ಸಂಗೀತ ಲೋಕಕ್ಕೆ ಕರ್ನಾಟಕ ಸಂಗೀತವೇ ತಾಯಿ ಇದ್ದಂತೆ
Team Udayavani, May 28, 2017, 12:05 PM IST
ಬೆಂಗಳೂರು: ಇಡೀ ಸಂಗೀತ ಲೋಕಕ್ಕೆ ಕರ್ನಾಟಕ ಸಂಗೀತ ತಾಯಿ ಇದ್ದಂತೆ ಎಂದು ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ. ಶನಿವಾರ ಹಂಸಲೇಖ ಮ್ಯೂಸಿಕ್ ಟ್ರಸ್ಟ್ “ಐದನಿ’ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ಸಂಗೀತಕ್ಕೆ ಕರ್ನಾಟಕ ಸಂಗೀತ ಮಾತೃಭೂಮಿ ಇದ್ದಂತೆ. ಅದನ್ನು ಇನ್ನಷ್ಟು ಮೇಲೆ ಕೊಂಡೊಯ್ಯುವ ಕೆಲಸ ಆಗಬೇಕಿದ್ದು, ಆ ನಿಟ್ಟಿನಲ್ಲಿ ಹಂಸಲೇಖ ಶ್ರಮಿಸುತ್ತಿದ್ದಾರೆ ಎಂದರು.
“ಹಂಸಲೇಖ ಅವರು ಒಳ್ಳೆಯ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದಾರೆ. ನಮಿºಬ್ಬರ ಸಮ್ಮಿಲನದಲ್ಲಿ ಇದುವರೆಗೆ ಒಳ್ಳೆಯ ಹಾಡುಗಳೇ ಮೂಡಿ ಬಂದಿವೆ. ಸಂಗೀತ ಕ್ಷೇತ್ರದಲ್ಲಿ ಹಂಸಲೇಖ ಅವರಿಗೇ ಆದ ಒಂದು ಸ್ಥಾನಮಾನವಿದೆ. ದೇಸಿ ಸೊಗಡಿನ ಜಾನಪದ ಕಾರ್ಯಕ್ರಮ ಕೊಡುವ ಮೂಲಕ ನಮ್ಮ ಸಂಗೀತ ಮತ್ತು ಸಂಸ್ಕೃತಿಯ ಉಳಿವಿಗೆ ಹೋರಾಡಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದರು.
ದೇಸೀ ಸಂಗೀತಕ್ಕೆ ಅಡಿಪಾಯ ಹಾಕಿಕೊಟ್ಟಿರುವುದು ಹಂಸಲೇಖ ಅವರ ಮತ್ತೂಂದು ವಿಶೇಷ. ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಈಗ “ಐದನಿ’ ಮೂಲಕ ಹೊಸತನ್ನು ಹೇಳಲು ಹೊರಟಿದ್ದಾರೆ. ಐದು ಸ್ವರಗಳ ರಾಗವೇ “ಐದನಿ’. ಇದರ ವೈವಿದ್ಯವನ್ನು ತಿಳಿಸುವ ಪ್ರಯತ್ನಕ್ಕೆ ಹಂಸಲೇಖ ಮುಂದಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
“ಐದನಿ’ ಎಂಬುದು ಜನಪದ ಸಂಗೀತದ ಶಾಸ್ತ್ರೋಕ್ತ ಶಿರೋನಾಮೆ ಇದ್ದಂತೆ. ಮುಂದಿನ ದಿನಗಳಲ್ಲಿ ದೇಸೀ ಶಾಸ್ತ್ರೀಯ ಸಂಗೀತಕ್ಕೆ ಐದನಿಯೇ ಅಡಿಪಾಯ ಆಗಲಿದೆ. ಇನ್ನು ಹಂಸಲೇಖ ಸಂಗೀತದಲ್ಲಿ ನಾನು ಹಾಡಿರುವ ಅನೇಕ ಹಾಡುಗಳು ಯಶಸ್ವಿಯಾಗಿವೆ ಎಂದು ಹೇಳಿದ ಅವರು, ಹಂಸಲೇಖ ಅವರ ಈ ವಿನೂತನದ “ಐದನಿ’ ಕಾರ್ಯಕ್ರಮ ಯಶಸ್ವಿಯಾಗಲಿ’ ಎಂದು ಹಾರೈಸಿದರು.
“ಐದನಿ’ ಕಾರ್ಯಕ್ರಮ ಕುರಿತು ಮಾತನಾಡಿದ ಹಂಸಲೇಖ, “ಆಗಸ್ಟ್ 21ರ ಜಾನಪದ ದಿನದಂದು “ಐದನಿ’ಗೆ ಚಾಲನೆ ಸಿಗಲಿದೆ. ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು “ಐದನಿ 2017′ ಉದ್ಘಾಟಿಸಲಿದ್ದಾರೆ. ಕಲೆಯ ಮೂಲಕ ಅಣ್ವಸ್ತ್ರದ ಬೆದರಿಕೆಯನ್ನು ಹೋಗಲಾಡಿಸುವ ಸಣ್ಣ ಪ್ರಯತ್ನವನ್ನು ಐದನಿ ಮೂಲಕ ಮಾಡುವುದು ಡಲಾಗುವುದು. ನಮ್ಮ ಮ್ಯೂಸಿಕ್ ಟ್ರಸ್ಟ್‌ನಿಂದ ಐದನಿ ಮೂಲ ಕಂಡು ಹಿಡಿಯಲು ಕಳೆದ 12 ವರ್ಷಗಳಿಂದಲೂ ಸಂಶೋಧನೆ ನಡೆಸಲಾಗಿದೆ ಎಂದು ವಿವರಿಸಿದರು.
2018, ಆಗಸ್ಟ್ 21 ರಿಂದ ಒಂದು ವಾರ “ಜಗತ್ ಜನಪದ ಜಾತ್ರೆ’ ನಡೆಸಲು ಉದ್ದೇಶಿಸಲಾಗಿದೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ದೇಸಿ ಹಬ್ಬವಾಗಿ ಆಚರಣೆಯಾಗಲಿದೆ. ಈ ಜಾತ್ರೆಯಲ್ಲಿ ಐದನಿಯ ವಿಶೇಷ ಹಾಗೂ ಟ್ರಸ್ಟ್‌ನ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ವಿವರಿಸಲಾಗುವುದು. ಭಾರತದ 30 ರಾಜ್ಯಗಳ, ವಿಶ್ವದ 15 ರಾಷ್ಟ್ರಗಳ ಜನಪದ ಕಲಾವಿದರು, ತಜ್ಞರು, ಪ್ರತಿನಿಧಿಗಳು ಈ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಐದನಿ ಕಾರ್ಯಕ್ರಮ ಮೂಲಕ ಹನ್ನೊಂದು ತಿಂಗಳ 45 ಪರಿಷ್ಕೃತ ಪ್ರಯೋಗ ಪ್ರದರ್ಶನಗಳನ್ನು ನಡೆಸಲಾಗುವುದು. ಹಂಸಲೇಖ ಮ್ಯೂಸಿಕ್ ಟ್ರಸ್ಟ್ ಮಾಡಿರುವ ಇದುವರೆಗಿನ ಸಾಧನೆ ಕುರಿತು ಆ ಜಗತ್ ಜನಪದ ಜಾತ್ರೆಯಲ್ಲಿ ತಿಳಿಸಿಕೊಡಲಾಗುವುದು. ಇದರೊಂದಿಗೆ ಟ್ರಸ್ಟ್ ವತಿಯಿಂದ 11 ತಿಂಗಳ ಕಾಲ ನಡೆದ ಪ್ರಯೋಗಗಳನ್ನೂ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮನಗೌಡ ಅವರನ್ನು ಹಂಸಲೇಖ ಮ್ಯೂಸಿಕ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುಕ್ರಿ ಬೊಮ್ಮನಗೌಡ ಅವರು, ಹಂಸಲೇಖ ಅವರ ಈ “ಐದನಿ’ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.