ಸಿದ್ದು ಬಜೆಟ್‌ ಮುಖ್ಯಾಂಶಗಳು


Team Udayavani, Feb 17, 2018, 6:50 AM IST

16BNP-(26).jpg

ಏತ ರೈತರಿಗೆ ಉಚಿತ ಕರೆಂಟ್‌
ಸಮೂಹ ಏತನೀರಾವರಿ ಸ್ಥಾವರಗಳಡಿ ಬಳಕೆದಾರರಿಗೆ ಪ್ರಸಕ್ತ ಸಾಲಿನಿಂದ ನಿತ್ಯ 7 ಗಂಟೆಗಳ ವಿದ್ಯುತ್‌ ಉಚಿತವಾಗಿ ಸಿಗಲಿದೆ.
ಹೌದು, ಪ್ರತಿ ಸದಸ್ಯ 10 ಎಚ್‌ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ಸಹಕಾರ ಸಂಘಗಳ ಖಾಸಗಿ ಎಚ್‌ಟಿ ಮತ್ತು ಎಲ್‌ಟಿ ಸಮೂಹ ಏತನೀರಾವರಿ ಸ್ಥಾವರಗಳಡಿ ನಿತ್ಯ 7 ಗಂಟೆ ಬಳಕೆ ಮಾಡುವ ವಿದ್ಯುತ್‌ಗೆ ತಗಲುವ ವೆಚ್ಚವನ್ನು ಆಯಾ ಬಳಕೆದಾರರಿಗೆ ಹಿಂಪಾವತಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಇದು ಪೂರೈಕೆಯ ಮಿತಿ ಮತ್ತು ನಿಬಂಧನೆಗಳಿಗೆ ಒಳಪಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಇಂಧನ ಇಲಾಖೆಗೆ 14,136 ಕೋಟಿ ರೂ. ನೀಡಲಾಗಿದೆ.

ಪತ್ರಕರ್ತರಿಗೆ “ಮಾಧ್ಯಮ ಸಂಜೀವಿನಿ’ಜೀವವಿಮೆ
ಬಜೆಟ್‌ನಲ್ಲಿ ಪ್ರತರ್ಕತರ ಬಗ್ಗೆಯೂ ಕಾಳಜಿ ತೋರಲಾಗಿದೆ. ಕೆಲಸದ ವೇಳೆ ಅಪಘಾತಕ್ಕೊಳಗಾದಾಗ, ಇಲ್ಲವೆ ಅಕಾಲಿಕ ಮರಣವನ್ನು ಹೊಂದಿದಾಗ ಪತ್ರಕರ್ತರ ಕುಟುಂಬದವರಿಗೆ ನೆರವಾಗಲಿ ಎಂಬ ದೃಷ್ಟಿಯಿಂದ 5 ಲಕ್ಷ ರೂ. ಜೀವ ವಿಮೆ ಖಾತರಿ ನೀಡಲು “ಮಾಧ್ಯಮ ಸಂಜೀವಿನಿ’, ಎಂಬ ಸಮೂಹ ಜೀವವಿಮೆ ಸೌಲಭ್ಯವನ್ನು ಕಲ್ಪಿಸುವ ಪ್ರಸ್ತಾಪ ಮಾಡಲಾಗಿದೆ. ಅಲ್ಲದೆ,ಪತ್ರಕರ್ತರಿಗೆ ನೀಡುತ್ತಿರುವ ರಾಜೀವ್‌ ಆರೋಗ್ಯ ಯೋಜನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮೂಲಕ ಆರೋಗ್ಯ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ. ದಿನ ಪತ್ರಿಕೆಗಳನ್ನು ಮನೆ ಮನೆಗೆ ಹಂಚುವವರ ಬಗ್ಗೆಯೂ ಒಲವು ತೋರಲಾಗಿದ್ದು, ಪತ್ರಿಕೆ ಹಂಚುವವರ 
ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ.ಗಳ ” ಕ್ಷೇಮ ನಿಧಿ’ ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಪತ್ರಕರ್ತರ ಭವನ ಸ್ಥಾಪಿಸುವ ಪ್ರಸ್ತಾಪ ಮಾಡಲಾಗಿದೆ. ಬಜೆಟ್‌ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖಗೆ 239 ಕೋಟಿ ರೂ.ನಿಗದಿಪಡಿಸಲಾಗಿದೆ.

ಅಂತಾರಾಷ್ಟ್ರೀಯ ಚಲನಚಿತ್ರ ಪ್ರವಾಸೋದ್ಯಮ ನೀತಿ
ರಾಜ್ಯದ ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಲನಚಿತ್ರದಲ್ಲಿ ಪ್ರದರ್ಶಿಸುವ ಮೂಲಕ ಪ್ರಸಿದ್ದಿಗೊಳಿಸಲು ಚಲನಚಿತ್ರ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿ, ಬೇಲೂರು ಹಳೆ ಬೀಡು, ಶ್ರವಣಬೆಳಗೊಳ, ನಂದಿಬೆಟ್ಟ, ಸನ್ನತಿ ಹಾಗೂ ಕಲಬುರಗಿ ಕೋಟೆ ಸೇರಿದಂತೆ ಇಪ್ಪತ್ತು ಪಂಚತಾರಾ ಪ್ರವಾಸಿ ತಾಣಗಳ ಸಮಗ್ರ ಅಭಿವೃದಿಟಛಿ ಮಾಡುವ ಭರವಸೆ ನೀಡಿದ್ದಾರೆ.

ಕರಾವಳಿಯಲ್ಲಿ ಬೋಟ್‌ ಹೌಸ್‌ 
ಕರಾವಳಿ ಪ್ರದೇಶದಲ್ಲಿನ ಆಯ್ದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೌಸ್‌ ಬೋಟ್‌ಗಳು ಹಾಗೂ ತೇಲುವ ಉಪಾಹಾರ ಗೃಹಗಳ ಸೌಲಭ್ಯ ಒದಗಿಸಲು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಪ್ರಾಚ್ಯವಸ್ತು ಸಂಗ್ರಹಾಲಯಗಳ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ತರವುದು. ಪ್ರವಾಸೋದ್ಯಮ ಇಲಾಖೆಗೆ 459 ಕೋಟಿ ರೂ.ಮೀಸಲು ಇಡಲಾಗಿದೆ.

ಅರಣ್ಯ, ಪರಿಸರಕ್ಕೆ 1,949 ಕೋಟಿ ರೂ. 
ಅರಣ್ಯ ಹಾಗೂ ಪರಿಸರ ಇಲಾಖೆಗೆ 1,949 ಕೋಟಿರೂ. ಮೀಸಲಿಡಲಾಗಿದೆ. ಈ ಪೈಕಿ 10 ಕೋಟಿ ರೂ.ವೆಚ್ಚದಲ್ಲಿ ನದಿಗಳ ತಟಗಳಲ್ಲಿ ನೀರಿನ ಸೆಲೆ ಹಾಗೂ ಒಳಹರಿವು ಹೆಚ್ಚಿಸಲು ನದಿ ಇಕ್ಕೆಲಗಳಲ್ಲಿ ಕಿ.ಮೀ. ದೂರದಲ್ಲಿ ಗಿಡಗಳನ್ನು ನೆಡುವ ಯೋಜನೆಗೆ ನಿಗದಿಪಡಿಸಾಲಗಿದೆ. ರೈತರು ಬೆಳೆದ ಮರಗಳ ಮಾರಾಟಕ್ಕೆ ತಾಲೂಕು-ಜಿಲ್ಲಾ ಕೇಂದ್ರಗಳಲ್ಲಿ ಸಣ್ಣ ಮರಗಳ ಸಂಗ್ರಹಾಲಯ ಸ್ಥಾಪನೆ. ಅರಣ್ಯ ಇಲಾಖೆ ಹಾಗೂ ಎಪಿಎಂಸಿ ಸಹಯೋಗದಲ್ಲಿ ಬಹಿರಂಗ ಹರಾಜು ಮಾರಾಟದ ಯೋಜನೆಗೆ 5 ಕೋಟಿ ರೂ. 
ಮೀಸಲಿಡಲಾಗಿದೆ.

ಪ್ರಶಸ್ತಿ ಮೊತ್ತ ಹೆಚ್ಚಳ ವೇಷಭೂಷಣಕ್ಕೂ ನೆರವು
ಕಲಾವಿದರುಗಳ, ಸಾಹಿತಿಗಳಿಗೆ ನೀಡುತ್ತಿರುವ ರಾಜ್ಯಮಟ್ಟದ ಪ್ರಶಸ್ತಿ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕಲಾವಿದರುಗಳಿಗೆ ವೇಷಭೂಷಣ ಮತ್ತು ವಾದ್ಯ ಪರಿಕರಗಳ ಖರೀದಿಗೆ ಆರ್ಥಿಕ ನೆರವು ಒದಗಿಸಲಾಗುವುದು. ಇಳಿವಯಸ್ಸಿನಲ್ಲಿರುವ ಕಲಾವಿದರುಗಳ ಜೀವನ ನಿರ್ವಹಣೆಗಾಗಿ ನೀಡುತ್ತಿರುವ ಮೊತ್ತ 1 ಸಾವಿರದಿಂದ 1500 ರೂ.ಗಳಿಗೆ ಏರಿಕೆ ಮಾಡಲಾಗುವುದೆಂದು ಹೇಳಲಾಗಿದೆ.

ಉದಯ ರವಿ’ನಿವಾಸ ಇನ್ನು ಸ್ಮಾರಕ 
ರಾಷ್ಟ್ರಕವಿ ಕುವೆಂಪು ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮಹಾ ಕವಿ ಕುವೆಂಪು ಅವರ ಮೈಸೂರಿನ “ಉದಯ ರವಿ’ನಿವಾಸವನ್ನು ಸ್ಮಾರಕವಾಗಿ ಸಂರಕ್ಷಿಸಿ, ಅಭಿವೃದ್ಧಿ ಪಡಿಸಲು ಪ್ರಸ್ತಾಪಿಸಲಾಗಿದೆ. ಕನ್ನಡ ನಾಡಿನ ಜಾನಪದ ಸಂಸ್ಕೃತಿಯನ್ನು ಇಡೀ ಭಾರತಕ್ಕೆ ಪರಿಚಯಿಸುವ ದಿಶೆಯಿಂದ “ಜನಪದ ಸಾಂಸ್ಕೃತಿಕ ಭಾರತ ‘ಕಾರ್ಯ ಕ್ರಮವನ್ನು ರೂಪಿಸಲಾಗುತ್ತದೆ. ಅಕಾಡೆಮಿಗಳಿಗೆ ನೀಡಲಾಗುವ ಅನು ದಾನವನ್ನು ಹೆಚ್ಚಿಸಲಾಗಿದೆ. ಗಡಿಪ್ರದೇಶ ಅಭಿವೃದ್ಧಿಯ ಬಗ್ಗೆಯೂ
ಕಾಳಜಿ ತೋರಲಾಗಿದ್ದು, ಗಡಿ ಪ್ರದೇಶ ಅಭಿವೃದ್ದಿ ಮಂಡಳಿ ಮೂಲಕ 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಸಮಗ್ರ ಸಾಹಿತ್ಯ ಅಧ್ಯಯನಕ್ಕಾಗಿ ನೂತನ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.

ಕಾಫಿ ಬೆಳೆಗಾರರಿಗೆ ಜಮೀನು ಗುತ್ತಿಗೆ‌ 
ಸರ್ಕಾರಿ ಜಮೀನಿನಲ್ಲಿ ದೀರ್ಘ‌ ಕಾಲದಿಂದ ಅನಧಿಕೃತವಾಗಿ ಕಾಫಿ ಬೆಳೆಯುತ್ತಿರುವ ಕಾಫಿ ಬೆಳೆಗಾರರ 10 ಎಕರೆ ವರೆಗಿನ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ನಿಯಮ ರೂಪಿಸಲಾಗುವುದು ಎಂದು ತಿಳಿಸಲಾಗಿದ್ದು, ಒಟ್ಟಾರೆಯಾಗಿ ಕಂದಾಯ ಇಲಾಖೆಗೆ 6,642 ಕೋಟಿ ರೂ. ಅನುದಾನ ವನ್ನು ವಿತ್ತ ವರ್ಷ 2018-19ಕ್ಕೆ ನಿಗದಿಪಡಿಸಲಾಗಿದೆ. ರುದ್ರಭೂಮಿ ಅವಶ್ಯವಿರುವ ಕಡೆ ಜಮೀನು ಖರೀದಿ ಮಾಡಲು 10 ಕೋಟಿ ರೂ. ಮೀಸಲಿಡಲಾಗಿದೆ.

ತಸ್ತೀಕ್‌ ಮೊತ್ತ ಸಂದಾಯಕ್ಕೆ 20 ಕೋಟಿ 
ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರಿಂದ ಬಾಧಿತರಾದ 4,110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಇನಾಮು ರದ್ದತಿ ಅಧಿನಿಯಮದಂತೆ ಪ್ರತಿ ವರ್ಷ ಸಂದಾಯ ಮಾಡಬೇಕಾದ ತಸ್ತೀಕ್‌ ಮೊತ್ತ 48 ಸಾವಿರ ರೂ.ಗಳಿಗೆ ಅನುಗುಣವಾಗಿ ವರ್ಷಾಶನ ಸಂದಾಯ ಮಾಡಲು 20 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಪುಸ್ತಕ ಮಾರಾಟಕ್ಕಾಗಿ “ಪುಸ್ತಕ ಜಾಥಾ’
ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಪ್ರಾಧಿಕಾರಗಳು ಪ್ರಕಟಿಸಿರುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ “ಪುಸ್ತಕ ಜಾಥಾ’ಕಾರ್ಯಕ್ರವನ್ನು ಹುಟ್ಟು ಹಾಕಲಾಗಿದ್ದು, 1.5 ಕೋಟಿ ರೂ. ಮೀಸಲಿಡಲಾಗಿದೆ. ಈ ಕುರಿತು ಶುಕ್ರವಾರವಷ್ಟೇ ಉದಯವಾಣಿ ವರದಿ ಮಾಡಿತ್ತು. “ಜಾನಪದ ಸಾಂಸ್ಕೃತಿಕ ಭಾರತ’ ಕಾರ್ಯಕ್ರಮವನ್ನೂ ರೂಪಿಸಲಾಗಿದೆ.

50 ಅಗ್ನಿಶಾಮಕ ಠಾಣೆ
ಮಹಿಳಾ ಪೊಲೀಸ್‌ ಠಾಣೆಗಳನ್ನು ಒನ್‌ ಸ್ಟಾಪ್‌ ಕೇಂದ್ರಗಳಾಗಿ ಉನ್ನತೀಕರಣಗೊಳಿಸಲಾಗುವುದು ಎಂದು ಘೋಷಿಸಲಾಗಿದೆ.
ಕೆಸೇಫ್ 2 ಯೋಜನೆ ಅಡಿಯಲ್ಲಿ 50 ಹೊಸ ತಾಲೂಕುಗಳಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಪ್ರಸ್ತಾಪ ಬಜೆಟ್‌ನಲ್ಲಿ ಮಾಡಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್‌ ಕಮಿಷನರೇಟ್‌ಗಳಲ್ಲಿ ನಿರ್ಭಯ ಕೇಂದ್ರ ಸ್ಥಾಪಿಸುವ ಮಾಡಲಾಗಿದೆ. ಇದೇ ವೇಳೆ ಮಾಜಿ ಸೈನಿಕರಿಗೆ ಪುನರ್‌ವಸತಿ ಕಲ್ಪಿಸಲು ದತ್ತಾಂಶ ಸಂಗ್ರಹಿಸಿ ಕೌಶಲ್ಯಾಭಿವೃದಿಟಛಿ ಇಲಾಖೆಗೆ ವಹಿಸುವ ಪ್ರಸ್ತಾಪವನ್ನೂ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

ಅರ್ಜಿ ಶುಲ್ಕ ವಿನಾಯಿತಿ
ಉದ್ಯೋಗಕ್ಕಾಗಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಅರ್ಜಿ ಸಲ್ಲಿಸುವ ಮಹಿಳೆಯರು ಮತ್ತು ಅಂಗವಿಕಲರಿಗೂ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆ ಮೂಲಕ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರು ಮತ್ತು ಅಂಗವಿಕಲರಿಗೆ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಪಿಎಸ್‌ಸಿಗೆ ಉದ್ಯೋಗ ಕೋರಿ ಆಕಾಂಕ್ಷಿಗಳು ಸಲ್ಲಿಸುತ್ತಿರುವ ಅರ್ಜಿಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಆದರೆ, ಅರ್ಜಿ ಸಲ್ಲಿಸುವ ಶುಲ್ಕ ಹೆಚ್ಚಾಗಿದ್ದರಿಂದ ಕೆಲವರಿಗೆ ಹೊರೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಮಹಿಳೆಯರು ಮತ್ತು ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುವುದನ್ನು ಉತ್ತೇಜಿಸಲು ಅವರಿಗೂ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಉಚಿತ ಮೆಶ್‌
ಮೀನಿನ ಮರಿ ಹಿಡಿಯುವುದನ್ನು ತಪ್ಪಿಸಲು ಟ್ರಾಲ್‌ಬೋಟ್‌ಗಳಿಗೆ 35 ಎಂಎಂ ಮೆಶ್‌ ಬಲೆ ಉಚಿತ ವಿತರಣೆಗೆ ಸರ್ಕಾರ 
ಮುಂದಾಗಿದೆ. ಅಲ್ಲದೆ, ಮತ್ಸಾéಜೋಪಾಸನೆ ಯೋಜನೆಯಡಿ 10 ಶಿಥಲೀಕೃತ ಘಟಕ ಸ್ಥಾಪನೆ, ಮೀನುಗಾರಿಕೆಯಲ್ಲಿರುವ ಮಹಿಳೆಗೆ 50 ಸಾವಿರ ತನಕ ಶೇ.2ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುವುದು ಹಾಗೂ ನಾಡದೋಣಿಗಾಗಿ ಮೂಡೇìಶ್ವರದಲ್ಲಿ ಹೊರ ಬಂದರು ನಿರ್ಮಾಣಕ್ಕೆ ನಿರ್ಧರಿಸಿದೆ.

250 ಅಂಗನವಾಡಿ
ನಗರ ಪ್ರದೇಶದಲ್ಲಿ 17.50 ಕೋಟಿ ವೆಚ್ಚದಲ್ಲಿ 250 ಅಂಗನವಾಡಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಅಲ್ಲದೆ, ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗಾಗಿ 100 ಸಂಚಾರಿ ಅಂಗನವಾಡಿ ಕೇಂದ್ರಗಳ ನಿರ್ಮಾಣ, 10 ಜಿಲ್ಲೆಯ ಮಕ್ಕಳ ನ್ಯಾಯಾಲಯವನ್ನು ಮಕ್ಕಳ ಸ್ನೇಹಿ ನ್ಯಾಯಾಲಯವಾಗಿ ಪರಿವರ್ತನೆ ಹಾಗೂ ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಪ್ರಕಟಿಸಿದರು.

ದೇವದಾಸಿ ಕುಟುಂಬಕ್ಕೆ ಧನ ಸಹಾಯ
ದೇವದಾಸಿಯರ ಸಬಲೀಕರಣಕ್ಕೆ ಭೂ ಖರೀದಿ ಮಾಡುವ ಬಗ್ಗೆ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ದೇವದಾಸಿಯರ ಹೆಣ್ಣು ಮಕ್ಕಳ ಮದುವೆಗೆ 5 ಲಕ್ಷ, ಗಂಡು ಮಕ್ಕಳ ಮದುವೆಗೆ 3 ಲಕ್ಷ ಪ್ರೋತ್ಸಾಧನ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ಎಸ್ಸಿ.ಎಸ್ಟಿ ವಿದ್ಯಾರ್ಥಿನಿ
ಯದಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತರ ರ್‍ಯಾಂಕ್‌ ಬಂದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ತರಬೇತಿ ನೀಡುವುದು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಫಿ ಬೆಳೆಯಲು ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ.

ಅಧ್ಯಯನ ಪೀಠ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ (ಸೆಂಟ್ರಲ್‌ ಕಾಲೇಜು) ವೈವಿಧ್ಯತೆ ಮತು ¤ ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪನೆಗೆ ವಿಶೇಷ ಗಮನ ನೀಡಿರುವ ಸಿಎಂ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಲಯಗಳಲ್ಲಿ ಇರುವ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಪೊಲೀಸ್‌ ಮಂಡಳಿ ರಚನೆ
ರಾಜ್ಯದಲ್ಲಿ ಪೊಲೀಸ್‌ ನೇಮಕಾತಿಗಳನ್ನು ನಡೆಸಲು ಶಾಶ್ವತ ಪೊಲೀಸ್‌ ಸೇವೆಗಳ ನೇಮಕಾತಿ ಮಂಡಳಿ ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮುಂದಿನ ಐದು ವರ್ಷದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇಕಡಾ 25 ಕ್ಕೆ ಹೆಚ್ಚಳ ಮಾಡುವ ಭರವಸೆ ನೀಡಲಾಗಿದೆ. ಮುಂದಿನ ಎರಡು ವರ್ಷದಲ್ಲಿ ಪೊಲಿಸ್‌ ತರಬೇತಿ ಶಾಲೆಗಳ ಸಾಮರ್ಥ್ಯವನ್ನು 3200 ರಿಂದ 5 ಸಾವಿರಕ್ಕೆ ಹೆಚ್ಚಳ ಮಾಡುವುದು. ಬೆಂಗಳೂರಿನಲ್ಲಿ 5 ಕೋಟಿ ವೆಚ್ಚದಲ್ಲಿ ಶಾಸ್ವತ ಪೊಲೀಸ್‌ ಸ್ಮಾರಕ ನಿರ್ಮಾಣ ಮಾಡುವ ಭರವಸೆ ನೀಡಲಾಗಿದೆ. ಸೈಬರ್‌ ಅಪರಾಧ ಪರಿಣಾಮಕಾರಿಯಾಗಿ ತನಿಖೆ ಮಾಡಲು ಸೈಬರ್‌ ಪೊಲೀಸ್‌ ಠಾಣೆಗಳಿಗೆ 5 ಕೋಟಿ ವೆಚ್ಚದಲ್ಲಿ ಸೈಬರ್‌ ಪೋರೆನ್ಸಿಕ್‌ ಪ್ರಯೋಗಾಲಯ ಸ್ಥಾಪನೆ

ಜೇನುಗೂಡು ಯೋಜನೆ
ಬಜೆಟ್‌ನಲ್ಲಿ ಕನ್ನಡ ಚಿತ್ರಗಳ ಪ್ರೋತ್ಸಾಹಕ್ಕೂ ಆದ್ಯತೆ ನೀಡಲಾಗಿದ್ದು  ಕರ್ನಾಟಕ ಚಲನಚಿತ್ರ ಅಕಾಡೆಮಿಯ  “ಜೇನುಗೂಡು’ ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಲನಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ತಲಾ 20 ಲಕ್ಷ ರೂ.ಮತ್ತು ಕಥಾ ಲೇಖಕರಿಗೆ ತಲಾ 5 ಲಕ್ಷ ರೂ. ವಿಶೇಷ ಸಹಾಯಧನವನ್ನು ಪ್ರತಿ ವರ್ಷ 8 ಚಿತ್ರಗಳಿಗೆ ನೀಡಲಾಗುವುದು. ಡಾ.ರಾಜ್‌ ಕುಮಾರ್‌ ಸ್ಮರಣಾರ್ಥ ರಾಜ್‌ಕುಮಾರ್‌ ಪುಣ್ಯಭೂಮಿ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಡಾ.ಆರ್‌. ಅಂಬೇಡ್ಕರ್‌ ಅವರ ಜೀವನ, ಬದುಕು ಹಾಗೂ ಕೊಡುಗೆ ಬಿಂಬಿಸುವ “ಭಾರತ ಭಾಗ್ಯವಿಧಾತ’ ಧ್ವನಿ ಬೆಳಕು ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏರ್ಪಡಿಸಲು ಯೋಜನೆ ಘೋಷಿಸಲಾಗಿದೆ.

ಕಟ್ಟುವೆವು ನಾವು ಹೊಸ ನಾಡೊಂದನ್ನು’
ಬಜೆಟ್‌ನಲ್ಲಿ ನವೋದಯ ಕಾವ್ಯದ ಪ್ರವರ್ತಕ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ “ಕಟ್ಟುವೆವು ನಾವು ಹೊಸ ನಾಡೊಂದನ್ನು’ ಎನ್ನುವ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುವ ಬಗ್ಗೆ ಘೋಷಿಸಲಾಗಿದೆ. ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ ದೃಷ್ಟಿಯಿಂದ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ. ಕನ್ನಡ ತಂತ್ರಾಂಶ ಅಭಿವೃದಿಟಛಿ ಹಾಗೂ ಕನ್ನಡ ತಾಂತ್ರಿಕ ವಿಷಯಗಳಲ್ಲಿ ಸಂಶೋಧನೆ ನಡೆಸುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಫೆಲೋಷಿಪ್‌ ನೀಡಲಾಗುವುದು.ಸಮಗ್ರ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ನೂತನ “ಅಧ್ಯಾನ ಪೀಠ ‘ಸ್ಥಾಪಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 425 ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಐದು ಲಕ್ಷ ರೂ. ಪರಿಹಾರ
ವನ್ಯಜೀವಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ನೀಡಲಾಗುತ್ತಿರುವ ಐದು ಲಕ್ಷ ರೂ. ಹಾಗೂ ಎಕ್ಸಗ್ರೇಷಿಯಾ ಜತೆಗೆ 5 ವರ್ಷಗಳವರೆಗೆ 2 ಸಾವಿರ ರೂ. ಮಾಸಾಶನ ನೀಡುವುದಾಗಿ ತಿಳಿಸಲಾಗಿದೆ. ವಾಯುಮಾಲಿನ್ಯ ನಿಯಂತ್ರಿಸಲು ಜಿಲ್ಲಾ ಖನಿಜ ನಿಧಿ ಅನುದಾನದಡಿ 96 ಕೋಟಿ ವೆಚ್ಚದಲ್ಲಿ ಎಲ್ಲ ಜಿಲ್ಲೆಗಳಲ್ಲಿ 42 ನಿರಂತರ ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಲಾಗಿದೆ.

ಕಾರಾಗೃಹ ಅಭಿವೃದ್ಧಿ ಮಂಡಳಿ
ಕೈದಿಗಳ ಕೌಶಲ್ಯ ತರಬೇತಿಗೆ ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿ ರಚನೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ. ಮಂಗಳೂರಿನಲ್ಲಿ 85 ಕೋಟಿ ವೆಚ್ಚದಲ್ಲಿ ಹೊಸ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹವನ್ನು ನಿರ್ಮಿಸುವುದು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 100 ಕೋಟಿ ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ವಿಭಾಗ ಸ್ಥಾಪಿಸುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳನ್ನು ಪೊಲೀಸ್‌ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಹೊಸ ನೀತಿ ಜಾರಿಗೆ ನಿರ್ಧರಿಸಲಾಗಿದೆ.

ಹೆಚ್ಚಾದ ಸಾಲದ ಹೊರೆ
ಈ ಬಾರಿಯ ಆರ್ಥಿಕ ವರ್ಷದಲ್ಲೂ 39,328 ಕೋಟಿ ರೂ. ಸಾಲ ಮಾಡುವ ಪ್ರಸ್ತಾಪ ಮಾಡಲಾಗಿದೆ. ಇದರಿಂದಾಗಿ 2017-18 ನೇ ಸಾಲಿನ ಅಂತ್ಯಕ್ಕೆ 2,42,420 ಕೋಟಿ ರೂ. ಇದ್ದ ಸಾಲದ ಮೊತ್ತ 2018-19 ಆರ್ಥಿಕ ವರ್ಷದ ಅಂತ್ಯಕ್ಕೆ 2,81,748 ಕೋಟಿ ರೂ. ತಲುಪಿದೆ. ಒಟ್ಟಾರೆ 5 ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 1.50 ಲಕ್ಷ ಕೋಟಿ ರೂ. ಸಾಲ ಮಾಡಿದಂತಾಗುತ್ತದೆ. ಪ್ರತಿ ವರ್ಷ ಸಾಲ ಪಡೆಯುವ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಆದರೂ ಆರ್ಥಿಕ ಶಿಸ್ತು ಹಾಗೂ ಮಿತಿಯೊಳಗೇ ಸಾಲ ಮಾಡಲಾಗಿದೆ ಎಂಬ ಸಮರ್ಥನೆಯನ್ನೂ ಸಿದ್ದರಾಮಯ್ಯ ಮಾಡಿದ್ದಾರೆ.

ಉಚಿತ ಅನಿಲ ಸಂಪರ್ಕ
ಪಡಿತರ ವಿತರಕರ ಲಾಭಾಂಶವನ್ನು ಪ್ರತಿ ಕ್ವಿಂಟಾಲ್‌ಗೆ 87ರಿಂದ 100 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಚಿಲ್ಲರೆ ಮಾರಾಟಗಾರರಿಗೆ 80 ಕೋಟಿ ರೂ.ಗಳಷ್ಟು ಪ್ರಯೋಜನವಾಗಲಿದೆ. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 30 ಲಕ್ಷ ಫ‌ಲಾನುಭವಿಗಳಿಗೆ 1,350 ಕೋಟಿ ರೂ. ವೆಚ್ಚದಲ್ಲಿ ಉಚಿತ ಅನಿಲ ಸಂಪರ್ಕ, 2 ಬರ್ನರ್‌ ಹೊಂದಿದ ಗ್ಯಾಸ್‌ ಸ್ಟೌ ಮತ್ತು ಎರಡು ರೀಫಿಲ್‌ ಸಿಲಿಂಡರ್‌ಗಳನ್ನು ನೀಡಲಾಗುವುದು. 

ವಿದೇಶಿ ಉದ್ಯೋಗಕ್ಕೆ ಆದ್ಯತೆ: ವಿದೇಶದಲ್ಲಿ ಉದ್ಯೋಗ ಮತ್ತು ಜೀವನೋಪಾಯ ಹೊಂದಲು ಕರ್ನಾಟಕವನ್ನು ವಿದೇಶಿ ಉದ್ಯೋಗಕ್ಕೆ ಆದ್ಯತಾ ರಾಜ್ಯವನ್ನಾಗಿ ರೂಪಿಸಲು ರಾಜ್ಯದ ಯುವ ಜನತೆಗೆ ಅಗತ್ಯ ತರಬೇತಿ ಮತ್ತು ಪ್ರೋತ್ಸಾಹ ನೀಡಲಾಗುವುದು.

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.