ನೆಲದ ಮೇಲಲ್ಲ, ಆಗಸದಲ್ಲೂ ಕನ್ನಡ ಭಾಷೆಯ ತಾತ್ಸಾರ
Team Udayavani, Nov 1, 2018, 6:00 AM IST
ಬೆಂಗಳೂರು: ಕನ್ನಡ ಭಾಷೆ ಎಂದರೆ ನಮ್ಮವರಿಗೆ ತಾತ್ಸಾರ ಎಂಬ ಮಾತು ಕೇವಲ ಭೂಮಿ ಮೇಲಲ್ಲ. ಆಕಾಶದಲ್ಲಿ ಹಾರಾಡುವ ವಿಮಾನದಲ್ಲಿಯೂ ಇದೆ! ಪ್ರಾದೇಶಿಕ ವಾಯುಯಾನದಲ್ಲಿ ಕನ್ನಡವೇ ಮೊಳಗುತ್ತಿಲ್ಲ! ಕೇಂದ್ರ ಸರ್ಕಾರ “ಉಡಾನ್’ ಯೋಜನೆಯಡಿ
ಪ್ರಾದೇಶಿಕವಾಗಿ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಅದರಂತೆ ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಇತರ ನಗರಗಳ ನಡುವೆ ಅನೇಕ ಖಾಸಗಿ ಕಂಪನಿ ಗಳೂ ವಿಮಾನ ಹಾರಿಬಿಟ್ಟಿವೆ. ಆದರೆ, ಗಗನ ಸಖಿಯರು ಮಾತ್ರ ವಿಮಾನದಲ್ಲಿ ಕನ್ನಡವನ್ನೇ ಬಳಸುತ್ತಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳಲ್ಲಿ ಮಂಗಳೂರಿಗೆ ತೆರಳಬೇಕಿದ್ದರೆ, ಹಿಂದಿ, ಇಂಗ್ಲಿಷ್ ಅಥವಾ ಮಲಯಾಳಂನಲ್ಲಿ ಮಾತನಾಡುತ್ತಾರೆ. ಹುಬ್ಬಳ್ಳಿಗೆ ತೆರಳಿದರೆ, ಹಿಂದಿ,
ಇಂಗ್ಲಿಷ್ ಜೊತೆ ಮರಾಠಿ ಯಲ್ಲೂ ಮಾತಾಡುತ್ತಾರೆ. ಆದರೆ, ಕನ್ನಡ ಮಾತಾಡುವ ಗಗನಸಖಿ ಮಾತ್ರ ಕಾಣಿಸುತ್ತಲೇ ಇಲ್ಲ.
“ಪ್ರಯಾಣಿಕರು ನಮ್ಮೊಂದಿಗೆ ಯಾವ ಭಾಷೆ ಮಾತಾಡಬಹುದು?’ ಎಂದು ವಿಮಾನ ನೆಲದಿಂದ ಚಿಮ್ಮುವ ಮೊದಲು
ಗಗನಸಖೀಯರು, ಪ್ರಯಾಣಿಕರಿಗೆ ಸೂಚನೆ ನೀಡುವುದು ವಾಡಿಕೆ. ಇಂಗ್ಲಿಷ್, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ
ನ್ನಷ್ಟೇ ಅವರು ಆ ಕ್ಷಣ ಆಯ್ಕೆಯಾಗಿ ಪ್ರಯಾಣಿಕರ ಮುಂದಿಡುತ್ತಾರೆ.
ಕೇಂದ್ರಕ್ಕೆ ಮನವಿ ಪತ್ರ: ಕನ್ನಡ ಕುರಿತ ವಿಮಾನಯಾನ ಸಂಸ್ಥೆಗಳ ಈ ನಿರ್ಲಕ್ಷದ ಬಗ್ಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಕನ್ನಡ ಗ್ರಾಹಕರ ಕೂಟವು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರವನ್ನೂ ಬರೆದಿದೆ. ದೇಶೀಯವಾಗಿ ಸೇವೆ ನೀಡುವ ವಿಮಾನಗಳಲ್ಲಿ, ಪ್ರಾದೇಶಿಕ ಭಾಷೆ ಬಳಕೆ ಕಡ್ಡಾಯಗೊಳಿಸುವಂತೆ ಒತ್ತಾಯಿಸಿವೆ. ಅಲ್ಲದೆ, ರಾಜ್ಯದ ಸಂಸದರ ಗಮನಕ್ಕೂ ಈ
ವಿಚಾರವನ್ನು ತಂದಿದ್ದಾರೆ.
ವಿದೇಶಿ ವಿಮಾನಗಳಲ್ಲಿ ಕಂಡ ಕನ್ನಡ ಇಲ್ಲಿಲ್ಲ!
ಸಿಂಗಾಪುರದ ಕ್ಯಾಪೆ ಪೆಸಿಫಿಕ್, ಬ್ರಿಟೀಷ್ ಏರ್‌ವೆಸ್, ಫ್ರಾನ್ಸ್‌ನ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಗಳೂ ಕನ್ನಡದಲ್ಲಿಯೇ ಮೆನು ನೀಡುತ್ತಿವೆ. ಆದರೆ, ಕರುನಾಡಿನ ಆಗಸದಲ್ಲೇ ಕನ್ನಡ ಕಾಣಿಸುತ್ತಿಲ್ಲ
ಆನ್‌ಲೈನ್ ಅಭಿಯಾನ
ವಿಮಾನ ಯಾನ ಸಂಸ್ಥೆಗಳ ಕನ್ನಡ ನಿರ್ಲಕ್ಷ್ಯ ವಿರುದ್ಧ ಕನ್ನಡ ಗ್ರಾಹಕರ ಕೂಟದ ಸದಸ್ಯರು, “ಸರ್ವ್ ಇನ್ ಮೈ ಲಾಂಗ್ವೇಜ್’ ಹೆಸರಿನಲ್ಲಿ ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ. ಇದರೊಂದಿಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಬನವಾಸಿ ಬಳಗವೂ ಈ ಬಗ್ಗೆ ಟ್ವಿಟರ್ ಅಭಿಯಾನ ಆರಂಭಿಸಲು ನಿರ್ಧರಿಸಿದೆ.
ಈಗಿನ ತಂತ್ರಜ್ಞಾನ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅವರ ಮಾತೃ ಭಾಷೆಯಲ್ಲಿಯೇ ಕೇಳಿಸುವ ತಂತ್ರಜ್ಞಾನ ಇದೆ.
ವಿಮಾನಯಾನ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಗಬೇಕು.
ಅರುಣ್ ಜಾವಗಲ್, ಕನ್ನಡ ಗ್ರಾಹಕರ ಕೂಟ
ಶಂಕರ್ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.