕ ಧರ್ಮ, ಟಿಪ್ಪು ಜಯಂತಿ, ಶಾಲಾ ಪಠ್ಯಕ್ರಮ ವಿಚಾರಗಳಲ್ಲೂ ತನ್ನ ಅನಿಸಿಕೆ- ಅಭಿಪ್ರಾಯ ಯಾವುದೇ ಅಂಜಿಕೆ ಇಲ್ಲದೆ ಮುಲಾಜಿಗೆ ಒಳಗಾಗದೆ ಖಡಕ್‌ ಆಗಿ ಹೇಳುತ್ತಿದ್ದರು. ಅಭಿಮಾನಿಗಳು, ಶಿಷ್ಯರು ಎಷ್ಟೇ ಒತ್ತಾಯ ಮಾಡಿದರೂ ಚಿ.ಮೂ ಅವರು ಕೊನೆವರೆಗೂ ಮೊಬೈಲ್‌ ಬಳಸಲೇ ಇಲ್ಲ.

ತಮ್ಮ ಸಂಪರ್ಕ ಮಾಡಬೇಕಾದರೆ ಹೇಗೆ ಎಂದು ಅವರನ್ನು ಕೇಳಿದರೆ, ಕನ್ನಡದಲ್ಲೇ ಸೊನ್ನೆ ಎಂಟು ಸೊನ್ನೆ ಎರಡು ಮೂರು ಮೂರು ಸೊನ್ನೆ ಸೊನ್ನೆ ಆರು ಎಂಟು ಏಳು (080-23300687) ಎಂದು ಹೇಳುತ್ತಿದ್ದರು. ಯಾವುದಾದರೂ ವಿಷಯದ ಬಗ್ಗೆ ಪ್ರತಿಕ್ರಿಯೆ, ಅಭಿಪ್ರಾಯ, ಸಂದರ್ಶನ ನೀಡಲು ಕೇಳಿದಾಗ, ಎಷ್ಟು ಹೊತ್ತು ಮಾತನಾಡಲಿ, ಎರಡು ನಿಮಿಷ, ಐದು ನಿಮಿಷ, ಹತ್ತು ನಿಮಿಷ, ಇಪ್ಪತ್ತು ನಿಮಿಷ ಎಂದು ಕೇಳುತ್ತಿದ್ದರು.

ನಾನು, ಚಿದಾನಂದ ಮೂರ್ತಿ, ಸಂಶೋಧಕ….: ಒಮ್ಮೆ ಪ್ರಸ್‌ಕ್ಲಬ್‌ನಲ್ಲಿ ಯುವ ಪತ್ರಕರ್ತರೊಬ್ಬರು ಡಾ.ಚಿದಾನಂದಮೂರ್ತಿ ಅವರ ಬಗ್ಗೆ ತಿಳಿಯದೆ ನಿಮ್ಮನ್ನು ಪರಿಚಯ ಮಾಡಿಕೊಳ್ಳಿ ಎಂದು ಹೇಳಿಬಿಟ್ಟರು. ಅಲ್ಲಿದ್ದ ಇತರೆ ಹಿರಿಯ ಪತ್ರಕರ್ತರು ಏನಪ್ಪಾ ನಿನಗೆ ಚಿಮೂ ಗೊತ್ತಿಲ್ಲವಾ? ಎಂದು ದಬಾಯಿಸಿದರು.

ಆದರೆ, ಚಿದಾನಂದಮೂರ್ತಿ ಅವರು, ನಾನು ಚಿದಾನಂದಮೂರ್ತಿ, ಸಂಶೋಧಕ, ಕನ್ನಡ ಹೋರಾಟಗಾರ ಎಂದು ಸಮಾಧಾನದಿಂದಲೇ ಪರಿಚಯಿಸಿಕೊಂಡಿದ್ದರು. ಆ ನಂತರದ ಪ್ರತಿ ಪತ್ರಿಕಾಗೋಷ್ಠಿಯಲ್ಲೂ ಮೊದಲಿಗೆ ತಾವೇ ಸ್ವಯಂ ಪ್ರೇರಿತವಾಗಿ ನಾನು ಚಿದಾನಂದಮೂರ್ತಿ ಸಂಶೋಧಕ ಹಾಗೂ ಕನ್ನಡ ಹೋರಾಟಗಾರ ಎಂದು ಪರಿಚಯಿಸಿಕೊಳ್ಳಲು ಪ್ರಾರಂಭಿಸಿದರು.

* ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.