ಕನ್ನಡ ಭಾಷಾಭಿವೃದ್ಧಿಗೆ ಶ್ರಮಿಸಿದ ಕಣ್ಮಣಿ


Team Udayavani, Jan 12, 2020, 3:10 AM IST

kannada

ಅಧ್ಯಯನಶೀಲತೆಗೆ ನನ್ನನ್ನು ಹಚ್ಚಿದ್ದರು…: ಹಿರಿಯ ಸಂಶೋಧಕ ಡಾ.ಎಂ.ಚಿದಾ ನಂದಮೂರ್ತಿ (ಚಿಮೂ) ನನ್ನ ಆತ್ಮೀಯ ಗುರುಗಳು. ಬಿಎ ಮತ್ತು ಎಂಎ ಓದುವಾಗ ನನಗೆ ಬಹುದೊಡ್ಡ ಆದರ್ಶ. ಡಾ.ಜಿ.ಎಸ್‌.ಶಿವರುದ್ರಪ್ಪ ಹಾಗೂ ಚಿಮೂ ಬೆಂಗಳೂರು ವಿವಿಯ ಕನ್ನಡ ವಿಭಾಗವನ್ನು ಕಟ್ಟಿಬೆಳೆಸಿದ ರೀತಿ ನಾಡಿಗೇ ಮಾದರಿ. ಭಾಷಾ ಶಾಸ್ತ್ರದ ಪ್ರಾಧ್ಯಾಪಕರಾಗಿ ಸಾಂಸ್ಕೃತಿಕ ಚರಿತ್ರೆ ಯನ್ನು ನಿರ್ವಚಿಸುವ ಪ್ರಾಧ್ಯಾಪ ಕರಾಗಿ ಚಿಮೂ ವಿಶೇಷ ಪಾಂಡಿತ್ಯವನ್ನು ಒಳಗೊಂಡವರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ‌ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಸ್ಮರಿಸಿದರು.

1969-72ರ ಅವಧಿಯಲ್ಲಿ ಅವರ ಶಿಷ್ಯನಾಗಿ ನಾನು ಪಡೆದಿದ್ದು ಅಪಾರ. ಬೆಂಗ ಳೂರು ವಿವಿ ಸೆಂಟ್ರಲ್‌ ಕ್ಯಾಂಪಸ್‌ನಲ್ಲಿದ್ದ ದಿನಗಳು ಅಲ್ಲಿನ ಗ್ರಂಥಾಲಯವೆಂದರೆ ಅದರ ಆರಂಭ ಮತ್ತು ಮುಚ್ಚುತ್ತಿದ್ದ ಅವ ಧಿಯು ಚಿಮೂ ಅವರ ಸಂಪೂರ್ಣ ಇರು ವಿಕೆಯ ಕಾಲಸೂಚಿಯಂತಿತ್ತು. 80ರ ನಂತರ ದಲ್ಲಿ ಕಂಡ ಬಲಪಂಥೀಯ ಆಲೋಚನೆ ಚಿಮೂ ಅವರನ್ನು ನಾವು ಆಗ ಅಂದರೆ ಆ ಶೈಕ್ಷಣಿಕ ವಾತಾವ ರಣದ ಸಂದರ್ಭದಲ್ಲಿ ಕಂಡಿರಲೇ ಇಲ್ಲ.

ಎಲ್ಲ ವಿದ್ಯಾರ್ಥಿ ಗಳನ್ನೂ ಸಮಾನ ಗೌರವದಲ್ಲಿ ಕಂಡು ಆಪ್ತತೆಯಲ್ಲಿ ನಡೆಸಿ ಕೊಳ್ಳುವ ಮೇಷ್ಟ್ರು ಆಗಿ, ನಮ್ಮ ಅನುಭವದಲ್ಲಿ ಮನೆಮಾಡಿ ಕೊಂಡಿ ದ್ದರು. ಇದು ನಡೆದಿದ್ದು 1970ರಲ್ಲಿ. ಒಂದು ದಿನ ಮೇಷ್ಟ್ರು ತಮ್ಮ ಚೇಂಬರ್‌ಗೆ ಕರೆದು ಅಮೆರಿ ಕದಿಂದ ಮನಃಶಾಸ್ತ್ರ , ಭಾಷಾ ಶಾಸ್ತ್ರಜ್ಞರೊಬ್ಬರು ಅಧ್ಯಯನ ಮಾಡಲು ಬರುತ್ತಿದ್ದಾರೆ. ಅವರನ್ನು ನಿಮ್ಮ (ಸಿದ್ದರಾಮಯ್ಯ ಅವರ ಹಳ್ಳಿ ತುಮ ಕೂರಿನ ಸಿಂಗಾಪುರ) ಹಳ್ಳಿಗೆ ಕರೆದೊಯ್ದು ನಿಮ್ಮ ಮನೆಯಲ್ಲೇ 20 ದಿನ ಊಟ-ವಸತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಕ್ಷೇತ್ರಾಧ್ಯ ಯನಕ್ಕೆ ನೆರವಾಗಬೇಕು ಎಂದು ಸೂಚಿಸಿದರು.

ಬಡ ಕುಟುಂಬದ ನಾನು ಆತಂಕ ದಲ್ಲೇ ಒಪ್ಪಿಕೊಂಡೆ. ಆದರೆ, ಬಂದ ವರು ಮೂವರು ಜನ. ಅದರಲ್ಲೊಬ್ಬಳು ಮಹಿಳೆ. ಅವರೆಲ್ಲರೂ ಹಳ್ಳಿಯಲ್ಲಿ ಹೊಂದಿ ಕೊಂಡು, ಅಲ್ಲಿನ 4-14 ವರ್ಷದೊಳಗಿನ ಮಕ್ಕಳ ಬುದ್ಧಿಮತ್ತೆ ಪರೀಕ್ಷೆ ಹಾಗೂ ಕ್ಷೇತ್ರಾ ಧ್ಯಯನ ನನ್ನ ಜೀವನದಲ್ಲಿ ಮರೆಯಲಾರದ ಕ್ಷಣ. ಈ ಅವಧಿಯಲ್ಲಿ ಗ್ರಾಮದೇವತೆ ಉತ್ಸವ, ತಮಟೆ, ಜನಪದ ಕತೆಗಳು ರಾತ್ರಿ ನಡೆ ಯು ತ್ತಿದ್ದವು. ಸುತ್ತಲಿನ ಹತ್ತಾರು ಹಳ್ಳಿಗಳ ಜನ ಊರು ಜಾತ್ರೆಯಂತೆ ಬೆರೆತು ಸಂಭ್ರಮಿಸಿತು.

ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ನನಗೆ ಅಧ್ಯಾಪಕ ಹುದ್ದೆಗೆ ಅವಕಾಶ ಸಿಕ್ಕಾಗ, ಚಿದಾನಂದಮೂರ್ತಿ ಅವರ ಮನೆಗೆ ಹೋಗಿ ಆಶೀರ್ವಾದ ಪಡೆದೆನು. ಆಗ ಅವರು ಹೇಳಿದ ಮಾತುಗಳು ನನ್ನ ವೃತ್ತಿ ಮತ್ತು ಸಾರ್ವಜನಿಕ ಜೀವನವನ್ನು ನಿರ್ದೇ ಶಿಸಿದ ಅರಿವಿನ ದಾರಿ ಎಂದು ನಾನು ನಂಬಿ ದ್ದೇನೆ. ನಾನು ಮಡಿಕೇರಿಯಲ್ಲಿ ಮಾಡಿದ ಬನಶಂಕರಿಯ ಪೆಟ್ಟಿಗೆ ಕುರಿತ ಕ್ಷೇತ್ರಾಧ್ಯಯನ ಚಿಮೂ ಅವರ ಪ್ರೇರಣೆ.

ಆದರೆ, ಗೋಕಾಕ್‌ ಚಳವಳಿಯ ನಂತರದಲ್ಲಿ ಕನ್ನಡ ಶಕ್ತಿ ಕೇಂದ್ರ ಕಟ್ಟಿಕೊಂಡ ನಮ್ಮ ಗುರುವಿನ ಚಿಂತನೆ, ಆಲೋಚನೆಗಳು ಅಸಮಾಧಾನ ಉಂಟು ಮಾಡುವ ರೀತಿಯ ಲ್ಲಿದ್ದವು. ಈ ಬಗ್ಗೆ ನೇರವಾಗಿ ನಾನು ಹೇಳಿದಾಗಲೂ ಅವರು ತಮ್ಮ ನಿಲುವು, ನಂಬಿಕೆಯನ್ನು ನಿಷ್ಠುರವಾಗಿ ಪ್ರತಿಪಾದಿ ಸುತ್ತಿದ್ದರು. ಆ ಶಟತ್ವದ ವರ್ತನೆ ಮೊದಮೊದಲು ಬೆರಗು ಹುಟ್ಟಿಸುವಂತಿತ್ತು. ಬರಬರುತ್ತ ಅವರ ಸೈದ್ಧಾಂತಿಕ ನಿಲುವುಗಳನ್ನು ವಿರೋಧಿಸುವ ನೆಲೆಗೆ ಕೊಂಡೊಯ್ಯಿತು. ಆದರೂ ನನ್ನ ಗುರುವಿನ ಪಾಂಡಿತ್ಯ, ಅಧ್ಯಯನಶೀಲತೆ ಬಗೆಗಿನ ಗೌರವ ಕಿಂಚಿತ್ತೂ ಕಡಿಮೆಯಾಗಿಲ್ಲ.

ನುಡಿದಂತೆ ನಡೆದ ಮೇಷ್ಟ್ರು: ಎಷ್ಟೋ ಜನ ಎಡಪಂಥೀಯ ಚಿಂತನೆಗಳನ್ನು ಇಟ್ಟುಕೊಂಡ ಮುಖವಾಡದಲ್ಲಿ ಮಹಾನ್‌ ಜಾತಿವಾದಿಗಳಾಗಿ, ಕೋಮು ಭಾವವನ್ನು ಆಳದಲ್ಲಿ ಹೊಂದಿದ ವರಾಗಿ ನಮ್ಮೆದುರಿಗೆ “ಹಿಪೋಕ್ರೇಟ್‌’ಗಳ ರೀತಿಯಲ್ಲಿ ಕಾಣಿಸುತ್ತಿದ್ದಾರೆ. ಆದರೆ, ಮೇಷ್ಟ್ರು ನುಡಿದಂತೆ ನಡೆ ದರು. ನಾವು ಒಪ್ಪದಿದ್ದರೂ ಅವರ ನಿಲುವು ದೃಢವಾಗಿತ್ತು.

ಎಷ್ಟೋ ಹುದ್ದೆ ಹುಡುಕಿಕೊಂಡು ಬಂದಾ ಗಲೂ ಗೌರವದಿಂದ ತಿರಸ್ಕರಿಸಿ, ಪ್ರಾಮಾಣಿಕತೆ ಉಳಿಸಿಕೊಂಡರು. ಟಿಪ್ಪು ಬಗೆಗಿನ ಅವರ ನಿಲುವು ಇವತ್ತಿಗೂ ನಾವು ಒಪ್ಪದ ನಿಲುವು. ಆದರೆ, ನಮ್ಮ ನಿಲುವನ್ನು ಅವರು ಅಷ್ಟೇ ನಿಷ್ಠುರವಾಗಿ ನಿರಾಕರಿ ಸುತ್ತಿದ್ದುದೂ ಸತ್ಯ. ಹೀಗಂತ ನಮ್ಮ ಗುರು-ಶಿಷ್ಯ ಸಂಬಂಧಕ್ಕೆ ಧಕ್ಕೆ ತಂದು ಕೊಳ್ಳಲಿಲ್ಲ. ಅದೇ ಆಪ್ತತೆ ಕೊನೆಯ ವರೆಗೂ ಉಳಿಸಿಕೊಂಡಿದ್ದರು.

ಸರ್ಕಾರಿ ಗೌರವ ಸ್ವೀಕರಿಸುತ್ತೇವೆ: ಇದು ನಮ್ಮ ಸಂಸಾರದ ನಷ್ಟವಲ್ಲ. ರಾಷ್ಟ್ರದ ನಷ್ಟ. ಚಿದಾನಂದಮೂರ್ತಿಯವರು ದೇಶದ ಆಸ್ತಿ. ಕರ್ನಾಟಕ, ಕನ್ನಡ, ಅದನ್ನು ಮೀರಿ ಭಾರತಿಯರಾಗಬೇಕು ಎನ್ನುತ್ತಿದ್ದವರು. ಮಾತೃಭಾಷೆಯನ್ನು ಯಾರು ಬಿಡಬಾರದು ಎಂಬುದು ಅವರ ಆಸೆಯಾಗಿತ್ತು. ನಾವು ಅವರಿಗೆ ವಿಭೂತಿ ಸಹ ಹಚ್ಚಿರಲಿಲ್ಲ. ಅವರು ಸಹ ಹಾಗೇ ಬದುಕಿದ್ದರು. ಪೂಜೆ ಸಹ ಅವರು ಮಾಡುತ್ತಿರಲಿಲ್ಲ. ಲಿಂಗಾ ಯತರಲ್ಲಿ ಊಳುವ ಪದ್ಧತಿ ಇದೆ.

ಆದರೆ, ಅವರ ಆಸೆಯನ್ನು ನಾವು ನೆರವೇರಿಸ ಬೇಕಿದೆ. ಸುತ್ತೂರು ಮಠದ ಶಿವರುದ್ರ ದೇಶಿಕೇಂದ್ರ ಸ್ವಾಮೀಜಿಯವರು ಭಾನು ವಾರ ಅಂತಿಮ ನಮನ ಸಲ್ಲಿಸಿದ ನಂತರ ಅಂತ್ಯಕ್ರಿಯೆ ನಡೆಯುತ್ತದೆ. ಸುಮ್ಮನಹಳ್ಳಿ ಚಿತಾಗಾರದಲ್ಲಿ ಯಾವುದೇ ವಿಧಾನ ಅನುಸರಿಸದೆ, ಪೂಜೆ ಮಾಡದೆ, ಅಂತ್ಯ ಸಂಸ್ಕಾರ ನಡೆಸಲಿದ್ದೇವೆ. ಸರ್ಕಾರಿ ಗೌರವ ಹೊರತ ಪಡಿಸಿ ಬೇರ್ಯಾವ ವಿಧಿ ವಿಧಾನ ಇರಲ್ಲ. ರಾಜ್ಯ ಸರ್ಕಾರ ಗೌರವ ಸೂಚಿಸಲು ನಿರ್ಧರಿಸಿದೆ. ಬೆಳಗ್ಗೆ 10.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಚಿದಾನಂದ ಮೂರ್ತಿಯವರ ಪುತ್ರ ವಿನಯ್‌ ಕುಮಾರ್‌ ತಿಳಿಸಿದರು.

ನಮ್ಮ ಅಣ್ಣ, ನಮ್ಮನ್ನು ತುಂಬಾ ಚನ್ನಾಗಿ ನೋಡಿಕೊಂಡಿದ್ದರು. ಇಷ್ಟು ದೊಡ್ಡವರಾದರು ಮಗು ಥರ ನೋಡಿಕೊಂದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ದಾಕ್ಷಾಯಿಣಿ, ಚಿಮೂ ಅವರ ಸಹೋದರಿ

ಕರ್ನಾಟಕ ಇತಿಹಾಸ, ಸಂಸ್ಕೃತಿ ಸೇರಿ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದ ಡಾ.ಎಂ.ಚಿದಾನಂದಮೂರ್ತಿ ಅವರು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆಯಲು ಪ್ರಮುಖ ಪಾತ್ರ ವಹಿಸಿದ್ದರು.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

ಕನ್ನಡದ ಸಾಕ್ಷಿಪ್ರಜ್ಞೆಯಾಗಿದ್ದ ಡಾ.ಚಿದಾನಂದಮೂರ್ತಿ ಕನ್ನಡ ಸಾಹಿತ್ಯ, ಸಂಶೋಧನೆ, ಭಾಷೆ, ನೆಲ-ಜಲ ಸಂಸ್ಕೃತಿ ಕುರಿತಾದ ಹೋರಾಟಕ್ಕೆ ಹೊಸ ಸಂಚಲನ ಮೂಡಿಸಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ.
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ಕನ್ನಡ ಶಾಸನಗಳ ಶಾಸ್ತ್ರೀಯ ಅಧ್ಯಯನ ಸೇರಿದಂತೆ ನಲವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳು, ನೂರಾರು ಸಂಶೋಧನಾ ಲೇಖನ ಬರೆದಿದ್ದ ಡಾ.ಚಿಮೂ, ನಿಜಕ್ಕೂ ಕನ್ನಡ ಮೂರ್ತಿಯೇ ಆಗಿದ್ದರು.
-ಡಾ.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ

ಸಾವಿರಾರು ವರ್ಷಕ್ಕೆ ನೆನಪಿರುವ ವಿಷಯ ಚಿಮೂ ಅವರ ಸಾಧನೆಯಿಂದ ನಮಗೆ ದೊರೆತಿದೆ. ಹುಟ್ಟಿದ ಪ್ರತಿಯೊಬ್ಬರೂ ಸಾಯಲೇಬೇಕು. ಆದರೆ, ಸಾಧನೆಗೆ ಸಾವಿಲ್ಲ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಕರ್ನಾಟಕದ ಹಿರಿಮೆಯನ್ನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋದವರು ಚಿಮೂ. ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಚಿಂತನೆ, ವಿಚಾರಧಾರೆ ಮುಂದಿನ ಪೀಳಿಗೆಗೆ ಪರಿಚಯಿಸೋಣ.
-ವಿ.ಸೋಮಣ್ಣ, ವಸತಿ ಸಚಿವ

ಚಿಮೂ ನಾಡು ಕಂಡ ಶ್ರೇಷ್ಠ ವಿದ್ವಾಂಸ, ಅದ್ಭುತ ಚಿಂತಕರು. ನೆಲ, ಜಲ, ಸಂಸ್ಕೃತಿಗಾಗಿ ಜೀವನ ಮುಡಿಪಾಗಿಟ್ಟಿದ್ದ ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ.
-ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

ಡಾ.ಚಿದಾನಂದ ಮೂರ್ತಿ ಅವರ ನಿಧನ ವಾರ್ತೆ ಕೇಳಿ ದುಃಖವಾಗಿದೆ. ವಿಜಯನಗರ ಸಾಮ್ರಾಜ್ಯದ ಪರಂಪರೆ ಹಾಗೂ ಇತಿಹಾಸವನ್ನು ಅವರು ತುಂಬಾ ಸುಂದರವಾಗಿ ಸಂಶೋಧಿಸಿದ್ದಾರೆ.
-ಮಾಧುಸ್ವಾಮಿ, ಕಾನೂನು ಸಚಿವ

ಇತಿಹಾಸ ತಜ್ಞ, ಅಪ್ರತಿಮ ಸಂಶೋಧಕ ಚಿದಾನಂದಮೂರ್ತಿ ಅವರ ನಿಧನದಿಂದ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
-ಶ್ರೀರಾಮುಲು, ಆರೋಗ್ಯ ಸಚಿವ

ಇತಿಹಾಸದ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತಿದ್ದ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರ ಬದುಕು, ವ್ಯಕ್ತಿತ್ವ ನಮಗೆ ಸ್ಫೂರ್ತಿದಾಯಕ. ರಾಷ್ಟ್ರ ಓರ್ವ ಮಹಾನ್‌ ಪರಿಚಾರಕನನ್ನು ಕಳೆದುಕೊಂಡಿದೆ.
-ಎಸ್‌.ಸುರೇಶ್‌ಕುಮಾರ್‌, ಸಚಿವ

ಲೇಖಕ, ಸಂಶೋಧಕ, ಚಿಂತಕ, ಇತಿಹಾಸಕಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚಿದಾನಂದಮೂರ್ತಿ ಅವರು ಕೊಟ್ಟ ಕೊಡುಗೆ ಅಪಾರ. ಹಂಪಿ ಸ್ಮಾರಕಗಳನ್ನು ಉಳಿಸುವ ಜತೆಗೆ ಅವುಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು.
-ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ

ಮಹಾನ್‌ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಚಿ.ಮೂ.ಅವರ ಅಗಲಿಕೆ ರಾಜ್ಯ ಮಾತ್ರವಲ್ಲ, ಇಡೀ ದೇಶಕ್ಕಾದ ನಷ್ಟ. ಸಾಹಿತ್ಯ ಮಾತ್ರವಲ್ಲದೆ, ಸಾಮಾಜಿಕ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದರು.
-ಎಂ.ಕೃಷ್ಣಪ್ಪ, ಮಾಜಿ ಸಚಿವ

ಕನ್ನಡ ಭಾಷಾಭಿವೃದ್ಧಿಗೆ ಚಿಮೂ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಅಗಲಿಕೆಯಿಂದ ನಮ್ಮ ಸಂಸ್ಕೃತಿ, ಭಾಷೆ, ರಾಷ್ಟ್ರಕ್ಕೆ ನಷ್ಟವಾಗಿದೆ. ನಾಡು-ನುಡಿಗೆ ಅವರ ಸೇವೆ ಚಿರಸ್ಮರಣೀಯ.
-ತೇಜಸ್ವಿನಿ ಅನಂತ್‌ಕುಮಾರ್‌, ಅದಮ್ಯ ಚೇತನ ಮುಖ್ಯಸ್ಥೆ

ಡಾ.ಚಿದಾನಂದಮೂರ್ತಿ ಅವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಮನಿಸಿ ಪಂಪಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಅವರ ಅಗಲಿಕೆಯಿಂದ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ.
-ಸೋಮಶೇಖರ್‌, ನಿವೃತ್ತ ಐಎಎಸ್‌ ಅಧಿಕಾರಿ

ಬದುಕಿನುದ್ದಕ್ಕೂ ಸಂಶೋಧನೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿ ಡಾ.ಚಿದಾನಂದಮೂರ್ತಿ. ಅವರ ಕುಟುಂಬ ವರ್ಗಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.
-ಶಿವರುದ್ರ ಸ್ವಾಮೀಜಿ, ಬೇಲಿಮಠ

ಡಾ.ಚಿದಾನಂದಮೂರ್ತಿ ತಾವು ನಂಬಿದ ವಿಚಾರದ ಬಗ್ಗೆ ಧೈರ್ಯವಾಗಿ, ಯಾವುದೇ ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದರು. ಟಿಪ್ಪು ಸುಲ್ತಾನ್‌ ಬಗೆಗಿನ ಅವರ ಸಂಶೋಧನೆ ಮರೆಯುವಂತಿಲ್ಲ.
-ಡಾ.ಎಂ.ಕೆ.ಶ್ರೀಧರ್‌, ಶಿಕ್ಷಣ ತಜ್ಞ

ಬೆಂಗಳೂರು ವಿಶ್ವವಿದ್ಯಾಲಯಕ್ಕೂ ಚಿ.ಮೂ ಅವರಿಗೂ ಬಹಳ ಗಾಢವಾದ ನಂಟಿದೆ. ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿಧನ ಕನ್ನಡ ನಾಡಿಗೆ ತುಂಬಲಾಗದ ನಷ್ಟ.
-ಡಾ.ಬಿ.ಕೆ.ರವಿ, ಬೆಂಗಳೂರು ವಿವಿ ಕುಲಸಚಿವ

ಟಾಪ್ ನ್ಯೂಸ್

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.