ಬಿಜೆಪಿಯ ನಿಷ್ಠಾವಂತ ನಾಯಕ ; ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು


Team Udayavani, Jun 20, 2020, 9:25 AM IST

ಬಿಜೆಪಿಯ ನಿಷ್ಠಾವಂತ ನಾಯಕ ; ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು

ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಸಂಘಟನಾ ಚತುರನಾಗಿ, ಶಿಸ್ತುಬದ್ಧ ರಾಜಕಾರಣಿಯಾಗಿ ಬೆಳೆದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಅಧಿಕಾರ ಇರಲಿ, ಇಲ್ಲದಿರಲಿ ಜನರ ಮಧ್ಯೆ ಇದ್ದು, ಜನಸೇವೆ ಮಾಡುವ ಮನಸ್ಥಿತಿಯುಳ್ಳವರು. ದೇಹಕ್ಕೆ ವಯಸ್ಸಾಗಬಹುದು, ಹೃದಯಕ್ಕೆ ನಿಶ್ಶಕ್ತವಾಗಬಹುದು. ಆದರೆ, ಮನಸ್ಸಿಗೆ ವಯಸ್ಸಾಗುವುದಿಲ್ಲ. ಅದು ಸದಾ ಕಾರ್ಯಶೀಲವಾಗಿರುತ್ತದೆ ಅನ್ನುವ ಅವರು ನಾವು ಇರಲಿ, ಇಲ್ಲದಿರಲಿ, ನಾವು ಮಾಡಿರುವ ಕೆಲಸಗಳನ್ನು ಮಾತ್ರ ನಮ್ಮನ್ನು ಗುರುತಿಸುತ್ತವೆ. ಆದ್ದರಿಂದಲೇ ಹಿಂದೆ ಮಾಡಿರುವುದನ್ನು ಹೇಳುತ್ತೇನೆ, ಈಗ ಮಾಡುತ್ತಿರುವುದನ್ನೂ ಹೇಳುತ್ತೇನೆ, ಮುಂದೆ ಮಾಡುವುದನ್ನೂ ಹೇಳುತ್ತೇನೆ ಎನ್ನುವ ಬಿಚ್ಚು ಮನಸ್ಸಿನ ನಾಯಕ ಎಂತಲೇ ಸಿಎಂ ಯಡಿಯೂರಪ್ಪ ಅವರ ಆತ್ಮೀಯರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ರಾಜಕಾರಣದಲ್ಲಿ ನಾಯ್ಡು ನಡೆದು ಬಂದ ದಾರಿ
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಮೂಲತಃ ವ್ಯವಹಾರಸ್ಥರಾದರೂ ಕಷ್ಟದಲ್ಲಿರುವವರನ್ನು ಕಂಡರೆ ಕರಗುವ ಮನಸ್ಸುಳ್ಳವರು. ನೊಂದವರ ನೆರವಿಗೆ ಧಾವಿಸುವ ಮನಸ್ಥಿತಿಯುಳ್ಳ ಅವರು ನೇರ, ನಿಷ್ಠ ಹಾಗೂ ಶಿಸ್ತುಬದ್ಧ ಬದುಕನ್ನು ಅಳವಡಿಸಿಕೊಂಡಿದ್ದಾರೆ. 1993ರಲ್ಲಿ ಭಾರತೀಯ ಜನತಾ ಪಕ್ಷ ಸೇರಿ ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿ, ಮುಖಂಡರಾಗಿ, ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ನಾಯ್ಡು ಅವರ ಸಂಘಟನಾ ಚಾತುರ್ಯ ಗಮನಿಸಿದ ಪಕ್ಷ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ತೀರ್ಮಾನಿಸಿತು.

ಬಿಜೆಪಿಯ ಹಿರಿಯ ನಾಯಕರು ಅವರನ್ನು ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದರು. ನಾಯ್ಡು ಅವರು ಎದೆಗುಂದದೆ 1994ರಲ್ಲಿ ಚುನಾವಣೆ ಎದುರಿಸಿ ಮೊದಲ ಬಾರಿಗೆ ಸೋಲನ್ನು ಕಂಡರಾದರೂ, ಸೋಲಿನ ಪರಾಮರ್ಶೆಯನ್ನು ನಡೆಸಿದರು. ಅಧಿಕಾರವಿಲ್ಲದಿದ್ದರೂ ಜನರಿಗೆ ಹತ್ತಿರವಾಗುವ ಕಾರ್ಯಕ್ರಮಗಳನ್ನು ಸ್ವತಃ ರೂಪಿಸಿಕೊಂಡರು.

ತಾನು ದುಡಿದ ಹಣದಲ್ಲಿ ಕ್ಷೇತ್ರಾದ್ಯಂತ ಸ್ವಚ್ಛತೆ, ಶಿಕ್ಷಣ, ಆರೋಗ್ಯ ಒದಗಿಸುವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೆಲೆಯೂರಿದರು. ಅದರ ಪ್ರತಿಫ‌ಲ 1999ರ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದಲೇ ಗೆದ್ದು ಶಾಸಕರಾದರು. 2003ರಲ್ಲಿ ಮತ್ತೇ ಶಿವಾಜಿನಗರದಲ್ಲಿ ಗೆಲುವು ಕಂಡ ನಾಯ್ಡು ಅವರಿಗೆ ಪಕ್ಷ 2008ರಲ್ಲಿ ಹೆಬ್ಟಾಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಸೂಚಿಸಿತು. ಅದನ್ನೂ ಚಾಲೆಂಜ್‌ ಆಗಿ ತೆಗೆದುಕೊಂಡು ಅಲ್ಲೂ ಕೂಡ ಗೆಲುವನ್ನು ದಾಖಲಿಸಿ ಸಚಿವರಾದರು. ಎಲ್ಲದಕ್ಕೂ ಅವರ ಪಕ್ಷ ನಿಷ್ಠೆ ಹಾಗೂ ಅವರ ಕೈಗೊಂಡ ಅಭಿವೃದ್ಧ ಕೆಲಸಗಳು ಸಾಕ್ಷಿಯಾದವು.

ಯಡಿಯೂರಪ್ಪ ಅವರ ಪ್ರೀತಿಗೆ ಪಾತ್ರರು

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು 1994ರಿಂದಲೂ ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ಸದಾ ಮುಂಚೂಣಿ ಪಾತ್ರ ವಹಿಸುತ್ತಿದ್ದು, ಪ್ರಸ್ತುತ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಸುಮ್ಮನೆ ಕುಳಿತುಕೊಳ್ಳುವ ಸ್ವಭಾವ ಅವರದ್ದಲ್ಲ. ಕಷ್ಟಕಾಲದಲ್ಲಿ ಜನರ ಮಧ್ಯೆ ಹೋಗಿ ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಅವರ ನೇರ, ದಿಟ್ಟ, ಮುಚ್ಚುಮರೆಯಿಲ್ಲದ ನುಡಿಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ.

ಸಚಿವರಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು
ಬಿಡಬ್ಲ್ಯುಎಸ್‌.ಎಸ್‌.ಬಿ. ಮಿನಿಸ್ಟ್ರಾಗಿದ್ದ ಅವಧಿಯಲ್ಲಿ ನಾಯ್ಡು ಅವರು ಬೆಂಗಳೂರಿಗೆ 500 ಎಂಎಲ್‌ಡಿ ನೀರು ತರುವ ಯೋಜನೆ ಹಾಕಿಕೊಂಡಿದ್ದರು. ಶೇ.90 ರಷ್ಟು ಕೆಲಸ ಮುಗಿಸಿದ್ದ ಅವರು ಉಳಿಕೆ ಕೆಲಸವನ್ನು ಸುರೇಶ್‌ ಕುಮಾರ್‌ ಅವರು ಪೂರೈಸಿದರು. ನಾಯ್ಡು ಅವರೇ ಖುದ್ದು ಜೈಕೊ ಬ್ಯಾಂಕಿಗೆ ಹೋಗಿ ಸಾಲ ಮಂಜೂರು ಮಾಡಿಸಿ, ಆರೇಳು ವರ್ಷ ಆಗುವ ಯೋಜನೆಯನ್ನು ಮೂರು ವರ್ಷದಲ್ಲಿ ಕೆಲಸ ಮುಗಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಯೋಜನೆ ಪೂರ್ಣಗೊಳಿಸಿರುವುದು. ಅವರಿಗೆ ಅತ್ಯಂತ ಸಂತಸ ತಂದ ಕಾರ್ಯ.

ಇದಲ್ಲದೆ, ಕಾವೇರಿ 4ಸ್ಟೇಜ್‌ 3ಮೂರನೇ ಫೇಸ್‌ ತರಬೇಕೆಂಬ ಯೋಜನೆಯನ್ನೂ ಹಾಕಿಕೊಂಡಿದ್ದರು. ಪ್ರಸ್ತುತ ಅದು ಸ್ಥಗಿತಗೊಂಡಿದೆ. ಅದು ಆಗಬೇಕಾದ ಕಾರ್ಯ. ಇದನ್ನು ಸಿಎಂ ಅವರ ಗಮನಕ್ಕೆ ತರುತ್ತೇನೆ. ಇದರ ಜತೆಯಲ್ಲಿ ಬೆಂಗಳೂರಿಗೆ ಬರುವ ಕಾವೇರಿ ನೀರಿನ ಪೈಪ್‌ಲೈನ್‌ಗೆ ಒಂದು ಸ್ಟಾಂಡ್‌ಬೈ ಲೈನ್‌ ಹಾಕಬೇಕು. ಒಂದನೇ ಹಂತದ ಪೈಪ್‌ಗಳು ತೂತುಗಳಾಗಿವೆ. ಹೊಸದಾಗಿ 1000 ಎಂಎಲ್‌ಡಿ ಕೆಪಾಸಿಟಿ ಪೈಪ್‌ಗ್ಳನ್ನು ಹಾಕಬೇಕು. ಇದಕ್ಕೆ ಸುಮಾರು 6000 ಕೋಟಿ ಖರ್ಚಾಗುತ್ತದೆ. ಅಲ್ಲಲ್ಲಿ ರಿಜರ್ವಾಯರ್ ನಿರ್ಮಾಣ ಮಾಡಿಕೊಳ್ಳುವುದರಿಂದ ವ್ಯರ್ಥವಾಗಿ ಹೋಗುವ ನೀರು ನಮಗೆ ದೊರಕುತ್ತದೆ ಹಾಗೂ ಈ ಭಾಗದ ಅಂತರ್ಜಲ ಕೂಡ ವೃದ್ಧಿಸುತ್ತದೆ. ಇದು ಮಾಡಬೇಕೆಂಬ ಕನಸಿತ್ತು. ಆದರೆ, ಇದು ಸಾಧ್ಯವಾಗದಾಯಿತು ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ, ಎಲ್ಲ ಕಡೆಗಳಲ್ಲೂ ಚೆಕ್‌ ಡ್ಯಾಂಗಳಾಬೇಕಾಗಿವೆ. ಶುದ್ಧೀಕರಣ ಘಟಕಗಳನ್ನು ಹೆಚ್ಚು ಮಾಡಬೇಕು. ಕೆರೆಗಳನ್ನು ರಿಜರ್ವಾಯರ್‌ಗಳಂತೆ ಬಳಸಿಕೊಂಡು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಬರಡು ಭೂಮಿಗೆ ನೀರು ಹರಿಸಬಹುದಾಗಿತ್ತು. ಆಲಮಟ್ಟಿ ಡ್ಯಾಂನಿಂದ ನೀರುವ ತರುವ ಕನಸು ಕೂಡ ಹಾಗಿಕೊಂಡಿದ್ದರು. ಅದು ಅಂದು ದೊಡ್ಡ ವಿವಾದಕ್ಕೀಡಾಗಿತ್ತು. ಕೈಗಾರಿಕಾ ಸಚಿವರಾಗಿದ್ದಾಗ ನಾಯ್ಡು ಅವರು 45 ಸಾವಿರ ಎಕರೆಗಳನ್ನು ಮಂಜೂರು ಮಾಡಿಸಿ, ಭೂಸ್ವಾಧೀಪಡಿಸಿಕೊಂಡು ಕೆಲವು ನೋಟಿಫಿಕೆಷನ್‌ಗೆ ತಂದಿದ್ದರು. ಇದು ಸಹ ಅವರಿಗೆ ಸಂತೋಷ ತರುವ‌ ಸಂಗತಿ. ಕೌಶಲ್ಯ ತರಬೇತಿ ಯೋಜನೆ ಜಾರಿಗೆ ತಂದಿದ್ದು ಇವರ ಅವಧಿಯಲ್ಲೇ.

ವಸತಿ ಸಚಿವರಾಗಿದ್ದಾಗ ಸೆಲ್ಫ್ ಫೈನಾನ್ಸಿಂಗ್‌ ಪ್ರಾಜೆಕ್ಟ್ ಪರಿಚಯಿಸಿ 47 ಸಾವಿರ ಕೋಟಿ ರೂ.ಗಳ ಬಜೆಟ್ಟನ್ನು ತಯಾರಿಸಿ, ವಿಧಾನ ಮಂಡಲದಲ್ಲಿ ಅನುಮೋದನೆ ಪಡೆದಿದ್ದರು. ಅದನ್ನು ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ ಅವರಿಗೆ ಸಂಕಷ್ಟ ಒದಗಿಬಂದಿತ್ತು. ಹೋಬಳಿ ಮಟ್ಟದಿಂದ ಎ1 ಸಿಟಿವರೆಗೆ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಸೈಟ್‌ಗಳನ್ನು ಮಾಡಿಕೊಡುವ ಯೋಜನೆ ಇದಾಗಿತ್ತು. ಕೇವಲ ಒಂದೇ ಒಂದು ರೂಪಾಯಿ ಕೂಡ ಮಂಡಳಿಯಿಂದ ಅಥವಾ ಬ್ಯಾಂಕಿಂದ ಸಾಲ ಪಡೆದದ್ದಾಗಿರಲಿಲ್ಲ. ಎಲ್ಲವೂ ಜನರ ಹಣ. ಜನರಿಂದ ಜನರಿಗೆ ತಲುಪುವ ಯೋಜನೆ ಇದಾಗಿತ್ತು. ನೋಟಿಫೈ ಮಾಡೋದು, ಅರ್ಜಿ ಕರೆಯೋದು, ಅವರ ದುಡ್ಡಲ್ಲೇ ಅವರಿಗೆ ಸೈಟ್‌ ಕೊಡೋದು. ಆ ಯೋಜನೆ ಕೂಡ ಸಾಧ್ಯವಾಗಲಿಲ್ಲ.

ಕೋವಿಡ್ ನಿಯಂತ್ರಣಕ್ಕೆ ಸಿಎಂ ಯಡಿಯೂರಪ್ಪ ದಿಟ್ಟ ನಿರ್ಧಾರ

ಕಳೆದ ಎರಡು ತಿಂಗಳಿನಿಂದ ಎಲ್ಲೆಡೆ ಕೋವಿಡ್ ವೈರಸ್‌ನ ಕರಿಛಾಯೆ ಆವರಿಸಿದ್ದು, ಅದನ್ನು ಹಿಮ್ಮೆಟ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ತನ್ನ ಆಡಳಿತ ವ್ಯವಸ್ಥೆಯೇ ಪಣತೊಟ್ಟು ನಿಂತಿದೆ. ಇನ್ನೂ ಕೋವಿಡ್ ನಿಂದ ಸಾವು-ನೋವು ಒಂದೆಡೆಯಾದರೆ, ಸೋಂಕು ಹರಡುವಿಕೆ ತಡೆಯುವುದು ಬಹುದೊಡ್ಡ ಸವಾಲಾಗಿದೆ. ಈ ಮಹಾಮಾರಿ ಸಾಂಕ್ರಾಮಿಕ ರೋಗವಾಗಿ ಹರಡುತ್ತಿರುವುದರಿಂದ ಸರ್ಕಾರ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾರ್ಚ್‌ 25ರಿಂದ ಲಾಕ್‌ಡೌನ್‌ ಘೋಷಿಸಬೇಕಾಗಿ ಬಂತು. ಈ ತುರ್ತು ಪರಿಸ್ಥಿತಿಯಂತಹ ಸಂಕಷ್ಟ ದಿಂದ ಜನರು ತಮ್ಮ ಮನೆಯಲ್ಲೇ ಗೃಹ ಬಂಧನವಾಗಿದ್ದರು. ಇದರಿಂದ ತಮ್ಮ ದೈನಂದಿನ ಚಟುವಟಿಕೆಗಳಿಗೆ, ದುಡಿಮೆಗೆ, ಅನ್ನ, ಆಹಾರಕ್ಕೆ ಧಕ್ಕೆ ಬಂದಿತ್ತು.

ಲಾಕ್‌ಡೌನ್‌ ಘೋಷಣೆಯಿಂದ ಬಡವರ ಹಸಿವು ನೀಗಿಸುವ ಕೆಲಸಗಳು ಇಲ್ಲದಂತಾದವು. ಕೈಗಾರಿಕೆಗಳು ಮುಚ್ಚಬೇಕಾಯಿತು. ಕಾರ್ಮಿಕರಿಗೆ ಕೆಲಸವಿಲ್ಲ, ವಲಸೆ ಕಾರ್ಮಿಕರಿಗೆ ದುಡಿಮೆಯಿಲ್ಲ ಹಾಗೂ ಊರಿಗೂ ಹೋಗಲು ಸಾಧ್ಯವಿಲ್ಲದಂತಾಗಿತ್ತು. ಉದ್ಯಮಗಳು ಬಾಗಿಲು ಹಾಕಿದ್ದರಿಂದ ಹತ್ತಾರು ಸಮಸ್ಯೆಗಳು ಉದ್ಭವಿಸಿದ್ದವು. ಇಷ್ಟಾದರೂ ಜನರ ಆರೋಗ್ಯ ಕಾಪಾಡಲು ಅಧಿಕಾರಿಗಳು, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತರು, ಪೊಲೀಸರು, ಗೃಹ ರಕ್ಷಕರು, ಸ್ವಚ್ಛತಾ ಕರ್ಮಿಗಳು ಯುದ್ಧದ ಸಂದರ್ಭದಲ್ಲಿ ನ ವಾರಿಯರ್ಸ್ ಗಳಂತೆ ಕೋವಿಡ್ ಹರಡುವಿಕೆ ವಿರುದ್ಧ ಹೋರಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಹಂತ ಹಂತವಾಗಿ ಲಾಕ್‌ ಡೌನ್‌ ತೆರವು ಮಾಡುವುದರ ಮೂಲಕ ಜನರಲ್ಲಿ ವಿಶ್ವಾಸ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಜತೆಯಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೋವಿಡ್‌-19 ಪರಿಸ್ಥಿತಿ ನಿರ್ವಹಿಸಲು ಮುಂದಾಗಿರುವ ರಾಜ್ಯ ಸರ್ಕಾರ ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಈಗಾಗಲೇ ಬಿಬಿಎಂಪಿ ಹೆಲ್ತ್‌ಕೇರ್‌, ಆಪ್ತಮಿತ್ರ ಸಹಾಯವಾಣಿಯ ಕೆಲಸದ ಬಗ್ಗೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ, ಕೋವಿಡ್ ನಿಯಂತ್ರಣದಲ್ಲಿ ಬೆಂಗಳೂರನ್ನು ಮಾದರಿ ನಗರ ಎಂದು ಕೇಂದ್ರ ಸರ್ಕಾರ ಗುರುತಿಸಿದೆ.ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕಟ್ಟಾ ಪ್ರತಿಷ್ಠಾನದಡಿ 4 ಲಕ್ಷಕ್ಕೂ ಮೀರಿದ ಆಹಾರ ದಿನಸಿ ಕಿಟ್‌ಗಳನ್ನು ವಿತರಿಸಿದ್ದೇವೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ತಿಳಿಸಿದ್ದಾರೆ.

‘ಇಂಥಾ ಪ್ರಧಾನಿ ಸಿಕ್ಕಿರೋದು ನಮ್ಮ ಪುಣ್ಯ’

ಭಾರತ ದೇಶಕ್ಕೆ ಇಂತ ಪ್ರಧಾನಿ ಸಿಕ್ಕಿರೋದು ನಮ್ಮ ಪುಣ್ಯ. ಈ ಆಪತ್ಕಾಲದಲ್ಲಿ ಅಂತಹ ಪ್ರಧಾನ ಮಂತ್ರಿಗಳು ಇಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. 135 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಎಷ್ಟು ಜನ ಮರಣ ಹೊಂದಿದ್ದಾರೆ, ಎಷ್ಟು ಜನ ಸೋಂಕಿತರಾಗಿದ್ದಾರೆ, ಎಷ್ಟು ಜನ ಹೊರಬಂದಿದ್ದಾರೆ ಎಂಬುದನ್ನು ಲೆಕ್ಕ ಹಾಕಿದರೆ ಎಲ್ಲವೂ ತಿಳಿಯುತ್ತದೆ. ನಾವು ಅಮೆರಿಕ, ಬ್ರೆಜಿಲ್‌, ರಷ್ಯಾ, ಸ್ಪೇನ್‌, ಯುಕೆ, ಇಟಲಿಗೆ ಹೋಲಿಸಿದರೆ ಅಲ್ಲಿಯ ಜನಸಂಖ್ಯೆಗೆ, ಇಲ್ಲಿನ ಜನಸಂಖ್ಯೆಗೆ ಯಾವ ರೀತಿ ನಿಭಾಯಿಸಿರುವುದರಿಂದ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ.

ಇಲ್ಲದಿದ್ದಲ್ಲಿ ಇದುವರೆಗೆ ಸುಮಾರು 25 ಕೋಟಿ ಜನರಿಗೆ ಸೋಂಕು ಹರಡುತ್ತಿತ್ತು. ಮೋದಿಜಿ ಅವರ ದಿಟ್ಟ ನಿಲುವು, ಸ್ಫೂರ್ತಿ, ಪ್ರೀತಿ ಹಾಗೂ ಪ್ರೋತ್ಸಾಹದಾಯಕ ಮಾರ್ಗದರ್ಶನದಿಂದ ಇವತ್ತು ಭಾರತ ಅತ್ಯಂತ ಯಶಸ್ವಿಯಾಗಿ ಮಹಾಮಾರಿಯನ್ನು ಎದುರಿಸಿದೆ. ನೀವೇ ಊಹಿಸಿ 25 ಕೋಟಿ ಮಂದಿಗೆ ಸೋಂಕು ತಗಲಿದ್ದರಲ್ಲಿ ಶೇ.5 ರಷ್ಟು ಅಂತ ಲೆಕ್ಕ ಹಾಕಿದರೂ ಎಷ್ಟು ಕೋಟಿ ಜನ ಸಾಯುತ್ತಿದ್ದರು. ಇದನ್ನೇ ಗಮನಿಸಬೇಕಾದ್ದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ 2ನೇ ಅವಧಿಯ ಅಧಿಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು, ಅವರ ಕಳಂಕರಹಿತ ಉತ್ತಮ ಅಭಿವೃದ್ಧಿ ಪರ ಆಡಳಿತ ಮುಖೇನ ಇಡೀ ಜಗತ್ತು ಭಾರತದತ್ತ ನೋಡುವಂತೆ ಆಗಿದೆ.

4 ಲಕ್ಷಕ್ಕೂ ಅಧಿಕ ಆಹಾರ, ದಿನಸಿ ಕಿಟ್‌ ವಿತರಣೆ

ಲಾಕ್‌ ಡೌನ್‌ ಘೋಷಣೆಯಾದ ದಿನದಿಂದಲೂ ಕ್ಷೇತ್ರದಲ್ಲಿ ಬಡವರನ್ನು, ವಲಸೆ ಕಾರ್ಮಿಕರನ್ನು, ಮಧ್ಯವರ್ಗದವರನ್ನು ನಮ್ಮ ಕಟ್ಟಾ ಪ್ರತಿಷ್ಠಾನದಡಿ ಗುರುತಿಸಿ 4 ಲಕ್ಷ ಆಹಾರ ಪೊಟ್ಟಣ ಹಾಗೂ 18 ಸಾವಿರ ದಿನಸಿ ಕಿಟ್‌ಗಳನ್ನು ವಿತರಿಸಿದ್ದಾರೆ. ಪ್ರತಿ ಕಿಟ್‌ನಲ್ಲಿ ಅಕ್ಕಿ, ಬೇಳೆ, ಗೋಧಿ, ಸಕ್ಕರೆ, ಅಡುಗೆ ಎಣ್ಣೆ ಹಾಗೂ ಸಾಂಬಾರು ಪದಾರ್ಥಗಳಿದ್ದು, ಸುಮಾರು 18 ಸಾವಿರ ಕುಟುಂಬಗಳಿಗೆ ಹಂಚಲಾಗಿದೆ. ಕ್ಷೇತ್ರದಲ್ಲಿ ನೆಲೆಸಿರುವ ಅರ್ಚ ಕರಿಗೂ ಕೂಡ ದಿನಸಿ ಕಿಟ್‌ ನೀಡಲಾಗಿದೆ. ಅಗತ್ಯಬಿದ್ದಲ್ಲಿ ಮುಂದಿನ ದಿನಗಳಲ್ಲೂ ವಿತರಿಸುವ ಯೋಜನೆ ಇದೆ.

ಪ್ರತಿನಿತ್ಯ 20 ಸಾವಿರ ಮಂದಿಗೆ ಆಹಾರ ಪೊಟ್ಟಣಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ 12 ಕಡೆಗಳಲ್ಲಿ ಆಹಾರ ತಯಾರಿಕೆ ಹಾಗೂ ಪೊಟ್ಟಣ ಕಟ್ಟುವ ಕೆಲಸ ಸುದೀರ್ಘ‌ವಾಗಿ ನಡೆಯುತ್ತಿದೆ. ಕ್ಷೇತ್ರದ ಕಾರ್ಯಕರ್ತರು ಬಡಜನತೆ ಇರುವ ಕಡೆಗಳಿಗೆ ಹೋಗಿ ನಾಯ್ಡು ಅವರ ಪರವಾಗಿ ಆಹಾರ ವಿತರಿಸಿದ್ದಾರೆ. ಹೆಬ್ಟಾಳ, ವಿ. ನಾಗೇನಹಳ್ಳಿ, ಸಂಜಯನಗರ ಇತ್ಯಾದಿ ಕಡೆಗಳಲ್ಲಿ ವಲಸೆ ಕಾರ್ಮಿಕರಿಗೆ ನಿತ್ಯ ಊಟ ನೀಡಲಾಗಿದೆ. ಒಟ್ಟಾರೆ 4 ಲಕ್ಷ ಆಹಾರ ಪೊಟ್ಟಣಗಳನ್ನು ನೀಡುವ ಮೂಲಕ ಹಸಿವನ್ನು ದೂರಾಗಿಸುವ ಕೆಲಸ ಮಾಡಿದ್ದಾರೆ.

ಕೋವಿಡ್ ವಾರಿಯರ್ಸ್ ಗೆ ಪಿಪಿಇ ಕಿಟ್‌

ಕೋವಿಡ್ ವಾರಿಯರ್ಸ್ ಗೆ ಪಿಪಿಇ ಕಿಟ್‌ಗಳನ್ನು, ಮಾಸ್ಕ್ ಗಳನ್ನು ನೀಡುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸುವ ಕಾರ್ಯವನ್ನು ನಾಯ್ಡು ಅವರು ಮಾಡಿದ್ದಾರೆ. ಅಧಿಕಾರಿಗಳಿಗೆ ಸದಾ ಗೌರವ ನೀಡುವ ಅವರು ಪೊಲೀಸ್‌, ಡಾಕ್ಟರ್, ನರ್ಸ್‌, ಆಶಾ ಕಾರ್ಯಕರ್ತೆಯರು ಇಲ್ಲದಿದ್ದಲ್ಲಿ ಎಷ್ಟೋ ಜನ ಸಾಯುತ್ತಿದ್ದರು. ಅಂತಹ ಮಹಾನ್‌ ಯೋಧರನ್ನು, ಅವರ ಕೆಲಸವನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದಿದ್ದಾರೆ.

ಕಟ್ಟಾ ಪ್ರತಿಷ್ಠಾನ
1994ರಿಂದ ಕಟ್ಟಾ ಪ್ರತಿಷ್ಠಾನದಡಿ ಆರೋಗ್ಯ ಶಿಬಿರ, ಮಕ್ಕಳ ವಿದ್ಯಾಭ್ಯಾಸ, ಪ್ರತಿಭಾ ಪುರಸ್ಕಾರ, ಧಾರ್ಮಿಕ ಕಾರ್ಯಗಳು, ಹಿರಿಯ ನಾಗರಿಕರ ಸನ್ಮಾನ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ.

ಪಕ್ಷ ನನಗೆ ಸರ್ವಶ್ರೇಷ್ಠ: ನಾಯ್ಡು

ಸದಾ ರಾಜಕಾರಣ ಹಾಗೂ ಉದ್ಯಮದಲ್ಲಿ ಕ್ರಿಯಾಶೀಲರಾಗಿವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಉದಯವಾಣಿಯೊಂದಿಗೆ ಮಾತನಾಡಿದ್ದು ಹೀಗೆ.

ಶಿವಾಜಿನಗರ ಹಾಗೂ ಹೆಬ್ಟಾಳ ಕ್ಷೇತ್ರದ ಜನರ ಕಷ್ಟಗಳಿಗೆ ಈಗಲೂ ಸ್ಪಂದಿಸುತ್ತಿದ್ದೀರಿ. ಇದು ಹೇಗೆ ಸರ್‌?
– ನಾನು ಶಾಸಕ ಶಿವಾಜಿನಗರ ಕ್ಷೇತ್ರದ ಪ್ರತಿಯೊಂದು ವಾರ್ಡ್‌ನಲ್ಲೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬಸ್‌ಸ್ಟಾಂಡ್‌, ಬೋರಿಂಗ್‌ ಆಸ್ಪತ್ರೆ ವಿಸ್ತೀರ್ಣ, ರಾಜಕಾಲುವೆ ನಿರ್ಮಾಣ ಹಾಗೂ ದುರಸ್ತಿ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿರುತ್ತೇನೆ. ಅಲ್ಲಿನ ಜನತೆ ಈಗಲೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಅವಧಿಯಲ್ಲಿ ಬಹಳಷ್ಟು ಕೆಲಸಗಳಾಗಿವೆ ಎಂದು ನೆನೆಯುತ್ತಾರೆ. ಅದೇ ರೀತಿ ಹೆಬ್ಟಾಳ ಕ್ಷೇತ್ರದಲ್ಲಿ ಕುಡಿಯಲು ನೀರಿರಲಿಲ್ಲ, ರಸ್ತೆಗಳು ಡಾಂಬರು ಕಂಡಿರಲಿಲ್ಲ, ಬೀದಿ ದೀಪಗಳಿರಲಿಲ್ಲ, ಉದ್ಯಾನವನಗಳಿರಲಿಲ್ಲ, ಸ್ಮಶಾನಗಳಿರಲಿಲ್ಲ, ಅಂಗನವಾಡಿ ಕೇಂದ್ರಗಳಿರಲಿಲ್ಲ ಮೂಲಭೂತ ಸೌಕರ್ಯಗಳನ್ನೇ ಕಂಡಿರದ ಕ್ಷೇತ್ರವಾಗಿತ್ತು.

ನಾನು ಶಾಸಕನಾದ ಮೇಲೆ ಒಂದು ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ನಾಡ ಕಚೇರಿ, ಎಕ್ಸಿಕ್ಯೂಟೀವ್‌ ಇಂಜಿನಿಯರ್‌ ಆಫೀಸ್‌, ಆರ್‌.ಒ. ಕಚೇರಿ ಇಲ್ಲಿಗೆ ತರಲಾಗಿದೆ. ನನ್ನ ಅವಧಿಯಲ್ಲಿ 27 ಸಾರ್ವಜನಿಕ ಕಟ್ಟಡಗಳ, ಆಸ್ಪತ್ರೆ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಕಾರಣನಾಗಿದ್ದೇನೆ.ಇಷ್ಟೇ ಅಲ್ಲದೆ, ‘ಸೂರಿಲ್ಲದವರಿಗೆ ಸೂರು’ ಕಟ್ಟಿಸಿಕೊಡುವ ಕೆಲಸವೂ ಮಾಡಲಾಗಿದೆ. ಅಧಿಕಾರ ಇಲ್ಲದಿದ್ದರೂ ಮಾನವೀಯತೆ ದೃಷ್ಟಿಯಲ್ಲಿ ಕೋವಿಡ್ ಸಂಕಷ್ಟದಲ್ಲಿ ಬಳಲುತ್ತಿದ್ದ ನನ್ನ ಕ್ಷೇತ್ರದ ಜನತೆಯ ಹಸಿವನ್ನು ನೀಗಿಸುವ ಕೆಲಸ ನಮ್ಮ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರ ಜತೆಗೂಡಿ ಮಾಡಿದ್ದೇನೆ.

ಪಕ್ಷ ಸಂಘಟನೆ ಮತ್ತು ಬಿಜೆಪಿ ನಂಟಿನ ಬಗ್ಗೆ ತಿಳಿಸಿ.
ಸಿಎಂ ಯಡಿಯೂರಪ್ಪ ಅವರು ರಾಜ್ಯ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ನಾನು ಪಕ್ಷಕ್ಕೆ ಸೇರಿದ ದಿನದಿಂದ ಜನ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರಾರಂಭಿಕ ಹಂತದಲ್ಲಿ ಬಿಜೆಪಿ ತಲುಪಲಾಗದ ಪ್ರದೇಶಕ್ಕೂ ಪಕ್ಷವನ್ನು ವಿಸ್ತರಿಸಿದ್ದೇನೆ. ಕಳೆದ ಮೂರುವರೆ ದಶಕಗಳಿಂದಲೂ ಸಂಘ ಪರಿವಾರದ ಸದಸ್ಯನಾಗಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ, ಈಗಲೂ ನಿಷ್ಠಾವಂತನಾಗಿ ದುಡಿಯುತ್ತಿದ್ದೇನೆ. ಈಗ ಮತ್ತೇ ಎದ್ದುಬಂದಿದ್ದೇನೆ. 24 ಗಂಟೆಗಳ ಕಾಲ ಪಕ್ಷಕ್ಕಾಗಿ ದುಡಿಯಲು ಸಿದ್ಧನಿದ್ದೇನೆ. ಪಕ್ಷ ನನಗೆ ಸರ್ವಶ್ರೇಷ್ಠ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಪಕ್ಷಕ್ಕಾಗಿ ಏನು ನೀಡಿದ್ದೇನೆ ಎಂದು ಎಣಿಸುವವನು ನಾನು. ನನ್ನ ರಾಜಕೀಯ ಹಿರಿಯ ಸಹೋದರ ಬಿ.ಎಸ್‌.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ.

ವಲಸೆ ಕಾರ್ಮಿಕರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ತಮ್ಮ ಅಭಿಪ್ರಾಯ?
ವಲಸೆ ಕಾರ್ಮಿಕರ ಕಷ್ಟಗಳನ್ನು ಪರಿಹರಿಸಲು ನಾನು ದುಡ್ಡು ಕೊಡುತ್ತೇನೆ, ಚೆಕ್‌ ಕೊಡುತ್ತೇನೆ, ಟ್ರೈನ್‌ ಟಿಕೆಟ್‌ ಕೊಡಿಸುತ್ತೆನೆ ಎಂದು ಹೇಳುತ್ತಾರೆ. ಇದು ಅವರಲ್ಲಿರುವ ಒಳ್ಳೆ ಬುದ್ಧಿ. ಅವರು ನನ್ನ ಸ್ನೇಹಿತರಿದ್ದಾರೆ. ಅವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಕ್ಕೆ ಐವತ್ತೈವತ್ತು ಸಾವಿರ ದಿನಸಿ ಕಿಟ್‌ಗಳನ್ನು ಕೊಟ್ಟು ಮಾದರಿ ರಾಜಕಾರಣಿಯಾಗಲಿ. ಏಕೆಂದರೆ, ಅವರು ಬಲಾಡ್ಯ ಕೋಮಿಗೆ ಸೇರಿದವರಾಗಿದ್ದಾರೆ. ಅವರು ಅವರ ಕೋಮಿಗಿಂತಲೂ ಹೆಚ್ಚಿನ ಹಣ ಅವರಲ್ಲಿದೆ ಎಂದು ಹೇಳಿಕೊಳ್ಳುತ್ತಾರೆ. ಅವರಲ್ಲಿರುವ ಹಣ ಖರ್ಚು ಮಾಡಿ ಈ ಸಂದರ್ಭದಲ್ಲಿ ಆಹಾರ ದಿನಸಿ ಕಿಟ್‌ಗಳನ್ನು ಹಂಚುವ ಮೂಲಕ ಪುಣ್ಯ ಕಟ್ಟಿಕೊಳ್ಳಲಿ.

ಕೋವಿಡ್‌-19 ಬಗ್ಗೆ ಯಡಿಯೂರಪ್ಪ ಸರ್ಕಾರ ಸಮಯೋಚಿತ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿರುವುದೇಕೆ?
ವಿರೋಧ ಪಕ್ಷಗಳಿಗೆ ಏನೂ ವಿಷಯವಿಲ್ಲ. ಆದ್ದರಿಂದ ಮಾತನಾಡುತ್ತಿದ್ದಾರೆ. ಅವರು ಮಹಾರಾಷ್ಟ್ರವನ್ನು ಯಾವ ರೀತಿ ನಿಭಾಯಿಸುತ್ತಿದ್ದಾರೆ ಎಂಬುದಕ್ಕೆ ಮೊದಲು ಉತ್ತರ ಕೊಡಲಿ. ಅಲ್ಲಿರುವುದು ಇವರದ್ದೇ ಸಮ್ಮಿಶ್ರ ಸರ್ಕಾರ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಗಂಡಾಂತರ ಒದಗಿಬಂದಿದೆ. 300 ಮಂದಿ ಸೋಂಕಿತರಿದ್ದರೆ, ಅದರಲ್ಲಿ 280 ಜನ ಮಹಾರಾಷ್ಟ್ರದಿಂದ ಹಾಗೂ ಉಳಿದವರು ಹೊರಗಿನಿಂದ ಬಂದವರು. ಮಹಾರಾಷ್ಟ್ರವನ್ನು ಎಷ್ಟು ಮಟ್ಟಕ್ಕೆ ನಿಭಾಯಿಸಿದ್ದಾರೆ, ರಾಜಸ್ತಾನದಲ್ಲಿ ಎಷ್ಟು ಮಟ್ಟಕ್ಕೆ ನಿಭಾಯಿಸಿದ್ದೀರಿ, ನಿಮ್ಮ ಬೆಂಬಲದ ದೆಹಲಿ ಎಷ್ಟು ನಿಭಾಯಿಸಿದೆ. ಇನ್ನೂ ಪಂಜಾಬಲ್ಲಿ ಹೇಗೆ ನಿಭಾಯಿಸಿದ್ದಾರೆ. ಇದಕ್ಕೆ ಮೊದಲು ಉತ್ತರ ಕೊಡಿ.

ಕರ್ನಾಟಕದಲ್ಲಿ ಎಷ್ಟು ಜನ ಮರಣ ಹೊಂದಿದ್ದಾರೆ. ಬೇರೆ ರಾಜ್ಯದಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ. ಅದರ ವ್ಯತ್ಯಾಸ ಗುರುತಿಸದೆ “ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’ ಮಾಡಬೇಡಿ. ಈಗಾಗಲೇ ನೀವು ಪಾತಾಳಕ್ಕೆ ಹೋಗಿದ್ದೀರಿ. ಈಗಲಾದರೂ ಎಚ್ಚೆತ್ತುಕೊಂಡು ಜನಸೇವೆ ಮಾಡಲು ಕಲಿಯಿರಿ. ಜನಸೇವೆ ಎಂಬುದು ನಿಮಗೇ ಗೊತ್ತೇ ಇಲ್ಲ. ಅದು ನಿಮ್ಮ ಜಾತಕದಲ್ಲಿ ಇಲ್ಲವೇ ಇಲ್ಲ.

ನಿಮ್ಮಲ್ಲೇ ನೂರೆಂಟು ಲೋಪಗಳಿಟ್ಟುಕೊಂಡು ಬಿಜೆಪಿ ಕಡೆ ಬೆಟ್ಟು ತೋರಿಸೋದು ಎಷ್ಟು ಸರಿ. 2ನೇಯದು ಪ್ರಪಂಚದಾದ್ಯಂತ ಆಗಿರುವ ಅವಾಂತರವಿದು. ದೇಶದಲ್ಲಿ ಭಾರತದ ಪ್ರಧಾನಿಯವರು, ರಾಜ್ಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರು ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರದ ಕಾರ್ಯವನ್ನು ಶ್ಲಾಘನೆ ಮಾಡಿದೆ. ಅಂತಹ ಸಂದರ್ಭದಲ್ಲಿ ಮೂರ್ಖರಾಗಿ ನಡೆದುಕೊಳ್ಳಬೇಡಿ.


ಯಡಿಯೂರಪ್ಪ ಸರ್ಕಾರ ಆರ್ಥಿಕ ದಿವಾಳಿಯಾಗಿದೆ, ಖಜಾನೆ ಖಾಲಿಯಾಗಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸುತ್ತಿದ್ದಾರಲ್ಲ.
ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಪಂಜಾಬ್‌ನಲ್ಲಿ ಎಷ್ಟು ಖಜಾನೆ ತುಂಬಿಸಿದ್ದೀರಿ. ಕರ್ನಾಟಕದಲ್ಲಿ ಎಷ್ಟು ಹಾಳಾಗಿದೆ ಎಂಬ ಅಂಕಿ-ಅಂಶ ಕೊಡಲಿ. ಸುಖಾಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು. ರಾಜ್ಯದ ಖಜಾನೆ ತುಂಬಿಸಲು ಸಿಎಂ ಯಡಿಯೂರಪ್ಪನವರು, ಅಶೋಕ್‌ ಅವರು ಬೆಂಗಳೂರಿನ ಮಂತ್ರಿಗಳು ಸಮರ್ಥರಿದ್ದಾರೆ. ಸಾಲವನ್ನು ತರುತ್ತಾರೆ. ಕೇಂದ್ರದಿಂದ ಹಣ ತರುತ್ತಾರೆ. ಖಜಾನೆ ತುಂಬಿಸುತ್ತಾರೆ. ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ದೃಢಪಡಿಸುತ್ತಾರೆ.

ಸಿಎಂ ಅವರು ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ ಎಂದು ಹೇಳಿಲ್ಲ. ಎಲ್ಲ ಕಾಮಗಾರಿ ಪ್ರಾರಂಭಿಸಿ ಎಂದು ಈಗಾಗಲೇ ಆದೇಶ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ ಪರಿಣಿತರಿದ್ದಾರೆ ಅವರು ಮೊದಲು ಅಂಕಿ ಅಂಶ ಕೊಡಲಿ. ಇನ್ನೂ ಕಾಂಗ್ರೆಸ್‌ ಅಧ್ಯಕ್ಷರಾಗಲಿರುವ ಡಿಕೆಶಿ ಅವರು ವಾಸ್ತವಿಕ ಸ್ಥಿತಿ ಅರಿತು ಮಾತನಾಡಲಿ ಎಂದು ಮನವಿ ಮಾಡುತ್ತೇನೆ. ಕಷ್ಟಕಾಲದಲ್ಲಿ ನಿಜವಾದ ನಾಯಕರಾದವರು ಜನರಿಗೆ ಸಾಂತ್ವನ ಹೇಳಬೇಕು, ಓಲೈಸಬೇಕು. ಅದನ್ನು ಬಿಟ್ಟು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುತ್ತಿದ್ದಾರೆ.

– ಗೋಪಾಲ್‌ ತಿಮ್ಮಯ್ಯ

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.