ಕೃಷಿಗೆ ನೀರು ಬಳಸಲು ಕರ್ನಾಟಕ ಕಸರತ್ತು
Team Udayavani, Feb 10, 2018, 6:50 AM IST
ಪಣಜಿ: ಕರ್ನಾಟಕವು ಮಹದಾಯಿ ನದಿ ನೀರನ್ನು ಮಲಪ್ರಭೆಗೆ ತಿರುಗಿಸುತ್ತಿರುವುದು ಕುಡಿಯುವ ನೀರಿಗಾಗಿ ಅಲ್ಲ, ಕೃಷಿ
ಚಟುವಟಿಕೆಗೆ ಎಂದು ಗೋವಾ ಪರ ವಕೀಲ ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ನ್ಯಾಯಾಧಿಕರಣದಲ್ಲಿ ವಾದ
ಮಂಡಿಸಿದ್ದಾರೆ.
ಕುಡಿಯಲು ನೀರು ಅಗತ್ಯವಿದೆ ಎಂದು ಹೇಳಿ ಕರ್ನಾಟಕವು ಟ್ರಿಬುನಲ್‌ನ ದಿಕ್ಕು ತಪ್ಪಿಸುತ್ತಿದೆ. ಕರ್ನಾಟಕವು ಸಾದರಪಡಿಸಿದ
ವಿವಿಧ ದಸ್ತಾವೇಜ್ ಆಧಾರವಾಗಿಟ್ಟುಕೊಂಡು ಇದನ್ನು ಸಿದಟಛಿಪಡಿಸುವ ಪ್ರಯತ್ನವನ್ನೂ ನಾಡಕರ್ಣಿ ಮಾಡಿದರು. ಕರ್ನಾಟಕದ ಪರ ಸಾಕ್ಷಿದಾರ ಮಾದೇಗೌಡರು ಕೂಡ ಪ್ರತಿಜ್ಞಾ ಪತ್ರದಲ್ಲಿ ಮಲಪ್ರಭೆಗೆ ಮಹದಾಯಿ ನದಿ ನೀರನ್ನು ತಿರುಗಿಸಿದ ನಂತರ ಅದನ್ನು ಕೃಷಿಗೆ ಬಳಸಲಾಗುತ್ತದೆ ಎಂದು ನಮೂದಿಸಿದ್ದಾರೆ. ಇದರಿಂದಾಗಿ ಕರ್ನಾಟಕದ ಮುಚ್ಚಿಟ್ಟಿದ್ದ ವಿಷಯ ಬೆಳಕಿಗೆ ಬಂದಂತಾಗಿದೆ. ಅಲ್ಲದೆ ಮಹದಾಯಿ ಹೋರಾಟದಲ್ಲಿದ್ದವರು ಹೆಚ್ಚು ರೈತರೇ ಎಂದು ಕರ್ನಾಟಕದ ವಿರುದಟಛಿ ನಾಡಕರ್ಣಿ ವಾದ ಮಂಡಿಸಿದರು.
ಅಧ್ಯಯನ ನಡೆಸಿಲ್ಲ: ಕರ್ನಾಟಕವು ಯಾವುದೇ ಅಧ್ಯಯನ ನಡೆಸದೆಯೇ ವರದಿ ಮಾಡಿದೆ. ವರದಿಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಹುಬ್ಬಳ್ಳಿ- ಧಾರವಾಡ ನಗರದ ನೀರಿನ ಅಗತ್ಯವನ್ನು ಪೂರೈಸಲು ಅಲ್ಲಿಯೇ ಪರ್ಯಾಯ ಮಾರ್ಗವಿದೆ. ಮಹದಾಯಿ ನದಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಇದರಿಂದಾಗಿ ಆ ಭಾಗದಲ್ಲಿ ಮಹಾಪುರ ಬರುತ್ತದೆ. ಹಾಗಾಗಿ ಮಹದಾಯಿ ನದಿ ನೀರನ್ನು ಮಲಪ್ರಭೆಗೆ ತಿರುಗಿಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕವು ನ್ಯಾಯಾಧೀಕರಣದಲ್ಲಿ ಹೇಳಿರುವುದು ಸಂಪೂರ್ಣ ಸುಳ್ಳು ಎಂದಿದ್ದಾರೆ.
ಮಹದಾಯಿ ನದಿಯ ಭಾಗದಲ್ಲಿ ಎಷ್ಟು ಮಳೆಯಾಗುತ್ತದೆ ಎಂಬುದನ್ನು ಚೇತನ್ ಪಂಡಿತ್ ತಮ್ಮ ಸಾಕ್ಷಿಯಲ್ಲಿ ವಿವರಿಸಿದ್ದಾರೆ.
ಸಿಡಬುಸಿ ವರದಿಯಲ್ಲಿ ನಮೂದಿಸಲಾಗಿರುವ ಮಳೆಯ ಪ್ರಮಾಣ ತಪ್ಪಾಗಿದೆ. ಈ ವರದಿಗೆ ಜಲ ಆಯೋಗವೂ ಕೂಡ
ಮಾನ್ಯತೆ ನೀಡಿಲ್ಲ ಎಂದು ನಾಡಕರ್ಣಿ ವಾದಿಸಿದರು.
ಗೋವಾ ಸ್ಪಷ್ಟೀಕರಣ ನೀಡಲಿ: ಕರ್ನಾಟಕವು ಕಳಸಾ- ಬಂಡೂರಿ ನಾಲೆ ಯೋಜನೆ ಸಿದಟಛಿಪಡಿಸುವ ಮುನ್ನ ಅಂದು ಆಡಳಿತದಲ್ಲಿದ್ದ ಗೋವಾ ಸರ್ಕಾರವನ್ನು ಕರ್ನಾಟಕವು ವಿಶ್ವಾಸಕ್ಕೆ ತೆಗೆದುಕೊಂಡಿತ್ತು.
2007ರಲ್ಲಿ ಗೋವಾ ಸರ್ಕಾರವು ಕಳಸಾ-ಬಂಡೂರಿ ನಾಲೆ ನಿರ್ಮಾಣಕ್ಕೆ ತನ್ನ ಆಕ್ಷೇಪವಿಲ್ಲ ಎಂದು ಲಿಖೀತವಾಗಿ ಕರ್ನಾಟಕಕ್ಕೆ
ಸ್ಪಷ್ಟಪಡಿಸಿತ್ತು. ಇದರಿಂದಾಗಿ ಕರ್ನಾಟಕವು ಕಳಸಾ-ಬಂಡೂರಿ ನಾಲೆ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು
ಮಾಡಿದೆ ಎಂದು ಕರ್ನಾಟಕವು ಗೋವಾದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದಾಗಿ ಪ್ರಾಥಮಿಕ ಆಕ್ಷೇಪಕ್ಕೆ ಗೋವಾ
ಸ್ಪಷ್ಟೀಕರಣ ನೀಡಬೇಕು ಎಂದು ನ್ಯಾಯಾಧಿಕರಣವು ನಾಡಕರ್ಣಿಯನ್ನು ಪ್ರಶ್ನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.