ಗುಂಜೂರುಪಾಳ್ಯದಲ್ಲಿ ಕನಕ ಜಯಂತಿ
Team Udayavani, Nov 27, 2018, 11:39 AM IST
ಮಹದೇವಪುರ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಯತ್ನಿಸಿದರು ಎಂದು ಕರ್ನಾಟಕ ಕುರುಬರ ಸಂಘದ ಉಪಾಧ್ಯಕ್ಷ ಆರ್.ರಾಮಕೃಷ್ಣಪ್ಪ ಹೇಳಿದರು.
ಕ್ಷೇತ್ರದ ವರ್ತೂರು ವಾರ್ಡ್‌ನ ಗುಂಜೂರುಪಾಳ್ಯದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ 531ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಕ್ತಿ ಬಂಡಾಯದ ಅರಸರಾಗಿದ್ದ ಕನಕದಾಸರು, ಜನಸಾಮಾನ್ಯರಿಗೆ ಅರ್ಥವಾಗುವ ಆಡು ಭಾಷೆಯಲ್ಲೇ ಕೀರ್ತನೆಗಳನ್ನು ರಚಿಸುವ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಾರೆ. ಇದೇ ವೇಳೆ ಕನ್ನಡ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ ಎಂದರು.
ಮಾಜಿ ಸಚಿವ, ನಟ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಅಚರಿಸಲಾಯಿತು. ಗುಂಜೂರುಪಾಳ್ಯದ ಮುಖಂಡರಾದ ನಾರಾಯಣಪ್ಪ, ಜಯಪ್ಪ, ಬಾಲಾಜಿ, ಮುನಿಕೃಷ್ಣ, ಶ್ರೀಧರ್, ಮುರಳಿ, ದೇವರಾಜ್, ನಾಗರಾಜ್, ರಾಮು, ಶ್ರೀನಿವಾಸ್, ಗಣೇಶ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.