ಕನ್ನಡ ಗ್ರಾಮಗಳ ಹೆಸರು ಬದಲು: ಖಂಡನೆ
Team Udayavani, Jun 27, 2021, 6:04 PM IST
ಬೆಂಗಳೂರು: ಕೇರಳ ಸರ್ಕಾರ ರಾಜ್ಯದಗಡಿಜಿಲ್ಲೆ ಕಾಸರಗೋಡಿನ ಮಂಜೇಶ್ವರಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಕನ್ನಡಗ್ರಾಮಗಳ ಹೆಸರನ್ನು ಬದಲಾಯಿಸಲು ಹೊರಟಿರುವ ಕ್ರಮವನ್ನು ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಖಂಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಕನ್ನಡಪ್ರದೇಶ ಗ್ರಾಮಗಳ ಐತಿಹಾಸಿಕ ಹೆಸರು ಬದಲಾವಣೆಸಲ್ಲದು. ಶತಮಾನಗಳ ಹಿಂದೆಯೇ ಕರ್ನಾಟಕದಸಾಹಿತ್ಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಒಗ್ಗೂಡಿಸಿ,ಆ ಗ್ರಾಮಗಳಿಗೆ ಕನ್ನಡದಹೆಸರುಗಳನ್ನು ನಾಮಕರಣ ಮಾಡಲಾಗಿದೆ.
ಆದರೆ ಈಗ ಅದನ್ನು ಬದಲಾಯಿಸಲು ಹೊರಟಿರುವ ಕೇರಳಸರ್ಕಾರದಕ್ರಮ ಸರಿಯಿಲ್ಲ ಎಂದು ತಿಳಿಸಿದ್ದಾರೆ.ಹಾಗೆಯೇ ಆ ಪ್ರದೇಶದಲ್ಲಿ ಕನ್ನಡ ಭಾಷೆಯನ್ನುಮಾತನಾಡುವವರು ಹೆಚ್ಚಿನಸಂಖ್ಯೆಯಲ್ಲಿದ್ದಾರೆ. ಅಂತಹ ಗ್ರಾಮಗಳ ಹೆಸರನ್ನು ಬದಲಾವಣೆಮಾಡುವ ಮೂಲಕ ಕನ್ನಡಿಗರಸ್ವಾಭಿಮಾನವನ್ನು ಕೆಣಕುವ ಕೆಲಸವನ್ನು ಕೇರಳ ಸರ್ಕಾರ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಗಡಿಭಾಗದ ಯಾವುದೇ ಸಮಸ್ಯೆಗಳಿಗೆಸಂಬಂಧಿಸಿದಂತೆ ಅತ್ಯಂತ ಸೂಕ್ಷ ¾ತೆ ಮತ್ತುಬದ್ಧತೆಯಿಂದ ನಡೆದುಕೊಳ್ಳ ಬೇಕಾಗಿರುವುದುಎರಡು ರಾಜ್ಯಗಳ ಜವಾಬ್ದಾರಿಯಾಗಿದೆ. ಇದನ್ನುಕೇರಳ ರಾಜ್ಯ ಅರಿತುಕೊಳ್ಳಬೇಕು. ಈ ಪ್ರಕ್ರಿಯೆಯನ್ನುಮುಂದುವರಿಸಿದರೆ ಕರ್ನಾಟಕ ಗಡಿ ಅಭಿವೃದ್ಧಿಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಸಂಘಟನೆಗಳೊಂದಿಗೆ ಜತೆಗೂಡಿ ಹೋರಾಟದ ಹಾದಿಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.