ಕಂಬಳ, ಎತ್ತಿನಗಾಡಿ, ಕೊಬ್ಬರಿ ಹೋರಿ ಸ್ಪರ್ಧೆಗೆ ತಿದ್ದುಪಡಿ ವಿಧೇಯಕ
Team Udayavani, Feb 9, 2017, 3:45 AM IST
ಬೆಂಗಳೂರು: ಹೈ ಕೊರ್ಟ್‌ನ ನಿಷೇಧದ ನಡುವೆಯೂ ಕರಾವಳಿ ಭಾಗದಲ್ಲಿ ಜನಪ್ರೀಯ ಕ್ರೀಡೆ ಕಂಬಳ, ಉತ್ತರ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಗಳಾದ ಎತ್ತಿನ ಗಾಡಿ ಓಟ, ಕೊಬ್ಬರಿ ಹೋರಿ ಓಟ ಕ್ರೀಡೆಗಳನ್ನು ನಡೆಸಲು ಅವಕಾಶ ಮಾಡಿಕೊಡುವ ಕರ್ನಾಟಕ ಪ್ರಾಣಿಗಳನ್ನು ಹಿಂಸಾಚಾರ ತಡೆಗಟ್ಟುವ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿಧಾನ ಮಂಡಲ ಅಸ್ತು ಎಂದರೆ ಸ್ಥಗಿತಗೊಂಡಿದ್ದ ಕ್ರೀಡೆಗಳು ತಕ್ಷಣವೇ ಪುನಾರಂಭಗೊಳ್ಳಲಿವೆ.
ಕಾನೂನಿನ ಕರಡು ಪ್ರತಿ ಉದಯವಾಣಿಗೆ ಲಭ್ಯವಾಗಿದ್ದು, ದೇಸಿ ತಳಿ ಸಂರಕ್ಷಣೆ ಮತ್ತು ತಳಿ ಅಭಿವೃದ್ಧಿ ಉದ್ದೇಶದಿಂದ ಕಂಬಳ, ಎತ್ತಿನಗಾಡಿ ಓಟ ಹಾಗೂ ಕೊಬ್ಬರಿ ಹೋರಿ ಕ್ರೀಡೆಗೆ ಕಾನೂನಿನ ಮಾನ್ಯತೆ ನೀಡಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.
ಏನಿದು ವಿಧೇಯಕ: ಕೇಂದ್ರ ಸರ್ಕಾರದ ಪ್ರಾಣಿಗಳಿಗೆ ಹಿಂಸೆ ನೀಡುವ ಅಧಿನಿಯಮ 1960ನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವಂತೆ ತಿದ್ದುಪಡಿ ಮಾಡಲು ಪಶು ಸಂಗೋಪನ ಇಲಾಖೆ ವಿಧೇಯಕ ಸಿದ್ದಪಡಿಸಿದೆ. ವಿಧೇಯಕದಲ್ಲಿ ಪ್ರಮುಖವಾಗಿ ಎರಡು ಮಹತ್ವದ ಆಚರಣೆಗಳಿಗೆ ಅನುಮತಿ ನೀಡುವ ಕುರಿತು ಪ್ರಸ್ತಾಪಿಸಲಾಗಿದ್ದು, ರಾಜ್ಯ ಸರ್ಕಾರವು ಅಧಿಸೂಚಿಸುವ ದಿನಗಳು ಮತ್ತು ಸ್ಥಳಗಳಲ್ಲಿ ರಾಜ್ಯದಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವ ಕ್ರೀಡೆ ಎಂದು ಕಂಬಳ ಆಚರಣೆಗೆ ಕಾನೂನಿನಲ್ಲಿ ಅನುಮತಿ ನೀಡುವುದು. ಮೂಲ ಅಧಿನಿಯಮದ ಪ್ರಕರಣ 27 ಬಿ ಮತ್ತು 28 ಕ್ಕೆ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಆಚರಿಸಲ್ಪಡುವ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ರಾಜ್ಯದ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಯ ಭಾಗವಾಗಿ ಮರದ ನೊಗದ ನೆರವಿನಿಂದ ಎತ್ತುಗಳನ್ನು ಚಕ್ಕಡಿಗೆ ಕಟ್ಟಿ ಓಡಿಸುವ ಕ್ರೀಡೆಗೆ ಅನುಮತಿ ನೀಡುವುದು ಕಾನೂನು ತಿದ್ದುಪಡಿಯ ಪ್ರಮುಖ ಅಂಶವಾಗಿವೆ. ತಿದ್ದುಪಡಿಗೆ ಸರ್ಕಾರ ನೀಡಿರುವ ಕಾರಣ: ಸಂಪ್ರದಾಯ ಮತ್ತು ರಾಜ್ಯದ ಸಂಸ್ಕೃತಿಯನ್ನು ಉತ್ತೇಜಿಸುವ ದೃಷ್ಠಿಯಿಂದ ಮತ್ತು ದೇಸಿ ತಳಿಯ ಕೋಣಗಳ ಸಂರಕ್ಷಣೆ ಮತ್ತು ಯೋಗಕ್ಷೇಮದ ಜೊತೆಗೆ ಭದ್ರತೆ ಒದಗಿಸಲು ಕಂಬಳ ಆಚರಣೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಅದೇ ರಿತಿ ಎತ್ತಿನ ಗಾಡಿ ಓಟದ ಸ್ಪರ್ಧೆಗೂ ಕೂಡ ದೇಶಿ ತಳಿಯ ಜಾನುವಾರು ಸಂರಕ್ಷಣೆ ಮತ್ತು ಉತ್ತೇಜನ ನೀಡುವ ದೃಷ್ಠಿಯಿಂದ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಸರ್ಕಾರ ವಿಧೇಯಕ ತಿದ್ದುಪಡಿಗೆ ಕಾರಣ ನೀಡಿದೆ. ಆದರೆ, ಕಂಬಳ, ಎತ್ತಿನ ಗಾಡಿ ಸ್ಪರ್ಧೆ ನಡೆಸುವ ಜಾನುವಾರುಗಳ ಮಾಲೀಕರು ಆ ಪ್ರಾಣಿಗಳಿಗೆ ಅನಗತ್ಯ ಹಿಂಸೆ ನೀಡುವುದು, ಸಂಕಟ ನೀಡುವುದಿಲ್ಲ ಎಂಬ ಷರತ್ತು ನೀಡಿ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ.
ಪ್ರಾಣಿ ದಯಾ ಸಂಘ ಕಂಬಳ ಕ್ರೀಡೆ, ಕೋಣಗಳಿಗೆ ಚಿತ್ರ ಹಿಂಸೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಕಂಬಳ ನಿಷೇಧಿಸಬೇಕೆಂದು ಹೈ ಕೋರ್ಟ್ ಮೆಟ್ಟಿಲೇರಿತ್ತು, ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕಳೆದ ಎರಡು ವರ್ಷದಿಂದ ಕಂಬಳ ಸೇರಿದಂತೆ ಕೋಣ, ಎತ್ತುಗಳನ್ನು ಬಳಸಿ ಮನರಂಜನೆಗೆ ಆಡುವ ಕ್ರೀಡೆಗಳನ್ನು ನಿಷೇಧಿಸಿ ತೀರ್ಪು ನೀಡಿತ್ತು. ತಮಿಳುನಾಡಿನಲ್ಲಿ ಜಲ್ಲಿ ಕಟ್ಟು ನಡೆಸಲು ಇತ್ತೀಚೆಗೆ ಸುಪ್ರೀಂ ಕೋರ್ಟ್ ಪ್ರತಿಬಂಧಕ ಆದೇಶದ ನಡುವೆಯೂ ಸುಗ್ರೀವಾಜ್ಞೆ ಹೊರಡಿಸಿ ಜಲ್ಲಿ ಕಟ್ಟು ನಡೆಸಿದ್ದರಿಂದ ರಾಜ್ಯದಲ್ಲೂ ಸಹ ಕಂಬಳ, ಎತ್ತಿನ ಗಾಡಿ ಓಟ, ಕೊಬ್ಬರಿ ಹೋರಿ ಓಟ ಕ್ರೀಡೆ ನಡೆಸಲು ಕಾನೂನಿಗೆ ತಿದ್ದುಪಡಿ ತರಲು ಎಲ್ಲೆಡೆ ಒತ್ತಡ ಕೇಳಿ ಬಂದಿತ್ತು.
ಹೈಕೋರ್ಟ್ ಕಂಬಳ ಕ್ರೀಡೆಯ ನಿಷೇಧ ತೆರವುಗೊಳಿಸಬಹುದೆಂದು ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರ ಅದು ಸಾಧ್ಯವಾಗದಿದ್ದಾಗ, ಅಧಿವೇಶನದಲ್ಲಿಯೇ ಕ್ರೀಡೆಗೆ ನಡೆಸಲು ಅನುಕೂಲವಾಗುವಂತೆ ತಮಿಳು ನಾಡಿನ ಜಲ್ಲಿಕಟ್ಟು ಮಾದರಿಲ್ಲಿ ತಿದ್ದುಪಡಿ ತರುವುದಾಗಿ ಪ್ರಕಟಿಸಿತ್ತು. ಅದರಂತೆ ಕರಾವಳಿ ಭಾಗದ ಕಂಬಳ, ಉತ್ತರ ಕರ್ನಾಟಕದ ಎತ್ತಿನಗಾಡಿ ಓಟ, ಕೊಬ್ಬರಿ ಹೋರಿ ಕ್ರೀಡೆಗೆ ಕಾನೂನಿನಲ್ಲಿ ತಿದ್ದುಪಡಿ ತರಲು ರಾಜ್ಯದ ಜನತೆ ಹಾಗೂ ಜನ ಪ್ರತಿನಿಧಿಗಳು ಒತ್ತಡ ಹೇರಿದ್ದರು.
ಕೊಬ್ಬರಿ ಹೋರಿಗಿಲ್ಲ ಕಾನೂನು ?: ರಾಜ್ಯ ಸರ್ಕಾರ ಕಂಬಳ ಮತ್ತು ಎತ್ತಿನಗಾಡಿ ಓಟದ ಸ್ಪರ್ಧೆಗೆ ಕಾನೂನು ತಿದ್ದುಪಡಿಗೆ ಮುಂದಾಗಿದ್ದು, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಕ್ರಮಣ, ದೀಪಾವಳಿ ಮತ್ತು ಯುಗಾದಿ ಸಂದರ್ಭದಲ್ಲಿ ಆಚರಿಸಲ್ಪಡುವ ಕೊಬ್ಬರಿ ಹೋರಿ ಕ್ರೀಡೆಗೆ ಕಾನೂನಿನ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ಹಿಂದೇಟು ಹಾಕಿತ್ತು. ಕೊಬ್ಬರಿ ಓಟದ ಕ್ರೀಡೆಯಲ್ಲಿ ಗೂಳಿ ಹೋರಿಗಳನ್ನು ಬಳಸುವುದರಿಂದ ಅಲ್ಲಿಯೂ ಹೋರಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಅದನ್ನು ವಿಧೇಯಕದಲ್ಲಿ ಸೇರಿಸದಿರಲು ಸರ್ಕಾರ ನಿರ್ಧರಿಸಿತ್ತು. ಆದರೆ, ಉತ್ತರ ಕರ್ನಾಟಕ ಭಾಗದವರೇ ಆದ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೊಬ್ಬರಿ ಹೋರಿ ಸ್ಪರ್ಧೆಯನ್ನು ಸೇರಿಸುವಂತೆ ಪಟ್ಟು ಹಿಡಿದಾಗ, ಸರ್ಕಾರ ಸಭಾಧ್ಯಕ್ಷ ಸಲಹೆಯನ್ನು ಪರಿಗಣಿಸಿ ಕೊಬ್ಬರಿ ಹೋರಿ ಕ್ರೀಡೆಯನ್ನೂ ವಿಧೇಯಕದಲ್ಲಿ ಸೇರಿಸಲು ತೀರ್ಮಾನಿಸಿದೆ.
– ಶಂಕರ ಪಾಗೋಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ
BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!
Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ
Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್ ಜಾರಕಿಹೊಳಿ
Hubli: ನಮ್ಮ ನಾಯಕರ ತೇಜೋವಧೆಗೆ ಯತ್ನಿಸಿದರೆ ಒಟ್ಟಾಗಿ ಎದುರಿಸುತ್ತೇವೆ: ಎಚ್.ಕೆ.ಪಾಟೀಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ
KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ
BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!
Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ
Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.