ಎಸೆಸೆಲ್ಸಿ ಫ‌ಲಿತಾಂಶ: ಇಬ್ಬರಿಗೆ 625ಕ್ಕೆ 625


Team Udayavani, May 8, 2018, 6:00 AM IST

SSLC–top-udupi.jpg

ಬೆಂಗಳೂರು: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಎಸೆಸೆಲ್ಸಿ ಬೋರ್ಡ್‌) ಸೋಮವಾರ ಪ್ರಕಟಿಸಿದ ಫ‌ಲಿತಾಂಶದಲ್ಲಿ ರಾಜ್ಯದ ಆರು ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.71.93ರಷ್ಟು ಫ‌ಲಿತಾಂಶ ದಾಖಲಾಗಿದೆ. ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಹಾಗೂ 8 ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾರೆ.

ಪರೀಕ್ಷೆ ಬರೆದಿದ್ದ 8,38,088 ವಿದ್ಯಾರ್ಥಿ ಗಳಲ್ಲಿ 6,02,802 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿಯ ಫ‌ಲಿತಾಂಶದಲ್ಲಿ ಶೇ. 4.06ರಷ್ಟು ಹೆಚ್ಚಳವಾಗಿದೆ. ಶೈಕ್ಷಣಿಕ ಜಿಲ್ಲಾವಾರು ಫ‌ಲಿತಾಂಶದಲ್ಲಿ ಉಡುಪಿ, ಉತ್ತರ ಕನ್ನಡ, ಚಿಕ್ಕೋಡಿ ಹಾಗೂ ದಕ್ಷಿಣ ಕನ್ನಡ ಕ್ರಮವಾಗಿ ಮೊದಲ 4 ಸ್ಥಾನ ಪಡೆದಿವೆ. ಬೀದರ್‌ ಹಾಗೂ ಯಾದಗಿರಿ ಕೊನೆಯ ಎರಡು ಸ್ಥಾನಕ್ಕೆ ಇಳಿದಿವೆ.

ಇಬ್ಬರಿಗೆ ಪೂರ್ಣಾಂಕ: ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆಯ ಎಂ.ಎಸ್‌. ಯಶಸ್‌, ಬೆಂಗಳೂರಿನ ಬನಶಂಕರಿಯ ಹೋಲಿ ಚೈಲ್ಡ್‌ ಆಂಗ್ಲಮಾಧ್ಯಮ ಪ್ರೌಢಶಾಲೆಯ ಕೆ.ಎಸ್‌.ಸುದರ್ಶನ್‌ 625ಕ್ಕೆ 625 ಅಂಕ ಪಡೆದಿದ್ದಾರೆ. ಉಡುಪಿ ಕುಂಜಿಬೆಟ್ಟಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮೇಧಾ ಎನ್‌. ಭಟ್‌, ಬೆಳಗಾವಿಯ ಸೈಂಟ್‌ ಕ್ಸೇವಿಯರ್‌ ಪ್ರೌಢ ಶಾಲೆಯ ಮೊಹಮ್ಮದ್‌ ಕೈಫ್ ಮುಲ್ಲಾ, ಮೈಸೂ ರಿನ ಸದ್ವಿದ್ಯಾ ಪ್ರೌಢಶಾಲೆಯ ಅದಿತಿ ಎ.ರಾವ್‌, ಮರಿಮಲ್ಲಪ್ಪ ಪ್ರೌಢಶಾಲೆಯ ಶಿವಾನಿ ಎಂ. ಭಟ್‌,  ನೆಲಮಂಗಲದ ಥಾಮಸ್‌ ಮೆಮೋ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಎಂ.ಎ. ಶ್ರೀನಿವಾಸ್‌, ಮೈಸೂರಿನ ಸದ್ವಿದ್ಯಾ ಪ್ರೌಢ ಶಾಲೆಯ ಆರ್‌. ಕೀರ್ತನಾ, ಮೂಡಬಿದಿರೆ ಆಳ್ವಾಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಲಾ ಪ್ರಶಾಂತ, ವಿವಿ ಪುರಂನ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ಬಿ.ಎಸ್‌. ಶ್ರೀಹರಿ ಅಡಿಗ 625ಕ್ಕೆ 624 ಅಂಕ ಪಡೆದಿದ್ದಾರೆ. 

ಚುನಾವಣ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ| ಎಂ.ಟಿ. ರೆಜು, ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ಮಲ್ಲೇಶ್ವರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ಫ‌ಲಿತಾಂಶ ಪ್ರಕಟಿಸಿದರು.

24 ಗಂಟೆಗಳ ಕಾಲ ಓದುತ್ತಿರಲಿಲ್ಲ. ಟಾಪ್‌-5ನಲ್ಲಿ ಬರುತ್ತೇನೆಂಬ ನಿರೀಕ್ಷೆ ಇತ್ತು, ಇದೀಗ ಟಾಪ್‌-1 ಬಂದಿರುವುದು ಖುಷಿಯಾಗಿದೆ. ಏರೋನಾಟಿಕಲ್‌ ಇಂಜಿನಿಯರ್‌ ಆಗುವಾಸೆಯಿದೆ.
– ಎಂ.ಎಸ್‌.ಯಶಸ್‌

ಶಾಲೆಯ ಪಾಠದ ಜತೆಗೆ ಟ್ಯೂಷನ್‌ಗೆ ಹೋಗುತ್ತಿದ್ದೆ. 625ಕ್ಕೆ 625 ಅಂಕ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಐಐಟಿಯಲ್ಲಿ ಅಧ್ಯಯನ ನಡೆಸಬೇಕೆಂಬ ಬಯಕೆ ಇದೆ.
– ಸುದರ್ಶನ್‌

ಪೂರಕ ಪರೀಕ್ಷೆ :
ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ.19ರ ತನಕ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಹಾಗೆಯೇ ಅಂಕಗಳ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಮೇ 8ರಿಂದಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪೂರಕ ಪರೀಕ್ಷೆ ವೇಳಾಪಟ್ಟಿ:
ಜೂ.21ಕ್ಕೆ ಗಣಿತ
ಜೂ.22ಕ್ಕೆ ಪ್ರಥಮ ಭಾಷೆ(ಕನ್ನಡ, ತೆಲಗು, ಹಿಂದಿ ಇತ್ಯಾದಿ)
ಜೂ.25ಕ್ಕೆ ವಿಜ್ಞಾನ
ಜೂ.26ಕ್ಕೆ ದ್ವಿತೀಯ ಭಾಷೆ(ಇಂಗ್ಲಿಷ್‌, ಕನ್ನಡ)
ಜೂ.27ಕ್ಕೆ ಸಮಾಜ ವಿಜ್ಞಾನ
ಜೂ.28ಕ್ಕೆ ತೃತೀಯ ಭಾಷೆ(ಹಿಂದಿ, ಕನ್ನಡ, ತಮಿಳು, ಇಂಗ್ಲಿಷ್‌ ಇತ್ಯಾದಿ)

ಪರೀಕ್ಷಾ ಮಂಡಳಿಯಿಂದ ತೆಗೆದುಕೊಂಡ ಹಲವು ಕ್ರಮಗಳಿಂದಾಗಿ ಫ‌ಲಿತಾಂಶದಲ್ಲಿ ಏರಿಕೆಯಾಗಿದೆ. ಆನ್‌ಲೈನ್‌ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಿದ್ದೇವೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಇರುತ್ತದೆ. ಹೀಗಾಗಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ.
– ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ

ರೆಗ್ಯೂಲರ್‌ ವಿದ್ಯಾರ್ಥಿಗಳ ಫ‌ಲಿತಾಂಶ
ಶಾಲೆ         ಶಾಲೆಗಳ ಸಂಖ್ಯೆ         ಹಾಜರಾದವರು      ತೇರ್ಗಡೆ       ಫಲಿತಾಂಶ
ಸರ್ಕಾರಿ             5,191            2,85,594        2,14,545        75.12
ಅನುದಾನಿತ        3,269            2,08,227        1,58,819        76.27
ಅ.ರಹಿತ             5,927            2,50,640        2,08,154        83.05
ಒಟ್ಟು             14,387            7,44,461        5,81,518        78.11

ಲಿಂಗವಾರು ಫ‌ಲಿತಾಂಶ
ವಿಭಾಗ         ಹಾಜರಾತಿ         ಉತ್ತೀರ್ಣ       ಫಲಿತಾಂಶ
ಬಾಲಕರು        4,45,402        2,96,475        66.56
ಬಾಲಕಿಯರು     3,92,686        3,06,327        78.01

ನಗರ ಮತ್ತು ಗ್ರಾಮಾಂತರ ಫ‌ಲಿತಾಂಶ
ಪ್ರದೇಶ        ಹಾಜರಾತಿ         ತೇರ್ಗಡೆ        ಫಲಿತಾಂಶ
ನಗರ         3,76,191        2,60,998        69.38
ಗ್ರಾಮಾಂತರ    4,61,897        3,41,804        74.00    

ಮಾಧ್ಯಮವಾರು ಸಾಧನೆ
ಮಾಧ್ಯಮ        ಹಾಜರಾತಿ        ಉತ್ತೀರ್ಣ         ಫಲಿತಾಂಶ
ಕನ್ನಡ            5,10,949        3,43,999         67.33
ಇಂಗ್ಲಿಷ್‌        2,88,202          2,34,099        81.23
ಉರ್ದು           25,465           14,589           57.29
ಮರಾಠಿ          12,773            9,689            75.86
ತೆಲುಗು             343              224               65.31
ತಮಿಳು            171               85                 49.71
ಹಿಂದಿ              185               117               63.24

10 ವರ್ಷಗಳ ಶೇಕಡಾವಾರು ಫ‌ಲಿತಾಂಶ:
ವರ್ಷ    ಶೇ.ಫಲಿತಾಂಶ
2009    70.22
2010    66.81
2011    73.90
2012    76.13
2013    77.47
2014    81.20
2015    81.82
2016    75.11
2017    67.87
2018    71.93

ಶೇ.100 ಮತ್ತು ಶೂನ್ಯ ಫಲಿತಾಂಶದ ಶಾಲೆಗಳು
ಶಾಲೆ         ಶೇ.100        ಶೂನ್ಯ
ಸರ್ಕಾರಿ        102            6
ಅನುದಾನಿತ    414            2
ಅ.ರಹಿತ        826            35
ಒಟ್ಟು            1,342        43

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
ಅಂಕ            ವಿದ್ಯಾರ್ಥಿಗಳ ಸಂಖ್ಯೆ
625                2
624                8
623                12
622                22
621                35
620                39

ಜಿಲ್ಲಾವಾರು ಫಲಿತಾಂಶ ಮತ್ತು ಸ್ಥಾನ
ಸ್ಥಾನ     ಜಿಲ್ಲೆ  
 
1        ಉಡುಪಿ
2        ಉತ್ತರ ಕನ್ನಡ
3        ಚಿಕ್ಕೋಡಿ
4        ಮಂಗಳೂರು
5        ಮಧುಗಿರಿ
6        ಬೆಳಗಾವಿ
7        ಹಾಸನ
8        ಕೋಲಾರ
9        ವಿಜಯಪುರ
10       ತುಮಕೂರು
11       ಮೈಸೂರು    
12       ಬಳ್ಳಾರಿ
13       ಧಾರವಾಡ    
14       ಬೆಂ.ಗ್ರಾಮಾಂತರ
15       ದಾವಣಗೆರೆ
16       ಚಿತ್ರದುರ್ಗ
17       ರಾಮನಗರ
18       ಕೊಡಗು
19       ಕೊಪ್ಪಳ
20       ಶಿವಮೊಗ್ಗ
21       ಶಿರಸಿ
22       ಬೆಂಗಳೂರು ಉತ್ತರ
23       ಹಾವೇರಿ
24       ಚಾಮರಾಜನಗರ
25       ಬಾಗಲಕೋಟೆ
26       ಚಿಕ್ಕಮಗಳೂರು
27       ಬೆಂಗಳೂರು ದಕ್ಷಿಣ
28       ಮಂಡ್ಯ
29       ರಾಯಚೂರು
30       ಕಲಬುರಗಿ
31       ಚಿಕ್ಕಬಳ್ಳಾಪುರ
32       ಗದಗ
33       ಬೀದರ್‌
34       ಯಾದಗಿರಿ

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.