ಕೆಂಪೇಗೌಡರ ಹೆಸರು ಅಜರಾಮರ
Team Udayavani, Jun 27, 2017, 3:47 PM IST
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ಸಿಟಿ ಯೋಜನೆಗೆ ದೇಶದ 30 ನಗರಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಅದರಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು ಸೇರಿರುವುದು ರಾಜ್ಯದ ಪಾಲಿಗೆ ಸಂತಸ ಸಂಗತಿ. ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ಮತ್ತೂಂದು ವಿಶೇಷ. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿದ್ದು ಹೀಗೆ.
ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಇನ್ನುಳಿದಿರುವ ದಿನಗಳಲ್ಲಿ ಮತ್ತಷ್ಟು ಮಹತ್ತರ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ.
ಬೆಂಗಳೂರು ಅಭಿವೃದ್ಧಿ ಯೋಜನೆಗಳು: ನಾಡಪ್ರಭು ಕೆಂಪೇಗೌಡರು. ಇಂದು ಬೆಂಗಳೂರು ವಿಶ್ವ ಮಟ್ಟದಲ್ಲಿ ಹೆಸರು ಮಾಡಬೇಕೆಂದರೆ ಅದಕ್ಕೆ ಮೂಲಕಾರಣ ನಾಡಪ್ರಭು ಕೆಂಪೇಗೌಡರು. ಅವರು ಕಟ್ಟಿದ ಈ ಬೆಂಗಳೂರು ಇಂದು ಬೃಹತ್ ಬೆಂಗಳೂರಾಗಿ ಬೆಳೆದಿದೆ. ಅವರ ದೂರದೃಷ್ಟಿ ಪ್ರಕಾರ ನಾಲ್ಕು ಗೋಪುರಗಳಲ್ಲೇ ಬೆಂಗಳೂರು ಆಗಿದ್ದರೆ. ಬಹುಶಃ ಹಳೇ ಬೆಂಗಳೂರಾಗೇ ಉಳಿಯುತ್ತಿತ್ತು. ಇಷ್ಟೊಂದು ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಈಗ ಅದೆಲ್ಲವನ್ನೂ ದಾಟಿ ಬೃಹತ್ ಬೆಂಗಳೂರು ನಗರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಅಂದು ಕೆಂಪೇಗೌಡರು ಜಲಸಂರಕ್ಷಣೆಗಾಗಿ ಕೆರೆಗಳನ್ನು ಕಟ್ಟಿಸಿದ್ದರು. ನದಿ ಮೂಲಗಳ ಕಾಯ್ದುಕೊಂಡರು. ನಂತರದಲ್ಲಿ ಹೆಸರಘಟ್ಟ ಕೆರೆ ಅಭಿವೃದ್ಧಿ, ವಿಶ್ವಶ್ವೇರಯ್ಯ ಅವರ ಕಾಲದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ನಿರ್ಮಾಣ, ದೇವರಾಜ ಅರಸು ಅವರ ಕಾಲದಲ್ಲಿ ಕಾವೇರಿ 1,2,3 ಮತ್ತು 4ನೇ ಸ್ಟೇಜ್‌ಗೆ ಒತ್ತು ನೀಡಲಾಗಿದೆ. ಈಗಾಗಲೇ ಎಲ್ಲ ಹಂತಗಳು ಮುಗಿದಿದ್ದು, ಕೇವಲ ಒಂದು ಸ್ಟೇಜ್ ಬರಲಿಕ್ಕೆ ಬಾಕಿಯಿದೆ.
ರಸ್ತೆಗಳ ಅಭಿವೃದ್ಧಿ: ಬೆಂಗಳೂರು ಜಗತ್ತಿನಲ್ಲಿ ಪ್ರಮುಖ ನಗರವಾಗಿ ಬೆಳೆದಿರುವ ಬೃಹತ್ ಬೆಂಗಳೂರು ಜನದಟ್ಟಣೆಯಿಂದ ಕೂಡಿದ್ದು, 1 ಕೋಟಿ 20 ಲಕ್ಷ ಜನಸಂಖ್ಯೆಗೇರಿದೆ. ಜನಸಂಖ್ಯೆಗನುಗುಣವಾಗಿ ರಸ್ತೆಗಳ ನಿರ್ಮಾಣದ ಯೋಜನೆ ಹಮ್ಮಿ ಕೊಳ್ಳಲಾಗಿದೆ. ಅದಕ್ಕಾಗಿ ಟೆಂಡರ್ ಶ್ಯೂರ್, ಸಿಗ್ನಲ್ ಮುಕ್ತ ಕಾರಿಡಾರ್, ಗ್ರೇಡ್ ಸೆಪರೇಟರ್ , ರಸ್ತೆ ಅಗಲೀಕರಣ, ಹೈ ಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್, ಸ್ಕೈವಾಕ್, ಫ್ಲೆ$çಓವರ್, ರಿಂಗ್‌ರೋಡ್ ಮುಂತಾದವುಗಳ ಯೋಜನೆಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸಿದ್ದೇವೆ.
ನಗರದಲ್ಲಿ 65 ಲಕ್ಷಕ್ಕಿಂತ ಹೆಚ್ಚು ವಾಹನಗಳಿವೆ. ಅದಕ್ಕೆ ತಕ್ಕಂತೆ ಸಂಚಾರ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ಸ್ಮರಣೆಯ ಮ್ಯೂಸಿಯಂ ಮಾಡಲು ಉದ್ದೇಶಿಸಿದ್ದೇವೆ. ಅದನ್ನು ಮಾಡುತ್ತೇವೆ. ಕೆಂಪೇಗೌಡ ಅವರ ಹೆಸರನ್ನು ಅಜರಾಮರ ಮಾಡುವ ದೃಷ್ಟಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟಿದ್ದೇವೆ.
ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಯಡಿಯಲ್ಲಿ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದ ಮೆಟ್ರೋ ರೈಲು ನಿರ್ಮಾಣ ಯೋಜನೆಯನ್ನು ರೂಪಿಸಿದ್ದೇವೆ. ನಮ್ಮ ಮೆಟ್ರೋ ಯೋಜನೆಯಡಿ ಬೆಂಗಳೂರು ನಗರ ದೇಶದ 5ನೇ ಅತಿ ದೊಡ್ಡ ನಗರವಾಗಿ ಬೆಳೆಯುತ್ತಿದೆ. ವಾಹನ ದಟ್ಟಣೆ ಸುಧಾರಿಸುವ ಸಲುವಾಗಿ ಮೆಟ್ರೋ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು ವಿಸ್ತೀರ್ಣ 114.40 ಕಿ.ಮೀ.ಗಳಲ್ಲಿ 19 ಸುರಂಗ ಮಾರ್ಗಗಳು ಒಳಗೊಂಡಂತೆ ಒಟ್ಟು 101 ಸ್ಟೇಷನ್‌ಗಳಿವೆ.
ಫೆರಿಪೆರಲ್ ರಿಂಗ್ ರಸ್ತೆ: ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣಕ್ಕಾಗಿ 11,950 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಡಿ ತುಮಕೂರು ರಸ್ತೆ ಯಿಂದ ಹೊಸೂರು ರಸ್ತೆವರೆಗೆ ಒಟ್ಟು 65 ಕಿ.ಮೀ. ಉದ್ದದ ರಸ್ತೆ ನಿರ್ಮಾಣವನ್ನು ಸ್ಪೆಷಲ್ ಪರ್ಪಸ್ ವಾಹನ ಮುಖಾಂತರ ಇನ್ನೊವೇಟಿವ್ ಫೈನಾನ್ಸ್ ಕ್ರೋಡಿಕರಣ ಮಾಡಲು ಯೋಜಿಸಲಾಗಿದೆ.
ಕೆರೆಗಳ ಅಭಿವೃದ್ಧಿ: ಎಲ್ಲ ಕೆರೆ ಅಭಿವೃದ್ಧಿ ಅತಿ ಮುಖ್ಯ ಕೆಲಸ ಮಾಡಿದ್ದೇವೆ. ಬಿಬಿಎಂಪಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕಳೆದ ನಾಲ್ಕು ವರ್ಷಗಳಲ್ಲಿ 12 ಕೆರೆಗಳ ಅಭಿವೃದ್ಧಿಪಡಿಸಲಾಗಿದೆ. ಪ್ರಮುಖ ರಸ್ತೆಗಳ ವೈಟ್ ಟಾಪಿಂಗ್ ಮಾಡುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆೆ. ಹೊಸಕೋಟೆಯ ಮಲ್ಲತ್ತಹಳ್ಳಿ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸೇರುವ ರಸ್ತೆ, ಎಂ.ಎಸ್. ಪಾಳ್ಯದಿಂದ ಯಲಹಂಕ ಮೂಲಕ ಏರ್‌ಪೋರ್ಟ್ ರಸ್ತೆ, ನಾಗವಾರ, ಬಾಗಲೂರು, ಮಲ್ಲತ್ತಹಳ್ಳಿ ಹೆಣ್ಣೂರು ಮೂಲಕ ಒಂದು ಏರ್‌ಪೋರ್ಟ್ ರಸ್ತೆ, ರಾಜಾನುಕುಂಟೆ ಕಡೆಯಿಂದ ಏರ್‌ಪೋರ್ಟ್‌ಗೆ ರಸ್ತೆ ಮಾಡಲು ಉದ್ದೇಶವಿದೆ. ಇದಕ್ಕಾಗಿ 1400 ಕೋಟಿ ವೆಚ್ಚದಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
ಮಳೆ ನೀರು ಕಾಲುವೆಗಳ ಆಧುನೀಕರಣ: ಚಲ್ಲಘಟ್ಟ, ವೃಷಭಾವರಿ, ಕೋರಮಂಗಲ ಮತ್ತು ಹೆಬ್ಟಾಳ ಕಣಿವೆಗಳ ಮಳೆ ನೀರು ಕಾಲುವೆಗಳನ್ನು ಪುನರ್ ನವೀಕರಣಗೊಳಿಸುವ ಯೋಜನೆ ಅಂತಿಮ ಹಂತದಲ್ಲಿದೆ.
ಬಡಾವಣೆ ನಿರ್ಮಾಣ: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 4043 ಎಕರೆ ಭೂಮಿ ನೋಟಿಫೈ ಮಾಡಲಾಗಿದ್ದು, ಬಡಾವಣೆ, ರಸ್ತೆ, ಚರಂಡಿ ನಿರ್ಮಾಣಕ್ಕಾಗಿ 795 ಕೋಟಿ ರೂ.ಗಳನ್ನು 12 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ನೀಡಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ 5000 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಭೂಮಾಲೀಕರಿಗೆ 2172 ನಿವೇಶನಗಳನ್ನು ನೀಡಲಾಗಿದೆ. ಬಡಾವಣೆಯಲ್ಲಿ ವಿದ್ಯುತ್, ನೀರು ಸರಬರಾಜು, ಒಳಚರಂಡಿ ಕೆಲಸಗಳಿಗೆ 1,340 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ.
ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಇದು ನಾಲ್ಕು ವರ್ಷಗಳ ಸಾಧನೆ. ಬಹುಮಹಡಿ ವಾಹನ ನಿಲ್ದಾಣ ಸಂಕೀರ್ಣಗಳ ನಿರ್ಮಾಣ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ (ಇದರಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ವೈಟ್‌ಫೀಲ್ಡ್ ಪ್ರದೇಶದ ಸಮಗ್ರ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, ಯೋಜನೆ ಗಳನ್ನು ಮಾರ್ಚ್ 2018ರೊಳಗೆ ಪೂರ್ಣಗೊಳಿಸಲಾಗುವುದು).
ಇನ್ನೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಬೆಂಗಳೂರು ನಗರದಲ್ಲಿ ನೀರಿನ ಪೂರೈಕೆಯನ್ನು 2017ರ ಜನವರಿ ವೇಳೆಗೆ 1,380 ದಶಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ. ಈ ಹಿಂದೆ 900 ದಶಲಕ್ಷ ಲೀಟರ್ ಇತ್ತು. ಜೊತೆಯಲ್ಲಿ ಹೊಸ ನೀರಿನ ಸಂಪರ್ಕದಲ್ಲಿ 2,43,636 ಒದಗಿಸಲಾಗಿದೆ. ಟಿ.ಕೆ. ಹಳ್ಳಿಯಲ್ಲಿ 300 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದೀಕರಣ ಘಟಕ ಸ್ಥಾಪನೆ ಮಾಡಲಾಗಿದೆ.
ತ್ಯಾಜ್ಯ ನೀರು ಶುದ್ಧಿಕರಣ ಘಟಕ: ಮೆಗಾ ಸಿಟಿ ಯೋಜನೆಯಡಿ 440 ದಶಲಕ್ಷ ಲೀಟರ್ ನೀರನ್ನು ಸಂಸ್ಕರಿಸುವ ಸಾಮರ್ಥ್ಯದ ನಾಲ್ಕು ಬೃಹತ್ ತ್ಯಾಜ್ಯ ನೀರು ಶುದ್ಧಿಕರಣ ಘಟಕಗಳ ಸ್ಥಾಪನೆ ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಅಮೃತ್ ಯೋಜನೆಯಡಿ 75 ದಶಲಕ್ಷ ಲೀಟರ್ ಸಾಮರ್ಥ್ಯದ 5 ತ್ಯಾಜ್ಯ ನೀರು ಶುದೀœಕರಣ ಘಟಕಗಳನ್ನು ನಿರ್ಮಿಸುವ ಯೋಜನೆಯೂ ಇದೆ. ಒಟ್ಟಾರೆ ಇದರಿಂದ 2020ರ ಮಾರ್ಚ್ ವೇಳೆಗೆ 1576 ದಶಲಕ್ಷ ಲೀಟರ್ ಆಗಲಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ನಾಲ್ಕು ವರ್ಷದಲ್ಲಿ ಸಾಕಷ್ಟು ಹಣ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಬೆಂಗಳೂರನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ತೆಗೆದುಕೊಂಡಿರುವುದು ಈ ಬೃಹತ್ ನಗರ ಮತ್ತಷ್ಟು ಸುಂದರವಾಗಿಸಲು ಅನುಕೂಲವಾಗಲಿದೆ.
2031ರ ಮಾಸ್ಟರ್ ಪ್ಲಾನ್: ಬೆಂಗಳೂರಿನ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2031ರ ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದ್ದು, ಡಿಸೆಂಬರ್ 2017ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.