ರಾಜಣ್ಣನ ಪ್ರೀತಿಯ ಕಪಾಲಿ ಇನ್ನು ನೆನಪು
Team Udayavani, Oct 13, 2017, 6:00 AM IST
ಬೆಂಗಳೂರು: ಏಷ್ಯಾದ ಅತೀ ದೊಡ್ಡ ಚಿತ್ರಮಂದಿರ ಎಂದು ಖ್ಯಾತಿ ಗಳಿಸದ್ದ ಬೆಂಗಳೂರಿನ ಕಪಾಲಿ ಚಿತ್ರಮಂದಿರವು ಇನ್ನು ನೆನಪಷ್ಟೇ. ಬುಧವಾರ ರಾತ್ರಿ ಪ್ರದರ್ಶನವಾದ “ಹುಲಿರಾಯ’ ಚಿತ್ರವೇ, ಈ ಚಿತ್ರಮಂದಿರದ ಕೊನೆಯ ಚಿತ್ರ. ಸದ್ಯದಲ್ಲೇ ಈ ಚಿತ್ರಮಂದಿರವನ್ನು ಒಡೆಯಲಿದ್ದು, ಇಲ್ಲಿ ಒಂದು ಬೃಹತ್ ಮಾಲ್ ತಲೆ ಎತ್ತಲಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಚಿತ್ರರಂಗಕ್ಕೂ, ಕಪಾಲಿ ಚಿತ್ರಮಂದಿರಕ್ಕೂ ಅವಿನಾಭಾವ ನಂಟು ಎಂದರೆ ತಪ್ಪಿಲ್ಲ. 1968ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿ ಅವರಿಂದ ಉದ್ಘಾಟನೆಗೊಂಡ ಕಪಾಲಿ ಚಿತ್ರಮಂದಿರದಲ್ಲಿ ಮೊದಲ ಚಿತ್ರವಾಗಿ ಡಾ ರಾಜಕುಮಾರ್ ಅಭಿನಯದ “ಮಣ್ಣಿನ ಮಗ’ ಪ್ರದರ್ಶನವಾಗಿತ್ತು. ಅದೇ ಆ ಚಿತ್ರಮಂದಿರದಲ್ಲಿ ನೂರು ದಿನ ಪ್ರದರ್ಶನಗೊಂಡ ಮೊದಲ ಚಿತ್ರವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಸಾವಿರಾರು ಚಿತ್ರಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದವು. 1465 ಆಸನಗಳಿದ್ದ ಈ ಬೃಹತ್ ಚಿತ್ರಮಂದಿರವು ಏಷ್ಯಾದಲ್ಲೇ ಅತೀ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬೇರೆ ಚಿತ್ರಮಂದಿರದಲ್ಲಿ ನೂರು ದಿನ ಓಡುವುದೂ ಒಂದೇ, ಕಪಾಲಿಯಲ್ಲಿ 50 ದಿನ ಓಡಿದರೂ ಒಂದೇ ಎಂಬ ಮಾತು ಚಿತ್ರರಂಗದಲ್ಲಿ ಜನಜನಿತವಾಗಿತ್ತು.
ಹಲವು ವೈಶಿಷ್ಟéಗಳ ಚಿತ್ರಮಂದಿರ: ಡಾ. ರಾಜಕುಮಾರ್ ಅಭಿನಯದ “ಚಲಿಸುವ ಮೋಡಗಳು’, “ಹೊಸ ಬೆಳಕು’, “ಭಕ್ತ ಪ್ರಹ್ಲಾದ’ ಸೇರಿದಂತೆ ಹಲವು ಚಿತ್ರಗಳು, ಕಪಾಲಿಯಲ್ಲಿ ಪ್ರದರ್ಶನ ಕಂಡಿದ್ದು ವಿಶೇಷ. ಡಾ. ರಾಜ್ ಅವರ ಕೊನೆಯ ಚಿತ್ರವಾದ “ಶಬ್ಧವೇಧಿ’ ಸಹ ಅಲ್ಲೇ ಬಿಡುಗಡೆಯಾಗಿತ್ತು. “ಭಕ್ತ ಪ್ರಹ್ಲಾದ’ ಪ್ರದರ್ಶನದ ಸಂದರ್ಭದಲ್ಲಿ ನೆರೆಯ ಗಂಗಾರಾಂ ಕಟ್ಟಡ ನೆಲಕ್ಕುರುಳಿದರೆ, “ಚಲಿಸುವ ಮೋಡಗಳು’ ಚಿತ್ರಕ್ಕಾಗಿ ಕಪಾಲಿ ಚಿತ್ರಮಂದಿರದೆದುರು ಬೃಹತ್ ಕಟೌಟ್ ನಿಲ್ಲಿಸಲಾಗಿತ್ತು. ಇನ್ನು “ಶಬ್ಧವೇಧಿ’ ಬಿಡುಗಡೆಯ ಸಂದರ್ಭದಲ್ಲಿ ಪ್ರದರ್ಶನದಲ್ಲಿ ಅಡಚಣೆಯುಂಟಾದಾಗ, ಸಾಕಷ್ಟು ಗಲಾಟೆಗಳಾಗಿದ್ದವು. ಡಾ. ರಾಜಕುಮಾರ್ ಅಲ್ಲದೆ ಶಿವರಾಜಕುಮಾರ್, ರವಿಚಂದ್ರನ್ ಮುಂತಾದವರ ಜನಪ್ರಿಯ ಚಿತ್ರಗಳು ತೆರೆಕಂಡಿದ್ದು ಇದೇ ಚಿತ್ರಮಂದಿರದಲ್ಲಿ. ರವಿಚಂದ್ರನ್ ಅಭಿನಯದ “ಪ್ರೇಮ ಲೋಕ’, “ರಣಧೀರ’ ಸೇರಿದಂತೆ ಹಲವು ಚಿತ್ರಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದವು.
ಹೆಗ್ಗಳಿಕೆಯೇ ಶಾಪವಾಯ್ತು: ಏಷ್ಯಾದಲ್ಲೇ ಅತೀ ದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಯೇ ಕಪಾಲಿ ಚಿತ್ರಮಂದಿರಕ್ಕೆ ದೊಡ್ಡ ಶಾಪವಾಗಿತ್ತು ಎಂದರೆ ತಪ್ಪಿಲ್ಲ. ಏಕೆಂದರೆ, ಅಷ್ಟೊಂದು ಸಂಖ್ಯೆಯ ಆಸನಗಳಿರುವ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶಿಸುವುದಕ್ಕೆ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಹೆದರುತ್ತಿದ್ದರು. ಏಕೆಂದರೆ, ಎಷ್ಟೋ ಬಾರಿ ಚಿತ್ರಮಂದಿರ ತುಂಬುತ್ತಿರಲಿಲ್ಲ. ಹಾಗಾಗಿ ಚಿತ್ರಮಂದಿರ ಖಾಲಿಯಾಗಿದೆ ಎಂದು ಇತರೆ ಪ್ರೇಕ್ಷಕರಿಗೆ ಅನಿಸಬಹುದು ಎಂಬ ಕಾರಣಕ್ಕೆ ಹಲವರು ಕಪಾಲಿಯಲ್ಲಿ ತಮ್ಮ ಚಿತ್ರ ಪ್ರದರ್ಶನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಇದೇ ಕಾರಣದಿಂದ, ಕೆಲವು ವರ್ಷಗಳ ಹಿಂದೆ ಆಸನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು. ಆಸನಗಳ ಸಂಖ್ಯೆಯನ್ನು 1100ಕ್ಕೆ ಇಳಿಸಲಾಗಿತ್ತು. ಈ ಸಂಖ್ಯೆ ಸಹ ಹೆಚ್ಚು ಎಂಬ ನಂಬಿಕೆ ಚಿತ್ರರಂಗದಲ್ಲಿತ್ತು.
ಕಳೆದ ಕೆಲವು ವರ್ಷಗಳಿಂದಿತ್ತೀಚೆಗೆ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತವಾಗುತ್ತಿರುವ ಬಗ್ಗೆ, ಆ ಜಾಗದಲ್ಲಿ ಒಂದು ಬೃಹತ್ ಮಾಲ್ ಏಳುತ್ತಿರುವ ಕುರಿತು ಸುದ್ದಿಗಳು ಬರುತ್ತಲೇ ಇದ್ದವು. ಆದರೆ, ಪ್ರದರ್ಶನ ಮುಂದುವರೆಯುತ್ತಲೇ ಇತ್ತು. ಈಗ ಗುರುವಾರ ಬೆಳಿಗ್ಗೆಯಿಂದ ಪ್ರದರ್ಶನ ಹಠಾತ್ತನೆ ನಿಂತಿದೆ. 1968ರಲ್ಲಿ ಪ್ರಾರಂಭವಾದ ಕಪಾಲಿ ಚಿತ್ರಮಂದಿರಕ್ಕೆ ಮುಂದಿನ ವರ್ಷ 50 ತುಂಬುತಿತ್ತು. ಆದರೆ, ಅದಕ್ಕೂ ಮುನ್ನವೇ ಕಪಾಲಿ ಚಿತ್ರಮಂದಿರದಲ್ಲಿ ಪ್ರದರ್ಶನ ನಿಂತಿದೆ. ಗುರುವಾರ ಅದೇ ಚಿತ್ರಮಂದಿರದಲ್ಲಿ “ಆಡೂ ಆಟ ಆಡೂ’ ಎಂಬ ಚಿತ್ರ ಪ್ರದರ್ಶನವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಇದರ ಪ್ರದರ್ಶನವಾಗದೇ ಇದ್ದುದರಿಂದ ಬುಧವಾರ ರಾತ್ರಿಯದ್ದೇ ಕೊನೆಯ ಪ್ರದರ್ಶನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.