ವಿಷದ ಬಾಟಲಿಯಿಂದ ನ್ಯಾಯ ಸಿಕ್ಕಿತು!
Team Udayavani, Mar 16, 2018, 11:43 AM IST
ಬೆಂಗಳೂರು: ತಾನು ಮಾಡದ ತಪ್ಪಿಗೆ ಹತ್ತಾರು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ನಿವೃತ್ತ ಪಾಲಿಕೆ ನೌಕರರೊಬ್ಬರು ತಮಗೆ ದಯಾಮರಣ ನೀಡುವಂತೆ ಮೇಯರ್ಗೆ ಪತ್ರ ಬರೆದಿದ್ದು, ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ವಿಷದ ಬಾಟಲಿ ಸಮೇತ ಬಿಬಿಎಂಪಿಗೆ ಆಗಮಿಸಿ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದರು.
ರೂಗಿಯವರಿಗೆ ಬೆದರಿದ ಪಾಲಿಕೆಯ ಆಡಳಿತ ವಿಭಾಗದ ಅಧಿಕಾರಿಗಳು ಕೂಡಲೇ ರೂಗಿ ಅವರ ಕಡತ ತರಿಸಿಕೊಂಡು ವಿಲೇವಾರಿಗೆ ಆಯುಕ್ತರಿಗೆ ಕಳುಹಿಸಿದರು. ಚಿಕ್ಕಪೇಟೆಯ ಸಹಾಯಕ ಕಂದಾಯ ಕಚೇರಿಯಲ್ಲಿ ಕಂದಾಯ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಜಿ.ರೂಗಿ ಅವರು ವಿದ್ಯುತ್ ಉಪಕರಣಗಳ ಖರೀದಿಯಲ್ಲಿ ಪಾಲಿಕೆಗೆ ವಂಚಿಸಿದ್ದಾರೆ ಎಂದು ಆರೋಪಿಸಿ 1991ರಲ್ಲಿ ಅಮಾನತುಗೊಳಿಸಲಾಗಿತ್ತು. ಆದರೆ, 1994ರಲ್ಲಿ ಇಲಾಖಾ ವಿಚಾರಣೆ ಹಾಗೂ 2017ರಲ್ಲಿ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ.
ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಮುಂದಾಗಿರಲಿಲ್ಲ. ಹಲವಾರು ಸಾರಿ ಪಾಲಿಕೆ ಕಚೇರಿಗೆ ಅಲೆದು ಬೇಸತ್ತಿದ್ದ ಅವರು, ಗುರುವಾರ ವಿಷದ ಬಾಟಲಿಯೊಂದಿಗೆ ಪಾಲಿಕೆಗೆ ಆಗಮಿಸಿದ್ದರು. ತಮಗೆ ಬರಬೇಕಾದ ಬಡ್ತಿ ಹಾಗೂ ಪಿಂಚಣಿ ಸೌಲಭ್ಯಗಳನ್ನು ಶೀಘ್ರ ನೀಡದಿದ್ದರೆ ಪಾಲಿಕೆಯ ಆವರಣದಲ್ಲಿಯೇ ವಿಷ ಸೇವಿಸುವುದಾಗಿ ಬೆದರಿಕೆ ಹಾಕಿದರು.
ಇದರಿಂದ ಬೆಚ್ಚಿದ ಅಧಿಕಾರಿಗಳು ಕಡತವನ್ನು ತರಿಸಿಕೊಂಡು ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಅನುಮತಿ ನೀಡುವಂತೆ ಆಯುಕ್ತರಿಗೆ ಕಡತ ರವಾನಿಸಿದರು. ನಂತರ ಮಾತನಾಡಿದ ರೂಗಿ ಅವರು, ಇಲಾಖಾ ವಿಚಾರಣೆಯಲ್ಲಿ ತಪ್ಪು ಮಾಡಿಲ್ಲ ಎಂದು ಸಾಬೀತಾದರೂ, ನನಗೆ ಬರಬೇಕಾದ ಸೌಲಭ್ಯಗಳನ್ನು ನೀಡಲಿಲ್ಲ.
ಇದೀಗ ನ್ಯಾಯಾಲಯ ಆದೇಶದ ನಂತರವೂ ಬಡ್ತಿ ಹಾಗೂ ಪಿಂಚಣಿ ಸೌಲಭ್ಯ ನೀಡಲು ವಿಳಂಬ ಮಾಡುತ್ತಿದ್ದಾರೆ. ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಹಣದ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ವಿಷ ಸೇವಿಸಲು ಸಿದ್ಧನಾಗಿ ಪಾಲಿಕೆಗೆ ಬಂದಿದ್ದೆ, ಇದೀಗ ಆಡಳಿತ ವಿಭಾಗದ ಉಪ ಆಯುಕ್ತರು ಕಡತವನ್ನು ಆಯುಕ್ತರ ಸಹಿಗೆ ಕಳುಹಿಸಿದ್ದಾರೆ ಎಂದು ನಿಟ್ಟುಸಿರು ಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.