ಸೌಹಾರ್ದತೆ ಕಾಪಾಡಲು ಕ್ರಿಮಿನಲ್ ಪ್ರಕರಣ ವಾಪಸ್
Team Udayavani, Jun 18, 2021, 7:02 PM IST
ಬೆಂಗಳೂರು: ಶಾಸಕರು, ಸಚಿವರುಸೇರಿ ರಾಜಕಾರಣಿಗಳು ಮತ್ತುಜನಪ್ರತಿನಿಧಿಗಳ ವಿರುದ್ಧದಕ್ರಿಮಿನಲ್ ಪ್ರಕರಣಗಳನ್ನು ವಾಪಸ್‌ಪಡೆದುಕೊಳ್ಳುವುದರ ಉದ್ದೇಶಸಮಾಜದಲ್ಲಿ ಸೌಹಾರ್ದತೆ ಕಾಪಾಡುವುದಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಕಳೆದ 7 ವರ್ಷದಲ್ಲಿ ರಾಜ್ಯಾದ್ಯಂತ ವಿವಿಧ ಕ್ರಿಮಿನಲ್ ಕೋಟ್ìನಲ್ಲಿ ವಿಚಾರಣಾ ಹಂತದಲ್ಲಿದ್ದ ಒಟ್ಟು 570 ಕ್ರಿಮಿನಲ್‌ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂದುಆರೋಪಿಸಿ ಪೀಪಲ್ಸ… ಯೂನಿಯನ್ ಫಾರ್ ಸಿವಿಲ್‌ಲಿಬರ್ಟಿಸ್ (ಪಿಸಿಯುಎಲ್) ಮತ್ತು ವಕೀಲೆ ಸುಧಾಕಾಟ್ವಾ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಿ ಗುರುವಾರ ಸರ್ಕಾರ ಈಸಮರ್ಥನೆ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರುಲಿಖೀತ ಆಕ್ಷೇಪಣೆಗಳನ್ನು ಸಲ್ಲಿಸಿದರು. ಅಲ್ಲದೇ ಈಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರ ಅಡ್ವೋಕೇಟ್‌ಜನರಲ್ ವಾದ ಮಂಡಿಸಲಿದ್ದಾರೆ. ಅದಕ್ಕಾಗಿಕಾಲಾವಕಾಶ ನೀಡಬೇಕೆಂದು ಕೋರಿದರು. ಇದನ್ನುದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನುಜುಲೈ 15ಕ್ಕೆ ಮುಂದೂಡಿತು.
ಸರ್ಕಾರ ಹೇಳಿದ್ದು: ಕಾವೇರಿ ಹಾಗೂ ಮಹಾದಾಯಿನದಿ ನೀರು ಹಂಚಿಕೆ, ಮಂಡ್ಯದಲ್ಲಿ ಕಬ್ಬು ಬೆಳೆಗೆ ಬೆಂಬಲನಿಗದಿ,ಸಕ್ಕರೆ ಕಾರ್ಖಾನೆಯಿಂದ ಬಾಕಿ ಹಣ ಪಾವತಿ,ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ, ಆದಿವಾಸಿಗಳಒಕ್ಕಲೆಬ್ಬಿಸಿದ, ಮೈಸೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹನುಮ ಜಯಂತಿ ಆಚರಣಾ ರ್ಯಾಲಿ, ಚಿಕ್ಕಮಗಳೂರಿನದತ್ತಪೀಠ ವಿವಾದ ಸೇರಿದಂತೆ ವಿವಿಧ ವಿಚಾರಗಳಲ್ಲಿ ಪ್ರತಿಭಟನೆ, ಮುಷ್ಕರನಡೆದಿದೆ. ಈ ಸಂಬಂಧ ರೈತರು, ರೈತ ನಾಯಕರು,ಶಾಸಕರು ಮತ್ತು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 2014ರಲ್ಲಿ 2,2016ರಲ್ಲಿ 22, 95, 2018ರಲ್ಲಿ 112 ಮತ್ತು 2020ರಲ್ಲಿ279 ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟನಿರ್ಣಯ ಕೈಗೊಂಡಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.ಅಲ್ಲದೆ, ಸಮಾಜದಲ್ಲಿ ಸೌಹಾರ್ದತೆನೆಲೆಗೊಳಿಸುವ ಸದುದ್ದೇಶದಿಂದ ಈ ಎಲ್ಲಾ ಪ್ರಕರಣ ಹಿಂಪಡೆಯಲಾಗಿದೆ.
ಸರ್ಕಾರದ ಈ ಕ್ರಮವು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ)ಸೆಕ್ಷನ್ 321ರ ಪ್ರಕಾರ ಸಂಬಂಧಪಟ್ಟ ನ್ಯಾಯಾಲಯದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಆದರೆ,ಸೆಕ್ಷನ್ 321ನ್ನು ಉಲ್ಲಂ ಸಿಲ್ಲ. ಅಪರಾಧನ್ಯಾಯ ಆಡಳಿತವನ್ನು ದುರ್ಬಲಗೊಳಿಸುವಂತಿಲ್ಲ ಮತ್ತು ನ್ಯಾಯಾಲಯದ ಅಧಿಕಾರವನ್ನು ಅತಿಕ್ರಮಿಸಿಲ್ಲ. ಹೀಗಾಗಿ, ಕೆಲ ಆರೋಪಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕ್ರಿಮಿನಲ್‌ಪ್ರಕರಣ ಹಿಂಪಡೆಯಲಾಗಿದೆ ಎಂಬ ಅರ್ಜಿದಾರರ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸರ್ಕಾರಸಮರ್ಥನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.