ಸ್ವತಂತ್ರ ಧರ್ಮಕ್ಕಾಗಿ ಕೇದಾರಶ್ರೀ ಮನವಿ
Team Udayavani, Oct 23, 2017, 6:15 AM IST
ಬೆಂಗಳೂರು: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ನೀಡುವಂತೆ ಕೋರಿ ಶ್ರೀ ಜಗದ್ಗುರು ಮಾನವ ಧರ್ಮ ಸಂಸ್ಥಾನದ ಶ್ರೀ ಕೇದಾರ ಜಗದ್ಗುರುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನರೇಂದ್ರಮೋದಿಯವರು ಪವಿತ್ರ ಕ್ಷೇತ್ರ ಶ್ರೀ ಕೇದಾರನಾಥ ಮಂದಿರಕ್ಕೆ ಭೇಟಿ ನೀಡಿದ್ದಾಗ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಮಾನ್ಯತೆನೀಡಲು ಕೋರಿ ಮನವಿ ಮಾಡಿದ್ದಾರೆ.
ಭಾರತದಲ್ಲಿ ಅನೇಕ ಧರ್ಮ ಮತ ಪಂಥಗಳಿವೆ. ಅವುಗಳಲ್ಲಿ ವೀರಶೈವ ಧರ್ಮವು ಪ್ರಮುಖವಾಗಿದೆ. ಈ ಧರ್ಮ ಹಿಂದೂಯುಕ್ತ ಸನಾತನವಾಗಿದ್ದು ವೇದ ಆಗಮ ಉಪನಿಷತ್ ಸಪ್ರಮಾಣಗಳಿಂದ ಕೂಡಿದ್ದಾಗಿದೆ. ವೀರಶೈವ ಧರ್ಮ ಯುಗಯುಗಗಳಿಂದ ಪ್ರಚಲಿತವಾದ ಧರ್ಮವಾಗಿದೆ. ವೀರಶೈವ ಧರ್ಮವನ್ನು ಯುಗ ಪ್ರಾರಂಭದಲ್ಲಿ ಆದಿ (ಮೂಲ) ಜಗದ್ಗುರು ಪಂಚಾಚಾರ್ಯರು ಸ್ಥಾಪನೆ ಮಾಡಿದ್ದಾರೆ. ಜಗದ್ಗುರು ರೇಣುಕಾದಿ ಪಂಚಾಚಾರ್ಯರರು ಅಗಸ್ತ್ಯ ಮುನಿಯವರಿಗೆ ಶಿವತತ್ವ ಉಪದೇಶ ಮಾಡಿದ ಸಂಗ್ರಹ ಗ್ರಂಥವು ವೀರಶೈವ ಧರ್ಮಗ್ರಂಥ “ಸಿದ್ಧಾಂತ ಶಿಖಾಮಣಿ’ ಆಗಿದೆ. ಹೀಗಾಗಿ ಜೈನ, ಬೌದ್ಧ ಸ್ವತಂತ್ರ ಧರ್ಮಗಳಿಗೆ ಮಾನ್ಯತೆ ಇರುವಂತೆ ಸ್ವತಂತ್ರ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.