ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಪರಿಷ್ಕರಣೆ
Team Udayavani, Apr 16, 2019, 3:00 AM IST
ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರ್ಥಿಕ ನಿಯಂತ್ರಣ ಪ್ರಾಧಿಕಾರ ತನ್ನ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್)ವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಅದು ಏಪ್ರಿಲ್ 16ರಿಂದ ಆಗಸ್ಟ್ 15 ರವರೆಗೆ ಜಾರಿಯಲ್ಲಿರುತ್ತದೆ ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿಮಾರರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವದೇಶಿ ನಿರ್ಗಮನಗಳಿಗೆ ಯುಡಿಎಫ್ ಅನ್ನು 139ರೂ. ನಿಂದ 306 ರೂ. ಮತ್ತು ಅಂತಾರಾಷ್ಟ್ರೀಯ ನಿರ್ಗಮನಗಳಿಗೆ 558 ರೂ.ನಿಂದ 1226 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ(ಎಇಆರ್‌ಎ)ಏಪ್ರಿಲ್ 4ರಂದು ನೀಡಿರುವ ತಿದ್ದುಪಡಿ ಆದೇಶ ಆಧರಿಸಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಬಿ)ದ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್)ವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.
ಟೆಲಿಕಾಂ ಡಿಸ್ಪೂಟ್ಸ್ ಸೆಟಲ್‌ಮೆಂಟ್ ಆ್ಯಂಡ್ ಅಪಿಲೇಟ್ ಟ್ರಿಬ್ಯುನಲ್(ಟಿಡಿಎಸ್‌ಎಟಿ)2019ರ ಮಾರ್ಚ್ 14 ರಂದು ನೀಡಿದ ಮಧ್ಯಂತರ ಪರಿಹಾರದ ಆದೇಶದಡಿ ನಿಯಮಿತ 4 ತಿಂಗಳ ಅವಧಿಗೆ ಪರಿಷ್ಕಕರಣಾ ಶುಲ್ಕಗಳನ್ನು ಸಂಗ್ರಹಿಸಲು ಬಿಐಎಎಲ್‌ಗೆ ಅವಕಾಶ ನೀಡಲಾಗಿದೆ.
ಈ ಆದೇಶ 2019ರ ಏಪ್ರಿಲ್ 16ರಿಂದ ಜಾರಿಗೆ ಬರುವುದರ ಜೊತೆಗೆ ಸ್ವದೇಶಿ ನಿರ್ಗಮನಗಳಿಗೆ ಯುಡಿಎಫ್ ಅನ್ನು 139ರೂ.ನಿಂದ 306ರೂ.ಗೆ ಮತ್ತು ಅಂತಾರಾಷ್ಟ್ರೀಯ ನಿರ್ಗಮನಗಳಿಗೆ 558ರೂ.ನಿಂದ 1,226ರೂ. ಗೆ ಪರಿಷ್ಕರಿಸಲಾಗಿದೆ ಎಂದರು.
ಏಪ್ರಿಲ್ 16 ರಿಂದ ಆಗಸ್ಟ್ 15 ರವರೆಗೆ ಖರೀದಿಸಲಾದ ಟಿಕೆಟ್‌ಗಳ ಮೇಲೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ಈ ದಿನಾಂಕದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯುಡಿಎಫ್ ಹಳೇ ಮೊತ್ತಕ್ಕೆ ಹಿಂತಿರುಗಲಿದೆ.
ಹೆಚ್ಚುವರಿಯಾಗಿ ಸಂಗ್ರಹಿಸಲಾದ ನಿಧಿಯನ್ನು ಯೋಜನೆ ವಿಸ್ತರಣೆಯ ಬಂಡವಾಳ ವೆಚ್ಚ ಪೂರೈಸಲು ಬಳಸಲಾಗುವುದು. ಅಲ್ಲದೇ, ಈ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ನಗದು ಹರಿವನ್ನು ಬಿಐಎಎಲ್‌ಗೆ ಇದು ಪೂರೈಸಲಿದೆ ಎಂದು ಹೇಳಿದರು.
ಭಾರತದಲ್ಲಿನ ವೈಮಾನಿಕ ಕ್ಷೇತ್ರದ ಅಪಾರ ಬೆಳವಣಿಗೆಗೆ ಅಗತ್ಯ ಸೌಕರ್ಯಗಳನ್ನು ಪೂರೈಸಲು 13,000 ರೂ. ಮೊತ್ತದ ಸಾಮರ್ಥ್ಯ ವಿಸ್ತರಣೆ ನಡುವೆ ಬಹಳ ಅಗತ್ಯವಾದ ಪರಿಹಾರವನ್ನು ಶುಲ್ಕಗಳಲ್ಲಿನ ಈ ಹೆಚ್ಚಳ ಬಿಈಎಎಲ್‌ಗೆ ಪೂರೈಸಲಿದೆ. ಬಿಐಎಎಲ್‌ನ ಬೃಹತ್ ವಿಸ್ತರಣಾ ಯೋಜನೆಗೆ ಮುಂದುವರಿದ ಬೆಂಬಲಕ್ಕಾಗಿ ಟಿಡಿಎಸ್‌ಎಟಿ, ಎಇಆರ್‌ಎ ಮತ್ತು ಕರ್ನಾಟಕ ಸರ್ಕಾರಗಳಿಗೆ ನಾವು ವಂದನೆ ಸಲ್ಲಿಸುತ್ತೇವೆ.
ಎಇಆರ್‌ಎ ಕಡ್ಡಾಯ ಮಾಡಿರುವಂತಹ ಈ ನಾಲ್ಕು ತಿಂಗಳಲ್ಲಿ ಯುಡಿಎಫ್ ಹೆಚ್ಚಳದಿಂದ ಬರುವ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗುವುದು. ಕೈಗೊಂಡಿರುವ ಮೂಲ ಸೌಕರ್ಯ ವಿಸ್ತರಣೆಗೆ ಮಾತ್ರ ಈ ನಿಧಿ ಬಳಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.