ಜಾನಪದ ತ್ರಿಪದಿಗಳಿಗೆ ಚಿತ್ರಕಲೆಯ ಜೀವಂತಿಕೆ
ವಿಶಿಷ್ಟ ಪ್ರಯತ್ನಕ್ಕೆ ಹೆಜ್ಜೆಯಿರಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿ ; ಶೀಘ್ರ ಅಪರೂಪದ ಕಾರ್ಯಕ್ಕೆ ಚಾಲನೆ
Team Udayavani, Sep 19, 2021, 2:55 PM IST
ಬೆಂಗಳೂರು: ಈ ನೆಲದ ಶ್ರೀಮಂತ ಜಾನ ಪದ ಸಂಸ್ಕೃತಿಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಕರ್ನಾಟಕ ಲಿಲಿತಕಲಾ ಅಕಾಡೆಮಿ
ಹೆಜ್ಜೆಯಿರಿಸಿದೆ. ಕನ್ನಡ ಜಾನಪದ ತ್ರಿಪದಿಗಳ ಸಂದೇಶವನ್ನು ಚಿತ್ರಕಲೆಯ ಮೂಲಕ ಹಿಡಿದಿಡುವ ನಿಟ್ಟಿನಲ್ಲಿ ಅಕಾಡೆಮಿ ಮುಂದಾಗಿದ್ದು ಇದಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಬೆನ್ನೆಲುಬಾಗಿ ನಿಲ್ಲಲಿದೆ.
ಕನ್ನಡದ ಜಾನಪದ ತ್ರಿಪದಿಗಳಲ್ಲಿ ನೀತಿಕಥೆ ಹುದುಗಿದೆ. ಅವುಗಳನ್ನು ಮತ್ತೆ ಜನರಿಗೆ ತಲುಪಿಸ ಬೇಕಾದ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಲಲಿಕತ ಅಕಾಡೆಮಿ ವಿಶಿಷ್ಟ ಯೋಜನೆ ರೂಪಿಸಿದ್ದು ಲಲಿತಕಲೆಯಲ್ಲಿ ತ್ರಿಪದಿಗಳನ್ನು ಹಿಡಿದಿಡುವ ಪ್ರಯತ್ನದಲ್ಲಿದೆ.
ಈ ಬಗ್ಗೆ ರಾಮನಗರದ ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಜಾನಪದ ಕಲಾವಿದರ ಮತ್ತು ಚಿತ್ರಕಲಾವಿದರ ಶಿಬಿರವನ್ನು ಹಮ್ಮಿಕೊಳ್ಳಲು ಅಕಾಡೆಮಿ ತೀರ್ಮಾನಿಸಿದೆ. ಆ ಶಿಬಿರದಲ್ಲಿ ಈ ನಾಡಿನ ಹಿರಿಯ ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಸೇರಿದಂತೆ ಅನೇಕ ಜಾನಪದ ಕಲಾವಿದರನ್ನು ಆಹ್ವಾನಿಸಿ ಅವರಿಂದ ಜಾನಪದ ತ್ರಿಪದಿಗಳನ್ನು ಹಾಡಿಸಿ ಆ ಜಾನಪದ ತ್ರಿಪದಿಗಳ ತತ್ವಗಳನ್ನು ಚಿತ್ರಕಲೆಯ ಮೂಲಕ
ಜೀವತಂವಾಗಿರಿಸುವ ಕಾರ್ಯ ನಡೆಯಲಿದೆ. ಇದಕ್ಕಾಗಿಯೇ ಲಲಿತಕ ಕಲಾ ಅಕಾಡೆಮಿ ಈಗಾಗಲೇ ಕರ್ನಾಟಕ ಜಾನಪದ ಪರಿಷತ್ತಿನೊಂದಿಗೆ
ಸಂಪರ್ಕದಲ್ಲಿದ್ದು ಶೀಘ್ರದಲ್ಲೇ ಈ ಅಪರೂಪದ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಅಕಾಡೆಮಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಮ್ಮ ಜಾನಪದ ತ್ರಿಪದಿಗಳಲ್ಲಿ ನೀತಿ ಸಂದೇಶವಿದೆ. ಅದನ್ನು ಕಲೆಯ ಮೂಲಕ ಜನರಿಗೆ ಮತ್ತೆ ತಲುಪಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಅಕಾಡೆಮಿ ಜಾನಪದ ಪರಿಷತ್ತಿನ ಜತೆಗೂಡಿ ಈ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಭಾರತದ ಬಯೋಟೆಕ್ ರಾಜಧಾನಿ: ಕೇಂದ್ರ ಸಚಿವ ಪಿಯೂಷ್ ಗೋಯಲ್
ಪುಸ್ತಕ ರೂಪ ನೀಡಲಾಗುವುದು: ಲಲಿತಕಲಾ ಅಕಾಡೆಮಿ ಈ ಬಾರಿ ಭಿನ್ನರೀತಿಯ ಯೋಜನೆ ರೂಪಿಸಿದೆ. ನಾಡಿನ ಹಿರಿಯ ಚಿತ್ರಕಲಾವಿದರು ಮತುಜಾನಪದ ಕಲಾವಿದರೊಡಗೂಡಿ ತ್ರಿಪದಿ ಸಂದೇಶಗಳಿಗೆ ಜೀವಬೆಸೆಯುವ ಕೆಲಸ ನಡೆಯಲಿದೆ. ಕಲಾವಿದರು ತ್ರಿಪದಿಗಳನ್ನು ಹಾಡಲಿದ್ದಾರೆ. ಆ ಹಾಡಿನ ಭಾವಕ್ಕೆ ತಕ್ಕಂತೆ ಹಿರಿಯ ಕಲಾವಿದರು ಕಲಾಕೃತಿ ಬಿಡಿಸಲಿದ್ದಾರೆ. ಜಾನಪದ ತ್ರಿಪದಿಗಳನ್ನು ಒಳಗೊಂಡ ಕಲಾ ಕೃತಿಗಳಿಗೆ ಪುಸ್ತಕ ರೂಪ ನೀಡಲಾಗುವುದು ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಹೇಳಿದ್ದಾರೆ. ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ್ಕ ಕೂಸು ಕಂದಯ್ಯ ಒಳಹೊರಗ ಆಡಿದರೆ ಬೀಸಣಿಕೆ ಗಾಳಿ ಸುಳಿದಾವು ಬ್ಯಾಸಗಿ ದಿವಸಕ ಬೇವಿನ ಮರತಂಪು ಭೀಮರತಿಯೆಂಪ ಹೊಳಿತಂಪು ಹಡೆದವ್ವ ನೀತಂಪು ನನ್ನ ತವರೀಗೆ ಇಂಥ ಹಲವಾರು ಜಾನಪದ ತ್ರಿಪದಿಗಳು ನಮಗೆ ದೊರೆಯಲಿವೆ. ಈ ಎಲ್ಲಾ ಜಾನಪದ
ತ್ರಿಪದಿಗಳನ್ನು ಕಲಾಕೃತಿಗಳಲ್ಲಿ ಹಿಡಿದಿಡಲಾಗುವುದು ಎಂದು ತಿಳಿಸಿದ್ದಾರೆ.
ಶಿಬಿರಕ್ಕಾಗಿ ಸಕಲ ಸಿದ್ಧತೆ
ಕರ್ನಾಟಕ ಜಾನಪದ ಪರಿಷತ್ತು ಈ ಶಿಬಿರಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ರಾಮನಗರ ಜಾನಪದ ಪರಿಷತ್ತಿನಲ್ಲಿ ಸೆ.27ರಂದು ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಪರಿಷತ್ತು ನೀಡಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದ್ದಾರೆ. ಜಾನಪದವನ್ನು ಉಳಿಸಿಬೆಳೆಸುವ ನಿಟ್ಟಿನ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದ್ದಾರೆ.
ಕನ್ನಡದ ಜಾನಪದ ತ್ರಿಪದಿಗಳನ್ನು ಕಲೆಯ ಮೂಲಕ ಹಿಡಿದಿಡುವ ಪ್ರಯತ್ನ ನಡೆದಿದೆ. ಇದಕ್ಕೆ ಕರ್ನಾಟಕ ಜಾನಪದ ಪರಿಷತ್ತು ಕೂಡ ಕೈ ಜೋಡಿಸಲಿದೆ.
-ಡಿ.ಮಹೇಂದ್ರ, ಅಧ್ಯಕ್ಷರು
ಕರ್ನಾಟಕ ಲಲಿತಕಲಾ ಅಕಾಡೆಮಿ
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ
Theft Case: ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ 50 ಲಕ್ಷ ಮೌಲ್ಯದ ಚಿನ್ನ ಕಳವು
Bengaluru: ಮದ್ಯಪಾನ, ಅತಿ ವೇಗದ ಚಾಲನೆ: 689 ಕೇಸ್, 1.33 ಲಕ್ಷ ರೂ. ದಂಡ
Bengaluru: ಪತ್ನಿ ಮೇಲಿನ ಕೋಪಕ್ಕೆ 4.5 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ
ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.