ಸರ್ಕಾರ ರಚನೆಗೆ ಮೂರೂ ಪಕ್ಷಗಳ ಲೆಕ್ಕಾಚಾರವೇನು?
Team Udayavani, May 15, 2018, 6:00 AM IST
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ನಡುವೆಯೇ ಬಹುಮತ, ಅತಂತ್ರದ ಲೆಕ್ಕಾಚಾರಗಳು ಮುಂದುವರಿದಿವೆ.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಬಹುಮತ ಬಾರದಿದ್ದರೆ ಮುಂದೇನು? ಎಂಬ ಆತಂಕವಾದರೆ, ಎರಡೂ ಪಕ್ಷಗಳಿಗೂ ನಾವು ಅನಿವಾರ್ಯ ಆದರೆ ಯಾವ ನಿಲುವು ತಾಳಬೇಕು ಎಂಬ ಜಿಜ್ಞಾಸೆ ಜೆಡಿಎಸ್ ವರಿಷ್ಠರನ್ನು ಕಾಡುತ್ತಿದೆ. 222 ಕ್ಷೇತ್ರಗಳಲ್ಲಿ ಮತದಾನ ನಡೆದಿರುವುದರಿಂದ ಸರ್ಕಾರ ರಚನೆಗೆ ಸದ್ಯಕ್ಕೆ 112 ಮ್ಯಾಜಿಕ್ ನಂಬರ್. 100 ಸ್ಥಾನ ದಾಟಿದವರೇ ಸರ್ಕಾರ ರಚಿಸಬಹುದು ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿಯ ಕೊನೇ ಕ್ಷಣದ ಅನಿಸಿಕೆ.
120ರಿಂದ 130 ಸ್ಥಾನ ಗಳಿಸುವ ವಿಶ್ವಾಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಂದಿದ್ದರಾದರೂ, ಆ ಪಕ್ಷದ ಕೆಲವು ನಾಯಕರಿಗೆ ಒಂದೊಮ್ಮೆ ಬರದಿದ್ದರೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಹೀಗಾಗಿ, ಜೆಡಿಎಸ್ ಜತೆ ಸೇರಿಯಾದರೂ ಸರ್ಕಾರ ರಚನೆ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದಾರೆ.
ಅಮಿತ್ ಶಾ ಅವರು ಕುಮಾರಸ್ವಾಮಿ ಜತೆ ಹಿಂದೊಮ್ಮೆ ಮಾತುಕತೆ ನಡೆಸಿದ್ದರು. ಮತದಾನದ ನಂತರವೂ ಸಿಂಗಾಪುರದಲ್ಲಿರುವ ಕುಮಾರಸ್ವಾಮಿ ಜತೆ ಮಾತನಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಂದಹಾಗೆ, ಕಾಂಗ್ರೆಸ್ ನಾಯಕರು ಸಹ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚನೆ ಮಾಡುವ ವಿಶ್ವಾಸದಲ್ಲಿ ಇಲ್ಲ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ, ದಲಿತ ಮುಖ್ಯಮಂತ್ರಿಗೆ ಹೈಕಮಾಂಡ್ ಸೂಚಿಸಿದರೆ ನಾನು ತ್ಯಾಗಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಜೆಡಿಎಸ್ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಜತೆ ಮೈತ್ರಿಗೆ ಒತ್ತಾಯಿಸಬಹುದು. ಅದರಲ್ಲೂ ದಲಿತ ಮುಖ್ಯಮಂತ್ರಿ ಮಾಡುವ ತೀರ್ಮಾನ ಕೈಗೊಂಡರೆ ಮೈತ್ರಿಗೆ ಮತ್ತಷ್ಟು ಬಲ ಬರಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ 100 ದಾಟದಿದ್ದರೆ 80 ರ ಆಜುಬಾಜು ಇದ್ದು, ಜೆಡಿಎಸ್ 40 ಸ್ಥಾನ ಪಡೆದರೂ ಮೈತ್ರಿ ಸರ್ಕಾರ ಮಾಡಬಹುದು. ಆಗ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಸಿಎಂ ಸ್ಥಾನಕ್ಕೆ ಪರಿಗಣಿಸುವುದಿಲ್ಲ. ಆಗ, ತಮಗೆ ಅದೃಷ್ಟ ಖುಲಾಯಿಸಬಹುದು ಎಂಬ ನಿರೀಕ್ಷೆಯಲ್ಲಿ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ ಇದ್ದಾರೆ. ಒಂದೊಮ್ಮೆ ಜೆಡಿಎಸ್ 50 ಸ್ಥಾನ ದಾಟಿದರೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕಾಗುತ್ತದೆ. ಆಗ ಕಾಂಗ್ರೆಸ್ ಡಿಸಿಎಂ ಸ್ಥಾನಕ್ಕೆ ತೃಪ್ತಿಪಡಬಹುದು.
ಇನ್ನು, ಬಿಜೆಪಿ 100ರ ಗಡಿ ದಾಟದಿದ್ದರೆ ಜೆಡಿಎಸ್ ಜತೆ ಮೈತ್ರಿ ಅನಿವಾರ್ಯ. ಆಗ, ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಎಸ್ ಒಪ್ಪುವುದೂ ಅನುಮಾನ. ಆಗ, ತನಗೇ ಸಿಎಂ ಸ್ಥಾನ ಇರಲಿ ಎಂದು ಜೆಡಿಎಸ್ ಪಟ್ಟು ಹಿಡಿಯಬಹುದು. ಇಲ್ಲವೇ ಬಿಜೆಪಿಯಿಂದ ಬೇರೆಯವರನ್ನು ಸಿಎಂ ಸ್ಥಾನಕ್ಕೆ ಸೂಚಿಸಿ ಎಂದು ಹೇಳಬಹುದು ಎಂಬ ಮಾತುಗಳು ಇವೆ.
ಒಟ್ಟಾರೆ, ಫಲಿತಾಂಶದ ಕೊನೇ ಕ್ಷಣದವರೆಗೂ ನಾನಾ ಲೆಕ್ಕಾಚಾರಗಳು ನಡೆಯುತ್ತಿದೆ. ಫಲಿತಾಂಶ ಹೊರಬಿದ್ದ ನಂತರ ಮೂರೂ ಪಕ್ಷಗಳ ಸ್ಥಿತಿ ಹಾಗೂ ಆ ಪಕ್ಷಗಳ ನಾಯಕರ ಸ್ಥಿತಿ ಏನಾಗಲಿದೆ ಎಂಬುದು ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
MUST WATCH
ಹೊಸ ಸೇರ್ಪಡೆ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.