ಕೆಂಪೇಗೌಡ ಬಡಾವಣೆಗೆ ಮತ್ತೊಂದು ಸಂಕಷ್ಟ
Team Udayavani, Feb 22, 2022, 12:11 PM IST
ಬೆಂಗಳೂರು: ಮೂಲಭೂತ ಸೌಲಭ್ಯಗಳಿಲ್ಲದೆ ತೆವಳುತ್ತಾ ಸಾಗುತ್ತಿರುವ ನಗರದ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮತ್ತೂಂದು ಸಂಕಷ್ಟ ಎದುರಾಗಿದೆ.
ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಶುದ್ಧೀಕರಿಸಿದ ನೀರು ಸರಬರಾಜು, ಯುಟಿಲಿಟಿ ಡಕ್ಟ್ ನಿರ್ಮಾಣ, ವಿದ್ಯುತ್ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಎರಡು ಕಂಪನಿಗಳಿಗೆ ನೀಡಬೇಕಾಗಿದ್ದ ಕೋಟ್ಯಂತರ ರೂ. ಗಳನ್ನು ಬಿಡಿಎ ಬಾಕಿ ಉಳಿಸಿಕೊಂಡಿದ್ದು ಬಾಕಿ ಪಾವತಿ ಮಾಡುವ ವರೆಗೂ ಕೆಲಸ ಮಾಡಲು ಕಂಪನಿಗಳು ಹಿಂದೇಟು ಹಾಕಿವೆ.
ಈ ಎರಡೂ ಖಾಸಗಿ ಕಂಪನಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 200 ರಿಂದ 250 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಇತ್ತೀಚೆಗೆ ಬಿಡಿಎ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬಾಕಿ ಪಾವತಿ ಬಗ್ಗೆ ಪ್ರಸ್ತಾಪವಾಗಿ ಕಂಪನಿಯ ಹಿರಿಯ ಅಧಿಕಾರಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಮಾಧಾನ ಪಡಿಸುವ ಕೆಲಸವನ್ನು ಮಾಡಿ ಶೇ.40ರಿಂದ 45ರಷ್ಟು ಅನುದಾನಬಿಡುಗಡೆ ಮಾಡಿಸುವ ಭರವಸೆ ನೀಡಿದರಾದರೂಕಂಪನಿಯ ಅಧಿಕಾರಿಗಳು ಸಂಪೂರ್ಣ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗಿದೆ.
10 ಸಾವಿರ ನಿವೇಶನಗಳ ಹಂಚಿಕೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2016ರಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹತ್ತು ಸಾವಿರ ನಿವೇಶನಗಳನ್ನುಹಂಚಿಕೆ ಮಾಡಿದೆ. ಹಾಗೆ ಭೂಮಿ ನೀಡದ ರೈತರಿಗೆಒಂಭತ್ತು ಸಾವಿರ ನಿವೇಶನಗಳನ್ನು ನೀಡಿದೆ. ಜತೆಗೆಅರ್ಕಾವತಿ ಬದಲಿ ನಿವೇಶನದಾರರಿಗೆ ಸುಮಾರು 2ರಿಂದ 3 ಸಾವಿರ ನಿವೇಶನಗಳನ್ನು ಹಂಚಿ ಮಾಡಿದೆ.
ಕಳೆದ ಒಂದೆರಡು ವರ್ಷದ ಹಿಂದೆಯೆ ನಾಡಪ್ರಭುಕೆಂಪೇಗೌಡ ಬಡಾವಣೆ ಯೋಜನೆ ಪೂರ್ಣ ಗೊಳ್ಳಬೇಕಾಗಿತ್ತು.ಆದರೆ ಇವರೆಗೂ ಬಡಾವಣೆ ಮುಕ್ತಿ ದೊರೆತಿಲ್ಲಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಅಧ್ಯಕ್ಷ ಶ್ರೀಧರ್ ನುಗ್ಗೇಹಳ್ಳಿ ದೂರುತ್ತಾರೆ. ಕೋವಿಡ್ ಸೇರಿದಂತೆ ಇನ್ನಿತರ ಸಮಸ್ಯೆ ನೆಪಹೇಳಿಕೊಂಡು ಬಿಡಿಎ ಕಾಲ ಕಳೆಯುತ್ತಿದೆ.
ಆ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮುಕ್ತ ವೇದಿಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)ದ ಮೆಟ್ಟಿಲೇರಿತ್ತು. ಇದೀಗ ಮೂರನೇ ಪಾರ್ಟಿ ಸಂಸ್ಥೆಗೆ ಕಾಮಗಾರಿ ಬದಲಾವಣೆ ಪ್ರಸ್ತಾವನೆ ಬಗ್ಗೆ ವರದಿ ಸಲ್ಲಿಸುವಂತೆ ಬಿಡಿಎ ಸೂಚನೆ ನೀಡಿದೆ. ಆ ಸಂಸ್ಥೆ ನೀಡುವ ವರದಿ ಬರುವವೆರಗೂ ಕಾಯಬೇಕಾಗುತ್ತದೆ, ಹೀಗಾಗಿ ನಮ್ಮಬಡಾವಣೆಯ ಸಮಸ್ಯೆ ಶೀಘ್ರದಲ್ಲೆ ಬಗೆಹರಿಯುವಂತೆ ಕಾಣುತ್ತಿಲ್ಲ ಎಂದು ಹೇಳುತ್ತಾರೆ.
1542.19 ಕೋಟಿ ರೂ. ಅಗತ್ಯ :
ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಈವರೆಗೂ ಬಿಡಿಎ ಸುಮಾರು 737.10 ಕೋಟಿ ರೂ. ವೆಚ್ಚ ಮಾಡಿದೆ. ಕಾಮಗಾರಿಯನ್ನು ಸಂಪೂರ್ಣಗೊಳಿಸಲು 1542.19 ಕೋಟಿ ರೂ.ಅವಶ್ಯವಿದೆ. ಈಗಾಗಲೇ ಬಡಾವಣೆಯ ಸಿವಿಲ್ ಕಾಮಗಾರಿಗೆ 714.12 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇನ್ನೂ ಈ ಕಾರ್ಯಕ್ಕೆ 767.35 ಕೋಟಿ ರೂ. ಅಗತ್ಯವಿದೆ. ಸದರಿ ಯೋಜನೆ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಗೊಳಿಸುವುದಾಗಿ ಬಿಡಿಎ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಆಗ್ಗಾಗ್ಗೆ ಎದುರಾಗುತ್ತಿರುವ ಸಮಸ್ಯೆಗಳಿಂದಾಗಿ ಮೂಲಸೌಕರ್ಯ ಕಾಮಗಾರಿ ಇನ್ನೂ ಮುಗಿದಿಲ್ಲ.
2016ರಿಂದ ಆರಂಭವಾಗಿರುವ ಬಡಾವಣೆ ನಿರ್ಮಾಣ ಯೋಜನೆ ಕಾಮಗಾರಿ ಕಾರ್ಯ 2022ರ ಬಂದರೂ ಇನ್ನೂ ಪೂರ್ಣಗೊಂಡಿಲ್ಲ. ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ಈ ವರ್ಷದಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ, ಈಗ ಕಂಪೇಗೌಡ ಬಡಾವಣೆಯಲ್ಲಿ ಕೆಲಸ ನಿಲ್ಲದಂತೆ ಬಿಡಿಎ ನೋಡಿಕೊಳ್ಳಬೇಕು.-ಎ.ಎಸ್.ಸೂರ್ಯಕಿರಣ್, ಜಂಟಿ ಕಾರ್ಯದರ್ಶಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕ
–ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.