ಅಂಗಾರಗೆ 6ನೇ ಬಾರಿ ಒಲಿದ ಸುಳ್ಯ


Team Udayavani, May 16, 2018, 7:40 AM IST

angara-list-15-5.jpg

ಸುಳ್ಯ: ಏಳನೇ ಬಾರಿ ಕಣಕ್ಕಿಳಿದಿರುವ ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌. ಅಂಗಾರ ಅವರು ಆರನೆಯ ಬಾರಿ ಅತ್ಯಧಿಕ ಅಂತರದ ಗೆಲುವು ಪಡೆದಿದ್ದಾರೆ. ಇದರೊಂದಿಗೆ ಸತತ ಆರು ಬಾರಿ ನಿರಂತರ ಗೆಲುವಿನ ದಾಖಲೆಗೆ ಭಾಜನರಾಗಿದ್ದಾರೆ.

26,068 ಅಂತರದ ಗೆಲುವು
ಈ ಹಿಂದಿನ ಐದು ಚುನಾವಣೆಗಳಿಗೆ ಹೋಲಿಸಿದರೆ, ಅಂಗಾರ ಈ ಬಾರಿ ದಾಖಲೆ ಅಂತರದ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಡಾ| ರಘು ಅವರ ವಿರುದ್ಧ 26,068 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. ಒಟ್ಟು 1,98,692 ಮತದಾರರಿದ್ದು, 1,68,768 ಮತಗಳು ಚಲಾವಣೆಯಾಗಿವೆ. ಅಂಗಾರ 95,205 ಮತಗಳನ್ನು ಗಳಿಸಿದರೆ, ಡಾ| ರಘು 69,137 ಮತ ಪಡೆದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ 1,372 ಮತಗಳ ಅಂತರದಿಂದ ಪ್ರಯಾಸದ ಗೆಲುವು ದಾಖಲಿಸಿದ್ದ ಅಂಗಾರ, ಐದು ವರ್ಷಗಳ ಅನಂತರ ಗೆಲುವಿನ ಅಂತರವನ್ನು 25 ಸಾವಿರಕ್ಕೂ ಮಿಕ್ಕಿ ಏರಿಸಿಕೊಂಡಿರುವುದು ಗಮನಾರ್ಹ ಸಂಗತಿ. 2018ರ ಚುನಾವಣೆಯಲ್ಲಿ 22 ಸಾವಿರ ಹೊಸ ಮತದಾರರ ಸೇರ್ಪಡೆ, 2013ರ ಚುನಾವಣೆಗಿಂತ 20,952 ಮತಗಳು ಹೆಚ್ಚು ಚಲಾವಣೆಗೊಂಡಿ ರುವುದು, ಚಲಾಯಿತ ಮತ ಪ್ರಮಾಣ ಶೇ. 4 ಹೆಚ್ಚಾಗಿರುವುದು ಕೂಡ ಬಿಜೆಪಿ ಗೆಲುವಿಗೆ ಪೂರಕವಾಗಿದೆ.


16 ಸುತ್ತಿನಲ್ಲಿ ಮುನ್ನಡೆ

ಮತ ಎಣಿಕೆಯ ಹದಿನೇಳು ಸುತ್ತುಗಳ ಪೈಕಿ ಬಿಜೆಪಿ ಹದಿನಾರು ಸುತ್ತಿನಲ್ಲಿ ಮುನ್ನಡೆ ಗಳಿಸಿತ್ತು. ಎರಡನೆ ಸುತ್ತಿನಲ್ಲಿ ಮಾತ್ರ ಕಾಂಗ್ರೆಸ್‌ 209 ಮತಗಳ ಮುನ್ನಡೆ ಹೊಂದಿತ್ತು. ಅಂಚೆ ಮತಗಳ ಪೈಕಿ ಅಂಗಾರ ಅವರಿಗೆ 1,041, ಡಾ| ರಘು ಅವರಿಗೆ 338 ಮತಗಳು ದೊರೆತಿವೆ. ಒಂದು ನೋಟಾ ಹಾಗೂ 16 ಮತಗಳು ತಿರಸ್ಕೃತಗೊಂಡಿವೆ. ಉಳಿದಂತೆ ಬಿಎಸ್‌ಪಿ ಅಭ್ಯರ್ಥಿ ರಘು ಧರ್ಮಸೇನಾ-1,472, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ಪೆಲತ್ತಡ್ಕ-333, ಸಂಜೀವ ಬಾಬುರಾವ್‌ ಕುರಂದವಾಡ-391, ಸುಂದರ ಕೆ.- 564 ಮತ ಪಡೆದಿದ್ದಾರೆ. 1,310 ನೋಟಾ ಮತಗಳು ದಾಖಲಾಗಿವೆ.

ಗೆಲುವಿನ ಓಟ
ದೊಡ್ಡತೋಟ ದಾಸನಕಜೆ ಕುಂಟಿಕಾನ ನಿವಾಸಿ ಸುಳ್ಳಿ ಅಂಗಾರ ಅವರು 1987ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಕೆ. ಕುಶಲ ಅವರ ವಿರುದ್ಧ ಪರಾಜಿತಗೊಂಡಿದ್ದರು. 1994ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 52,133 ಮತ ಪಡೆದು 15,051 ಅಂತರದಿಂದ ಗೆಲುವು ಪಡೆದಿದ್ದರು. 1999ರಲ್ಲಿ ಅಂಗಾರ ಅವರು ಕುಶಲ ಅವರ ವಿರುದ್ಧ 54,814 ಮತ ಪಡೆದು 6,997 ಅಂತರದಿಂದ ಗೆಲುವು ಪಡೆದಿದ್ದರು. 2004ರಲ್ಲಿ ಕಾಂಗ್ರೆಸ್‌ನ ಡಾ| ರಘು ಅವರ ವಿರುದ್ಧ ಅಂಗಾರ ಅವರು 61,480 ಮತ ಗಳಿಸಿ 17,085 ಅಂತರದ ಗೆಲುವು ದಾಖಲಿಸಿದ್ದರು. 2008ರಲ್ಲಿ ಕಾಂಗ್ರೆಸ್‌ನ ಡಾ| ರಘು ವಿರುದ್ಧ 61,144 ಮತ ಪಡೆದು, 4,322 ಅಂತರದಿಂದ ಗೆದ್ದಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ರಘು ವಿರುದ್ಧ ಅಂಗಾರ ಅವರು 65,013 ಮತ ಪಡೆದು, 1,372 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಕಾಂಗ್ರೆಸ್‌ಗೆ ಸೋಲು
1994ರಿಂದ ನಿರಂತರವಾಗಿ ಸೋಲು ಕಾಣುತ್ತಿರುವ ಕಾಂಗ್ರೆಸ್‌ ಈ ಬಾರಿ ಗೆಲ್ಲುವ ನಿರೀಕ್ಷೆ ಪ್ರದರ್ಶಿಸಿತ್ತು. ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಲು ತಯಾರಿ ನಡೆಸಿತ್ತು. ಕ್ಷೇತ್ರದಲ್ಲಿಯೂ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ತೀವ್ರ ಪೈಪೋಟಿಯ ಸ್ಪರ್ಧೆಯ ಲಕ್ಷಣ ಕಾಣಿಸಿತ್ತು. ಆದರೆ ಮತದಾನ ಸಂದರ್ಭದಲ್ಲಿ ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹದ ಮುಂದೆ ಕಾಂಗ್ರೆಸ್‌ ಮಂಕಾದಂತೆ ಕಂಡಿತ್ತು. ಶೇ. 80ಕ್ಕಿಂತ ಹೆಚ್ಚು ಮತದಾನ ದಾಖಲಾದ ಸಂದರ್ಭದಲ್ಲೇ ಬಿಜೆಪಿ 15 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲ್ಲುವ ಲೆಕ್ಕಾಚಾರ ಮೂಡಿಸಿತ್ತು. ಅಂಗಾರ ಅವರು 25 ಸಾವಿರ ಮತಗಳ ಅಂತರದ ಗೆಲುವಿನ ವಿಶ್ವಾಸ ಹೊಂದಿದ್ದರು. ಫಲಿತಾಂಶದಲ್ಲಿ ಅದು ನಿಜವಾಗಿದೆ.

4 ಬಾರಿ ಮುಖಾಮುಖೀ
ಕಾಂಗ್ರೆಸ್‌ ಅಭ್ಯರ್ಥಿ ಡಾ| ರಘು ಮತ್ತು ಬಿಜೆಪಿ ಅಭ್ಯರ್ಥಿ ಎಸ್‌. ಅಂಗಾರ ಪರಸ್ಪರ ಮುಖಾಮುಖೀ ಆಗಿದ್ದು ಇದು ನಾಲ್ಕನೇ ಬಾರಿ. ಸತತ ನಾಲ್ಕು ಬಾರಿಯೂ ಅಂಗಾರ ಅವರ ಎದುರು ರಘು ಸೋಲನುಭವಿಸಿದ್ದಾರೆ. ಮೂರು ಚುನಾವಣೆಗಳಲ್ಲಿ ಡಾ| ರಘು ಅವರ ಸೋಲಿನ ಅಂತರ ಇಳಿಮುಖಗೊಂಡಿರುವುದರಿಂದ ನಾಲ್ಕನೇ ಬಾರಿಗೆ ಸ್ಪರ್ಧೆಗೆ ಅವಕಾಶ ದೊರೆತಿತ್ತು. ಆದರೆ ಮೊದಲ ಮೂರು ಚುನಾವಣೆಗಳಿಗಿಂತಲೂ ಭಾರಿ ಅಂತರದಿಂದ ಡಾ| ರಘು ಪರಾಜಿತಗೊಂಡಿದ್ದಾರೆ.

— ಕಿರಣ್‌ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.