ಕಾಡು ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ
Team Udayavani, Nov 24, 2018, 11:40 AM IST
ಬೆಂಗಳೂರು: ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ನಗರದ ಮಲ್ಲೇಶ್ವರದ ಕಾಡುಮಲ್ಲೇಶ್ವರ ಬಯಲು ರಂಗ ಮಂಟಪದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆಗೆ ಶುಕ್ರವಾರ ಚಾಲನೆ ದೊರೆಯಿತು. ಕಾಡು ಮಲ್ಲಿಕಾರ್ಜುನ ದೇವಾಲಯದ ಮುಂಭಾಗದಲ್ಲಿರುವ ನಂದಿ ತೀರ್ಥಕ್ಕೆ ಕಡಲೆಕಾಯಿ ಮಾಲೆ ಅರ್ಪಿಸಿ ಬಸವಣ್ಣನಿಗೆ ಕಡಲೆಕಾಯಿ ನೈವೇದ್ಯ ಮಾಡುವ ಮೂಲಕ ಕಡಲೆಕಾಯಿ ಪರಿಷೆಗೆ ಮೇಯರ್ ಗಂಗಾಂಬಿಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಹಬ್ಬ, ಜಾತ್ರೆ ವಾತವರಣ ಮಾಯವಾಗುತ್ತಿದೆ. ಹೀಗಾಗಿ, ಪರಿಷೆಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಲಾಗುತ್ತಿದೆ. ಜತೆಗೆ ಕಡಲೆಕಾಯಿ ಪರಿಷೆಯಿಂದ ಕಡಲೆಕಾಯಿ ಬೆಳೆಗಾರರಿಗೂ ಅನುಕೂಲವಾಗಲಿದೆ ಎಂದರು.
ಶಾಸಕ ಡಾ.ಅಶ್ವತ್ಥನಾರಾಯಣ ಮಾತನಾಡಿ, ಅಕ್ಕಪಕ್ಕದ ಊರುಗಳಿಂದ ಬಂದ ರೈತರು ತಾವು ಬೆಳೆದ ಕಡಲೆ ಕಾಯಿಗಳನ್ನು ಪರಿಷೆಗೆ ತರುತ್ತಾರೆ. ಇದರಿಂದ ಅವರಿಗೆ ಉತ್ತಮ ವ್ಯಾಪಾರ ಆಗುವ ಜತೆಗೆ ನಗರದ ಜನರಿಗೆ ನೇರವಾಗಿ ರೈತರಿಂದಲೇ, ಕಡಿಮೆ ಬೆಲೆಗೆ ಕಡಲೆಕಾಯಿ ಸಿಗುತ್ತವೆ ಎಂದರು.
ಕಡಲೆಕಾಯಿ ಪರಿಷೆ ಅಂಗವಾಗಿ ಕಾಡುಮಲ್ಲೇಶ್ವರ ಬಯಲು ರಂಗಮಂಟಪದ ಬಳಿ ಇರುವ ಕಾಡು ಮಲ್ಲಿಕಾರ್ಜುನ ಸ್ವಾಮಿ, ನಂದಿತೀರ್ಥ, ಶಿವಲಿಂಗ, ಲಕ್ಷ್ಮೀ ನರಸಿಂಹಸ್ವಾಮಿ, ಭ್ರಮರಾಂಭ, ಗಂಗಮ್ಮ, ಗಣೇಶ ಸೇರಿದಂತೆ ವಿವಿಧ ದೇವರಿಗೆ ವಿಶೇಷವಾಗಿ ಕಡಲೇಕಾಯಿಂದ ಮಾಡಿರುವ ಹಾರ ಹಾಗೂ ಕಡಲೆಬೀಜದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನಕ್ಕೆ ಭೇಟಿಕೊಟ್ಟ ಭಕ್ತರು ಕಡಲೆಕಾಯಿ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವರ ದರ್ಶನ ಪಡೆದರು.
250ಕ್ಕೂ ಹೆಚ್ಚು ಮಳಿಗೆ: ಪರಿಷೆಯಲ್ಲಿ ಮಂಡ್ಯ, ತುಮಕೂರು, ಕೋಲಾರ, ಶಿರಾ, ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಹೊಸಕೋಟೆ, ಯಲಹಂಕ ಸೇರಿದಂತೆ ಇನ್ನಿತದ ಭಾಗಗಳಿಂದ ರೈತರು, ಕಡಲೇಕಾಯಿ ವ್ಯಾಪಾರಿಗಳು ಭಾಗವಹಿಸಿದ್ದು, 250ಕ್ಕೂ ಹೆಚ್ಚು ಮಳಿಗೆಗಳಿವೆ. ನಾಟಿ, ಸಾಮ್ರಾಟ್, ಜೆಎಲ್ ಮತ್ತಿತರ ತಳಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆ.
ಒಂದು ಸೇರು ಕಡಲೆಕಾಯಿಗೆ 30ರಿಂದ 40 ರೂ, ಕೆ.ಜಿ 56ರಿಂದ 60 ರೂ. ಬೆಲೆಯಿದೆ. ಜತೆಗೆ ಬೇಯಿಸಿದ, ಹುರಿದ, ಹಸಿ, ಒಣಗಿಸಿದ ಕಡಲೆಕಾಯಿಗಳು ಪರಿಷೆಯಲ್ಲಿವೆ. ಇದರೊಂದಿಗೆ ಮಕ್ಕಳ ಆಟಿಕೆಗಳು, ತಿಂಡಿ-ತಿನಿಸು, ಕಬ್ಬು, ಹಣ್ಣುಗಳು, ಮಣ್ಣಿನ ಮತ್ತು ಪಿಒಪಿ ಬೊಂಬೆಗಳು, ಗೃಹೋಪಯೋಗಿ ಮತ್ತು ಹೆಣ್ಣುಮಕ್ಕಳ ಅಲಂಕಾರಿಕ ಆಭರಣಗಳ ಮಾರಾಟವೂ ನಡೆಯುತ್ತಿದೆ.
ಮೊದಲ ಬಾರಿ ಚಿತ್ರ ಪರಿಷೆ: ಈ ಬಾರಿ ವಿಶೇಷವಾಗಿ ಕಡಲೆಕಾಯಿ ಪರಿಷೆಯಲ್ಲಿ ಚಿತ್ರ ಪರಿಷೆ ಆಯೋಜಿಸಲಾಗಿದೆ. ಇಲ್ಲಿ ವಿವಿಧ ಕಲಾವಿದರ ಕೈಬರಹಗಳಿಂದ ಮೂಡಿರುವ ನೃತ್ಯಗಾರ್ತಿ, ರಾಧೆ, ವನ್ಯ ಹಾಗೂ ಸಾಕು ಪ್ರಾಣಿ, ನಿಸರ್ಗ, ದೇವರ ಚಿತ್ರಗಳ ಪ್ರದರ್ಶನದ ಜತೆಗೆ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಪರಿಷೆಗೆ ಬಂದವರು ಕಡಲೆಕಾಯಿ ಸವಿಯುತ್ತಾ ಚಿತ್ರಪರಿಷೆಯಲ್ಲಿ ಸುತ್ತಾಡಿ ಕಲಾವಿದರ ಕಲೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು.
ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ ಮಾರಾಟವಲ್ಲದೆ, ಚಿತ್ರ ಕಲಾವಿದರಿಗೂ ಕೂಡ ವೇದಿಕೆ ಕಲ್ಪಿಸಲಾಗಿದೆ. ಇದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ….ಶಂಕರ್ ಅಭಿಪ್ರಾಯಪಟ್ಟರು.
ಪರಿಷೆಗೆ ಮಳೆ ಅಡ್ಡಿ: ನಗರದಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ಕಾಡುಮಲ್ಲೇಶ್ವರದ ಕಡಲೆಕಾಯಿ ಪರಿಷೆಗೆ ಅಡ್ಡಿಯಾಗಿದೆ. ಶುಕ್ರವಾರ ಮುಂಜಾನೆಯಿಂದಲೂ ಪರಿಷೆಯಲ್ಲಿ ಪಾಲ್ಗೊಂಡಿದ್ದ ಕಡಲೆಕಾಯಿ ಮಾರಾಟಗಾರರು, ಸಾರ್ವಜನಿಕರು, ಭಕ್ತರಿಗೆ ಮಳೆಯಿಂದ ಸಾಕಷ್ಟು ತೊಂದರೆಯಾಯಿತು. ಮಳೆ ಹೀಗೇ ಮುಂದುವರಿದರೆ ಪರಿಷೆಗೆ ಆಗಮಿಸಿರುವ ಕಡಲೆಕಾಯಿ ವ್ಯಾಪಾರಿಗಳು ಹಾಗೂ ರೈತರ ವ್ಯಾಪಾರ ಕುಸಿಯುವ ಆತಂಕ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.