ಕರ್ನಾಟಕವನ್ನು ‘ಅಗ್ರಿ ಸ್ಟಾರ್ಟಪ್ ಹಬ್’ ಆಗಿಸುವ ಗುರಿಯಿದೆ: ಬಿ.ಸಿ.ಪಾಟೀಲ್
Team Udayavani, Feb 10, 2021, 5:06 PM IST
ಬೆಂಗಳೂರು: ಕೃಷಿಯಲ್ಲಿ ಆಧುನಿಕತೆ ಮತ್ತು ಹೊಸ ತಂತ್ರಜ್ಞಾನಗಳಿಗೆ ಉತ್ತೇಜನ ನೀಡುತ್ತಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಕರ್ನಾಟಕ ರಾಜ್ಯವನ್ನು “ಅಗ್ರಿ ಸ್ಟಾರ್ಟಪ್’ ಹಬ್ ಆಗಿಸುವ ಮಹತ್ತರ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
ಎಫ್ ಐ ಸಿಸಿ ಶೃಂಗಸಭೆ ಪಾಲ್ಗೊಂಡು ಕೃಷಿ ನವೋದ್ಯಮಿಗಳಿಗೆ ಅನ್ಲೈನ್ ಮೂಲಕ ಪ್ರಶಸ್ತಿ ಪ್ರದಾನ ಮಾಡಿ ಸಚಿವರು ಮಾತನಾಡಿದರು.
ರಾಜಧಾನಿ ಬೆಂಗಳೂರು ಸ್ಟಾರ್ಟಪ್ ಹಬ್ ಎಂದೇ ಪ್ರಖ್ಯಾತಿ ಹೊಂದಿದೆ. 6000 ಸ್ಟಾರ್ಟಪ್ ಗಳಿದ್ದರೂ ಸಹ ಬಹಳ ಕಡಿಮೆ ಸಂಖ್ಯೆಯಲ್ಲಿ ಅಗ್ರಿ ಸ್ಟಾರ್ಟಪ್ ಗಳಿವೆ. ಕೃಷಿಗೆ ಮತ್ತು ಕೃಷಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಅಗ್ರಿ ಸ್ಟಾರ್ಟಪ್ ಹಬ್ ಗಳನ್ನು ಸ್ಥಾಪಿಸಿ ಬೆಂಗಳೂರನ್ನು ಅಗ್ರಿ ಸ್ಟಾರ್ಟಪ್ ಹಬ್ ಅನ್ನಾಗಿಸುವ ಗುರಿ ಹೊಂದಿರುವುದಾಗಿ ಹೇಳಿದರು.
ಅಗ್ರಿ ಸ್ಟಾರ್ಟಪ್ ಗಳು ಕೃಷಿಯಲ್ಲಿ ಸರಪಳಿಯಂತೆ ಕೆಲಸ ಮಾಡುತ್ತಿದ್ದು, ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ದಕ್ಷ ಹಾಗೂ ನವೀನ ಉತ್ಪನ್ನಗಳು ತಂತ್ರಜ್ಞಾನ ಸೇವೆಗಳು ಲಭ್ಯವಾಗಲಿದೆ. ಬೆಂಗಳೂರನ್ನು ಸ್ಟಾರ್ಟ್ ಅಪ್ ಗಳ ಕೇಂದ್ರವಾಗಿ ಪರಿಗಣಿಸಿ ಮತ್ತು ಕರ್ನಾಟಕದಲ್ಲಿ ಅಗ್ರಿ ಸ್ಟಾರ್ಟ್ ಅಪ್ ಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು, ಕೃಷಿ ಇಲಾಖೆಯಿಂದ ಬೆಂಗಳೂರಿನಲ್ಲಿ ಅಗ್ರಿ ಸ್ಟಾರ್ಟ್ ಅಪ್ ಗಳ ಕುರಿತು ಕಾರ್ಯಾಗಾರ ನಡೆಸಲಾಗಿತ್ತು.
ಇದನ್ನೂ ಓದಿ: ಅಮೀರ್ ಪುತ್ರಿಗೆ ಇನ್ನೂ ಕಾಡ್ತಿದೆ ಆ ಪೆಡಂಭೂತ … ಇನ್ಸ್ಟಾದಲ್ಲಿ ಇರಾ ಖಾನ್ ಹೇಳಿದ್ದೇನು?
ಸರ್ಕಾರದ ನೀತಿ ಹಾಗೂ ಪರಿವರ್ತನೆಯ ಬದಲಾವಣೆಗೆ ತಕ್ಕಂತೆ ಉದ್ಯಮಗಳು ಬದಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿಯನ್ನು ಕೃಷಿ ಉದ್ಯಮವನ್ನು ವೃದ್ಧಿಸಬೇಕಿದೆ. ಕೃಷಿಯನ್ನು ಉದ್ಯಮವನ್ನಾಗಿಸಲು ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟಪ್) ಆರಂಭಿಸುವುದಕ್ಕಾಗಿ ಕೃಷಿ ನವೋದ್ಯಮ ನೀತಿಗಳನ್ನು ರೂಪಿಸಿ ಅದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ವರದಿ ನೀಡಿದೆ. ಅಗ್ರಿ ಸ್ಟಾರ್ಟಪ್ ಸಮಿತಿಯು ನೀಡಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದರು.
ಇತರೆ ಸ್ಟಾರ್ಟಪ್ ಗಳ ಮಾದರಿಯಲ್ಲಿಯೇ ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟಪ್)ವನ್ನು ಸಹ ಹೆಚ್ಚಿಸಬೇಕಿದೆ. ಭಾರತೀಯ ಕೃಷಿಯಲ್ಲಿ ಸುಸ್ಥಿರ ಮತ್ತು ನವೀನತೆ ಕಲ್ಪಿಸಲು ಎಫ್ಐಸಿಸಿಐ ವಿವಿಧ ವಿಭಾಗಗಳಿಂದ ಕೃಷಿ ಸ್ಟಾರ್ಟ್ ಅಪ್ಗಳನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ. ಎಫ್.ಐ.ಸಿ.ಸಿ. ಕರ್ನಾಟಕ ರಾಜ್ಯ ಕೌನ್ಸಿಲ್ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಕರ್ನಾಟಕದಲ್ಲಿ ಅಗ್ರಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವ ಸಂಬಂಧ ಚರ್ಚಿಸಿದ್ದು, ಅದರಂತೆ ಕರ್ನಾಟಕದಲ್ಲಿ ಸೂಕ್ತವಾದ ಕೃಷಿ ಪರಿಸರ ವ್ಯವಸ್ಥೆ ಮತ್ತು ಅಗ್ರಿ ಸ್ಟಾರ್ಟ್ ಅಪ್ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಗ್ರಿ ಸ್ಟಾರ್ಟಪ್ ವೃದ್ಧಿಗೆ ಸರ್ಕಾರದ ಜೊತೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿರುವುದಾಗಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಕೃಷಿ ನವೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎಫ್.ಐ.ಸಿ.ಸಿ.ಐ ಪ್ರಧಾನ ಕಾರ್ಯದರ್ಶಿ ದಿಲೀಪ್ ಚೆನೋಯ್, ಮುಖ್ಯಸ್ಥ ಪ್ರವೇಶ್ ಶರ್ಮಾ, ರಾಷ್ಟ್ರೀಯ ಕೃಷಿ ಸಮಿತಿ ಮತ್ತು ಸಮೂಹ ಸಂಸ್ಥೆ ಅಧ್ಯಕ್ಷ ಟಿ.ಆರ್.ಕೇಶವನ್, ಅಗ್ರಿ ಸ್ಟಾರ್ಟಪ್ ಕಾರ್ಯಪಡೆ ಮುಖ್ಯಸ್ಥ ರವೀಂದ್ರ ಅಗರ್ವಾಲ್ ಸೇರಿದಂತೆ ಮತ್ತಿತ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ತೊಡಿಕಾನ: ಅಳಿವಿನಂಚಿನಲ್ಲಿರುವ ಮಹಷೀರ್ ಜಾತಿಯ ಮೀನುಗಳಿಗೆ ಬೇಕು ಶಾಶ್ವತ ಸಂರಕ್ಷಣೆ ಯೋಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.